Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪ್ಲಾಸ್ಟಿಕ್‌ ಕಡಿವಾಣಕ್ಕೆ E-cityಯಲ್ಲಿ ʼಕಟ್ಲೆರಿ ಬ್ಯಾಂಕ್‌ʼ ಸ್ಥಾಪನೆ

ಪ್ಲಾಸ್ಟಿಕ್‌ ಕಡಿವಾಣಕ್ಕೆ E-cityಯಲ್ಲಿ ʼಕಟ್ಲೆರಿ ಬ್ಯಾಂಕ್‌ʼ ಸ್ಥಾಪನೆ
ಪ್ಲಾಸ್ಟಿಕ್‌ ಕಡಿವಾಣಕ್ಕೆ E-cityಯಲ್ಲಿ ʼಕಟ್ಲೆರಿ ಬ್ಯಾಂಕ್‌ʼ ಸ್ಥಾಪನೆ

December 27, 2019
Share on FacebookShare on Twitter

2016ರಲ್ಲೇ ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಬ್ಯಾನ್‌ ಜಾರಿಗೆ ಬಂದಿದ್ದರೂ, ಈಗಲೂ ಈ ಪ್ಲಾಸ್ಟಿಕ್‌ ಭೂತ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಬಹಳ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಹಲವು ಯೋಜನೆಗಳನ್ನು ರೂಪಿಸಿದರೂ, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಅದರ ಪರಿಣಾಮ ಅಷ್ಟಕಷ್ಟೇ. ಇಂತಹ ಸಮಯದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿಯಲ್‌ ಡೆವೆಲಪ್‌ಮೆಂಟ್‌ ಅಥಾರಿಟಿ (ಎಲ್ಸಿಟಾ)ವು ಒಂದು ಪರಿಣಾಮಕಾರಿ ಯೋಜನೆಯನ್ನು ಜಾರಿಗೆ ತಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI

ಎಲೆಕ್ಟ್ರಾನಿಕ್‌ ಸಿಟಿಯ ಆಸುಪಾಸಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ʼಕಟ್ಲೆರಿ ಬ್ಯಾಂಕ್‌ʼಅನ್ನು ಎಲ್ಸಿಟಾ ವತಿಯಿಂತ ಸ್ಥಾಪಿಸಲಾಗಿದೆ. ತಿಂಡಿ ತಿನಿಸುಗಳನ್ನು ಬಡಿಸಲು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುವ ಬದಲಾಗಿ ಸ್ಟೀಲ್‌ ಪಾತ್ರೆಗಳನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಅದು ಕೂಡ ಉಚಿತವಾಗಿ. ಯಾವುದೇ ಸಂಸ್ಥೆಗಳು ತಮ್ಮಲ್ಲಿ ಸಭೆ ಸಮಾರಂಭಗಳು ನಡೆಯುವಾಗ ಎಲ್ಸಿಟಾ ಆಫೀಸ್‌ಗೆ ಭೇಟಿ ನೀಡಿ ನಿಗದಿತ ಠೇವಣಿಯನ್ನು ಪಾವತಿಸಿ ಸ್ಟೀಲ್‌ ಪಾತ್ರೆಗಳನ್ನು ಎರವಲು ಪಡೆಯಬಹುದು. ನಿಗದಿತ ಸಮಯದಲ್ಲಿ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿ ನೀಡಿದ ಠೇವಣಿಯನ್ನು ವಾಪಸ್‌ ಪಡೆಯಬಹುದು. ಇದರಿಂದ ಅನಗತ್ಯ ಖರ್ಚು ಉಳಿಸಬಹುದು ಅಷ್ಟೇ ಅಲ್ಲದೇ, ಸುಸ್ಥಿರ ಪರಿಸರವನ್ನು ನಿರ್ಮಿಸಲು ಕೊಡುಗೆ ನೀಡಿದಂತೆಯೂ ಆಗುತ್ತದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸಭೆ ಸಮಾರಂಭಗಳು ನಡೆದರೆ ದಿನಕ್ಕೆ ಐದು ಟನ್‌ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಅವುಗಳನ್ನು ವಿಲೇವಾರಿ ಮಾಡುವುದು ತ್ರಾಸದಾಯಕ. ಪ್ಲಾಸ್ಟಿಕ್‌ ಕಪ್‌, ಪೇಪರ್‌ ಗ್ಲಾಸ್‌ಗಳು ಕಸ ವಿಂಗಡಣೆ ಕಾರ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ. ಹೀಗಾಗಿ ಸ್ಟೀಲ್‌ ಗ್ಲಾಸ್‌ ಹಾಗೂ ಬಟ್ಟಲುಗಳ ಬಳಕೆ ಕಸದ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ, ಮರುಬಳಕೆಗೂ ಯೋಗ್ಯವಾಗಿರುತ್ತವೆ. ಎಲೆಕ್ಟ್ರಾನಿಕ್‌ ಸಿಟಿಯ ಒಳಗೆ ನಡೆಯುವ ಕಾರ್ಯಕ್ರಮದ ಕಸ ವಿಲೇವಾರಿಯನ್ನು ಎಲ್ಸಿಟಾ ಸಂಸ್ಥೆಯು ನಿರ್ವಹಿಸುತ್ತದೆ. ಹಾಗಾಗಿ ಈ ಹೊರೆಯನ್ನು ಕಡಿತಗೊಳಿಸಲು ಎಲ್ಸಿಟಾ ಕಂಡುಕೊಂಡ ದಾರಿ ʼಕಟ್ಲೆರಿ ಬ್ಯಾಂಕ್‌ʼ.

ಈ ವ್ಯವಸ್ಥೆಯು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಇನ್ನಿತರರಿಗೆ ಉಪಯೋಗವಾಗಲಿದೆ. ಈ ಯೋಜನೆಯ ಉಪಯೋಗವನ್ನು ಪಡೆಯಲು ಮಾಡಬೇಕಾಗಿದ್ದು ಇಷ್ಟೇ, ಎಲ್ಸಿಟಾ ಕಛೇರಿಯಲ್ಲಿ ಸಿಗುವ ಸರಳ ಫಾರ್ಮ್‌ ಭರ್ತಿ ಮಾಡಿ ತಾವು ಎರವಲು ಪಡೆಯುವ ವಸ್ತುಗಳಿಗೆ ಸಮಾನಾದ ಡೆಪಾಸಿಟ್‌ ಹಣವನ್ನು ಪಾವತಿ ಮಾಡಬೇಕು. ಕಾರ್ಯಕ್ರಮ ಮುಗಿದ ಬಳಿಕ ವಸ್ತುಗಳನ್ನು ಹಿಂತಿರುಗಿಸಿ ತಮ್ಮ ಹಣವನ್ನು ವಾಪಾಸ್‌ ಪಡೆಯಬಹುದು. ಯಾವುದೇ ವಸ್ತು ಕಳೆದು ಹೋದಲ್ಲಿ ಅಥವಾ ಹಾನಿಯುಂಟಾದಲ್ಲಿ ಅದನ್ನು ಡೆಪಾಸಿಟ್‌ ಹಣದಿಂದ ಕಳೆಯಲಾಗುವುದು. ಎಲೆಕ್ಟ್ರಾನಿಕ್‌ ಸಿಟಿಯ ಹೊರಗಿನ ಸಂಸ್ಥೆಗಳು ಕೂಡಾ ಈ ಯೋಜನೆಯ ಉಪಯೋಗವನ್ನು ಪಡೆಯಬಹುದು.

ಮುಖ್ಯವಾಗಿ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಎಲ್ಸಿಟಾ ಸಂಸ್ಥೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ಟೀಲ್‌ ಬಟ್ಟಲು, ಲೋಟ, ಚಮಚ ಹಾಗೂ ಇತರ ವಸ್ತುಗಳನ್ನು ಇಲ್ಲಿ ಉಚಿತವಾಗಿ ಪಡೆಯಬಹುದು. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸಭೆ ಸಮಾರಂಭ ನಡೆಸುವವರಿಗೆ ಈ ಯೋಜನೆಯು ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಎಲ್ಲರೂ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ, ಈ ಕಟ್ಲೆರಿ ಬ್ಯಾಂಕ್‌ ನ ವಸ್ತುಗಳನ್ನು ಉಪಯೋಗಿಸುವಂತೆ ಕೇಳಿಕೊಳ್ಳುತ್ತೇನೆಂದು ಎಲ್ಸಿಟಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ರಮಾ ಎನ್‌ ಅವರು ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

SIDDARAMAIAH | ಅಡುಗೆ ಮಾಡೋದು ನಾವು..ಅವ್ರು ಬಂದು ಬಡ್ಸೋದು..! #PRATIDHVANI
ಇದೀಗ

SIDDARAMAIAH | ಅಡುಗೆ ಮಾಡೋದು ನಾವು..ಅವ್ರು ಬಂದು ಬಡ್ಸೋದು..! #PRATIDHVANI

by ಪ್ರತಿಧ್ವನಿ
March 21, 2023
ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars
Top Story

ಯುಗಾದಿ ಶುಭ ಮುಹೂರ್ತಕ್ಕೆ ಕಾಯುತ್ತಿದ್ದಾರೆ ಪಕ್ಷಾಂತರಿಗಳು..! ಇವರು ಜಂಪಿಂಗ್​ ಸ್ಟಾರ್ಸ್​.. They are Jumping Stars

by ಕೃಷ್ಣ ಮಣಿ
March 20, 2023
VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI
ಇದೀಗ

VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI

by ಪ್ರತಿಧ್ವನಿ
March 20, 2023
ಲಂಡನ್​​ನಲ್ಲಿ ಭಾರತೀಯ ಹೈಕಮಿಷನ್​ ಕಚೇರಿ ಮೇಲೆ ಖಲಿಸ್ತಾನಿ ಉಗ್ರರ ಅಟ್ಟಹಾಸ : ತ್ರಿವರ್ಣ ಧ್ವಜಕ್ಕೆ ಅವಮಾನ
ವಿದೇಶ

ಲಂಡನ್​​ನಲ್ಲಿ ಭಾರತೀಯ ಹೈಕಮಿಷನ್​ ಕಚೇರಿ ಮೇಲೆ ಖಲಿಸ್ತಾನಿ ಉಗ್ರರ ಅಟ್ಟಹಾಸ : ತ್ರಿವರ್ಣ ಧ್ವಜಕ್ಕೆ ಅವಮಾನ

by ಮಂಜುನಾಥ ಬಿ
March 20, 2023
KSEshwarappa | ಪ್ರತಿಭಟನೆಗೆಲ್ಲಾ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ
ಇದೀಗ

KSEshwarappa | ಪ್ರತಿಭಟನೆಗೆಲ್ಲಾ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ

by ಪ್ರತಿಧ್ವನಿ
March 18, 2023
Next Post
ಮಾನವ ಹಕ್ಕುಗಳ ಆಯೋಗದ ಕಟಕಟೆ ಹತ್ತಿದ ಗೋಲಿಬಾರ್ ಪ್ರಕರಣ

ಮಾನವ ಹಕ್ಕುಗಳ ಆಯೋಗದ ಕಟಕಟೆ ಹತ್ತಿದ ಗೋಲಿಬಾರ್ ಪ್ರಕರಣ

ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಮಮತಾ ಬ್ಯಾನರ್ಜಿ ಪರಿಹಾರದ ಗುಟ್ಟೇನು?

ಗೋಲಿಬಾರ್‌ನಲ್ಲಿ ಮೃತರ ಕುಟುಂಬಕ್ಕೆ ಮಮತಾ ಬ್ಯಾನರ್ಜಿ ಪರಿಹಾರದ ಗುಟ್ಟೇನು?

ದೇಶದ ಆರ್ಥಿಕ ಸ್ಥಿತಿ ಬದಲಿಸಿದ ವರ್ಷದ ಹನ್ನೆರಡು ವಿದ್ಯಮಾನಗಳೇನು ಗೊತ್ತಾ ?

ದೇಶದ ಆರ್ಥಿಕ ಸ್ಥಿತಿ ಬದಲಿಸಿದ ವರ್ಷದ ಹನ್ನೆರಡು ವಿದ್ಯಮಾನಗಳೇನು ಗೊತ್ತಾ ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist