Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಭಾರತಕ್ಕೆ ಬರುವ ಮುನ್ನ ಟ್ರಂಪ್‌ ಮಾತಿನ ದಾಳಿ! ಕುದುರೀತೆ ವ್ಯಾಪಾರ ವಹಿವಾಟು? 

ಭಾರತಕ್ಕೆ ಬರುವ ಮುನ್ನ ಟ್ರಂಪ್‌ ಮಾತಿನ ದಾಳಿ! ಕುದುರೀತೆ ವ್ಯಾಪಾರ ವಹಿವಾಟು?
ಭಾರತಕ್ಕೆ ಬರುವ ಮುನ್ನ ಟ್ರಂಪ್‌ ಮಾತಿನ ದಾಳಿ!  ಕುದುರೀತೆ ವ್ಯಾಪಾರ ವಹಿವಾಟು? 

February 22, 2020
Share on FacebookShare on Twitter

ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಭಾರತದತ್ತ ಹೆಜ್ಜೆ ಇಟ್ಟಿದೆ. ಇದೇ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕದಲ್ಲಿ ನಡೆಸಿದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಗುಜರಾತ್‌ನಲ್ಲಿ ನಮಸ್ತೇ ಟ್ರಂಪ್‌ ಕಾರ್ಯಕ್ರಮ ನಡೆಸಲಾಗ್ತಾ ಇದೆ. ಈಗಾಗಲೇ ಅಮೆರಿಕದಿಂದ ಡೊನಾಲ್ಡ್‌ ಟ್ರಂಪ್‌ಗೆ ಸಂಬಂಧಿಸಿದ ಕಾರು ಸೇರಿದಂತೆ ಭದ್ರತಾ ಪಡೆಗಳು ಆಗಮಿಸಿ, ಸಿದ್ದತೆ ಮಾಡಿಕೊಳ್ಳುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗಿಯಾಗುವ 3 ಗಂಟೆಯ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರತದ ಕೊಳಗೇರಿಯ ಗುಡಿಸಲು ಕಾಣಿಸಬಾರದು ಎನ್ನುವ ಕಾರಣಕ್ಕೆ ಬರೋಬ್ಬರಿ ಆರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಚೀನಾದ ಮಹಾಗೋಡೆಯಂತೆ ಗೋಡೆಯನ್ನು ನಿರ್ಮಿಸಲಾಗಿದೆ. 1640 ಸ್ಕೈರ್‌ ಫೀಟ್‌ ಉದ್ದಕ್ಕೂ ತಡೆ ಗೋಡೆ ನಿರ್ಮಾಣ ಮಾಡಿದ್ದು, ಬಣ್ಣ ಬಣ್ಣದ ಚಿತ್ತಾರ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ತೋರಿಸುವ ಉದ್ದೇಶದಿಂದ 2 ಸಾವಿರ ಜನರು ವಾಸ ಮಾಡುವ ಸ್ಲಂ ರಸ್ತೆಯನ್ನೇ ಮುಚ್ಚಲಾಗಿದೆ. ನರೇಂದ್ರ ಮೋದಿ ಸರ್ಕಾರ, ಡೊನಾಲ್ಡ್‌ ಟ್ರಂಪ್‌ ಎದುರು ಭಾರತವನ್ನು ಉತ್ಕೃಷ್ಟ ಮಟ್ಟದಲ್ಲಿ ತೋರಿಸಲು ಏನು ತಯಾರಿ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಆದರೆ ಅಮೆರಿಕ ದೊಡ್ಡಣ್ಣ ಮಾತ್ರ ಭಾರತದ ಮೇಲೆ ಕಿಡಿ ಕಾರುತ್ತಿದೆ.

ಫೆಬ್ರವರಿ 24ಕ್ಕೆ ಬಂದಿಳಿಯಲಿದ್ದು, 36 ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ ಟ್ರಂಪ್‌. ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳುವುದಕ್ಕೂ ಮುನ್ನ ಮಗಳು, ಅಳಿಯ ಹಾಗು ಪತ್ನಿ ಸಮೇತ ಪ್ರೇಮ ಸ್ಮಾರಕ ತಾಜ್‌ ಮಹಲ್‌ಗೆ ಭೇಟಿ ನೀಡಲಿದ್ದಾರೆ. ವಿಶೇಷ ಅಂದರೆ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಭಾರತದ ಬಗ್ಗೆ ಅಸಹನೆಯ ಮಾತುಗಳನ್ನು ಆಡಿದ್ದಾರೆ. ಭಾರತ ನಮ್ಮ ಜೊತೆ ಯಾವಾಗಲೂ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿಲ್ಲ. ನಮ್ಮ ಬಗ್ಗೆ ಭಾರತ ಕಠಿಣ ನಿಲುವುಗಳನ್ನು ಹೊಂದಿದೆ. ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಕಟುನುಡಿಗಳನ್ನು ಟ್ರಂಪ್‌ ಹೇಳಿದ್ದಾರೆ. ಆದರೆ ನಾನು ನರೇಂದ್ರ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದು ಭಾರತಕ್ಕೆ ಹೋಗಲು ಕಾತುರನಾಗಿದ್ದೇನೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ.

ಎಲ್ಲರಿಗೂ ಒಂದೇ ಅಚ್ಚರಿ ಎರಡು ದೇಶಗಳು ಒಟ್ಟಿಗೆ ಸಂಧಿಸುತ್ತಿವೆ ಎಂದರೆ ಸ್ನೇಹದ ಹಸ್ತ ಚಾಚುತ್ತಿದ್ದಾರೆ ಎಂದರ್ಥ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬರುವ ಮುನ್ನ ಭಾರತದ ಬಗ್ಗೆ ಅಲ್ಪ ಸ್ವಲ್ಪ ಕಟು ನುಡಿಗಳನ್ನಾಡುವ ಮೂಲಕ ವ್ಯಾಪಾರ ಮಾರ್ಗವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಚೀನಾದಿಂದ ಗಂಟು ಮೂಟೆ ಕಟ್ಟಿಕೊಂಡು ಹೊರಟಿರುವ ದೊಡ್ಡಣ್ಣ, ಮಾರುಕಟ್ಟೆ ವಿಸ್ತರಣೆ ಮಾಡಲು ತಿಣುಕಾಡುತ್ತಿದೆ. ಒಂದು ವೇಳೆ ಜಾಗತಿಕ ಮಟ್ಟದಲ್ಲಿ ವಿಸ್ತಾರ ಮಾರುಕಟ್ಟೆ ಹೊಂದಿರುವ ಭಾರತದ ಮಾರುಕಟ್ಟೆ ದೊಡ್ಡಣ್ಣನ ತನ್ನ ಕೈಗೆ ತೆಗೆದುಕೊಳ್ಳಲು ಮಾಡುತ್ತಿರುವ ತಂತ್ರಗಾರಿಕೆ ಎನ್ನಲಾಗಿದೆ. ಇಲ್ಲೀವರೆಗೂ ಅಮೆರಿಕದಿಂದ ಭಾರತ ಹಲವಾರು ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಕೆಲವೊಂದು ಪದಾರ್ಥಗಳನ್ನು ರಫ್ತು ಮಾಡಿದೆ. ಮುಂದಿನ ದಿನಗಳಲ್ಲಿ ತನ್ನ ಸಿದ್ಧ ವಸ್ತುಗಳ ಮಾರುಕಟ್ಟೆ ಮಾಡಿಕೊಳ್ಳಲು ಉದ್ದೇಶ ಮಾಡಿರುವ ಅಮೆರಿಕ, ಭಾರತದ ಕಡೆಗೆ ನೇರ ದೃಷ್ಟಿಯಿಟ್ಟುದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇದು ಸಾಧ್ಯ ಎನ್ನುವಂತಾ ಭರವಸೆ ಇದೆ. ಸದ್ಯಕ್ಕೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುತ್ತೆ ಎನ್ನುವ ಭರವಸೆ ಇಟ್ಟುಕೊಂಡಿದ್ದಾರೆ ಡೊನಾಲ್ಡ್‌ ಟ್ರಂಪ್‌.

ವ್ಯಾಪಾರ ಒಪ್ಪಂದದ ಕುದುರಿಸಲು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಟ್ರಂಪ್‌ ಉರುಳಿಸಿರುವ ದಾಳ ಸ್ವತಃ ಬಿಜೆಪಿ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಬೇಟಿ ವೇಳೆ ಯಾವುದೇ ವ್ಯಾಪಾರ ಒಪ್ಪಂದಕ್ಕೆ ನಾನು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಅಮೆರಿಕದಿಂದ ಹಾಲು ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳದಂತೆ ಆರ್‌ಎಸ್‌ಎಸ್‌ ಆಗ್ರಹ ಮಾಡಿದೆ. ನಾವು ಭಾರತದಲ್ಲಿ ಹಸುಗಳನ್ನು ತಾಯಿಯಂತೆ ಭಾವಿಸುತ್ತೇವೆ. ಅಮೆರಿಕ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಅಮೆರಿಕದಿಂದ ಬೆಣ್ಣೆ, ತುಪ್ಪ ಸೇರಿದಂತೆ ಯಾವುದೇ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸ್ವದೇಶಿ ಜಾಗರಣಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಹಾಜನ್‌ ತಿಳಿಸಿದ್ದಾರೆ. ಒಟ್ಟಾರೆ ವ್ಯಾಪಾರ ವಹಿವಾಟು ವೃದ್ಧಿಸುವುದು. ಮುಂಬರುವ ಅಮೆರಿಕ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಲು ಭಾರತೀಯ ಮೂಲದ ಜನರನ್ನು ಸೆಳೆಯುವ ಉದ್ದೇಶದಿಂದ ಭಾರತಕ್ಕೆ ಬರುತ್ತಿರುವ ಡೊನಾಲ್ಡ್‌ ಟ್ರಂಪ್‌ಗೆ ಯಾವ ಮಟ್ಟದ ಯಶಸ್ಸು ಸಿಗಲಿದೆ ಕಾದು ನೋಡ್ಬೇಕು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಸಚಿವೆ ಶಶಿಕಲಾ ಜೊಲ್ಲೆ ನಿವಾಸದೆದುರು ರೌಡಿಶೀಟರ್​ ಹತ್ಯೆಗೆ ಯತ್ನ
Top Story

ಸಚಿವೆ ಶಶಿಕಲಾ ಜೊಲ್ಲೆ ನಿವಾಸದೆದುರು ರೌಡಿಶೀಟರ್​ ಹತ್ಯೆಗೆ ಯತ್ನ

by ಮಂಜುನಾಥ ಬಿ
March 22, 2023
Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi

by ಪ್ರತಿಧ್ವನಿ
March 20, 2023
ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway
Top Story

ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway

by ಪ್ರತಿಧ್ವನಿ
March 18, 2023
ಮಾ.26ಕ್ಕೆ ಮೈಸೂರಿನಲ್ಲಿ ಪಂಚರತ್ನ ಸಮಾರೋಪ :  ಸಮಾವೇಶದಲ್ಲಿ 10 ಲಕ್ಷ ಜನ ಸೇರಲಿದ್ದಾರೆ ; ಹೆಚ್.ಡಿ.ಕುಮಾರಸ್ವಾಮಿ
Top Story

ಮಾ.26ಕ್ಕೆ ಮೈಸೂರಿನಲ್ಲಿ ಪಂಚರತ್ನ ಸಮಾರೋಪ : ಸಮಾವೇಶದಲ್ಲಿ 10 ಲಕ್ಷ ಜನ ಸೇರಲಿದ್ದಾರೆ ; ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
March 18, 2023
ಅಕಾಲಿಕ ಮಳೆಯಿಂದ ಬೀದರ್ ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ನೀರುಪಾಲು..! : Millions of Rupees Were Lost in Bidar District Due to Untimely rains
Top Story

ಅಕಾಲಿಕ ಮಳೆಯಿಂದ ಬೀದರ್ ಜಿಲ್ಲೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು ನೀರುಪಾಲು..! : Millions of Rupees Were Lost in Bidar District Due to Untimely rains

by ಪ್ರತಿಧ್ವನಿ
March 19, 2023
Next Post
ಕೃಷಿ ಸಾಲ ಮನ್ನಾ: ಮಧ್ಯಪ್ರದೇಶದಲ್ಲಿ ರೈತರ ಕಣ್ಣಿಗೆ ಮಣ್ಣೆರಚಿದ ಕಾಂಗ್ರೆಸ್‌ ಸರ್ಕಾರ!

ಕೃಷಿ ಸಾಲ ಮನ್ನಾ: ಮಧ್ಯಪ್ರದೇಶದಲ್ಲಿ ರೈತರ ಕಣ್ಣಿಗೆ ಮಣ್ಣೆರಚಿದ ಕಾಂಗ್ರೆಸ್‌ ಸರ್ಕಾರ!

ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದುಗಳು ಬಂದವು ವಾಪಸ್!

ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದುಗಳು ಬಂದವು ವಾಪಸ್!

ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist