Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು
ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

December 23, 2019
Share on FacebookShare on Twitter

ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಮಂಗಳೂರಿನಲ್ಲಿ ನಡೆದಿರುವ ಪ್ರತಿಭಟನೆ ವೇಳೆ ನಡೆದಿರುವ ಕೃತ್ಯ ಮತ್ತು ಕೃತಿಗಳ ಬಗ್ಗೆ ಮಂಗಳೂರು ನಗರ ಪೊಲೀಸರು ಸಾಕಷ್ಟು ವಿಚಾರಗಳನ್ನು ವಿವರಿಸಬೇಕಾಗಬಹುದು.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಮಂಗಳೂರಿನಲ್ಲಿ ಪೊಲೀಸರು ನಡೆಸಿರುವ ಗೋಲಿಬಾರಿಗೆ ಇಬ್ಬರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗುಂಡೇಟಿನ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟು ಮಂದಿಗೆ ಗುಂಡೇಟು ತಗಲಿದೆ ಎಂದು ಪೊಲೀಸರು ಬಹಿರಂಗ ಪಡಿಸಿರಲಿಲ್ಲ.

ಪೊಲೀಸರ ಮತ್ತು ಆಡಳಿತ ಪಕ್ಷದ ಮೊದಲ ವಾದವಾಗಿತ್ತು ಕೇರಳದಿಂದ ಬಂದ ಜನರು ಮಂಗಳೂರಿನಲ್ಲಿ ಹಿಂಸಾಚಾರ ನಡೆಸಿದ್ದಾರೆ ಎಂಬುದು. ಪೊಲೀಸರು ಬಂಧಿಸಿರುವ ಮತ್ತು ವಶಕ್ಕೆ ಪಡೆದುಕೊಂಡವರು, ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು, ಪೊಲೀಸರು ದಾಖಲಿಸಿರುವ ಹತ್ತಕ್ಕೂ ಹೆಚ್ಚು ಎಫ್ ಐ ಆರ್ ಗಳಲ್ಲಿ ಕೇರಳದ ಯಾರೊಬ್ಬರ ಹೆಸರು ಕೂಡ ಇಲ್ಲ.

ಪೊಲೀಸರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು, ತಮ್ಮ ಯಡವಟ್ಟುಗಳನ್ನು ಮರೆ ಮಾಚಲು ಕಾಸರಗೋಡಿನಿಂದ ಆಗಮಿಸಿದ ಕೇರಳದ ಮಲೆಯಾಳಿ ಖಾಸಗಿ ಟಿವಿ ಚಾನಲುಗಳನ್ನು ವಸ್ತುಶಃ ದಿಗ್ಬಂಧನದಲ್ಲಿ ಇರಿಸಲಾಯಿತು. ಇದರಿಂದಾಗಿ ರಾಜ್ಯ ಸರಕಾರ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಗೆ ಇನ್ನಷ್ಟು ಡ್ಯಾಮೇಜ್ ಆಯಿತೇ ಹೊರತು ಪೊಲೀಸರಿಂದ ಯಾವ ಫಲ ಸಾಧನೆಯೂ ಆಗಲಿಲ್ಲ. ಸಿದ್ದರಾಮಯ್ಯ ಸರಕಾರದಲ್ಲಿ ವಾರ್ತಾ ಇಲಾಖೆಯ ಕ್ರಿಯಾಶೀಲ ನಿರ್ದೇಶಕರಾಗಿದ್ದ ಇಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಮೊದಲಿಗೆ 50 ಮಂದಿ ನಕಲಿ ಪತ್ರಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದಿದ್ದರು. ಕಸ್ಟಡಿಯಲ್ಲಿದ್ದದ್ದು ಕೇವಲ ಏಳು ಮಂದಿ ಪತ್ರಕರ್ತರು. ಅವರಲ್ಲಿ ಮೂರು ಮಂದಿ ಕೇರಳ ಸರಕಾರದ ಮಾನ್ಯತಾ ಕಾರ್ಡ್ (ಅಕ್ರೆಡಿಶನ್) ಹೊಂದಿದ್ದರು.

ಎಲ್ಲಿಂದ ಆರಂಭ?

ಮಂಗಳೂರಿನಲ್ಲಿ ಗಲಭೆ ಆರಂಭವಾಗಿದ್ದು ಡಿಸೆಂಬರ್ 19 ರಂದು. ಅದಕ್ಕೂ ಮುನ್ನ ಹಲವು ದಿವಸಗಳಿಂದ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಕಾಂಗ್ರೆಸ್ ಪಕ್ಷ ಕೂಡ ತನ್ನದೇ ಆದ ರೀತಿಯಲ್ಲಿ ಡಿಸೆಂಬರ್ 17ರಂದು ಪ್ರತಿಭಟನಾ ಸಭೆ ನಡೆಸಿತ್ತು. ಆದರೆ, ಕೇಂದ್ರ ಸರಕಾರದ ಕಾಯಿದೆ ವಿರುದ್ಧದ ಪ್ರತಿಭಟನೆಗೆ ಮಂಗಳೂರಿನಲ್ಲಿ ನಿಜವಾದ ಕಾವು ನೀಡಿದ್ದು ಡಿಸೆಂಬರ್ 18ರಂದು ಸಂಜೆ ವಿದ್ಯಾರ್ಥಿಗಳು ನಡೆಸಿದ ಪ್ರದರ್ಶನ ಮತ್ತು ಘೋಷಣೆಗಳು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಆರಕ್ಕೂ ಹೆಚ್ಚು ಪ್ರತಿಭಟನೆ ನಡೆದಿತ್ತು. ಸಂಜೆ ವೇಳೆ ಯಾವುದೇ ಸಂಘಟನೆ ಬ್ಯಾನರೇ ಇಲ್ಲದೆ ವಿದ್ಯಾರ್ಥಿನಿಯರು ಸೇರಿದಂತೆ ಬಹುದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ನಡೆಸಿದ ಪ್ರತಿಭಟನೆಯ ಬೆನ್ನಲ್ಲೇ ಮಂಗಳೂರು ನಗರ ಪೊಲೀಸರು ಸೆಕ್ಷನ್ 144ರ ಪ್ರಕಾರ ನಿಷೇದಾಜ್ಞೆ ಘೋಷಿಸಿದರು.

ಆದರೆ, ಮರುದಿನ ಅಂದರೆ ಈ ಗಲಭೆ ಆರಂಭವಾದ ಡಿ.19ರಂದು ಕೆಲವು ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ಪತ್ರ ನೀಡಿದ್ದರು. ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದಾರೆ. ಪೂರ್ವಾಹ್ನ 11 ಗಂಟೆಗೆ ಸೇರಿದ ಜನರಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ಕೇವಲ ಮೈಕಿನಲ್ಲಿ ಘೋಷಣೆ ಮಾಡಿ ಚದುರಿಸುವ ಕೆಲಸ ನಡೆಯಿತೇ ಹೊರತು ಮುಖಂಡರನ್ನು ಕರೆದು ದಾವಣಗೆರೆ, ಬೆಂಗಳೂರು ಮುಂತಾದೆಡೆ ಪೊಲೀಸ್ ಅಧಿಕಾರಿಗಳು ನಡೆಸಿದ ದೇಶಭಕ್ತಿಯ ಪಾಠ ಮಾಡುವ ಬುದ್ಧಿವಂತಿಕೆಯನ್ನು ಇಲ್ಲಿನ ಪೊಲೀಸರು ತೋರಿಸಲಿಲ್ಲ.

ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದರೆ, ಡಿಸೆಂಬರ್ 18ರಂದೇ ಸೇರಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಟಾರ್ಜ್ ಮಾಡಲು ರಣೋತ್ಸಾಹಿ ಪೊಲೀಸರು ಕಾತುರರಾಗಿದ್ದರು. ಅಂತೂ ಜಿಲ್ಲಾಧಿಕಾರಿ ಕಚೇರಿ ಸಮೀಪದ ನೆಲ್ಲಿಕಾಯಿ ರಸ್ತೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಪೊಲೀಸರು ವೃತ್ತಿಪರತೆ ತೋರಿಸಲೇ ಇಲ್ಲ.

ಅನಂತರ ಬೀಬಿ ಅಲಾಬಿ ರಸ್ತೆಯಲ್ಲಿ ಟಯರುಗಳಿಗೆ ಬೆಂಕಿ ಹಚ್ಚಿದಾಗ ಕೂಡ ಮೀಸಲು ಪೊಲೀಸ್, ಪೊಲೀಸರು ಮತ್ತು ಅಧಿಕಾರಿಗಳಲ್ಲಿ ತಾಳ ಮೇಳ ಇರಲಿಲ್ಲ. ಗಲಭೆಯೊಂದನ್ನು ನಿಯಂತ್ರಿಸುವ ಸಿದ್ಧತೆಯಲ್ಲಿ ಪೊಲೀಸರು ಇದ್ದಂತಿರಲಿಲ್ಲ. ಉತ್ತರ ಪೊಲೀಸ್ ಠಾಣೆ ಸಮೀಪದಲ್ಲಿ ಸಂಜೆ ವೇಳೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪೊಲೀಸರು ಹೈರಾಣರಾಗಿದ್ದರು. ಆದೇಶ ನೀಡಿದರೊ ಇಲ್ಲವೊ ಹಲವು ಸುತ್ತಿನ ಗುಂಡಿನ ಮೊರತೆ ಕೇಳಿಸಿತು. ಹಲವಾರು ಮಂದಿ ಗಾಯಗೊಂಡು ಕಾರ್ಮಿಕರೊಬ್ಬರು ಅಲ್ಲೇ ಶವವಾಗಿ ಬಿದ್ದವರು. ಸತ್ತವರು ಮತ್ತು ಗುಂಡೇಟು ತಿಂದವರು ಪ್ರತಿಭಟನೆ ವೇಳೆ ಕಲ್ಲು ಬಿಸಾಡಿದವರು ಅಲ್ಲವೇ ಅಲ್ಲ ಎನ್ನಲಾಗುತ್ತಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಶಿವಣ್ಣನ ಸಿನಿಮಾಗೆ ನೀವೂ ಆಗಬಹುದು ಹಿರೋಯಿನ್‌..!
ಸಿನಿಮಾ

ಶಿವಣ್ಣನ ಸಿನಿಮಾಗೆ ನೀವೂ ಆಗಬಹುದು ಹಿರೋಯಿನ್‌..!

by ಪ್ರತಿಧ್ವನಿ
March 25, 2023
ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ
ಕರ್ನಾಟಕ

ಬಾದಾಮಿ ಕ್ಷೇತ್ರದತ್ತ ಸಿದ್ದರಾಮಯ್ಯ ಪ್ರವಾಸ : ಬಾದಾಮಿ ಜನತೆಯಲ್ಲಿ ಚಿಗುರೊಡೆದ ಉತ್ಸಾಹ

by ಮಂಜುನಾಥ ಬಿ
March 24, 2023
Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!
ಇದೀಗ

Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!

by ಪ್ರತಿಧ್ವನಿ
March 21, 2023
RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!
ಇದೀಗ

RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!

by ಪ್ರತಿಧ್ವನಿ
March 26, 2023
ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism
Top Story

ಹಿಂದೂ-ಮುಸ್ಲಿಂ ಏಕತೆಗಾಗಿ ಹಾಗು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದ ಭಾರತದ ಸ್ವತಂತ್ರ ಚಿಂತಕರು ಹಾಗು ದಾರ್ಶನಿಕರು : Hindu-Muslim Unity And Against Brahminism

by ಡಾ | ಜೆ.ಎಸ್ ಪಾಟೀಲ
March 21, 2023
Next Post
ವರ್ಷವೊಂದರಲ್ಲಿ 5 ರಾಜ್ಯ ಕಳೆದುಕೊಂಡ ಬಿಜೆಪಿ

ವರ್ಷವೊಂದರಲ್ಲಿ 5 ರಾಜ್ಯ ಕಳೆದುಕೊಂಡ ಬಿಜೆಪಿ

ವಿಶ್ವದೆಲ್ಲೆಡೆ ಹೆಚ್ಚುತ್ತಿದೆ CAA & NRC ವಿರುದ್ಧದ ಕೂಗು

ವಿಶ್ವದೆಲ್ಲೆಡೆ ಹೆಚ್ಚುತ್ತಿದೆ CAA & NRC ವಿರುದ್ಧದ ಕೂಗು

ಚುನಾವಣೆ ಹೊಸ್ತಿಲಲ್ಲಿ ದಿಲ್ಲೀಲಿ ಬಿಜೆಪಿಗೆ ಬಡವರ ಬಗ್ಗೆ ಅನುಕಂಪ!

ಚುನಾವಣೆ ಹೊಸ್ತಿಲಲ್ಲಿ ದಿಲ್ಲೀಲಿ ಬಿಜೆಪಿಗೆ ಬಡವರ ಬಗ್ಗೆ ಅನುಕಂಪ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist