ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜುಪಟ್ಟಿಯ ವಾರಕ್ಕೆ ಕಾಲಿಡುತ್ತಿದ್ದಂತೆ, ಮಧ್ಯಮ ವರ್ಗ ಮತ್ತು ದೇಶದ ಎಲ್ಲಾ ಪ್ರಜೆಗಳು ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಿಂದಿನ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಮಟ್ಟದ ಯಾವುದೇ ಬದಲಾವಣೆಗಳಿರಲಿಲ್ಲ. ಹಾಗಾಗಿ ಈ ಬಾರಿ ಕೇಂದ್ರ ಹಣಕಾಸು ಸಚಿವರಿಂದ ನಿರೀಕ್ಷೆ ಹುಟ್ಟಿಕೊಂಡಿದೆ.
ಕಳೆದ ಕೆಲವು ತ್ರೈಮಾಸಿಕಗಳಲ್ಲಿ, ಹೆಚ್ಚಿದ ಹಣದುಬ್ಬರ, ಈರುಳ್ಳಿ, ತರಕಾರಿಗಳು, ಉತ್ಪಾದಕ ವಸ್ತುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ, ಹೂಡಿಕೆಗಳ ಮೇಲಿನ ಬಡ್ಡಿದರಗಳು ಮತ್ತು ಉದ್ಯೋಗ ಮಾರುಕಟ್ಟೆಯು ಬಿಗಿಯಾಗಿರುವುದರಿಂದ ವಿವಿಧ ತ್ರೈಮಾಸಿಕ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದು ಮತ್ತು ಪ್ರೋತ್ಸಾಹ ಧನ ನೀಡುವಂತಹ ಕಾರ್ಪೊರೇಟ್‌ಗಳನ್ನು ಉತ್ತೇಜಿಸಲು ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಮುಂಬರುವ ಬಜೆಟ್‌ನಲ್ಲಿ ಹಣಕಾಸು ಸಚಿವರು ಉದ್ಯೋಗ ಸೃಷ್ಠಿಯಿಂದ ಕುಂಠಿತಗೊಂಡಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶವನ್ನೂ ಸರಕಾರ ಹೊಂದಿದೆ ಹಾಗಾಗಿ ಮಧ್ಯಮ ವರ್ಗ ಮತ್ತು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅಗತ್ಯವಾದ ಪರಿಹಾರವನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡುತ್ತಾರೆ ಎನ್ನುವ ನಿರೀಕ್ಷೆಗಳಿವೆ.
ಕೆಲವು ನಿರೀಕ್ಷೆಗಳು / ಸಲಹೆಗಳು:-
ವೈಯಕ್ತಿಕ ಹಣಕಾಸು
ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇನ್ನಷ್ಟು ಇಳಿಸುವ ನಿರೀಕ್ಷೆ
ನಿಗದಿತ ಕಡಿತ ( ಸ್ಟ್ಯಾಂಡರ್ಡ್ ಡಿಡಕ್ಷನ್ ) ಮತ್ತು ಆದಾಯ ತೆರಿಗೆ 80 ಸಿ ಮಿತಿಗಳಂತಹ ಪ್ರಯೋಜನಗಳನ್ನು ಹೆಚ್ಚಿಸುವ ನಿರೀಕ್ಷೆ
ದೀರ್ಘಾವಧಿಯ ಉಳಿತಾಯವನ್ನು ಇನ್ನಷ್ಟು ಉತ್ತೇಜಿಸಲು ತೆರಿಗೆ ವಿನಾಯಿತಿ ಹೂಡಿಕೆಗೆ ಸಂಬಂಧಿಸಿದ ಉಳಿತಾಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದು (ಮೂಲಸೌಕರ್ಯ ಕರಾರುಗಳು ಮತ್ತು ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ )
ಈಕ್ವಿಟಿಗಳ ಮೇಲಿನ ದೀರ್ಘಕಾಲೀನ ಬಂಡವಾಳದ ಲಾಭವನ್ನು ಹಿಂತೆಗೆದುಕೊಳ್ಳುವ ಸೌಲಭ್ಯ
ಶೇರ್‌ನಲ್ಲಿನ ಲಾಭಾಂಶ ವಿತರಣಾ ತೆರಿಗೆಯನ್ನು ಕಡಿಮೆ ಮಾಡಲು
ಇವಿಷ್ಟೂ ಪ್ರಸ್ತಾಪಗಳು ಹಣದ ಹರಿವನ್ನು ಹೆಚ್ಚಿಸುತ್ತದೆ. ಮಧ್ಯಮ ವರ್ಗದವರಿಗೆ ಹೆಚ್ಚಿನ ಸಹಾಯವಾಗಬಹುದು ಮತ್ತು ಇದರಿಂದಾಗಿ ಭವಿಷ್ಯದ ಗುರಿಗಳತ್ತ ಹೆಚ್ಚಿನ ಉಳಿತಾಯವನ್ನು ಉತ್ತೇಜಿಸುತ್ತದೆ.
ಸಮಗ್ರವಾಗಿ ಆರ್ಥಿಕತೆಯಲ್ಲಿನ ಅಂಶ:-
ನಗರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡುವುದರಿಂದ ಅದು ಆರ್ಥಿಕತೆಯ ಮೇಲೆ ಸುಸ್ಥಿರವಾದ ಪರಿಣಾಮವನ್ನು ಬೀರುತ್ತದೆ.
ರಫ್ತಿನ ಪ್ರಮಾಣ ಹೆಚ್ಚಿಸುವುದು ಮತ್ತು ಹೊಸ ಉತ್ಪಾದನಾ ಘಟಕಗಳನ್ನು ಪ್ರೋತ್ಸಾಹಿಸಿ ಆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅದನ್ನು ಒಂದು ನಿರ್ದಿಷ್ಟ ಸಮಯ ಮಿತಿಯೊಳಗೆ ಈಡೇರಿಸುವುದು.
ಇದರಿಂದ ನಿಜವಾದ ಪ್ರಗತಿಯನ್ನು ಕಾಣಬಹುದು ಮತ್ತು ಯಾವುದೇ ಅಧಿಕ ವೆಚ್ಚವನ್ನು ಮೀರುವುದಿಲ್ಲ. ನಗರ ಪ್ರದೆಶದಲ್ಲಿನ ಉದ್ಯೋಗಗಳು ಮತ್ತು ಮೂಲಸೌಕರ್ಯಗಳ ಮೇಲೆ ಒತ್ತು ನೀಡಲು ಕಾರಣವೆಂದರೆ ಬೆಳವಣಿಗೆ ಮತ್ತು ಬೇಡಿಕೆಯ ಮೇಲೆ ತಕ್ಷಣದ ಸಕಾರಾತ್ಮಕ ಪರಿಣಾಮವನ್ನು ಇದು ಬೀರುತ್ತದೆ ಎನ್ನುವ ಆಶಯ. ಇದು ನಗರ ಪ್ರದೆಶದಲ್ಲಿ ಮಧ್ಯಮ ವರ್ಗಕ್ಕೆ ಸಹಾಯ ಮಾಡುವುದಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೂ ಪ್ರಯೋಜನವಾಗುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಬಜೆಟ್‌ನಲ್ಲಿ ನಮಗೆ ಹೆಚ್ಚಿನ ನಿರೀಕ್ಷೆಗಳಿವೆ. ಪ್ರಾಮಾಣಿಕ ತೆರಿಗೆ ಪಾವತಿದಾರ ಮತ್ತು ಮಧ್ಯಮ ವರ್ಗದವರಿಗೆ ಮಾನ್ಯತೆ ನೀಡಬೇಕಾಗಿದೆ. ದೇಶದ ಜನತೆಗೆ ಪ್ರಯೋಜನಗಳನ್ನು ನೀಡಿದರೆ ಮತ್ತು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ದೇಶದ ಬೆಳವಣಿಗೆಯ ದರವು ಹೇಗೆ ಸುಧಾರಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.
ಇಂತಿ,
ಪ್ರಾಮಾಣಿಕ ತೆರಿಗೆ ಪಾವತಿದಾರ