Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬದಲಾವಣೆಗೆ ದಾರಿಯಾಗಬಹುದೇ ಆಸ್ಪತ್ರೆ ವಾಸ್ತವ್ಯ?

ಬದಲಾವಣೆಗೆ ದಾರಿಯಾಗಬಹುದೇ ಆಸ್ಪತ್ರೆ ವಾಸ್ತವ್ಯ?
ಬದಲಾವಣೆಗೆ ದಾರಿಯಾಗಬಹುದೇ ಆಸ್ಪತ್ರೆ ವಾಸ್ತವ್ಯ?
Pratidhvani Dhvani

Pratidhvani Dhvani

September 30, 2019
Share on FacebookShare on Twitter

ಇತ್ತೀಚೆಗೆ ರಾಜ್ಯದ ಆರೋಗ್ಯ ಮಂತ್ರಿ ಬಿ ಶ್ರೀರಾಮುಲು ಅವರು ಉಡುಪಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ವಾಸ್ತವ್ಯ ಎಂಬ ಒಂದು ವಿನೂತನ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದಾರೆ. ಮಂತ್ರಿಯೊಬ್ಬರು ಈ ರೀತಿ ಆಸ್ಪತ್ರೆಯಲ್ಲಿ ಮಲಗುವುದು ಆಸ್ಪತ್ರೆಯ ಜನರೊಂದಿಗೆ ಸೇರಿ ಸಮಯ ಕಳೆಯುವುದು ಸ್ವಾಗತಾರ್ಹ.

ಹೆಚ್ಚು ಓದಿದ ಸ್ಟೋರಿಗಳು

ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

ಫ್ಯಾಸಿಷ್ಟರ ಬೆಳವಣಿಗೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ

ಬೌದ್ಧಿಕ ಭೌತಿಕ ಸ್ವಾಸ್ಥ್ಯದ ಎರಡು ವಾಹಿನಿಗಳ ನಡುವೆ

ಆದರೆ ಕೇವಲ ಮಂತ್ರಿ ಮತ್ತು ಅವರ ಆಪ್ತ ಸಹಾಯಕರು ಬಂದು ಏನಾದರೂ ಒಳ್ಳೆಯದಾಗುತ್ತದೆಯೇ ಎಂಬ ಪ್ರಶ್ನೆ ನನ್ನ ಮನಸ್ಸಿಗೆ ಬಂದಿತ್ತು. ನನ್ನ ಪ್ರಕಾರ ಆರೋಗ್ಯ ಇಲಾಖೆಯ ನಿರ್ದೇಶಕರು, ಕಮಿಷನರ್ ಮತ್ತು ಕಾರ್ಯದರ್ಶಿಗಳು ಕೂಡ ಮಂತ್ರಿಗಳ ಜೊತೆಗೆ ಈ ಕಾರ್ಯಕ್ರಮಕ್ಕೆ ಬಂದರೆ ಒಳ್ಳೆಯದು. ಆಗ ಸ್ಥಳದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತದೆ. ಹಾಗೆಯೇ ಇಂತಹ ಕಾರ್ಯಕ್ರಮಗಳನ್ನು ಮಾಡುವಾಗ ಯಾರಿಗೂ ತಿಳಿಸದಂತೆ ಈ ಕಾರ್ಯಕ್ರಮಗಳಿಗೆ ಬರುವುದು ಒಳ್ಳೆಯದು.

ಆಸ್ಪತ್ರೆಗಳು ಎದುರಿಸುತ್ತಿರುವ ಸಮಸ್ಯೆ:

ಹೆಚ್ಚಿನ ಜಿಲ್ಲಾ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಬೇಕಾಗಿದೆ. ವೈದ್ಯರ ಕೊರತೆ, ದಾದಿಯರು ಹಾಗೂ ಹೌಸ್ ಕೀಪಿಂಗ್ ಸ್ಟಾಫ್ ಗಳ ಕೊರತೆ ಬಹಳಷ್ಟು ಇದೆ. ಈ ಕೊರತೆಯನ್ನು ಮೊದಲು ಗುರುತಿಸಿಕೊಂಡು ಇದನ್ನು ತುಂಬುವುದು ಅತೀ ಅಗತ್ಯ. ಹಾಗೆಯೇ ಭೇಟಿ ಕೊಡುವ ಆಸ್ಪತ್ರೆಯ Swot analysis ಸ್ಥಳೀಯವಾಗಿಯೇ ಕುಳಿತು ಮಾಡಿದ್ದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು.

ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ವರದಿಗಳು ಎಲ್ಲೆಡೆಯಿಂದಲೂ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮಂತ್ರಿಗಳು ಸರಿಯಾಗಿ ಯೋಚಿಸಿ ಮಧ್ಯಪ್ರದೇಶದ ರೋಗಿ ಕಲ್ಯಾಣ ಸಮಿತಿ ಮಾದರಿಯಲ್ಲಿ ಸ್ಥಳೀಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಆಸಕ್ತ ದಾನಿಗಳನ್ನು ಗುರುತಿಸಿಕೊಂಡು ಅವರಿಂದ ಹಣ ಪಡೆದು ಕಟ್ಟಡಗಳನ್ನು ನಿರ್ಮಿಸುವುದು ಒಳ್ಳೆಯದು. ಆಸ್ಪತ್ರೆ ಅಭಿವೃದ್ಧಿ ಸಮಿತಿಗಳನ್ನು ಊರ ದಾನಿಗಳನ್ನು ಇಟ್ಟುಕೊಂಡು ಪ್ರಾರಂಭಿಸಿ ಅಗತ್ಯವಿರುವ ದಾದಿಯರು, ಹೌಸ್ ಕೀಪಿಂಗ್ ಸ್ಟಾಫ್ ಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಿದ ಸಂಪನ್ಮೂಲದಿಂದ ನಡೆಸಿಕೊಂಡು ಹೋಗುವುದು, ಆಸ್ಪತ್ರೆ ವಠಾರದಲ್ಲಿ ಕೆಲವು ಕಮರ್ಷಿಯಲ್ ಕಾಂಪ್ಲೆಕ್ಸ್ ಗಳನ್ನು ಕಟ್ಟಿಸಿ ಬಾಡಿಗೆಗೆ ಕೊಟ್ಟು ಅದರಿಂದ ಬಂದ ಹಣದಲ್ಲಿ ಜನ ಸಂಪನ್ಮೂಲಗಳನ್ನು ನಿರ್ವಹಿಸಬಹುದು ಅಂತ ಅನ್ನಿಸುತ್ತೆ. ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಬೇಕು.

ಹಾಗೆಯೇ ಎಲ್ಲೆಲ್ಲಿ ವಾಸ್ತವ್ಯ ಹೋಗಿದ್ದರೂ ಅಲ್ಲಿಯ ಕೆಲಸಗಳ ಫಾಲೋ ಅಪ್ ಅತಿ ಅಗತ್ಯವಾಗಿ ಮಾಡಬೇಕು. ಪ್ರತಿ ತಿಂಗಳು ಇದರ follow up ಸಭೆಗಳು ನಡೆಯಬೇಕು. ಆಗ ಮಾತ್ರ ಈ ಸರ್ಕಾರಿ ಯಂತ್ರ ಕೆಲಸ ಮಾಡುತ್ತದೆ. ಜನರಿಗೆ ಉತ್ತಮ ಆರೋಗ್ಯ ಕಲ್ಪಿಸಿಕೊಡುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಕ್ರಿಯಾಶೀಲ ಯುವಕರೊಬ್ಬರು ಆರೋಗ್ಯ ಮಂತ್ರಿಯಾಗಿರುವುದು ನಿಜವಾಗಲೂ ಖುಷಿ ತರುತ್ತದೆ.

ಇನ್ನು ಯಾವುದೇ ಕಾರಣಕ್ಕೂ ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ನಡೆಸಲು ಕೊಡಲೇಬಾರದು. ಎಲ್ಲೆಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆಯೋ ಅಲ್ಲಿಯೂ ಕೂಡ ಸರ್ಕಾರದ ಎಲ್ಲ ಕಾನೂನುಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲು ಜನಪ್ರತಿನಿಧಿಗಳು, ಸರ್ಕಾರಿ ವೈದ್ಯರು, ಸ್ಥಳೀಯ ವೈದ್ಯರು, ಸ್ಥಳೀಯ ದಾನಿಗಳು ಇರುವ ಕಮಿಟಿಗಳು ಇರಬೇಕು. ಹಾಗೆಯೇ ಪ್ರತಿಯೊಂದು ಸರ್ಕಾರಿ ಜಿಲ್ಲಾ ಆಸ್ಪತ್ರೆ trauma centre, emergency care, essential drugs as per WHO guidelines ಇವುಗಳನ್ನು ಇಟ್ಟಿದೆ ಎಂಬುದನ್ನು ನೋಡುವ ಜವಾಬ್ದಾರಿ ಕೂಡ ಅಧಿಕಾರಿಗಳದ್ದಾಗಬೇಕು.

ಜಿಲ್ಲಾ ಕೇಂದ್ರಗಳು ಬಡ ಜನರ ಆರೋಗ್ಯಕ್ಕೆ ಮುಖ್ಯವಾದ ದಾರಿ ದೀಪಗಳು. ಪ್ರಧಾನಿಯವರ ಕನಸಿನ ಕೂಸಾದ ಆಯುಷ್ಮಾನ್ ಭಾರತ ಯೋಜನೆ ಸಫಲವಾಗಬೇಕಾದರೆ ನಮ್ಮ ಜಿಲ್ಲಾ ಕೇಂದ್ರಗಳು ಸದೃಢಗೊಳ್ಳಬೇಕು. ಆಯುಷ್ಮಾನ್ ಭಾರತ್ ಈ ಇನ್ಶೂರೆನ್ಸ್ ಆಧಾರಿತ ಯೋಜನೆ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದಾದರೂ ಇದರಲ್ಲಿ ಹಲವಾರು ಕಾಯಿಲೆಗಳ ಕವರೇಜ್ ಇಲ್ಲ. ಅಂತಹ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಬಡ ಜನರಿಗೆ ಅಗತ್ಯವಾದ ಚಿಕಿತ್ಸೆಗಳು ಲಭ್ಯವಾಗಬೇಕು. ನಮ್ಮ ಜಿಲ್ಲಾಸ್ಪತ್ರೆಯ ಪ್ರಮುಖವಾದ ಒಂದು ವ್ಯವಸ್ಥೆ ಎಂದರೆ ಊಟದ ವ್ಯವಸ್ಥೆ. ಇದರ ಬಗ್ಗೆಯೂ ಕೂಡ ಸರಿಯಾದ ಪರಿಶೀಲನೆ ಆರೋಗ್ಯ ಸಚಿವರು ಬಂದಾಗ ನಡೆಯಬೇಕು. ಅಧಿಕಾರಿಗಳ ಮುಂದೆ ಊಟದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಜನ ಉತ್ತರ ಕೊಡುವುದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ಸರಿಯಾಗಿ ಯೋಚನೆ ಮಾಡಿ ಒಂದು ವ್ಯವಸ್ಥೆ ಮಾಡಬೇಕು.

ಇನ್ನು, ಕೊನೆಯದಾಗಿ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಕೊಠಡಿಯನ್ನು ಮಲಗಲಿಕ್ಕೆ ಕೊಡಲಾಯಿತು. ಇದಕ್ಕಿಂತ ಆಸ್ಪತ್ರೆಯ ಸ್ಪೆಷಲ್ ವಾರ್ಡ್ ಅಥವಾ ಸೆಮಿ ಸ್ಪೆಷಲ್ ವಾರ್ಟ್ ನಲ್ಲಿ ಈ ವ್ಯವಸ್ಥೆ ಮಾಡಿದ್ದರೆ ಚೆನ್ನಾಗಿತ್ತು. ಹಾಗಾದರೂ ಕೂಡ ಆ ವಾರ್ಡ್ ಗಳು ಉತ್ತಮಗೊಳ್ಳುತ್ತವೆ. ಹಾಗೆಯೇ ಆರೋಗ್ಯ ಮಂತ್ರಿಗಳು ತಮ್ಮ ಪ್ರತಿ ಭೇಟಿಯ ಸಂದರ್ಭದಲ್ಲಿಯೂ ಆಸ್ಪತ್ರೆಯ ವೈದ್ಯರುಗಳ ಪ್ರೈವೇಟ್ ಪ್ರಾಕ್ಟೀಸ್ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ವೈದ್ಯನಾಗಿ ಅದರಲ್ಲಿಯೂ ಒಂದು ವರ್ಷ ಸರ್ಕಾರಿ ಪೂರ್ಣಾವಧಿ ಸೇವೆಯನ್ನು ಮಾಡಿದ ನನಗೆ ಅರಿವಿರುವ ಹಾಗೆ ಕರ್ನಾಟಕ ಸರ್ಕಾರ ವೈದ್ಯರ ಪ್ರೈವೇಟ್ ಪ್ರಾಕ್ಟಿಸ್ ನಿಲ್ಲಿಸಲು ಯಾವುದೇ ಕಾನೂನು ಮಾಡಿಲ್ಲ. ಸರ್ಕಾರಕ್ಕೆ ತಿಳಿಸಿ ವೈದ್ಯರು ಎಲ್ಲಿಯೂ ಕೂಡ ಕನ್ಸಲ್ಟೇಷನ್ ನನ್ನು ಆಸ್ಪತ್ರೆಯ ಸಮಯದ ನಂತರ ಮಾಡಬಹುದು. ಬಹುಶಃ ನಮ್ಮ ಐಎಎಸ್ ಅಧಿಕಾರಿಗಳು ಸರಿಯಾಗಿ ಈ ವಿಷಯವನ್ನು ಮಂತ್ರಿಗಳಿಗೆ ತಿಳಿಸಿಲ್ಲ. ಈ ಬಗ್ಗೆ ಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಷ್ಟತೆಯಿಂದ ಮಾತನಾಡುವುದು ಒಳ್ಳೆಯದು.

ಲೇಖಕರು ಮನೋವೈದ್ಯರು

RS 500
RS 1500

SCAN HERE

don't miss it !

ಹಿಂದೂ ಅಂಗಡಿ ಮಾಲೀಕನ ಶಿರಚ್ಛೇದ ಮಾಡಿದ ದುಷ್ಕರ್ಮಿಗಳು!
ದೇಶ

ಹಿಂದೂ ಅಂಗಡಿ ಮಾಲೀಕನ ಶಿರಚ್ಛೇದ ಮಾಡಿದ ದುಷ್ಕರ್ಮಿಗಳು!

by ಪ್ರತಿಧ್ವನಿ
June 28, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ಬರ್ಮಿಂಗ್‌ ಹ್ಯಾಂ ಟೆಸ್ಟ್:‌ ಜಡೇಜಾ ಶತಕ, ಭಾರತ 416ಕ್ಕೆ ಆಲೌಟ್
ಕ್ರೀಡೆ

ಬರ್ಮಿಂಗ್‌ ಹ್ಯಾಂ ಟೆಸ್ಟ್:‌ ಜಡೇಜಾ ಶತಕ, ಭಾರತ 416ಕ್ಕೆ ಆಲೌಟ್

by ಪ್ರತಿಧ್ವನಿ
July 2, 2022
ಇನ್ನೂ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚಳ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ದೇಶ

ಇನ್ನೂ ಕೋವಿಡ್ ಸಾಂಕ್ರಾಮಿಕ ಮುಗಿದಿಲ್ಲ, 110 ರಾಷ್ಟ್ರದಲ್ಲಿ ಸೋಂಕು ಹೆಚ್ಚಳ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

by ಪ್ರತಿಧ್ವನಿ
June 30, 2022
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!
ಕರ್ನಾಟಕ

ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!

by ಪ್ರತಿಧ್ವನಿ
June 30, 2022
Next Post
ಸರ್ಕಾರ ನಡೆಸುವುದು ತಂತಿ ಮೇಲಿನ ನಡಿಗೆಯಾಗಿದ್ದು ಹೇಗೆ?

ಸರ್ಕಾರ ನಡೆಸುವುದು ತಂತಿ ಮೇಲಿನ ನಡಿಗೆಯಾಗಿದ್ದು ಹೇಗೆ?

ಕೊಡಗು: ರಸ್ತೆ ವಿಸ್ತರಣೆಗೆ ಪರಿಸರವಾದಿಗಳ ವಿರೋಧ

ಕೊಡಗು: ರಸ್ತೆ ವಿಸ್ತರಣೆಗೆ ಪರಿಸರವಾದಿಗಳ ವಿರೋಧ

ರಿಸರ್ವ್ ಬ್ಯಾಂಕ್ ಜೋಳಿಗೆಗೆ ಮತ್ತೆ ಕೈಹಾಕಲು ಮುಂದಾದ ಮೋದಿ ಸರ್ಕಾರ!

ರಿಸರ್ವ್ ಬ್ಯಾಂಕ್ ಜೋಳಿಗೆಗೆ ಮತ್ತೆ ಕೈಹಾಕಲು ಮುಂದಾದ ಮೋದಿ ಸರ್ಕಾರ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist