ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಮೋದಿ ಸಾಂತ್ವಾನ ಹೇಳಲು ಪ್ರಯತ್ನ ಪಟ್ಟಿದ್ದಾರೆ. ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ತೊಂದರೆ ಆಗುವುದಿಲ್ಲ ನಮ್ಮ ಸರ್ಕಾರ ರೈತ ಪರವಾಗಿಯೇ ಕೆಲಸ ಮಾಡುತ್ತಿದೆ. ವಿರೋಧ ಪಕ್ಷದವರ ಇಲ್ಲದ ಸಲ್ಲದ ಹೇಳಿಕೆಯಿಂದ ಅನ್ನದಾತರು ವಿಷಯ ಗ್ರಹಿಸುವುದರಲ್ಲಿ ಎಡವಿದ್ದಾರೆಂದು ಮಾಧ್ಯಮದ ಮೂಲಕ ಹೋರಾಟ ನಿರತರ ಮನವೊಲಿಸಲು ಮುಂದಾಗಿದ್ದಾರೆ.
ಮೋದಿಯ ಈ ತಂತ್ರಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ದೇಶ ʼವಿಷನ್ ಪ್ರಧಾನಿಯನ್ನು ಬಯಸುತ್ತದೆ. ಟೆಲಿವಿಷನ್ ಪ್ರಧಾನಿಯನ್ನಲ್ಲʼ ಎಂದು ಟೀಕಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಮೋದಿಯವರೇ ನಿಮ್ಮ ಕಚೇರಿಯಿಂದ ಮಾಧ್ಯಮದ ಮೂಲಕ ಕೆಲವೇ ನಿಮಿಷಗಳಲ್ಲಿ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ತಲುಪಬಹುದು. ಟಿ.ವಿ ಗಳ ಮೂಲಕ ಮನವೊಲಿಸುವ ಪ್ರಯತ್ನವೇಕೆ ಎಂದು ಟೀಕಾ ಪ್ರಹಾರ ನಡೆಸಿದೆ.
ದೆಹಲಿಯ ಗಡಿಗಳಲ್ಲಿ 23 ದಿನಗಳಿಂದ ಅನ್ನದಾತರು ಹೋರಾಟ ನಡೆಸುತ್ತಿದ್ದು, ಈಗಾಗಲೇ ಹೋರಾಟ ನಿರತರಲ್ಲಿ 22 ಜನ ರೈತರು ಸಾವನ್ನಪ್ಪಿದ್ದಾರೆ. ಸ್ವಲ್ಪವೂ ಮಾನವೀಯತೆ ತೋರದಿರುವ ಸರ್ಕಾರವಿದು. ಜೊತೆಗೆ ಹೋರಾಟಗಾರರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಹತ್ತಿಕ್ಕುತ್ತಿರುವುದು ಹಾಗೂ ರೈತರ ಹೋರಾಟ ರಾಜಕೀಯ ಪ್ರೇರಿತ ಎಂದು ರೈತ ಸಮುದಾಯಕ್ಕೆ ಚಾರಿತ್ರಿಕ ಅವಮಾನ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಅಲ್ಲದೆ, ರಾಜ್ಯದಲ್ಲಿ ಸಾರಿಗೆ ನೌಕಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ವಿರುದ್ದ ಪ್ರತಿಭಟಿಸಿದ್ದಕ್ಕಾಗಿ ಸರ್ಕಾರ ಧ್ವೇಷದಿಂದ 200 ನೌಕರರನ್ನು ಅಮಾನತು ಮಾಡಿದೆ. ರಾಜ್ಯ ಸರ್ಕಾರ ಕೇಂದ್ರದಿಂದ ಜಿಎಸ್ಟಿ ಪಾಲು ತರದೆ ರಾಜ್ಯವನ್ನೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ನ್ಯಾಯ ಕೇಳಿದವರನ್ನು ಅಮಾನತು ಮಾಡಿ ಉತ್ತರನ ಪೌರುಷವನ್ನು ತೋರುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.