• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೆಹಲಿ ಚುನಾವಣೆ: ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡ 20% ಅಭ್ಯರ್ಥಿಗಳು

by
February 4, 2020
in ದೇಶ
0
ದೆಹಲಿ ಚುನಾವಣೆ:  ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡ 20% ಅಭ್ಯರ್ಥಿಗಳು
Share on WhatsAppShare on FacebookShare on Telegram

ದೆಹಲಿ ವಿಧಾಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಯಾಗಿದೆ. ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಾವು ಸಲ್ಲಿಸಿರುವ ನಾಮಪತ್ರಗಳಲ್ಲಿ ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಕೂಡಾ ಘೋಷಿಸಿಕೊಂಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಈ ಕುರಿತಾಗಿ ವರದಿಯನ್ನು ಬಿಡುಗಡೆ ಮಾಡಿದ್ದು, ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಎಷ್ಟು ಜನ ಅಪರಾಧಿ ಹಿನ್ನೆಲೆ ಉಳ್ಳವರೆಂದು ಬಹರಂಗ ಪಡಿಸಿದೆ.

ADVERTISEMENT

ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, 70 ಕ್ಷೇತ್ರಗಳಲ್ಲಿ 672 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 672 ರಲ್ಲಿ210 ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, 90 ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು, 224 ಪಕ್ಷಗಳ ಅಭ್ಯರ್ಥಿಗಳು, ಮತ್ತು 148 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಲ್ಲಿ ಶೇ.51 ರಷ್ಟು (36) ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, ಹದಿನೇಳು ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. ಒಟ್ಟು 67 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು, ಉಳಿದ ಸೀಟುಗಳನ್ನು ಮಿತ್ರಪಕ್ಷಗಳಾದ ಜೆಡಿಯು ಹಾಗೂ ಲೋಕ ಜನಶಕ್ತಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಡಿಮೆ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ಹತ್ತು ಮಂದಿ ಕೇಸುಗಳನ್ನು ಎದುರಿಸುತ್ತಿದ್ದಾರೆ. 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.

ಒಟ್ಟು 672 ಅಭ್ಯರ್ಥಿಗಳಲ್ಲಿ, ಶೇ.20 (133 ಅಭ್ಯರ್ಥಿಗಳು) ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿರುವುದಾಗಿ ತಮ್ಮ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. 2015 ರಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ 673 ಅಭ್ಯರ್ಥಿಗಳಲ್ಲಿ 114 (17%) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದರು.

ಪ್ರಮುಖ ಪಕ್ಷಗಳಲ್ಲಿ, ಎಎಪಿಯ 70 ಅಭ್ಯರ್ಥಿಗಳಲ್ಲಿ 42 ಮಂದಿ (60%), ಬಿಜೆಪಿಯ 67 ಅಭ್ಯರ್ಥಿಗಳಲ್ಲಿ 26 ಮಂದಿ (39%), ಕಾಂಗ್ರೆಸ್‍ನ 66 ಅಭ್ಯರ್ಥಿಗಳಲ್ಲಿ 18 ಮಂದಿ (27%), ಬಿಎಸ್‌ಪಿಯ 66 ಅಭ್ಯರ್ಥಿಗಳಲ್ಲಿ 12 ಮಂದಿ (18%), ಎನ್‌ಸಿಪಿ ಯ 5 ಅಭ್ಯರ್ಥಿಗಳಲ್ಲಿ 3 ಮಂದಿ (60%) ತಮ್ಮ ಅಫಿಡವಿಟ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

32 ಅಭ್ಯರ್ಥಿಗಳು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಓರ್ವ ಅಭ್ಯರ್ಥಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಬಿಜೆಪಿಯ ಅತಿ ಹೆಚ್ಚಿನ 21 ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ನ 16 ಹಾಗೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 7 ಶಾಸಕರು ಕೂಡಾ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಭಾಗಿದಾರರಾಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡದಿದ್ದಲ್ಲಿ ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುವವರು ಭಾರೀ ದಂಡ ನೀಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ರಾಜಕೀಯ ಪಕ್ಷಗಳೂ ಕೂಡಾ ತಮ್ಮ ಅಭ್ಯರ್ಥಿಗಳ ಅಪರಾಧ ದಾಖಲೆಯನ್ನು ಪ್ರಕಟಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

Tags: ADR ReportArvind KejriwalDelhi ElectionNarendra Modiಅಭ್ಯರ್ಥಿಗಳುಉಪಚುನಾವಣೆ ಅಭ್ಯರ್ಥಿಗಳುಕ್ರಿಮಿನಲ್ ಪ್ರಕರಣದೆಹಲಿ ಚುನಾವಣೆ
Previous Post

ಸೆಗಣಿ ಮತ್ತು ಗೋಮೂತ್ರದಿಂದ ಕೊರೋನಾ ತಡೆಗಟ್ಟಲು ಸಾಧ್ಯ- ಹಿಂದೂ ಮಹಾಸಭಾ ನಾಯಕ

Next Post

ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು 

Related Posts

ಉದ್ಯೋಗಾಕಾಂಕ್ಷಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗುಡ್‌ ನ್ಯೂಸ್..!
Top Story

ಉದ್ಯೋಗಾಕಾಂಕ್ಷಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 11, 2026
0

ಬೆಂಗಳೂರು : ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದ 90 ದಿನಗಳ ಒಳಗಾಗಿ ಭರ್ತಿ ಮಾಡಬೇಕು ಎಂದು ಕಳೆದ ಡಿಸೆಂಬರ್‌ನಲ್ಲೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ...

Read moreDetails
ದೇಶಾದ್ಯಂತ ‘ಎಸ್‌ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ! ಈ ತಪ್ಪು ಮಾಡಿದರೆ ಜೈಲು ಗ್ಯಾರಂಟಿ

ದೇಶಾದ್ಯಂತ ‘ಎಸ್‌ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ! ಈ ತಪ್ಪು ಮಾಡಿದರೆ ಜೈಲು ಗ್ಯಾರಂಟಿ

March 11, 2026
“ನನಗಿಂತ ಕಿರಿಯ ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ”

“ನನಗಿಂತ ಕಿರಿಯ ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ”

March 10, 2026
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ : ಕೇಂದ್ರಕ್ಕೆ ಸಿಎಂ ಪತ್ರ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ : ಕೇಂದ್ರಕ್ಕೆ ಸಿಎಂ ಪತ್ರ

March 10, 2026
LPG ಬೆಲೆ ಏರಿಕೆಯ ಬಗ್ಗೆ ಈಗ ಮಾತಾಡಲಿ : ಬಿಜೆಪಿ ಸಂಸದರ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ..

LPG ಬೆಲೆ ಏರಿಕೆಯ ಬಗ್ಗೆ ಈಗ ಮಾತಾಡಲಿ : ಬಿಜೆಪಿ ಸಂಸದರ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ..

March 10, 2026
Next Post
ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು 

ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada