ಜೂನ್ ಹಾಗೂ ಜುಲೈನಲ್ಲಿ ರಾಜ್ಯಸಭೆಯಿಂದ ನಿವೃತ್ತಿ ಹೊಂದುತ್ತಿರುವ ಆರು ಸದಸ್ಯರ ಸ್ಥಾನಗಳಿಗೆ ಚುನಾಚಣೆ ನಡೆಸಲು ಚುನಾವಣೆ ಆಯೋಗ ಸೂಚನೆ ಹೊರಡಿಸಿದೆ. ಇದರ ಪ್ರಕಾರ ಜೂನ್ 19ಕ್ಕೆ ಚುನಾವಣೆ ನಡೆಯಲಿದೆ.
ಅರುಣಾಚಲ ಪ್ರದೇಶ, ಕರ್ನಾಟಕ ಮತ್ತು ಮಿಝೋರಾಂ ರಾಜ್ಯಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಈ ಬಾರಿಯ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ನಾಲ್ವರು ಆಯ್ಕೆಯಾಗುವ ಅವಕಾಶ ಹೊಂದಿದ್ದಾರೆ. ಅರುಣಾಚಲ ಪ್ರದೇಶ ಮತ್ತು ಮಿಝೋರಾಂನಿಂದ ತಲಾ ಒಬ್ಬರು ಆಯ್ಕೆಯಾಗುವ ಅವಕಾಶವಿದೆ.
ನಾಮಪತ್ರ ಸಲ್ಲಿಸಲು ಜೂನ್ 9 ಕೊನೆಯ ದಿನಾಂಕವಾಗಿದ್ದು, ಜೂನ್ 12ಕ್ಕೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನಾಂಕ. ಜೂನ್ 19ರಂದು ಚುನಾವಣೆ ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ.

