• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ರಫೇಲ್; ಮೋದಿಗೆ ಧನ್ಯವಾದ: ಟ್ವೀಟಿಗರಿಂದ ಪರ ವಿರೋಧ ಚರ್ಚೆ

by
July 29, 2020
in ದೇಶ
0
ರಫೇಲ್; ಮೋದಿಗೆ ಧನ್ಯವಾದ: ಟ್ವೀಟಿಗರಿಂದ ಪರ ವಿರೋಧ ಚರ್ಚೆ
Share on WhatsAppShare on FacebookShare on Telegram

ಭಾರತಕ್ಕೆ ಬಹುನಿರೀಕ್ಷಿತ ರಫೇಲ್‌ ಯುದ್ಧ ವಿಮಾನಗಳು ಬಂದು ತಲುಪಿವೆ. ದೇಶದಲ್ಲಿ ಹಲವು ವಿವಾದಗಳ ಕೇಂದ್ರಬಿಂದುವಾಗಿದ್ದ ರಫೇಲ್‌ ಒಪ್ಪಂದ ನರೇಂದ್ರ ಮೋದಿ ಸರ್ಕಾರದ ಮೇಲೆ ಹಗರಣದ ಆರೋಪವನ್ನೂ ತಂದಿಟ್ಟಿತ್ತು. ಯುಪಿಎ ಅವಧಿಯಲ್ಲಿ ನಿಗದಿ ಪಡಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಬೆಲೆ ತೆತ್ತು, ಮೇಕ್‌ ಇನ್‌ ಇಂಡಿಯಾದ ಕನಸು ಬಿತ್ತಿದ ಮೋದಿ ಸರ್ಕಾರ ಫ್ರಾನ್ಸ್‌ ನಿಂದ ರಫೇಲ್‌ (Rafale) ತರಿಸಿಕೊಂಡಿತು.

ರಫೇಲ್‌ ವಿಮಾನದ ಕುರಿತು ಕಾಂಗ್ರೆಸ್‌ ಅವಧಿಯಲ್ಲಿಯೇ ಮಾತುಕತೆ ಶುರುವಾಗಿದ್ದರೂ ರಫೇಲ್‌ ತರಿಸಿದ್ದಕ್ಕೆ ನರೇಂದ್ರ ಮೋದಿಗೆ ಕ್ರೆಡಿಟ್‌ ಕೊಟ್ಟಿದ್ದಾರೆ ಅವರ ಅಭಿಮಾನಿಗಳು. #ThankyouModi ಎಂದು ಟ್ವಿಟರ್‌ ಅಭಿಯಾನವನ್ನು ಬಿಜೆಪಿ ಐಟಿ ಸೆಲ್‌, ಕಾರ್ಯಕರ್ತರು, ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಶುರು ಹಚ್ಚಿದ್ದಾರೆ. ಒಟ್ಟಿನಲ್ಲಿ ಚೀನಾ ಗಡಿ ತಂಟೆಯಿಂದ ಹಾಗೂ ಕೋವಿಡ್‌ ಕಾರಣದಿಂದ ಕುಸಿದಿದ್ದ ನರೇಂದ್ರ ಮೋದಿ ವರ್ಚಸ್ಸನ್ನು ರಫೇಲ್‌ ಮೂಲಕ ಮತ್ತೆ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ರಾಜಕೀಯ ವಿಮರ್ಷಕರು ನುಡಿದಿದ್ದಾರೆ.

Here comes our #Rafale #ThankyouModi pic.twitter.com/wpshtwJrQN

— Deepak Malhotra (@deepak_bjp) July 29, 2020


The moment we all have been waiting for has finally arrived. #ThankYouPmModiForRafale #RafaleInIndia #ThankYouModi pic.twitter.com/6cVssoCvzV

— Punit Agarwal (@Punitspeaks) July 29, 2020


#RafaleInIndia ಹಾಗೂ #Rafales ಕೂಡಾ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿದ್ದು, #RafaleInIndia ಹ್ಯಾಷ್‌ಟ್ಯಾಗ್‌ ಸುಮಾರು ಎರಡುವರೆ ಲಕ್ಷ ಬಾರಿ ಟ್ವೀಟ್‌ ಆಗಿ ಟ್ರೆಂಡಿಂಗ್‌ ಅಲ್ಲಿದೆ. ಸ್ವತಃ ಭಾರತೀಯ ವಾಯುಸೇನೆಯೇ ರಫೇಲ್‌ ಕುರಿತಾಗಿ ಈ ಹ್ಯಾಷ್‌ಟ್ಯಾಗ್‌ ಮೂಲಕ ಟ್ವೀಟ್‌ ಮಾಡಿದೆ.

The Chief of the Air Staff Air Chief Marshal RKS Bhadauria & AOC-in-C WAC Air Marshal B Suresh welcomed the first five IAF Rafales which arrived at AF Stn Ambala today.#IndianAirForce#RafaleInIndia#Rafales pic.twitter.com/xNK97fwynf

— Indian Air Force (@IAF_MCC) July 29, 2020


ರಫೇಲ್‌ ವಿಮಾನಗಳ ಖರೀದಿಗೆ ಪ್ರಧಾನಿ ಮೋದಿ ಒಬ್ಬರೇ ಕಾರಣವೆಂಬಂತೆ ಬಿಂಬಿಸಿದ್ದನ್ನು ನೆಟ್ಟಿಗರು ವಿಡಂಭನೆ ಮೂಲಕ ವಿರೋಧಿಸಿದ್ದಾರೆ. ಆತ್ಮ ನಿರ್ಭರ್‌ ಇಂಡಿಯನ್‌ (@iluvdwayiam) ಎಂಬ ಖಾತೆ ʼಕೇವಲ 5 ರಫೇಲ್‌ಗಳಿಗೆ ಭಕ್ತರು (ಮೋದಿ ಅಭಿಮಾನಿಗಳು) ಯಾಕಿಷ್ಟು ಪ್ರತಿಕ್ರಿಯಿಸುತ್ತಿದ್ದಾರೆʼ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ʼಎಂದಿನಂತೆ ಅದು ಬಿಜೆಪಿಯ ಹಗರಣದೊಂದಿಗೆ ಪ್ರಸಿದ್ಧವಾಗಿದೆ. ನಾವು(ಭಾರತೀಯರು) ಜಗತ್ತಿನ 4 ನೇ ಅತಿದೊಡ್ಡ ವಾಯುಪಡೆ ಎಂದು ಅವರಿಗೆ ತಿಳಿದಿದೆಯೇ? ಭಕ್ತರು(Bhakts) ಮತ್ತು ಮೋದಿ ಇದಕ್ಕೆ(ಜಗತ್ತಿಗೆ ನಾಲ್ಕನೇ ಅತಿದೊಡ್ಡ ವಾಯುಪಡೆ) ನೆಹರೂವನ್ನು ದೂಷಿಸುತ್ತಾರೆಯೇʼ ಎಂದು ಕೇಳಿದ್ದಾರೆ.

Y are bhakts reacting only for 5 rafales ?? And that too with the scams as usual BJP is famous for!

Do they even know that we are the 4th largest airforce to the world,now I wish bhakts and modi blame nehru for this..!

#RafaleInIndia pic.twitter.com/0vS61qt5pN

— aathmanirbhar indian (@iluvdwayiam) July 29, 2020


ಇನ್ನು ಆರ್‌ಟಿಐ(RTI) ಕಾರ್ಯಕರ್ತರಾಗಿರುವ, ಸಾಕೇತ್‌ ಗೋಖಲೆ ಅವರು ರಾಹುಲ್‌ ಗಾಂಧಿ ರಫೇಲ್ ‌ಕುರಿತು ಮಾಡಿರುವ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ, ʼಚೌಕಿದಾರ್‌ ಚೋರ್‌ ಹೇʼ (Chowkidar chor hei) ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.https://twitter.com/SaketGokhale/status/1288510080170696704

#ChowkidarChorHai https://t.co/yhrHIVmNG1

— Saket Gokhale (@SaketGokhale) July 29, 2020


The cost of 5 Rafale jets that arrived today at Modi govt’s severely inflated price is still 8350 crores.

The secret PM CARES Fund has about double that money with zero records or transparency.

Just an example that should tell you how massive the PM CARES scam is.

— Saket Gokhale (@SaketGokhale) July 29, 2020


‘ಕೇವಲ ಐದು ರಫೇಲ್‌ಗಳಿಗೆ ಭಕ್ತರು ಹೀಗೆ ಮಾಡಿದ್ರೆ, ಸಾವಿರಾರು ಯುದ್ಧ ವಿಮಾನಗಳನ್ನು ತರಿಸಿ, ಹಲವು ವಾಯುನೆಲೆಗಳನ್ನು ನಿರ್ಮಿಸಿ ಆ ಮೂಲಕ ಭಾರತ ವಾಯುಸೇನೆಯನ್ನು ವಿಶ್ವದಲ್ಲೇ ನಾಲ್ಕನೇ ಅತ್ಯುತ್ತಮ ವಾಯಸೇನೆಯನ್ನಾಗಿ ನಿರ್ಮಿಸಿದ ಕಾಂಗ್ರೆಸ್ ಏನು ಮಾಡಬೇಕು?’ ಎಂದು ಅಲ್ಫನ್‌ ಅಹಮದ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ಒಟ್ಟಿನಲ್ಲಿ ರಫೇಲ್‌ ಖರೀದಿ ಮೋದಿಯ ಸಾಧನೆ ಎಂಬಂತೆ ಬಿಜೆಪಿ ಕಾರ್ಯಪಡೆ ಬಿಂಬಿಸುವಾಗ ಕಳೆದ 60 ವರ್ಷಗಳಲ್ಲಿ ವಾಯುಸೇನೆಗೆ (45) Mirage 2000, (272) Sukhoi Su-30, (128) SEPECAT Jaguar ಮುಂತಾದ ಸಾವಿರಾರು ಯುದ್ಧ ವಿಮಾನಗಳನ್ನು ತರಿಸಿದ ಹಾಗೂ ಹಲವಾರು ವಾಯುನೆಲೆಗಳನ್ನು ಸ್ಥಾಪಿಸಿದ ಕಾಂಗ್ರೆಸ್‌ ಪಕ್ಷದ ಅಭಿಮಾನಿಗಳು ಬಿಜೆಪಿ ಹಾಗೂ ಮೋದಿ ಅಭಿಮಾನಿಗಳನ್ನು ವ್ಯಂಗ್ಯವಾಡುತ್ತಿದ್ದಾರೆ.

ಕೇವಲ ಐದು ರಫೇಲ್‌ಗಳಿಗೆ ಭಕ್ತರು ಹೀಗೆ ಮಾಡಿದ್ರೆ, ಸಾವಿರಾರು ಯುದ್ಧ ವಿಮಾನಗಳನ್ನು ತರಿಸಿ, ಹಲವು ವಾಯುನೆಲೆಗಳನ್ನು ನಿರ್ಮಿಸಿ ಆ ಮೂಲಕ ಭಾರತ ವಾಯುಸೇನೆಯನ್ನು ವಿಶ್ವದಲ್ಲೇ ನಾಲ್ಕನೇ ಅತ್ಯುತ್ತಮ ವಾಯಸೇನೆಯನ್ನಾಗಿ ನಿರ್ಮಿಸಿದ ಕಾಂಗ್ರೆಸ್ ಏನು ಮಾಡಬೇಕು ? #rafaleindia #rafale

— Alfhan Ahmed (@alfhanahmed) July 29, 2020


ADVERTISEMENT
Tags: ಟ್ವಿಟರ್ರಫೇಲ್ಸಾಮಾಜಿಕ ಜಾಲತಾಣ
Previous Post

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೆಹಲಿ ವಿವಿ ಪ್ರೊ. ಹನಿ ಬಾಬ್ ಬಂಧನ!

Next Post

ಸಾಲದ ಬೃಹತ್ ಪಿರಮಿಡ್ ಮೇಲಿತ್ತು ಸಿದ್ಧಾರ್ಥ ಕಟ್ಟಿದ ಕೆಫೇ ಕಾಫಿ ಡೇ

Related Posts

Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
0

ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕು. ರಸ್ತೆ ಬದಿಯಲ್ಲಿ ಸಸಿ‌ನೆಡುವುದಷ್ಟೇ ಅಲ್ಲದೇ ಅವುಗಳ ರಕ್ಷಣೆ ಮಾಡಬೇಕು. ಸಾರ್ವಜನಿಕರು ಕೂಡಾ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ರಾಜ್ಯ ಸಭಾ ವಿರೋಧಪಕ್ಷದ...

Read moreDetails
ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಸಾಲದ ಬೃಹತ್ ಪಿರಮಿಡ್ ಮೇಲಿತ್ತು ಸಿದ್ಧಾರ್ಥ ಕಟ್ಟಿದ ಕೆಫೇ ಕಾಫಿ ಡೇ

ಸಾಲದ ಬೃಹತ್ ಪಿರಮಿಡ್ ಮೇಲಿತ್ತು ಸಿದ್ಧಾರ್ಥ ಕಟ್ಟಿದ ಕೆಫೇ ಕಾಫಿ ಡೇ

Please login to join discussion

Recent News

Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada