ಮಥುರಾದ ಶ್ರೀ ಕೃಷ್ಣ ದೇವಾಲಯ ಸಂಕೀರ್ಣದ ಪಕ್ಕದಲ್ಲಿರುವ ಶಾಹಿ ಈದ್ಗಾವನ್ನು ತೆಗೆದುಹಾಕುವಂತೆ ಕೋರಿ ಭಗವಾನ್ ಶ್ರೀ ಕೃಷ್ಣ ವಿರಾಜ್‌ಮಾನ್ ಪರವಾಗಿ ಸಿವಿಲ್ ಮಥುರಾ ನ್ಯಾಯಾಲಯಕ್ಕೆ ಉತ್ತರ ಪ್ರದೇಶದ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬವರು ಸಿವಿಲ್ ದಾವೆ ಹೂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಶಾಹಿ ಈದ್ಗಾ ಟ್ರಸ್ಟ್‌ನ ನಿರ್ವಹಣಾ ಸಮಿತಿಯನ್ನು ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ದಾವೆಯಲ್ಲಿ ಈದ್ಗಾ ಮಸೀದಿಯ ವ್ಯಾಪ್ತಿಯಲ್ಲಿರುವ 13.37 ಎಕರೆ ಭೂಮಿಯನ್ನು ಶ್ರೀಕೃಷ್ಣನಿಗೆ ಸೇರಿದ್ದು ಎನ್ನಲಾಗಿದೆ.
ಶ್ರೀಕೃಷ್ಣನ ಜನ್ಮಸ್ಥಳವು ಟ್ರಸ್ಟ್ ಇರುವ ರಚನೆಯ ಕೆಳಗೆ ಇದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
Also Read: ಬಾಬರಿಯಂತೆ ಕಾಶಿ, ಮಥುರಾದಲ್ಲೂ ಮಸೀದಿ ತೆರವುಗೊಳಿಸಲು ಈಶ್ವರಪ್ಪ ಕರೆ
Also Read: ವಿವಾದಾತ್ಮಕ ಸ್ಥಳದಲ್ಲಿ ದೇವಾಲಯ ಇತ್ತೇ? ಪುರಾತತ್ವಜ್ಞರು ಹೇಳುವುದೇನು?
ದೇವಾಲಯ ಸಂಕೀರ್ಣದ ಆಡಳಿತ ಮಂಡಳಿಯಾಗಿರುವ ಶ್ರೀ ಕೃಷ್ಣ ಜನಂಸ್ಥಾನ್ ಸೇವಾ ಸಂಸ್ಥೆಯು ವಿವಾದಾತ್ಮಕ ಆಸ್ತಿಯನ್ನು ವಿಚಾರದಲ್ಲಿ ಶಾಹಿ ಈದ್ಗಾ ಟ್ರಸ್ಟ್‌ನೊಂದಿಗೆ ಅಕ್ರಮ ರಾಜಿ ಮಾಡಿಕೊಂಡಿದೆ ಎಂದು ಹೇಳಲಾಗಿದೆ. “ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥೆಯು ದೇವರ ಮತ್ತು ಭಕ್ತರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು 1968 ರಲ್ಲಿ ಟ್ರಸ್ಟ್ ಮಸ್ಜಿದ್ ಈದ್ಗಾ (ಟ್ರಸ್ಟ್) ನ ನಿರ್ವಹಣಾ ಸಮಿತಿಯೊಂದಿಗೆ ಮೋಸದಿಂದ ರಾಜಿ ಮಾಡಿಕೊಂಡಿದೆ. , ” ದಾವೆಯಲ್ಲಿ ಹೇಳಲಾಗಿದೆ.

ಕೃಷ್ಣ ಜನ್ಮಭೂಮಿಯ 13.37 ಎಕರೆ ಪ್ರದೇಶ ಹಿಂದೂಗಳಿಗೆ ಸೇರಿದ್ದು. 1968ರ ರಾಜಿ ಪತ್ರವನ್ನು ಒಪ್ಪಲಾಗದು. ಕೃಷ್ಣ ಜನ್ಮಭೂಮಿಯಿಂದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಅಗ್ನಿಹೋತ್ರಿ ಮನವಿ ಮಾಡಿದ್ದಾರೆ.