Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದೆಹಲಿಯಲ್ಲಿ ಬಿಜೆಪಿಗಿಲ್ಲ ಆಧಿಕಾರ? ಗುಂಡು ಹಾರಿಸಿದ್ದು ಎಎಪಿ ಬೆಂಬಲಿಗನೇ? 

ದೆಹಲಿಯಲ್ಲಿ ಬಿಜೆಪಿಗಿಲ್ಲ ಆಧಿಕಾರ? ಗುಂಡು ಹಾರಿಸಿದ್ದು ಎಎಪಿ ಬೆಂಬಲಿಗನೇ?
ದೆಹಲಿಯಲ್ಲಿ ಬಿಜೆಪಿಗಿಲ್ಲ ಆಧಿಕಾರ? ಗುಂಡು ಹಾರಿಸಿದ್ದು ಎಎಪಿ ಬೆಂಬಲಿಗನೇ? 

February 5, 2020
Share on FacebookShare on Twitter

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಬೇರೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಅಧಿಕಾರ ಹಿಡಿಯುವ ಕಸರತ್ತು ನಡೆಸಿದ್ದಾರೆ. ಆದರೆ ಟೈಮ್ಸ್‌ ನಡೆಸಿರುವ ಮತದಾನಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದೆಷ್ಟೇ ಅಬ್ಬರಿಸಿ ಬೊಬ್ಬಿರಿದರೂ ಹಾಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಣಿಸಲು ಸಾಧ್ಯವಿಲ್ಲ ಎನ್ನುವ ವರದಿ ಕಮಲಪಾಳಯದ ನಿದ್ರೆಗೆಡಿಸಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಕಮಲ ಪಾಳಯ ಈ ಬಾರಿ 10 ರಿಂದ 14 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿರುವುದು ಕೊಂಚ ಸಮಾಧಾನದ ವಿಚಾರವಾಗಿದೆ. ಆಮ್‌ ಆದ್ಮಿ ಪಾರ್ಟಿ 54 – 60 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್‌ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೇರಳದಲ್ಲಿ ಯೋಧನ ಅಪಹರಿಸಿ ಹಲ್ಲೆ: ಪಿಎಫ್‌ಐ ಕಾರ್ಯಕರ್ತರ ಕೈವಾಡ ಶಂಕೆ

ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡ ಎಐಎಡಿಎಂಕೆ, ಎನ್‌ಡಿಎಗೆ ಶಾಕ್‌..!

ಕಾವೇರಿ ಬಿಕ್ಕಟ್ಟು; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಒತ್ತಾಯ

ಇದನ್ನೂ ಓದಿ: ದೆಹಲಿ ಚುನಾವಣೆ: ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡ 20% ಅಭ್ಯರ್ಥಿಗಳು

ವಿಶೇಷ ಎಂದರೆ ಲೋಕಸಭಾ ಚುನಾವಣೆ ಈಗ ನಡೆದರೂ ಬಿಜೆಪಿ ಏಳು ಸ್ಥಾನಗಳ ಪೈಕಿ ಏಳರಲ್ಲೂ ಗೆಲ್ಲಲಿದೆ ಎಂದಿರುವ ಸಮೀಕ್ಷೆ, ಆಮ್‌ ಆದ್ಮಿ ಪಾರ್ಟಿ ಶೇಕಡ 52ರಷ್ಟು ಮತಗಳಿಕೆ ಮಾಡಲಿದ್ದು, ಬಿಜೆಪಿ ಶೇಕಡ 34 ರಷ್ಟು ಮತ ಗಳಿಸಲಿದೆ. ಈ ಬಾರಿ ಆಮ್‌ ಆದ್ಮಿ ಪಾರ್ಟಿ 2.5 ರಷ್ಟು ಶೇಕಡವಾರು ಮತಗಳನ್ನು ಕಳೆದುಕೊಳ್ಳಲಿದ್ದು, ಬಿಜೆಪಿ ಶೇಕಡ 1.7ರಷ್ಟು ಮತಗಳನ್ನು ಹೆಚ್ಚುವರಿಯಾಗಿ ಗಳಿಸಲಿದೆ ಎನ್ನುವ ವರದಿ ಬಂದಿದೆ. ಈ ವರದಿ ಬೆನ್ನಲ್ಲೇ ಬಿಜೆಪಿ ಅರವಿಂದ್‌ ಕೇಜ್ರಿವಾಲ್‌ ಗುರಿಯಾಗಿಸಿ ಮಾತಿನ ಯುದ್ಧವನ್ನೇ ಶುರು ಮಾಡಿದೆ. ಯಮುನಾ ನದಿ ಕ್ಲೀನ್‌ ಆಗಿದೆ ಎಂದು ಹೇಳುವ ಅರವಿಂದ್‌ ಕೇಜ್ರಿವಾಲ್‌ ಅವರು ನರೇಂದ್ರ ಮೋದಿ ಹಾಗು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರೀತಿ ಯಮುನಾ ನದಿಯ ನೀರನ್ನು ಒಮ್ಮೆ ಟೇಸ್ಟ್‌ ಮಾಡಲಿ ಎಂದು ಸವಾಲು ಹಾಕಿದ್ದರು. ಅಮಿತ್‌ ಷಾ ಸವಾಲಿಗೆ ಪ್ರತಿ ಸವಾಲು ಎಸೆದಿರುವ ಅರವಿಂದ್‌ ಕೇಜ್ರಿವಾಲ್‌ ಬಿಜೆಪಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದಿದ್ದಾರೆ.

ಇದನ್ನೂ ಓದಿ: ಉಗ್ರಗಾಮಿ ಹಾಗೂ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಬಿಜೆಪಿ

ಕಾಂಗ್ರೆಸ್‌ ಕೂಡ ಗೆಲುವಿಗೆ ಭಾರೀ ಕರಸತ್ತು ನಡೆಸುತ್ತಿದ್ದು ನರೇಂದ್ರ ಮೋದಿ ತಾಜ್‌ ಮಹಲ್‌ ಮಾರಾಟ ಮಾಡಿದರೂ ಅಚ್ಚರಿಯಿಲ್ಲ ಎಂದು ರಾಹುಲ್‌ ಗಾಂಧಿ ಬಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೇಕ್‌ ಇನ್‌ ಇಂಡಿಯಾ ಎನ್ನುವ ಅದ್ಬುತ ಆಲೋಚನೆಯನ್ನ ಘೋಷಣೆ ಮಾಡಿದರು. ಆದರೆ ಇಲ್ಲೀವರೆಗೆಗೂ ಒಂದೇ ಒಂದು ಫ್ಯಾಕ್ಟರಿ ನಿರ್ಮಾಣ ಮಾಡಲಿಲ್ಲ. ಬದಲಿಗೆ ದೇಶದ ಸರ್ಕಾರಿ ಸಾಮ್ಯದ ಕಂಪನಿಗಳು ಮಾರುತ್ತಾ ಬಂದಿದ್ದಾರೆ. ಇಂಡಿಯನ್‌ ಆಯಿಲ್‌, ಏರ್‌ ಇಂಡಿಯಾ, ಹಿಂದೂಸ್ತಾನ್‌ ಪೆಟ್ರೋಲಿಯಂ, ರೈಲ್ವೆ ಬೇಕಿದ್ರೆ ರೆಡ್‌ ಪೋರ್ಟ್‌ ಕೂಡ ಮಾರಾಟ ಮಾಡ್ತಾರೆ. ಇಷ್ಟೆಲ್ಲಾ ಯಾಕೆ ಆಗ್ರಾದ ತಾಜ್‌ ಮಹಲ್‌ ಮಾರಾಟ ಮಾಡಲು ಮೋದಿ ಹಿಂದೆ ಸರಿಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏರ್‌ಪೋರ್ಟ್‌ ಹಾಗು ಬಂದರುಗಳನ್ನು ಅದಾನಿಗೆ ಕೊಟ್ಟಿದ್ದಾರೆ. ಇನ್ಮುಂದೆ ನರೇಂದ್ರ ಮೋದಿ ಸರ್ಕಾರ ಅಲ್ಲ, ಅದಾನಿ, ಅಂಬಾನಿ ಸರ್ಕಾರ ಬರೋದು ಬಾಕಿ ಇದೆ. ಕೇವಲ 15 ಮಂದಿ ದೊಡ್ಡ ದೊಡ್ಡವರಿಗೆ ಮಾತ್ರ ಸರ್ಕಾರದಿಂದ ಅನುಕೂಲ ಆಗಲಿದೆ ಎಂದು ಟ್ವೀಟ್‌ ಮಾಡುವ ಮೂಲಕ ದೆಹಲಿ ಕಾಂಗ್ರೆಸ್‌ ಬಿಜೆಪಿಯನ್ನು ಕಿಚಾಯಿಸಿದೆ.

ಈ ನಡುವೆ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಅಬ್ಬರಿಸಲು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಜಾಮಿಯಾ ಪ್ರತಿಭಟನಾಕಾರರ ಮೇಲೆ ನಡೆದ ಫೈರಿಂಗ್‌ ಬಗ್ಗೆ ಅಬ್ಬರದ ಪ್ರಚಾರ ನಡೆಸಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ಮೋದಿ ಸರ್ಕಾರ ಹೆದರಿಸುವ ಕೆಲಸ ಮಾಡ್ತಿದೆ. ಆದರೆ ದೆಹಲಿ ಮತದಾರರು ಇದಕ್ಕೆಲ್ಲಾ ಹೆದರುವುದಿಲ್ಲ ಎಂದಿದ್ದರು. ಇದೀಗ ದೆಹಲಿಯ ಶಾಹೀನ್‌ ಬಾಗ್‌ನ ಪ್ರತಿಭಟನೆ ವೇಳೆ ಫೈರಿಂಗ್‌ ಮಾಡಿದ್ದ ಯುವಕ ಕಪಿಲ್‌ ಗುರ್ಜಾರ್‌ ಕಳೆದ ವರ್ಷ ಆಮ್‌ ಆದ್ಮಿ ಪಾರ್ಟಿ ಸೆರ್ಪಡೆ ಆಗಿದ್ದ ಎನ್ನುವ ಅಂಶವನ್ನು ಪೊಲೀಸರು ತೆರೆದಿಟ್ಟಿದ್ದಾರೆ. ನಾವು ಈ ಫೋಟೋಗಳನ್ನು ನಾವು ಕಪಿಲ್‌ ಗುರ್ಜಾರ್‌ ಮೊಬೈಲ್‌ನಿಂದ ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ. ದೆಹಲಿ ಪೊಲೀಸರ ಹೇಳಿಕೆಯನ್ನು ಅಲ್ಲಗಳೆದಿರುವ ಆಮ್‌ ಆದ್ಮಿ ಪಾರ್ಟಿ, ಶಾಹೀನ್‌ ಬಾಗ್‌ನಲ್ಲಿ ಫೈರಿಂಗ್‌ ನಡೆಸಿದ ಆರೋಪಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜೊತೆಗೆ ಈ ದೇಶದ ಗೃಹಮಂತ್ರಿ ಆಗಿರುವ ಅಮಿತ್‌ ಷಾ, ದೆಹಲಿ ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಈ ರೀತಿಯ ಕುತಂತ್ರ ಮಾಡಿದ್ದಾರೆ. ಇದು ಬಿಜೆಪಿ ಕೊಳಕು ರಾಜಕೀಯ ಎಂದು ಟೀಕಿಸಿದೆ. 2008ರಲ್ಲಿ ನನ್ನ ಸಹೋದರ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು. ಆದರೆ ಆಮ್‌ ಆದ್ಮಿ ಪಾರ್ಟಿ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಆರೋಪಿಯ ಚಿಕ್ಕಪ್ಪ ಫತೇಶ್‌ ಸಿಂಗ್‌ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಮತಕ್ಕಾಗಿ ಬಿಜೆಪಿ ಈ ರೀತಿಯ ಫೋಟೋ ಸೃಷ್ಟಿಸಿದೆಯಾ ಅನ್ನೋ ಅನುಮಾನ ಮೂಡಿಸುತ್ತಿದೆ.

RS 500
RS 1500

SCAN HERE

Pratidhvani Youtube

«
Prev
1
/
5498
Next
»
loading
play
D Boss Darshan: ದರ್ಶನ್ ಭಾಷಣದ ವೇಳೆ ಸುದೀಪ್ ಅಂತಾ ಹೇಳ್ತಿದ್ದಂತೆ ಹುಚ್ಚೆದ್ದು ಕುಣಿದ ಫ್ಯಾನ್ಸ್ | D
play
ಪತ್ನಿ ತನ್ನ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಗಂಡನ ಅನುಮತಿಯಿಲ್ಲದೆ ಮಾರುವುದು ಕ್ರೌರ್ಯವಲ್ಲ: ಕಲ್ಕತ್ತಾ ಹೈಕೋರ್ಟ್
«
Prev
1
/
5498
Next
»
loading

don't miss it !

ಸುಪ್ರೀಂಕೋರ್ಟ್ ಮುಂದೆ CWMA ಆದೇಶಕ್ಕೆ ನಾವು ತಡೆಯಾಜ್ಞೆ ಕೇಳುತ್ತೇವೆ: ಸಿಎಂ ಸಿದ್ದರಾಮಯ್ಯ
Top Story

ಸುಪ್ರೀಂಕೋರ್ಟ್ ಮುಂದೆ CWMA ಆದೇಶಕ್ಕೆ ನಾವು ತಡೆಯಾಜ್ಞೆ ಕೇಳುತ್ತೇವೆ: ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
September 20, 2023
ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿ: ಪ್ರಹ್ಲಾದ್​ ಜೋಶಿ
Top Story

ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿ: ಪ್ರಹ್ಲಾದ್​ ಜೋಶಿ

by ಪ್ರತಿಧ್ವನಿ
September 22, 2023
ಕಾವೇರಿ ಹೋರಾಟಕ್ಕೆ ಲಗ್ಗೆಯಿಟ್ಟ ಹೆಚ್‌.ಡಿ. ಕುಮಾರಸ್ವಾಮಿ.!
ಇದೀಗ

ಕಾವೇರಿ ಹೋರಾಟಕ್ಕೆ ಲಗ್ಗೆಯಿಟ್ಟ ಹೆಚ್‌.ಡಿ. ಕುಮಾರಸ್ವಾಮಿ.!

by Prathidhvani
September 23, 2023
ಡಿಜಿ, ಐಜಿಪಿ ನಡೆಸುತ್ತಿದ್ದ ಸಭೆಗಳ ಹೊಣೆ ಇನ್ನು ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳ ಹೆಗಲಿಗೆ..!
ಇದೀಗ

ಡಿಜಿ, ಐಜಿಪಿ ನಡೆಸುತ್ತಿದ್ದ ಸಭೆಗಳ ಹೊಣೆ ಇನ್ನು ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳ ಹೆಗಲಿಗೆ..!

by Prathidhvani
September 23, 2023
ಗೆಲುವಿನ ಹಾದಿಯಲ್ಲಿ”13″ : ಪ್ರೇಕ್ಷಕರ ಪಾಸಿಟಿವ್ ರೆಸ್ಪಾನ್ಸ್
Top Story

ಗೆಲುವಿನ ಹಾದಿಯಲ್ಲಿ”13″ : ಪ್ರೇಕ್ಷಕರ ಪಾಸಿಟಿವ್ ರೆಸ್ಪಾನ್ಸ್

by Prathidhvani
September 20, 2023
Next Post
ಸೋಶಿಯಲ್ ಮೀಡಿಯಾ ಮತ್ತು ನಾವು!

ಸೋಶಿಯಲ್ ಮೀಡಿಯಾ ಮತ್ತು ನಾವು!

ಮನೀಶ್ ಪಾಂಡೆ ಕಡೆಗಣನೆ; ಟೀಮ್‌ ಇಂಡಿಯಾ ಸೆಲೆಕ್ಷನ್‌ ಬಗ್ಗೆ ಅಭಿಮಾನಿಗಳು ಗರಂ 

ಮನೀಶ್ ಪಾಂಡೆ ಕಡೆಗಣನೆ; ಟೀಮ್‌ ಇಂಡಿಯಾ ಸೆಲೆಕ್ಷನ್‌ ಬಗ್ಗೆ ಅಭಿಮಾನಿಗಳು ಗರಂ 

ಗೊಂದಲ ಬಗೆಹರಿದರಷ್ಟೇ 13 ಮಂದಿ

ಗೊಂದಲ ಬಗೆಹರಿದರಷ್ಟೇ 13 ಮಂದಿ, ಇಲ್ಲವಾದರೆ 10 ಮಂದಿಗೆ ಮಾತ್ರ ಸಚಿವ ಸ್ಥಾನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist