Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬಿಜೆಪಿಯ ಒಳೇಟಿಗೆ ನಿತೀಶ್ ನಿದ್ರಾಭಂಗ

ಬಿಜೆಪಿಯ ಒಳೇಟಿಗೆ ನಿತೀಶ್ ನಿದ್ರಾಭಂಗ
ಬಿಜೆಪಿಯ ಒಳೇಟಿಗೆ ನಿತೀಶ್ ನಿದ್ರಾಭಂಗ
Pratidhvani Dhvani

Pratidhvani Dhvani

October 10, 2019
Share on FacebookShare on Twitter

ಭಾರತದ ಸಮಕಾಲೀನ ರಾಜಕಾರಣದಲ್ಲಿ ನರೇಂದ್ರ ಮೋದಿಗೆ ಸಮರ್ಥ ಎದುರಾಳಿ ಎಂದು ಗುರುತಿಸಿಕೊಂಡಿದ್ದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರಾಜಕೀಯ ಪತನ ಆರಂಭವಾಗಿದೆಯೇ? ಎಂಬ ಚರ್ಚೆ ವ್ಯಾಪಕವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

ಫ್ಯಾಕ್ಟ್ ಚೆಕ್ಕರ್ ಆದ ಬೆಂಗಳೂರಿನ ಟೆಕ್ಕಿ: ಜುಬೈರ್ ಬದುಕಿನ ಸ್ಪೂರ್ತಿದಾಯಕ ಕಥೆ

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆ ಡಿ ಜೊತೆಗೂಡಿ ಮಹಾಮೈತ್ರಿ ರಚಿಸಿ‌ 150ಕ್ಕೂ ಹೆಚ್ಚು ಸ್ಥಾನ‌ ಗೆದ್ದು ಬಿಹಾರಿ-ಬಾಹರಿ ಆಟದಲ್ಲಿ ಮೋದಿ-ಶಾ‌ ಜೋಡಿಗೆ ಅದರದೇ‌ ಆಟದಲ್ಲಿ ಮಣ್ಣುಮುಕ್ಕಿಸಿದ್ದವರು‌ ನಿತೀಶ್. ಈ ಗೆಲುವಿಗೆ ಅಗತ್ಯವಾದ ತಂತ್ರ ಹೆಣೆದವರು ಪ್ರಾದೇಶಿಕ ರಾಜಕಾರಣದ ಅಗ್ರಜರಲ್ಲೊಬ್ಬರಾದ, ಆರ್ ಜೆಡಿ ಮುಖ್ಯಸ್ಥ, ಮೇವು ಹಗರಣದಲ್ಲಿ ಜೈಲು ಸೇರಿ, ಸಾವು-ಬದುಕಿನ ನಡುವೆ ಸೆಣಸುತ್ತಿರುವ ನಿತೀಶ್ ಒಂದು ಕಾಲದ ಗುರು ಹಾಗೂ ಗೆಳೆಯ ಲಾಲೂ ಪ್ರಸಾದ್ ಯಾದವ್.

ಈಗ ಬಿಜೆಪಿ ಹೆಣೆದಿರುವ ಬಲೆಯಲ್ಲಿ ಸಿಲುಕಿ ನಿತೀಶ್ ವಿಲವಿಲ ಒದ್ದಾಡುತ್ತಾ, ಬಿಹಾರ ರಾಜಕಾರಣದ ಮುಖ್ಯಭೂಮಿಕೆಯಿಂದ ಬದಿಗೆ ಸರಿಯಲಾರಂಭಿಸಿದ್ದಾರೆ. ಈ ಸ್ಥಾನವನ್ನು ಬಿಜೆಪಿ ಕಬಳಿಸುತ್ತಿದೆ ಎನ್ನಲಾಗುತ್ತಿದೆ. ಇಂಥ ಅನುಮಾನ ನಿಕ್ಕಿಯಾಗಿರುವುದು ಇತ್ತೀಚೆಗೆ ಬಿಹಾರದ‌‌ ವಿವಿಧೆಡೆ ಸಂಭವಿಸಿದ‌ ಭಾರಿ ಪ್ರವಾಹ. ಶತಮಾನದಲ್ಲೇ‌ ಕಂಡುಕೇಳರಿಯದ ಪ್ರವಾಹದಲ್ಲಿ ರಾಜ್ಯ ರಾಜಧಾನಿ ಪಟ್ನಾ ಒಂದರಲ್ಲೇ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಲು ನಿತೀಶ್ ವಿಫಲರಾಗಿದ್ದಾರೆ.‌

ಪ್ರವಾಹಪೀಡಿತ ರಾಜ್ಯಕ್ಕೆ ಅಗತ್ಯವಾದಷ್ಟು ಅನುದಾನ ನೀಡುವಲ್ಲಿಯೂ ಬಿಜೆಪಿ ಮೀನಮೇಷ ಎಣಿಸುವ ಮೂಲಕ ರಾಜ್ಯದ ಜನತೆಯನ್ನು ಹಿಂಸಿಸುತ್ತಿದೆ. ಇದರ ನೇರ ಆರೋಪವನ್ನು ಮುಖ್ಯಮಂತ್ರಿ ನಿತೀಶ್ ಗೆ ವರ್ಗಾಯಿಸಲಾಗಿದೆ. ವಾಸ್ತವದಲ್ಲಿ ನಗರಾಭಿವೃದ್ಧಿಯಂಥ ಮಹತ್ತರವಾದ ಖಾತೆಯು ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ ಕೈಯಲ್ಲಿದ್ದರೂ ವಿಫಲತೆಯನ್ನು ನಿತೀಶ್ ಗೆ ವರ್ಗಾಯಿಸುವ ಮೂಲಕ ಕಮಲಪಾಳೆಯ ಕೈಕಟ್ಟಿ ನಿಂತಿದೆ.

ಇತ್ತೀಚೆಗೆ ಪ್ರವಾಹದ ಕುರಿತು ಪ್ರಶ್ನಿಸಿದ ಪತ್ರಕರ್ತರೊಂದಿಗೂ ನಿತೀಶ್ ಸಿಡಿಮಿಡಿಗೊಂಡಿದ್ದಾರೆ. ಇದರರ್ಥ ಬಿಜೆಪಿ ನೇತೃತ್ವದ ಕೇಂದ್ರ‌ ಸರ್ಕಾರದಲ್ಲೂ ನಿತೀಶ್ ಗೆ ಪೂರಕ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದ ಕುಪಿತರಾಗುತ್ತಿರುವ ನಿತೀಶ್, ಅಸಹಾಯಕರಾಗಿ‌ ಪರಿಸ್ಥಿತಿಯನ್ನು ಹಿಡಿಯಲು ಪರಿತಪಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ದೇಶವೇ ತಲೆತಗ್ಗಿಸುವಂಥ ಮುಜಾಫರ್ ನಗರ ಶೆಲ್ಟರ್ ಅತ್ಯಾಚಾರ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿಯೂ ನಿತೀಶ್ ವಿಫಲವಾಗಿದ್ದರು. ಈ ಸಂದರ್ಭದಲ್ಲಿಯೂ ಬಿಹಾರ ಬಿಜೆಪಿ ನಿತೀಶ್ ಬೆಂಬಲಕ್ಕೆ ನಿಲ್ಲಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಿ‌ ಗೆದ್ದಿದ್ದರೂ ಜೆಡಿಯುಗೆ ಪ್ರಮುಖ ಸಚಿವ ಸ್ಥಾನಗಳನ್ನು ಮೋದಿ-ಶಾ ಜೋಡಿ ನೀಡಲಿಲ್ಲ.‌ ಇದರಿಂದ ಭಾರಿ ಹಿನ್ನಡೆ ಅನುಭವಿಸಿದ ನಿತೀಶ್ ಅವರು ಜೆಡಿಯುನ ಯಾರೊಬ್ಬರೂ ಮೋದಿ ಸಂಪುಟ ಸೇರುವುದಿಲ್ಲ ಎನ್ನುವ ಮೂಲಕ ಪ್ರತಿಭಟನೆ ದಾಖಲಿಸಿದ್ದರು. ಆದರೆ, ಅದ್ಯಾವುದಕ್ಕೂ ಮೋದಿ-ಶಾ ಜೋಡಿ ತಲೆಕೆಡಿಸಿಕೊಂಡಿಲ್ಲ. ಒಂದು ಕಾಲದಲ್ಲಿ ಬಿಹಾರದಲ್ಲಿ ಜೂನಿಯರ್ ಆಗಿ ಸರ್ಕಾರದ ಭಾಗವಾಗಿದ್ದ ಬಿಜೆಪಿಯು ನಿತೀಶ್ ಅವರನ್ನು ಹಿಂದಿಕ್ಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಬಿಹಾರ ಚುನಾವಣೆಯ ವೇಳೆಗೆ ನಿತೀಶ್ ಕುಮಾರ್ ಸ್ಥಾನಮಾನಗಳು ಮತ್ತಷ್ಟು ಸ್ಪಷ್ಟವಾಗಲಿವೆ.

RS 500
RS 1500

SCAN HERE

don't miss it !

ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?
ದೇಶ

ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?

by ಚಂದನ್‌ ಕುಮಾರ್
July 2, 2022
ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್
ಸಿನಿಮಾ

ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್

by ಪ್ರತಿಧ್ವನಿ
July 3, 2022
ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್‌ ಪ್ರಮಾಣ ವಚನ ಸ್ವೀಕಾರ?
ದೇಶ

ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್‌ ಪ್ರಮಾಣ ವಚನ ಸ್ವೀಕಾರ?

by ಪ್ರತಿಧ್ವನಿ
June 30, 2022
ಕರ್ನಾಟಕಕ್ಕೆ ಕಾಲಿಡುವುದೇ ಶರದ್‌ ಪವಾರ್‌ ಸಾರಥ್ಯದ ಎನ್‌ ಸಿಪಿ?
ದೇಶ

6 ತಿಂಗಳಲ್ಲಿ ಸರಕಾರ ಪತನ: ಶರದ್‌ ಪವಾರ್‌ ಭವಿಷ್ಯ

by ಪ್ರತಿಧ್ವನಿ
July 4, 2022
ರಾಜ್ಯದಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಗುರಿ: ಸಿದ್ದರಾಮಯ್ಯ
ಕರ್ನಾಟಕ

ವರುಷ ಎಂಟು; ಅವಾಂತರ ನೂರೆಂಟು ಸುಳ್ಳು ಎಂದು ಸಾಬೀತುಪಡಿಸಿ: ಪ್ರಹ್ಲಾದ್ ಜೋಷಿಗೆ ಸಿದ್ದರಾಮಯ್ಯ ಸವಾಲು

by ಪ್ರತಿಧ್ವನಿ
July 4, 2022
Next Post
ವಿರೋಧ ಪಕ್ಷ ನಾಯಕನ ಛಾತಿ ತೋರಿದ ಸಿದ್ದರಾಮಯ್ಯ

ವಿರೋಧ ಪಕ್ಷ ನಾಯಕನ ಛಾತಿ ತೋರಿದ ಸಿದ್ದರಾಮಯ್ಯ

ವಿತ್ತೀಯ ಕೊರತೆ ತುಂಬಲು ‘ನವರತ್ನ’ಗಳ ಬುಡಕ್ಕೆ ಕೊಡಲಿ

ವಿತ್ತೀಯ ಕೊರತೆ ತುಂಬಲು ‘ನವರತ್ನ’ಗಳ ಬುಡಕ್ಕೆ ಕೊಡಲಿ

ಅಧಿವೇಶನ ಕಲಾಪಕ್ಕೆ ಕ್ಯಾಮೆರಾ ನಿರ್ಬಂಧ ಎಷ್ಟು ಸರಿ?

ಅಧಿವೇಶನ ಕಲಾಪಕ್ಕೆ ಕ್ಯಾಮೆರಾ ನಿರ್ಬಂಧ ಎಷ್ಟು ಸರಿ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist