ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 453 ಹೊಸ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಇದುವರೆಗೂ 9,150 ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದುವರೆಗೂ ಆಸ್ಪತ್ರೆಯಿಂದ 5,618 ಮಂದಿ ಕರೋನಾದಿಂದ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 3,291 ಸಕ್ರಿಯ ಕರೋನಾ ಪ್ರಕರಣಗಳಿವೆ.
ಕೋವಿಡ್-19 ಸೋಂಕಿನಿಂದ ಇಂದು 05 ಮಂದಿ ಮೃತಪಟ್ಟಿದ್ದು, ಕರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 137 ತಲುಪಿದೆ. 77 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತದಲ್ಲಿ ಜೂನ್ 21 ರ ಬೆಳಿಗ್ಗೆ 08 ಗಂಟೆಯ ವರೆಗೆ 15,413 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗಿನ ದಾಖಲೆಯಾಗಿದೆ. ಕಳೆದ ಒಂದು ವಾರದಿಂದ ಪ್ರತಿದಿನವು ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಭಾರತದಲ್ಲಿ ಕಂಡು ಬಂದಿರುವ ಕರೋನಾ ಸೋಂಕಿತರ ಸಂಖ್ಯೆ 4,10,461 ಕ್ಕೇರಿದೆ. ಸೋಂಕಿನಿಂದ 2,27,756 ಮಂದಿ ಚೇತರಿಸಿಕೊಂಡಿದ್ದು, 1,69,451 ಸಕ್ರಿಯ ಪ್ರಕರಣಗಳು ದೇಶಾದ್ಯಂತ ಇವೆ.
ಇನ್ನು ಕಳೆದ 24 ಗಂಟೆಗಳಲ್ಲಿ 306 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಪ್ರಮಾಣ 13,254 ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
