Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?

ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?
ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?

January 8, 2020
Share on FacebookShare on Twitter

ದೇಶದ ರಾಜಧಾನಿ ದೆಹಲಿಯಿಂದ 750 ಮೈಲು ದೂರ ಹಚ್ಚ ಹಸಿರಿನ ಹುಲ್ಲುಗಾವಲಿನ ನಡುವೆ ಹೊಸದಾಗಿ ನೆಟ್ಟ ಸಸಿಗಳು ಕಣ್ ಸೆಳೆಯುತ್ತವೆ. ದೇಶದ ಇಂಗಾಲದ ಹೊರಸೂಸುವಿಕೆಯನ್ನು 2030ರ ಒಳಗೆ ಗಮನಾರ್ಹವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ತೇಗದ ಸಸಿಗಳನ್ನು ನೆಡುವ ಅಭಿಯಾನವೊಂದು ಸದ್ದಿಲ್ಲದೆ ಸಾಗಿದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಯಾವುದೇ ಸರಕಾರಿ ಅಥವಾ ಖಾಸಗಿ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಹೊಸ ಕಾಡು ಸೃಷ್ಟಿಸುವ ಅಭಿಯಾನದ ಭಾಗವಾಗಿ ಅಂಬಗಡ್ ಚೌಕಿ ಅರಣ್ಯ ಪ್ರದೇಶದಲ್ಲಿ ತೇಗದ ನವ ಚಿಗುರು ನಳನಳಿಸುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

ಬಿಜೆಪಿ ಜೊತೆಗಿನ ಮೈತ್ರಿ: ನಿತೀಶ್‌ ಕುಮಾರ್ ನಾಳೆ ನಿರ್ಧಾರ ಪ್ರಕಟ!

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌

ಆದರೆ, ಒಂದು ವ್ಯವಸ್ಥಿತವಾದ ರೀತಿಯಲ್ಲಿ ಸರ್ಕಾರ ಯೋಜನೆಯನ್ನು ರೂಪಿಸದಿದ್ದರೆ ವಿರೋಧವನ್ನು ಕಟ್ಟಿಕೊಳ್ಳುವುದು ಖಚಿತ ಎಂಬುದನ್ನು ಈ ಹೊಸ ಅರಣ್ಯ ಸೃಷ್ಟಿಯು ಸ್ಪಷ್ಟ ಉದಾಹರಣೆಯಾಗಿದೆ.

ದೇಶದ ರಾಜಧಾನಿಯಾಗಿರುವ ದೆಹಲಿ ವರ್ಷವಿಡೀ ವಾಯು ಮಾಲಿನ್ಯದಿಂದ ತತ್ತರಿಸಿ ಹೋಗುತ್ತಿದೆ. ಈ ವಾಯು ಮಾಲಿನ್ಯವನ್ನು ತಡೆಯಲು ಸರ್ಕಾರ ಅತಿಯಾದ ವಾಹನಗಳ ಸಂಚಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಸುತ್ತಿರುವ ಎಲ್ಲಾ ರೀತಿಯ ಸರ್ಕಸ್ ವಿಫಲವಾಗುತ್ತಿದೆ.

ದೆಹಲಿಯ ದಕ್ಷಿಣ ಭಾಗದಲ್ಲಿ 750 ಮೈಲುಗಳ ದೂರ ಎಲ್ಲಿ ನೋಡಿದರೂ ಭೂಮಿ ಹಚ್ಚ ಹಸಿರಿನ ಸೀರೆಯನ್ನುಟ್ಟಂತೆ ಕಾಣುತ್ತಿದೆ. ಈಗ ಅಂಬಗಡ್ ಚೌಕಿ ಅರಣ್ಯ ವಲಯದಲ್ಲಿ ಲಕ್ಷಾಂತರ ಗಿಡವಾಗಿರುವ ಹಸಿರಿನಿಂದ ಕಂಗೊಳಿಸುತ್ತಿರುವ ತೇಗದ ಮರಗಳು ದೊಡ್ಡ ಮಟ್ಟಕ್ಕೆ ಬೆಳೆದರೆ ದೇಶದ ಸುಸ್ಥಿರತೆಗೆ ಕಾರಣವಾಗಬಲ್ಲವು. ಆದರೆ, ಈ ಯೋಜನೆ ಬಗ್ಗೆ ಇಲ್ಲಿನ ಮೂಲನಿವಾಸಿಗಳೆನಿಸಿಕೊಂಡಿರುವ ಆದಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಿವಾಸಿಗಳ ಪ್ರಕಾರ ಇಲ್ಲಿ ಅವರು ತಲೆತಲಾಂತರದಿಂದ ನೆಲೆಸಿದ್ದಾರೆ. ಈಗ ಕೃತಕ ಕಾಡು ಸೃಷ್ಟಿ ಮಾಡುವ ಸಲುವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ, ನಮಗೂ ಕಾಡಿಗೂ ಭಾವನಾತ್ಮಕ ಸಂಬಂಧವಿದೆ. ಇಲ್ಲಿ ಸಸಿಗಳನ್ನು ನೆಡುವ ಮೂಲಕ ನಮ್ಮ ಮೂಲಕ್ಕೇ ಕೊಡಲಿ ಪೆಟ್ಟು ಕೊಡಲಾಗುತ್ತಿದೆ. ಈ ಕೃತಕ ಕಾಡುಗಳು ಪರಿಸರಕ್ಕೆ ನೈಸರ್ಗಿಕ ಕಾಡಿನಷ್ಟು ಕೊಡುಗೆಯನ್ನು ನೀಡುವುದಿಲ್ಲ.

ಈ ಕಾರಣದಿಂದಲೇ ಆದಿವಾಸಿಗಳು ಇಂತಹ ಕೃತಕ ಕಾಡಿನ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇಲ್ಲಿ ಕೇವಲ ತೇಗದ ಸಸಿಗಳನ್ನು ನೆಡಲಾಗುತ್ತಿದೆ. ಈ ಮೂಲಕ ವೈವಿಧ್ಯಮಯವಾದ ಕಾಡಿನಲ್ಲಿ ಏಕಸಂಸ್ಕೃತಿ ಅಥವಾ ಏಕ ಪ್ರಬೇಧವನ್ನು ಬೆಳೆಸಿದಂತಾಗುತ್ತದೆ. ಇದರಿಂದ ನೈಸರ್ಗಿಕ ಅರಣ್ಯದ ಸಂಸ್ಕೃತಿಯನ್ನೇ ನಾಶ ಮಾಡಲು ಹೊರಟಿದೆ ಸರ್ಕಾರ ಎಂದು ಆರೋಪಿಸುತ್ತಾರೆ ಅರಣ್ಯ ಪ್ರದೇಶದ ವಾಸಿ ನೇತಿ ಬಾಯ್ ಯಾದವ್.

ಸರ್ಕಾರ ಉದ್ದೇಶಪೂರ್ವಕವಾಗಿಯೇ ವ್ಯಾವಹಾರಿಕವಾಗಿ ಲಾಭದಾಯಕವಾದ ಗಿಡಗಳನ್ನು ನೆಡಲು ಹೊರಟಿದೆಯೇ ಹೊರತು ಪರಿಸರಕ್ಕೆ ಅನುಕೂಲವಾಗುವಂತಹ ಯಾವುದೇ ಕ್ರಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ತೇಗದ ಸಸಿಯನ್ನು ನೆಟ್ಟರೆ ಇದರ ಬೇರು ಸಾಕಷ್ಟು ಸ್ಥಳವನ್ನು ಆವರಿಸಿಕೊಳ್ಳುತ್ತದೆ. ಈ ಸಸಿ ದೊಡ್ಡದಾಗಿ ಬೆಳೆದ ನಂತರ ಅದರ ಸುತ್ತಮುತ್ತ ಯಾವುದೇ ಗಿಡ ಬೆಳೆಯಲು ಅವಕಾಶವೇ ಇರುವುದಿಲ್ಲ. ಇದರ ಪರಿಣಾಮ ಹಸಿರು ಸಸ್ಯಗಳನ್ನೇ ನೆಚ್ಚಿಕೊಂಡಿರುವ ಅನೇಕ ಪ್ರಾಣಿಪಕ್ಷಿಗಳು ಕಾಡನ್ನೇ ತೊರೆಯುವಂತಹ ಪರಿಸ್ಥಿತಿ ಎದುರಾಗುತ್ತದೆ. ಇದರ ಜತೆಗೆ ಅರಣ್ಯದ ಜೀವವೈವಿಧ್ಯತೆಗೆ ಭಾರೀ ಹಾನಿ ಉಂಟಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ಅರಣ್ಯ ಪ್ರದೇಶದಲ್ಲಿ ಯಾದವ್ ಅವರ ಕುಟುಂಬ 200 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಜೀವನ ಸಾಗಿಸುತ್ತಿದೆ. ಅರಣ್ಯದಲ್ಲಿ ಬೆಳೆಯುವ ಬಿದಿರಿನಂತಹ ಉತ್ಪನ್ನಗಳನ್ನೇ ಮನೆ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳುತ್ತಿದೆ ಈ ಸಮುದಾಯ. ಆದರೆ, ತೇಗದ ಮರಗಳನ್ನು ಕಡಿದು ವಾಣಿಜ್ಯಿಕವಾಗಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಕೇವಲ ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ ಎನ್ನುತ್ತಾರೆ ಯಾದವ್.

ಇನ್ನು ಸರ್ಕಾರ ಜಾರಿಗೆ ತಂದಿರುವ ಕೃತಕ ಅರಣ್ಯ ಬೆಳೆಸುವುದು ಅಥವಾ ಸಸಿಗಳನ್ನು ನೆಡುವ ಯೋಜನೆಯ ಯಾವುದೇ ವೈಜ್ಞಾನಿಕ ಅಂಶಗಳನ್ನು ಪಾಲಿಸಿಯೇ ಇಲ್ಲ. ಸಸಿಗಳನ್ನು ನೆಡುವುದಷ್ಟೇ ಈ ಕಾರ್ಯಕ್ರಮ ಎಂದು ಭಾವಿಸಿದಂತಿದೆ. ಏಕೆಂದರೆ, ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸಸಿಗಳು ಹೇಗೆ ಜೀವವೈವಿಧ್ಯತೆಗೆ ಪೂರಕವಾಗಿವೆ ಎಂಬುದರ ಆಲೋಚನೆಯನ್ನೇ ಸರ್ಕಾರ ಮಾಡಿದಂತಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಹುಲುಸಾಗಿ ಬೆಳೆದರೆ ಸಾಕು ಎಂಬಂತಿರುವ ಸಸಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದೆ.

ಉದಾಹರಣೆಗೆ ನೀಲಗಿರಿ ಸಸಿಗಳನ್ನು ಎಲ್ಲೆಡೆ ನೆಡಲಾಗುತ್ತಿದೆ. ಇವು ಕಾರ್ಬನ್ ಪ್ರಮಾಣವನ್ನು ಹೀರಿಕೊಳ್ಳಲು ಸಹಕಾರಿಯಾಗುತ್ತವೆ ಎಂಬ ವಾದವನ್ನು ಮಂಡಿಸಿದರೂ ಸಹ, ಅಂತರ್ಜಲ ಮಟ್ಟವನ್ನು ಕಸಿದುಕೊಳ್ಳುತ್ತವೆ ಎಂಬುದೂ ಅಷ್ಟೇ ನಿರ್ವಿವಾದವಾಗಿದೆ. ಇದರಿಂದ ಬೇಸಿಗೆ ಸಮಯದಲ್ಲಿ ನೀರಿಗಾಗಿ ಹಾಹಾಕಾರವಾಗಲು ಈ ನೀಲಗಿರಿಯೂ ಕಾರಣವಾಗಬಲ್ಲದು ಎನ್ನುತ್ತಾರೆ ವರ್ಜೀನಿಯಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಸ್ಟೆಫೈನ್ ರಾಯ್.

ಚತ್ತೀಸ್ ಘಡದ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಮಂಡಳಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ವಿ.ಶ್ರೀನಿವಾಸರಾವ್ ಅವರು, ನಮ್ಮ ಉದ್ದೇಶ ಅರಣ್ಯವನ್ನು ನಿರ್ವಹಣೆ ಮಾಡಿ ಅದನ್ನು ಸಂರಕ್ಷಿಸುವುದಾಗಿದೆ ಮತ್ತು ಭವಿಷ್ಯದ ಪರಿಸರವನ್ನು ಉತ್ತಮಗೊಳಿಸುವುದಾಗಿದೆ. ಆದರೆ, ಕೇಂದ್ರ ಸರ್ಕಾರ ಇಂತಹ ಅರಣ್ಯ ಪ್ರದೇಶಗಳಿಂದ ಲಾಭವನ್ನು ಅಥವಾ ಆದಾಯವನ್ನು ನಿರೀಕ್ಷಿಸಬಾರದು ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆದಿವಾಸಿಗಳು ಹೇಳುವಂತೆ ಅರಣ್ಯದ ಜೀವವೈವಿಧ್ಯತೆಗೆ ಮಾರಕವಾಗಿರುವ ಮತ್ತು ಲಾಭದ ದೃಷ್ಟಿಯಿಂದ ನೋಡುವ ಇಂತಹ ಯೋಜನೆಗಳನ್ನು ಜಾರಿಗೆ ತರುವ ಬದಲು ಸರ್ಕಾರ ಅರಣ್ಯವನ್ನು ಬೆಳೆಸಿ, ಸಂರಕ್ಷಿಸಿ ಪರಿಸರಕ್ಕೆ ನೆರವಾಗುವಂತಹ ಕಾರ್ಯಕ್ರಮವನ್ನು ರೂಪಿಸಬೇಕಿದೆ.

RS 500
RS 1500

SCAN HERE

don't miss it !

ಲಾಲ್ ಬಾಗ್ ಫ್ಲವರ್ ಶೋಗೆ ಅದ್ದೂರಿ ಚಲಾನೆ : ಗಂಧದಗುಡಿಯ ಕುಡಿಗೆ ಪುಷ್ಪ ಗೌರವ.. ಅಪ್ಪು ನೋಡಿ ಭಾವುಕರಾದ ಜನರು!
ಕರ್ನಾಟಕ

ಲಾಲ್ ಬಾಗ್ ಫ್ಲವರ್ ಶೋಗೆ ಅದ್ದೂರಿ ಚಲಾನೆ : ಗಂಧದಗುಡಿಯ ಕುಡಿಗೆ ಪುಷ್ಪ ಗೌರವ.. ಅಪ್ಪು ನೋಡಿ ಭಾವುಕರಾದ ಜನರು!

by ಪ್ರತಿಧ್ವನಿ
August 5, 2022
ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ : ಆರಗ ಜ್ಞಾನೇಂದ್ರ
ಕರ್ನಾಟಕ

108 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ!

by ಪ್ರತಿಧ್ವನಿ
August 7, 2022
ಇದು ಗೂಗ್ಲಿಯೂ ಹೌದು ; ಮೊದಲ ಬಾಲಿಗೆ ಸಿಕ್ಸರೂ ಹೌದು!
ಕರ್ನಾಟಕ

ಇದು ಗೂಗ್ಲಿಯೂ ಹೌದು ; ಮೊದಲ ಬಾಲಿಗೆ ಸಿಕ್ಸರೂ ಹೌದು!

by ರಾಜರಾಮ್ ತಲ್ಲೂರ್
August 3, 2022
ಲವ್ 360ಗೆ ಶುಭ ಹಾರೈಸಿದ ಡಾ. ಶಿವರಾಜ್‌ಕುಮಾರ್‌
ಸಿನಿಮಾ

ಲವ್ 360ಗೆ ಶುಭ ಹಾರೈಸಿದ ಡಾ. ಶಿವರಾಜ್‌ಕುಮಾರ್‌

by ಪ್ರತಿಧ್ವನಿ
August 7, 2022
ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್
ಕರ್ನಾಟಕ

ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್

by ಪ್ರತಿಧ್ವನಿ
August 3, 2022
Next Post
ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

ಬಿಜೆಪಿ ಸರ್ಕಾರ ಇದ್ದರೂ ಅಸ್ಸಾಂ ಭೇಟಿಗೆ ಮೋದಿ‌ ಬೆದರುತ್ತಿರುವುದೇಕೆ?

ಬಿಜೆಪಿ ಸರ್ಕಾರ ಇದ್ದರೂ ಅಸ್ಸಾಂ ಭೇಟಿಗೆ ಮೋದಿ‌ ಬೆದರುತ್ತಿರುವುದೇಕೆ?

ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!

ಜೆಎನ್‌ಯು ಘಟನೆ ನಾಝಿವಾದದ ಆರಂಭಿಕ ಲಕ್ಷಣ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist