• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನೇಣು ಶಿಕ್ಷೆ ಸಂಬಂಧ ಕಾನೂನು ಬಿಗಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಕೇಂದ್ರ

by
February 9, 2020
in ದೇಶ
0
ನೇಣು ಶಿಕ್ಷೆ ಸಂಬಂಧ ಕಾನೂನು ಬಿಗಿ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡ ಕೇಂದ್ರ
Share on WhatsAppShare on FacebookShare on Telegram

“ನನ್ನ ಮಗಳು ಅಂದೇ ತೀರಿಹೋದಳು. ಆದರೆ ಪ್ರಕರಣದ ನ್ಯಾಯಾಂಗ ವಿಚಾರಣೆಯ ವೇಳೆ, ನನ್ನ ಮಗಳ ಕೊಲೆಗಾರರ ಮುಖಗಳನ್ನು ಪ್ರತಿದಿನ ನೋಡುತ್ತಾ ನಾನು ದಿನಾ ಸಾಯುತ್ತಿದ್ದೇನೆ,” ಎಂದು ನಿರ್ಭಯಾ ತಾಯಿ ಹೇಳಿದ ನೋವಿನ ಮಾತುಗಳು ದೇಶದ ಜನತೆಯ ಮನಕಲಕುತ್ತಿದ್ದು, ಇಡೀ ದೇಶವೇ ಈ ಹಂತಕರನ್ನು ನೇಣು ಕುಣಿಕೆಗೆ ಹಾಕುವುದು ಯಾವಾಗ ಎಂದು ಕೇಳುವಂತೆ ಆಗಿದೆ.

ADVERTISEMENT

ಮರಣ ದಂಡನೆ ಸಂಬಂಧ ಇರುವ ಕಾನೂನಿಗೆ ಪೂಕರವಾಗಿ ಬಿಗುಯಾದ ನಿಯಮಗಳನ್ನು ತರುವ ಮೂಲಕ, ನ್ಯಾಯಾಂಗ ಪ್ರಕ್ರಿಯೆಯ ಅಣುಕು ಮಾಡುವಂಥ ಪ್ರಹಸನಗಳಿಗೆ ಅಂತ್ಯ ತರಲು ಕೇಂದ್ರದ ಪರ ವಕೀಲರೂ ಆದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿದ್ದಾರೆ.

ಕೇಂದ್ರದ ಮನವಿಯ ಮುಂದಿನ ಆಲಿಕೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 11ಕ್ಕೆ ನಿಗದಿ ಮಾಡಿದೆ. ಆ ವೇಳೆಗೆ ಆರೋಪಿಗಳಿಗೆ ತಮ್ಮ ಪಾಲಿನ ಲೀಗಲ್‌ ಅವಕಾಶಗಳ ಕಾಲಮಿತಿ ಮುಗಿಯಲಿದೆ.

ನಾಲ್ವರು ಆರೋಪಿಗಳನ್ನು ನೇಣಿಗೇರಿಸುವ ಪ್ರಕ್ರಿಯೆಗೆ ಪಡೆಯಾಜ್ಞೆ ತಂದಿರುವ ಪಟಿಯಾಲಾ ಹೌಸ್‌ ಕೋರ್ಟ್‌ ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್‌ನ ನಡೆಯನ್ನು ಪ್ರಶ್ನಿಸಿರುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಎಲ್ಲ ಆಪಾದಿತರನ್ನು ಒಟ್ಟಿಗೇ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ಅದಾಗಲೇ ಆದೇಶ ನೀಡಿತ್ತು. ಆದರೆ ಈ ವಿಚಾರವನ್ನೂ ಸಹ ಚಾಲೆಂಜ್ ಮಾಡಿದ್ದ ಕೇಂದ್ರ, ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ನೇಣಿಗೇರಿಸಬೇಕೆಂದು ಕೋರಿತ್ತು. ಆರೋಪಿಗಳನ್ನು ಒಟ್ಟಿಗೇ ಅಥವಾ ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕೇ ಎಂಬ ಕುರಿತಂತೆ ಕಾನೂನನ್ನು ಸುಪ್ರೀಂ ಕೋರ್ಟ್ ನಿರ್ಧಾರ ಮಾಡಬೇಕೆಂದು ಮೆಹ್ತಾ ತಿಳಿಸಿದ್ದಾರೆ.

“ಅಂತಿಮವಾಗಿ, ನ್ಯಾಯಾಲಯವು ಕಾನೂನನ್ನು ತರಬೇಕು. ದೇಶದ ತಾಳ್ಮೆಯನ್ನು ಅದಾಗಲೇ ಪರೀಕ್ಷೆ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಈ ವಿಚಾರವಾಗಿ ನಾವು ತಕ್ಕ ಮಟ್ಟಿಗೆ ಯಶಸ್ಸನ್ನೂ ಸಾಧಿಸಿದ್ದೇವೆ. ಕ್ಷಮದಾನದ ಅರ್ಜಿಯು ನ್ಯಾಯಾಂಗದ ಅರ್ಜಿಯಲ್ಲ ಎಂದು ಹೈಕೋರ್ಟ್ ಆದೇಶಿಸಿದ್ದು, ಆರೋಪಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ನಿರಾಕರಿಸಿದೆ,” ಎಂದು ಮೆಹ್ತಾ ತಿಳಿಸಿದ್ದಾರೆ.

ನಾಲ್ವರು ಆರೋಪಿಗಳ ಪೈಕಿ ಮೂವರ ಬಳಿ ಇದ್ದ ‌ನ್ಯಾಯಾಂಗ ಪರಿಹಾರಗಳ ಆಯ್ಕೆಗಳು ಅದಾಗಲೇ ಅಂತ್ಯಗೊಂಡಿವೆ. ಈ ನಾಲ್ವರನ್ನೂ ಗಲ್ಲಿಗೇರಿಸಬೇಕೆಂದು ಕೇಂದ್ರ ಸರ್ಕಾರ ಕೋರಿಕೊಳ್ಳುತ್ತಿದೆ. ರಾಷ್ಟ್ರಪತಿಗಳ ಬಳಿ ಕೇವಲ ಒಬ್ಬ ಆರೋಪಿ ಮಾತ್ರವೇ ಕ್ಷಮಾದಾನದ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಉಳಿಸಿಕೊಂಡಿದ್ದಾನೆ.

ಆರೋಪಿಗಳು ಹಾಗೂ ಅವರ ಪರ ವಕೀಲರು ವಿಳಂಬದ ಧೋರಣೆ ಮೂಲಕ ಶಿಕ್ಷೆಯನ್ನು ಆದಷ್ಟು ಮುಂದಕ್ಕೆ ಹಾಕಲು ಮಾಡುತ್ತಿರುವುದು ನ್ಯಾಯಾಂಗ ಪ್ರಕ್ರಿಯೆಗಳ ಅಣಕವೇ ಆಗಿದೆ ಎನ್ನಲಾಗುತ್ತಿದೆ.

Tags: ಕಾನೂನುನೇಣು ಶಿಕ್ಷೆಸುಪ್ರೀಂ ಕೋರ್ಟ್
Previous Post

ಚುನಾವಣೋತ್ತರ ಸಮೀಕ್ಷೆ: ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್‌ ಕಾರ್ಯಾಭಾರ ಖಾತ್ರಿಯೇ?

Next Post

ದೆಹಲಿ ಫಲಿತಾಂಶದ ಮರ್ಮಾಘಾತದ ಬಳಿಕ ಕೋಮು ಪ್ರಚೋದನೆ, ದ್ವೇಷ ರಾಜಕಾರಣ ಕೈಬಿಡುವುದೇ ಬಿಜೆಪಿ?

Related Posts

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ
Top Story

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

by ಪ್ರತಿಧ್ವನಿ
September 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. (ಮೂಲ : Draft SIR list shows statistical absurdities. Audit by an independent agency...

Read moreDetails
ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

September 11, 2026
ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

September 11, 2026
ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

September 10, 2026
ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

ನಾ. ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!

September 10, 2026
Next Post
ದೆಹಲಿ ಫಲಿತಾಂಶದ ಮರ್ಮಾಘಾತದ ಬಳಿಕ ಕೋಮು ಪ್ರಚೋದನೆ

ದೆಹಲಿ ಫಲಿತಾಂಶದ ಮರ್ಮಾಘಾತದ ಬಳಿಕ ಕೋಮು ಪ್ರಚೋದನೆ, ದ್ವೇಷ ರಾಜಕಾರಣ ಕೈಬಿಡುವುದೇ ಬಿಜೆಪಿ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada