Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

‘ಪೌರತ್ವ-ಪಾಕ್’ ಕನವರಿಸಿದ ಪ್ರಧಾನಿ,  ಪ್ರವಾಹ ಪೀಡಿತರನ್ನು ಮರೆತಿದ್ದೇಕೆ? 

‘ಪೌರತ್ವ-ಪಾಕ್’ ಕನವರಿಸಿದ ಪ್ರಧಾನಿ,  ಪ್ರವಾಹ ಪೀಡಿತರನ್ನು ಮರೆತಿದ್ದೇಕೆ?
‘ಪೌರತ್ವ-ಪಾಕ್’ ಕನವರಿಸಿದ ಪ್ರಧಾನಿ

January 3, 2020
Share on FacebookShare on Twitter

ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ದೇಶ ಹಾಗೂ ವಿದೇಶಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು “ಬಿಜೆಪಿಯ ವೋಟ್ ಬ್ಯಾಂಕ್ ಭದ್ರಪಡಿಸಬಲ್ಲ ಬಹುಸಂಖ್ಯಾತ ರಾಜಕೀಯ ನಿರ್ಧಾರ”ವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವ ದುಸ್ಸಾಹಸ ಮಾಡಿದ್ದಾರೆ. ಸಿಎಎ ಕೇಂದ್ರಿತ ಚರ್ಚೆಯು ಮತ ಧ್ರುವೀಕರಣ ರಾಜಕಾರಣದ ಭಾಗ ಹಾಗೂ ದೇಶವನ್ನು ಬಾಧಿಸುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತದಂಥ ಮಹತ್ವದ ಚರ್ಚೆಗಳಿಂದ ದೂರ ಸರಿಸುವ ಸ್ಪಷ್ಟ ಉದ್ದೇಶ ಹೊಂದಿದೆ ಎಂಬುದು ತುಮಕೂರಿನಲ್ಲಿ‌ ಅವರು ಮಾಡಿದ 40 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಸ್ಪಷ್ಟವಾಗಿದೆ.

ಮೊದಲಿಗೆ ಧಾರ್ಮಿಕ ಕಿರುಕುಳಕ್ಕೆ‌ ಒಳಗಾದವರಿಗೆ ಪೌರತ್ವ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದಲ್ಲಿ ಯಾರೂ ಪ್ರಶ್ನಿಸುತ್ತಿಲ್ಲ. ಭಾರತದ ಸಂವಿಧಾನದಲ್ಲಿ ವ್ಯಕ್ತಿಯೊಬ್ಬನ ಧರ್ಮ, ಜಾತಿ ಆಧರಿಸಿ ಪೌರತ್ವ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಸಂಪ್ರದಾಯವನ್ನು ಮುರಿದು ಆರು ಧರ್ಮಗಳ ಜನರಿಗೆ ಮಾತ್ರ ಪೌರತ್ವ ನೀಡುವ, ಉದ್ದೇಶಪೂರ್ವಕವಾಗಿ ಇಸ್ಲಾಂ ಹೊರಗಿಡುವ ಮೂಲಕ ವಿಭಜನಕಾರಿ ಕಾನೂನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಚಿಂತಕರು, ಕಲಾವಿದರು, ನಾಗರಿಕರು ವಿರೋಧ ಮಾಡುತ್ತಿದ್ದಾರೆ. ಇದು ಗೊತ್ತಿದ್ದೂ ನರೇಂದ್ರ ಮೋದಿಯವರು ತಮ್ಮ‌ ನೆಚ್ಚಿನ “ಪಾಕಿಸ್ತಾನ ಎಂಬ ರಾಜಕೀಯ ಗುರಾಣಿ” ಹಿಡಿದು‌ ವಿರೋಧ ಪಕ್ಷಗಳು ಹಾಗೂ ಪ್ರತಿಭಟನಾಕಾರರ ಮೇಲೆ ಎರಗುವ ಮೂಲಕ ತನ್ನದೇ ದೇಶವಾಸಿಗಳ ವಿರುದ್ಧ ಸಮರ ಸಾರುವ ಹಾಗೂ ಬಹುಸಂಖ್ಯಾತರ ಮನಸೆಳೆಯಲು ಮುಂದಡಿ ಇಟ್ಟಿದ್ದಾರೆ.

For a big country like ours, this obsession with Pakistan- in politics, in the media- is just embarrassing

— Nidhi Razdan (@Nidhi) January 2, 2020


ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಭಾರತದ ಬಹುಸಂಸ್ಕೃತಿ ಪರಂಪರೆ ಪ್ರತಿನಿಧಿಸುವ ತುಮಕೂರಿನ ಸಿದ್ದಗಂಗಾ ಮಠದಲ್ಲಿ‌ ನಡೆದ ರೈತರಿಗೆ ವಿವಿಧ ಸವಲತ್ತು ವಿತರಣಾ ಸಮಾರಂಭವನ್ನು ರಾಜಕೀಯ ವೇದಿಕೆಯನ್ನಾಗಿಸಿದ ಮೋದಿಯವರು ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಕಿರುಕುಳಕ್ಕೆ ತಮ್ಮ‌ ಮನಸು ಕದಡಿದೆ ಎಂದು ಅಲವತ್ತುಕೊಂಡಿದ್ದಾರೆ. ವಿದ್ಯಾರ್ಥಿಗಳ‌ ಸಮ್ಮುಖದಲ್ಲಿನ ಮುಕ್ಕಾಲು ತಾಸು‌ ಭಾಷಣದಲ್ಲಿ 20ಕ್ಕೂ ಹೆಚ್ಚು ಬಾರಿ ಪಾಕಿಸ್ತಾನದ ಹೆಸರು ತೆಗೆದಿರುವ ಮೋದಿಯವರು ಅಲ್ಲಿನ ದಲಿತರು ಹಾಗೂ ತುಳಿತಕ್ಕೆ ಒಳಗಾದವರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಮೂಲಕ ಸಿಎಎ ವಿರುದ್ದದ ಹೋರಾಟಗಾರರಲ್ಲಿ ಒಡಕು ಮೂಡಿಸುವ ಕುತಂತ್ರಕ್ಕೆ ಕೈಹಾಕಿದ್ದಾರೆ. ಅಲ್ಲದೇ, ವಿರೋಧ ಪಕ್ಷಗಳು ಹಾಗೂ ಸಿಎಎ ವಿರೋಧಿಗಳು ತಮ್ಮನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸುತ್ತಿರುವುದಕ್ಕೆ ಪ್ರತಿಕ್ರಿಯಿಸುವ ಪ್ರಯತ್ನ‌ ಮಾಡಿದ್ದಾರೆ.

ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತ್ಯೇಕವಾಗಿ 50 ಸಾವಿರ ಕೋಟಿ ಅನುದಾನ ಹಾಗೂ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ದೊಡ್ಡ ಮಟ್ಟದ ಹಾನಿಯಾಗಿದ್ದು, ಪರಿಹಾರ ಕಾರ್ಯಕ್ಕಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ಶ್ರೀ @narendramodi ಯವರಿಗೆ ಮುಖ್ಯಮಂತ್ರಿ ಶ್ರೀ @BSYBJP ಮನವಿ ಮಾಡಿದರು.#PMWithFarmers pic.twitter.com/OD1kIvf9hM

— CM of Karnataka (@CMofKarnataka) January 2, 2020


ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಗತ್ಯ. ಯುವಕರು ಸರ್ಕಾರವನ್ನು ಪ್ರಶ್ನಿಸಬೇಕು ಎನ್ನುವ ಮೂಲಕ “ಯುಗದ ರಾಜಕಾರಣಿ” ಎಂದು‌ ಬಿಂಬಿಸಿಕೊಳ್ಳುವ ಮೋದಿಯವರು, ದೇಶಾದ್ಯಂತ ನಡೆಯುತ್ತಿರುವ ಐತಿಹಾಸಿಕ ಹೋರಾಟಗಳನ್ನು ಅಣಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಎಎ ವಿರೋಧಿ ಹೋರಾಟವನ್ನು ಬಲತ್ಕಾರದ ಮೂಲಕ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಹತ್ತಿಕ್ಕುವ ಪ್ರಯತ್ನ ಮಾಡಿವೆ ಎಂಬುದಕ್ಕೆ ಅಲ್ಲಿ ಪ್ರಾಣ ಕಳೆದುಕೊಂಡವರು, ಸಾವಿರಾರು ಬಂಧಿತರು ಹಾಗೂ ಪೊಲೀಸರ ಅಟ್ಟಹಾಸಕ್ಕೆ ಒಳಗಾದ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದಾರೆ. ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಅಸ್ಸಾಮಿಗಳು ಹಾಗೂ ಬಂಗಾಳಿ ಹಿಂದೂಗಳು ಪ್ರಬಲ ಹೋರಾಟ ಸಂಘಟಿಸಿದ್ದಾರೆ. ಇಲ್ಲಿಂದ ಆರಂಭವಾದ ಹೋರಾಟದ ಕಿಚ್ಚು ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಮೂಲಕ ದೇಶದ ವಿವಿಧೆಡೆ ವ್ಯಾಪಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ.

ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ.
ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ.

ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ @narendramodi ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದು.

— Siddaramaiah (@siddaramaiah) January 2, 2020


ಜಾತ್ಯತೀತ, ಧರ್ಮಾತೀತ ನಿಲುವುಗಳ ಮೂಲಕ ಜಗತ್ತಿನಲ್ಲಿ ವಿಶಿಷ್ಟ ಸ್ಥಾನಗಳಿಸಿರುವ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಧರ್ಮದ ಆಧಾರದಲ್ಲಿ ಜನ್ಮ ಪಡೆದ ಪಾಕಿಸ್ತಾನದಂಥಾಗಿಸಲು ನರೇಂದ್ರ ಮೋದಿಯವರ ಪಕ್ಷವು ದೋಷಪೂರಿತವಾದ ಸಿಎಎ ಮೂಲಕ ಮುಂದಡಿ ಇಟ್ಟಿದೆ ಎಂಬ ಪ್ರತಿಭಟನಾಕಾರರ ಆರೋಪಕ್ಕೆ ಬಿಜೆಪಿ ನಾಯಕತ್ವ ಉತ್ತರಿಸಿಲ್ಲ. ಅಸ್ಸಾಂ ಮುಖ್ಯಮಂತ್ರಿ ಹಾಗೂ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಸೊರಬಾನಂದ ಸೋನಾವಾಲಾ ಅವರೇ ಕೇಂದ್ರದ ಪೌರತ್ವ ಕಾನೂನಿಗೆ ತಕರಾರು ತೆಗೆದಿದ್ದಾರೆ. ಬಿಜೆಪಿಯ ಹಲವು ನಾಯಕರು ಮೋದಿ-ಶಾ ಜೋಡಿಯ ನಿರ್ಧಾರವನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಸಂಸತ್ತಿನಲ್ಲಿ ಸಿಎಎ ಪರ ಮತ ಚಲಾಯಿಸಿದ ಬಿಜೆಪಿಯ ಮಿತ್ರ ಪಕ್ಷವಾದ ಪಂಜಾಬಿನ ಅಕಾಲಿ ದಳ, ಬಿಹಾರದ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ ಭಿನ್ನರಾಗ ತೆಗೆದಿವೆ.

ನೆರೆಹಾವಳಿಯಿಂದ ಆಗಿರುವ ನಷ್ಟ ಅಂದಾಜು ರೂ.೫೦ ಸಾವಿರ ಕೋಟಿಗೂ ಅಧಿಕ.
ರಾಜ್ಯ ಸರ್ಕಾರ ಕೇಳಿದ್ದು ರೂ.36 ಸಾವಿರ ಕೋಟಿ,
ಕೇಂದ್ರ ಸರ್ಕಾರ ಕೊಟ್ಟಿದ್ದು ರೂ.1200 ಕೋಟಿ.
ಕರ್ನಾಟಕದ ಬಗ್ಗೆ ಯಾಕೆ ತಾತ್ಸಾರ?#ಉತ್ತರಕೊಡಿಮೋದಿ

— Siddaramaiah (@siddaramaiah) January 2, 2020


ಸಿಎಎ ಬೆನ್ನಿಗೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿಗೊಳಿಸಲಾಗುವುದು ಎಂದು ಹೋದಲ್ಲಿ‌ ಬಂದಲ್ಲಿ ಹೇಳುತ್ತಿದ್ದ ಮೋದಿಯ ಒಡನಾಡಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯೇ ಸುಳ್ಳು ಎನ್ನುವ ರೀತಿಯಲ್ಲಿ ಈಚೆಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸ್ವತಃ ಮೋದಿಯವರೇ ಹೇಳಿದ್ದಾರೆ. ಈ ಮೂಲಕ ತಾವೇ ಎಣೆದ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

What we want him to talk about
– his govt's help to Karnataka
– flood relief
– inter-state water disputes
– correcting flaws in centralised recruitment exams

What he talks about
– Pakistan
– Pakistan this
– Pakistan that
– Pakistan, Pakistan, Pakistan#GobackModi

— PonnathPuraaNa (@rsponnathpur) January 2, 2020


ಬಿಜೆಪಿಯ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಅಜೆಂಡಾ ಜಾರಿಗೊಳಿಸುವ ನಿಟ್ಟಿನಲ್ಲಿ ಎಡವಿ ಬಿದ್ದಿರುವ ಮೋದಿಯವರು ಎಂದಿನಂತೆ ತಮ್ಮ ಚುನಾವಣಾ ಪ್ರಚಾರ ಭಾಷಣದ ಅಸ್ತ್ರವಾದ “ಪಾಕಿಸ್ತಾನ”ದ ಮೊರೆ ಹೋಗಿದ್ದಾರೆ. ಪಾಕಿಸ್ತಾನದ ವಿಚಾರವನ್ನು ಮತ್ತೆಮತ್ತೆ ಎತ್ತಿದರೆ ಮತ ಧ್ರುವೀಕರಣ ಸಾಧ್ಯ ಎಂಬುದು ಮೋದಿಯವರು ನಂಬಿರುವ ಸತ್ಯ. ಅದೃಷ್ಟವಶಾತ್ “ಎಲ್ಲ ಕಾಲದಲ್ಲೂ ಎಲ್ಲರನ್ನೂ ದಿಕ್ಕು ತಪ್ಪಿಸುವುದು ಸಾಧ್ಯವಿಲ್ಲ” ಎಂಬುದನ್ನು ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳು ಮೋದಿಯವರಿಗೆ ಮನವರಿಕೆ ಮಾಡಿಕೊಡಲೆತ್ನಿಸಿವೆ. ಆದರೂ ತಮ್ಮದೇ ಶೈಲಿಯ ರಾಜಕಾರಣಕ್ಕೆ ಮೋದಿಯವರು ಮೊರೆ ಹೋಗಿದ್ದಾರೆ. ಆದರೆ, ಇದರಲ್ಲಿ ಅವರಿಗೆ ಯಶಸ್ಸು ಎಷ್ಟರಮಟ್ಟಿಗೆ ದಕ್ಕಲಿದೆ ಎಂಬುದು 21ನೇ ಶತಮಾನದ ಮೂರನೇ ದಶಕದ ಭಾರತದ ರಾಜಕಾರಣದ ದಿಕ್ಕು ನಿರ್ಧಾರವಾಗಲಿದೆ.

Leader of a secular nation, addressing a rally looking like a priest.

This is not what our founding fathers hoped for. (And frankly Modi's Hindu cosplay looks keep getitng scarier.) https://t.co/p8UQCC2s8P

— Vidya (@VidyaKrishnan) January 2, 2020


ಇದೆಲ್ಲದರ ಮಧ್ಯೆ, ಕರ್ನಾಟಕದ ಪ್ರವಾಹಪೀಡಿತ ಪ್ರದೇಶ, ನೀರಾವರಿ ಯೋಜನೆ ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳ ಬಗ್ಗೆ ಒಂದು ಭರವಸೆಯ ಮಾತು ಮೋದಿಯವರಿಂದ ಹೊರಡಲಿಲ್ಲ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. #GoBackModi ಹ್ಯಾಷ್ ಟ್ಯಾಗ್ ಮೂಲಕ ಸಾವಿರಾರು ಮಂದಿ ಮೋದಿಯವರಿಗೆ ಚುರುಕು ಮುಟ್ಟಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಮೋದಿಯವರನ್ನು ವೇದಿಕೆಯಲ್ಲಿ ಎಚ್ಚರಿಸುವ ಯತ್ನ ಮಾಡಿದರೂ ಅವರು ಅದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಭಾರತ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟಿದೆ. ಹೀಗಿರುವಾಗ ರಾಜ್ಯಗಳ ಹಿತಾಸಕ್ತಿ ಕಾಯುವುದು ಕೇಂದ್ರ ಸರ್ಕಾರದ ಕರ್ತವ್ಯ.

CM Yediyurappa: Karnataka suffered one of the worst flood conditions ever, Estimated Loss is more than 30,000 Crores. I met the PM 3-4 times for the aid, but the aid hasn't come yet.

Even the BJP CM is not happy with the treatment what Karnataka recieved from Modi. #GobackModi pic.twitter.com/b3SAWtDKTT

— Lokesh (@lokesh_169) January 2, 2020


ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ವಿವಿಧ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಜನರ ನೋವಿಗೆ ಮಿಡಿಯುವ ಮೋದಿ ಸರ್ಕಾರವು ನಮ್ಮದೇ ರಾಜ್ಯದ 22 ಜಿಲ್ಲೆಗಳ ಜನರು ಶತಮಾನದಲ್ಲಿ ಕಂಡೂಕೇಳರಿಯದ ಪ್ರವಾಹಕ್ಕೆ ಸಿಲುಕಿ ನಲುಗಿದರೂ ಅವರ ನೆರವಿಗೆ ನಿಲ್ಲಲಿಲ್ಲವೇಕೆ? ರಾಜ್ಯ ಸರ್ಕಾರ 38 ಸಾವಿರ ಕೋಟಿ ರುಪಾಯಿ ನಷ್ಟದ ಅಂದಾಜು ನೀಡಿದರೂ ಶೇ 10ರಷ್ಟು ಅನುದಾನದ ಬದಲಾಗಿ ಕೇವಲ 1,800 ಕೋಟಿ ರುಪಾಯಿ ನೀಡಿ ಸುಮ್ಮನಾಗಿದ್ದೇಕೆ? ಪ್ರವಾಹದಿಂದಾಗಿ ಕರ್ನಾಟಕದ 700 ಗ್ರಾಮಗಳು ಜಲಾವೃತವಾಗಿದ್ದು, 3 ಲಕ್ಷಕ್ಕೂ ಅಧಿಕ ಮನೆಗಳು ನೆಲಕ್ಕುರುಳಿವೆ ಎಂದು ಬಿಜೆಪಿಯ ರಾಜ್ಯ ಸರ್ಕಾರವೇ ಹೇಳುತ್ತಿದೆ. ಆದರೆ, ಸಿದ್ಧಗಂಗಾ ಮಠದಲ್ಲಿ ಮೋದಿಯವರ ಭಾಷಣ ಯಾವ ವಿಚಾರದ ಮೇಲಿತ್ತು? ಕೇಂದ್ರ ಸರ್ಕಾರದ ನೆರವಿಗೆ ಕಾದುಕುಳಿತಿರುವ ಕರ್ನಾಟಕದ ನೆಲದಲ್ಲಿ ಮೋದಿಯವರು ಪಾಕಿಸ್ತಾನದ ಬಗ್ಗೆ ಮಾತನಾಡುವ ಅಗತ್ಯವೇನಿತ್ತು?

ನಮ್ಮ ರಾಜ್ಯಕ್ಕೆ ನ್ಯಾಯಯೋಚಿತವಾಗಿ ದಕ್ಕಬೇಕಾದ ಅನುದಾನ ತರಬೇಕಾದ ಬಿಜೆಪಿಯ 25 ಶಾಸಕರು ಮೋದಿ-ಶಾ ಜೋಡಿಗೆ ತಮ್ಮ ಧ್ವನಿ ಅಡವಿಟ್ಟಿದ್ದಾರೆಯೇ? ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ‌ ಸರ್ಕಾರ ಬಂದರೆ ಅಭಿವೃದ್ಧಿ ವೇಗ ಹೆಚ್ಚಲಿದೆ ಎನ್ನುತ್ತಿದ್ದ ಮಹಾನುಭಾವರು ಎಲ್ಲಿ ಅಡಗಿದ್ದಾರೆ? ಆಡಳಿತಗಾರರ ವೈಫಲ್ಯ, ವಚನ ಭ್ರಷ್ಟತೆ, ಆದ್ಯತೆಗಳನ್ನು ನೆನಪಿಸಬೇಕಾದ ಮಾಧ್ಯಮಗಳು ಸರ್ಕಾರದ ಅಣತಿಯಂತೆ ಕುಣಿಯಿತ್ತಿರುವುದೇಕೆ? “ಮೋದಿ ಸರ್ಕಾರ ಪ್ರಜಾಪ್ರಭುತ್ವ‌ ವ್ಯವಸ್ಥೆಯನ್ನೇ ಬುಡಮೇಲು ಮಾಡ ಹೊರಟಿದೆ. ಇದಕ್ಕೆ ಅಂಕುಶ ಹಾಕಬೇಕು ಎನ್ನುತ್ತಿರುವ ವಿರೋಧದ ಧ್ವನಿಗಳಲ್ಲಿ ತಪ್ಪು ಹುಡುಕುವಂಥದ್ದೇನಿದೆ”? ಭಿನ್ನ ಧ್ವನಿಗಳಿಗೆ ಕಿವಿಯಾಗುವುದು ಚುನಾಯಿತ ಸರ್ಕಾರಗಳ ಕರ್ತವ್ಯ. ಇದನ್ನು ಮೋದಿಯವರ ಸರ್ಕಾರ ಆಲಿಸಲು ಸಿದ್ಧವಿದೆಯೇ?

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು ; ಸಿಎಂ ಬೊಮ್ಮಾಯಿ
ಸಿನಿಮಾ

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಉದ್ಘಾಟನೆ

by ಪ್ರತಿಧ್ವನಿ
March 28, 2023
ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI
ಇದೀಗ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 5 | #PRATIDHVANI

by ಪ್ರತಿಧ್ವನಿ
March 27, 2023
MANDYA : ಮಂಡ್ಯ ಜಿಲ್ಲೆ ಚುನಾವಣ ಕಣ |BJP | JDS | CONGRESS | SUMALATHA | ELECTION 2023
ಇದೀಗ

MANDYA : ಮಂಡ್ಯ ಜಿಲ್ಲೆ ಚುನಾವಣ ಕಣ |BJP | JDS | CONGRESS | SUMALATHA | ELECTION 2023

by ಪ್ರತಿಧ್ವನಿ
March 29, 2023
ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು
Top Story

ವಿಧಾನಸಭಾ ಚುನಾವಣೆ ಹಿನ್ನೆಲೆ : ಮೂವರ ವಿರುದ್ಧ ಗೂಂಡಾ ಕಾಯ್ದೆ , 11 ಜನರ ಗಡಿಪಾರಿಗೆ ಶಿಫಾರಸ್ಸು

by ಪ್ರತಿಧ್ವನಿ
March 31, 2023
ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 4 | #PRATIDHVANI
ಇದೀಗ

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 4 | #PRATIDHVANI

by ಪ್ರತಿಧ್ವನಿ
March 26, 2023
Next Post
ಸ್ತಬ್ಧ ಚಿತ್ರದಲ್ಲೂ ರಾಜಕೀಯ ಮಾಡಿದ ಮೋದಿ ಸರ್ಕಾರ!

ಸ್ತಬ್ಧ ಚಿತ್ರದಲ್ಲೂ ರಾಜಕೀಯ ಮಾಡಿದ ಮೋದಿ ಸರ್ಕಾರ!

ಕರ್ನಾಟಕಕ್ಕೆಗುಲಗಂಜಿಯಷ್ಟೂ ಪ್ರಯೋಜನ ನೀಡದ ಪ್ರಧಾನಿ  ಭೇಟಿ

ಕರ್ನಾಟಕಕ್ಕೆಗುಲಗಂಜಿಯಷ್ಟೂ ಪ್ರಯೋಜನ ನೀಡದ ಪ್ರಧಾನಿ ಭೇಟಿ

ಬಿಜೆಪಿ ಸಂಸ್ಕೃತಿಯನ್ನು ಜಾಹೀರು ಮಾಡುತ್ತಿರುವ ಮುಖಂಡರು!

ಬಿಜೆಪಿ ಸಂಸ್ಕೃತಿಯನ್ನು ಜಾಹೀರು ಮಾಡುತ್ತಿರುವ ಮುಖಂಡರು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist