Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜನರನ್ನು ಮರುಳಾಗಿಸಿದ ಟಿಕ್ ಟಾಕ್ ಕಂಪೆನಿಯ ಮೌಲ್ಯ 53 ಸಾವಿರ ಕೋಟಿ!

ಜನರನ್ನು ಮರುಳಾಗಿಸಿದ ಟಿಕ್ ಟಾಕ್ ಕಂಪೆನಿಯ ಮೌಲ್ಯ 53 ಸಾವಿರ ಕೋಟಿ!
ಜನರನ್ನು ಮರುಳಾಗಿಸಿದ ಟಿಕ್ ಟಾಕ್ ಕಂಪೆನಿಯ ಮೌಲ್ಯ 53 ಸಾವಿರ ಕೋಟಿ!
Pratidhvani Dhvani

Pratidhvani Dhvani

September 29, 2019
Share on FacebookShare on Twitter

Tik Tok ಹುಚ್ಚು, ಟಿಕ್ ಟಾಕ್ ಅನಾಹುತಗಳ ಸುದ್ದಿ ಬರುತ್ತಲೇ ಇದೆ. ವಿಶ್ವದ ಅತ್ಯಂತ ಜನಪ್ರಿಯ ಮೊಬೈಲ್ App ಟಿಕ್ ಟಾಕ್ ನಲ್ಲಿ ಕಿರು ವಿಡಿಯೊಗಳನ್ನು ಹರಿಯ ಬಿಡುವುದು ಯುವ ಜನಾಂಗಕ್ಕೊಂದು ಹುಚ್ಚು ಅಭ್ಯಾಸವಾಗಿದೆ. ನೀವು ಟಿಕ್ ಟಾಕ್ ರೆಕಾರ್ಡ್ ಮಾಡಿ ಜನಪ್ರಿಯ ಮಾಡಿರುವ ಟಿಕ್ ಟಾಕ್ ಕಂಪೆನಿಯ ಮೌಲ್ಯ ಎಷ್ಟು ಗೊತ್ತೇ ? ಬರೋಬ್ಬರಿ 53 ಸಾವಿರ ಕೋಟಿ ರೂಪಾಯಿ.

ಹೆಚ್ಚು ಓದಿದ ಸ್ಟೋರಿಗಳು

ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

ಟಿಆರ್‌ಎಸ್‌ ಟ್ವೀಟ್‌ಗೆ ಉರ್ದುವಿನಲ್ಲಿ ಟಕ್ಕರ್‌ ಕೊಟ್ಟ ಬಿಜೆಪಿ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

2017 ಸೆಪ್ಟೆಂಬರ್ ನಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾದ ಈ ಚೀನಾ ದೇಶದ ಕಳಪೆ ಮಟ್ಟದ ಸೂಕ್ತ ಭದ್ರತಾ ಸೆಟ್ಟಿಂಗ್ ಇಲ್ಲದ ಟಿಕ್ ಟಾಕ್ ಕೇವಲ ಎರಡೇ ವರ್ಷದಲ್ಲಿ ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ವಿಶ್ವದ ಅತೀ ಹೆಚ್ಚು ಡೌನ್ ಲೋಡ್ ಮಾಡಲಾದ ಅಪ್ಲಿಕೇಶನ್ ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಚೀನಾ ದೇಶದ ByteDance ಎಂಬ ಸ್ಟಾರ್ಟ್ ಆಪ್ ಕಂಪೆನಿ 2012ರಲ್ಲಿ ಕೆಲವು ಮೊಬೈಲ್ ಅಪ್ಲಿಕೇಶನ್ ಚೀನಾದಲ್ಲಿ ಬಿಡುಗಡೆ ಮಾಡಿತ್ತು. 2017ರ ನವೆಂಬರ್ ತಿಂಗಳಲ್ಲಿ ಚೀನಾದ ಮತ್ತೊಂದು ಮ್ಯೂಸಿಕ್ ಅಪ್ Musical.ly ಯನ್ನು ಕೂಡ ByteDance ಖರೀದಿ ಮಾಡಿತ್ತು. ಇಪ್ಪತ್ತು ಸೆಂಕೆಂಡಿಗೂ ಕಡಿಮೆ ಅವಧಿಯ ಸಣ್ಣ ಸಣ್ಣ ವಿಡಿಯೋಗಳನ್ನು ಯಾರು ಬೇಕಾದರೂ ಈ ಅಪ್ಲಿಕೇಷನ್‌ ಮೂಲಕ ಸಿದ್ಧಪಡಿಸಬಹುದು. ವಿಡಿಯೋ ಎಡಿಟ್‌ ಮಾಡುವ ಅವಕಾಶ ಕೂಡ ಇರುತ್ತದೆ. ಪ್ರಮುಖವಾಗಿ ಈಗಾಗಲೇ ರೆಕಾರ್ಡ್ ಆಗಿರುವ ಹಾಡುಗಳಿಗೆ ಅಥವ ಡೈಲಾಗುಗಳಿಗೆ ಲಿಪ್ ಸಿಂಕ್ ಮಾಡಿ ಟಿಕ್ ಟಾಕಲ್ಲಿ ಹರಡಿ ಬಿಡುತ್ತಾರೆ. ಯುವಜನರ ನಡುವೆ ಮಾತ್ರ ಅತ್ಯಂತ ಜನಪ್ರಿಯವಾಗಿರುವ ಮೊಬೈಲ್‌ ಅಪ್ಲಿಕೇಷನ್‌ ಇದಾಗಿದೆ. ಇದನ್ನು ಉಪಯೋಗಿಸದವರು ಕೂಡ ಕೆಲವೊಮ್ಮೆ ಟಿಕ್ ಟಾಕ್ ವಿಡಿಯೊ ನೋಡಿರುತ್ತಾರೆ. ಟಿಕ್ ಟಾಕ್ ವಿಡಿಯೋಗಳನ್ನು ನೋಡದವರು ಕೂಡ ಇದರ ಹೆಸರನ್ನು ಕೇಳಿಯೇ ಇರುತ್ತಾರೆ.

ಇತರ ಸೋಶಿಯಲ್ ಮಿಡಿಯಾಗಳಾದ ಫೇಸ್ ಬುಕ್, ಯೂ ಟ್ಯೂಬ್, ಇನ್ಸ್ಟಾಗ್ರಾಮ್, ಸ್ಯಾಪ್ ಚ್ಯಾಟ್, ಲಿಂಕ್ಡ್ ಇನ್, ಪಿನರೆಸ್ಟ್, ಟ್ವೀಟ್ಟರ್, ವಿ-ಚಾಟ್ ಇತ್ಯಾದಿಗಳಿಗಿಂತ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನಪ್ರಿಯವಾದ, ಹೆಚ್ಚು ಹಣ ಕಬಳಿಸಿದ ಸೋಶಿಯಲ್ ಮಿಡಿಯಾ ಇದಾಗಿದೆ. ಟಿಕ್ ಟಾಕ್ ಮಾಸಿಕ ಆದಾಯ 25 ಕೋಟಿ ರೂಪಾಯಿ ಆಗಿದ್ದು, ಅಂದಾಜು 300 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುತ್ತಿದೆ. ಇದು ಫ್ರೀ ಅಪ್ ಆಗಿದ್ದು, ಜಾಹಿರಾತು ಮೂಲಕ ಆದಾಯ ಗಳಿಸುವುದಿಲ್ಲವಾದರೂ ಇತ್ತೀಚೆಗೆ ಜಾಹಿರಾತು ಕೂಡ ಪಡೆಯುತ್ತಿದೆ. ಅಪ್ಲೀಕೇಶನ್ ಮೂಲಕವೇ ದೊರೆಯುವ ಗಿಫ್ಟ್ ಮತ್ತು ಇಮೊಜಿಗಳಿಂದಲೇ ಇಷ್ಟೊಂದು ದೊಡ್ಡ ಮೊತ್ತದ ಆದಾಯ ವನ್ನು ಈ ಆಪ್ ಗಳಿಸುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಗ್ರಾಹಕರ ಮಾಹಿತಿಯನ್ನು ಮಾರಾಟ ಮಾಡಿ ಇನ್ನಷ್ಟು ಆದಾಯ ಗಳಿಸಲು ಸಾಧ್ಯವಿದೆ.

ಫೇಸ್ ಬುಕ್, ಯೂ ಟ್ಯೂಬ್, ಮೆಸೆಂಜರ್ ಇತ್ಯಾದಿ ಸೋಶಿಯಲ್ ಮಿಡಿಯಾಗಳಲ್ಲಿ ನೀವು ಮಾಹಿತಿ ಹಂಚುವ, ಶುಭಾಶಯ ಹೇಳುವ, ಕೋಚಿಂಗ್ ನೀಡುವ, ಕಿರು ಚಿತ್ರ, ಡಾಕ್ಯುಮೆಂಟರಿ, ಉದ್ದ ವಿಡಿಯೋಗಳನ್ನು ಪ್ರಸಾರ ಮಾಡುವ ಅವಕಾಶವಿದೆ. ಕೆಲವು ಸೋಶಿಯಲ್ ಮಿಡಿಯಾಗಳ ಮೂಲಕ ಹಣ ಸಂಪಾದನೆ ಮಾಡುವವರು ಇದ್ದಾರೆ. ಆದರೆ, ಟಿಕ್ ಟಾಕ್ ನಲ್ಲಿ ಇಂತಹ ಯಾವ ಅವಕಾಶಗಳು ಇಲ್ಲ. ಯಾವ ರೀತಿಯ ಉಪಯೋಗಗಳೂ ಇಲ್ಲ. ಆದರೆ, ನೀವೊಂದು ಕಿರು ವಿಡಿಯೊವೊಂದನ್ನು ಹಾಕಿದ ಕೂಡಲೇ ಫಾಲೋವರ್ ಗಳ ಸಾಲೋ ಸಾಲು ಶುರುವಾಗುತ್ತವೆ.

ಅಷ್ಟಕ್ಕೂ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡಿ ಹಾಕುವವರು ಯಾರು. ಶೇಕಡ 80ರಷ್ಟು ಮಂದಿ ಟಿಕ್ ಟಾಕ್ ಉಪಯೋಗಿಸುವವರು ಆಗಿದ್ದಾರೆ. ಈ 80ರಲ್ಲಿ 30 ಶೇಕಡ ಮಂದಿ ಟಿಕ್ ಟಾಕ್ ಸೆಲೆಬ್ರಿಟಿ ಆಗಿದ್ದಾರೆ ಎಂಬುದು ಗಮನಾರ್ಹ. ಶೇಕಡ 13ರಷ್ಟು ಚಿತ್ರ ತಾರೆಯರು ವಿಡಿಯೊಗಳನ್ನು ಶೇರು ಮಾಡುತ್ತಾರೆ ಎನ್ನುತ್ತದೆ ಅಂಕಿ ಅಂಶ. ಶೇಕಡ 4ರಷ್ಟು ವಾಣಿಜ್ಯ ಬ್ರಾಂಡ್ ಗಳ ವಿಡಿಯೋ ಕಾಣ ಸಿಗುತ್ತದೆ. ಶೇಕಡ 50ರಷ್ಟು ವಿಡಿಯೋಗಳನ್ನು ಅಪ್ ಲೋಡ್ ಮಾಡುವವರು ಸಾಮಾನ್ಯ ಟಿಕ್ ಟಾಕ್ ಬಳಕೆದಾರರು.

ಟಿಕ್ ಟಾಕ್ ವಿರುದ್ಧ ಇರುವ ಬಹುದೊಡ್ಡ ಆರೋಪವೆಂದರೆ ವೈಯಕ್ತಿಕ ಸುರಕ್ಷತಾ ಸೆಟ್ಟಿಂಗ್ ನ ಕೊರತೆ. ನೀವೀಗ ಫೇಸ್ ಬುಕ್ಕಲ್ಲಿ ಸ್ನೇಹಿತರಿಗೆ ಮಾತ್ರ ಎಂದು ಸೆಟ್ಟಿಂಗ್ ಮಾಡಿ, ನಿಮ್ಮ ಪೋಸ್ಟುಗಳನ್ನು ಸ್ನೇಹಿತರು ಮಾತ್ರ ನೋಡುವಂತೆ ಮಾಡಬಹುದು. ಆದರೆ, ಟಿಕ್ ಟಾಕ್ ನಲ್ಲಿ ಹಾಗಿಲ್ಲ.

ಟಿಕ್‌ಟಾಕ್‌ ವಿಡಿಯೋ ಹಂಚಿಕೊಂಡಿದ್ದ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳಿಗೆ ಪಡ್ಡೆ ಹುಡುಗರು ಕಾಟ ನೀಡಿದ ಘಟನೆ ಇತ್ತೀಚೆಗೆ ವರದಿ ಆಗಿತ್ತು. ತಾನು ವಿಡಿಯೋ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದೂವರೆ ಲಕ್ಷ ಫಾಲೋವರ್ ಮತ್ತು ಲೈಕ್ ಪಡೆದಿದ್ದ ವಿದ್ಯಾರ್ಥಿನಿಯ ಅಶ್ಲೀಲ ಧ್ವನಿ ವಿಡಿಯೋಗಳನ್ನು ಹಾಕಿ ಸೋಶಿಯಲ್ ಮಿಡಿಯಾದಲ್ಲಿ ಟ್ರಾಲ್ ಮಾಡಲಾಗಿತ್ತು. ಕೊನೆಗೆ ಆಕೆ ಸೈಬರ್ ಪೊಲೀಸರ ಮೊರೆ ಹೋಗ ಬೇಕಾಯಿತು.

ದೆಹಲಿ ಪೊಲೀಸ್ ಕಾರ್ ಮೇಲೆ ವ್ಯಾಯಾಮ ನಡೆಸಿದ ಈ Tik Tok ವೈರಲ್ ಆಗಿತ್ತು

ಅಪ್ರಾಪ್ತ ವಯಸ್ಸಿನ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಟಿಕ್ ಟಾಕ್ ಬಳಕೆದಾರರಾಗಿದ್ದು, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಟಿಕ್ ಟಾಕ್ ರಹದಾರಿ ಆಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಸಾಕಷ್ಟು ಸುರಕ್ಷತ ಕ್ರಮಗಳು ಇಲ್ಲದಿರುವುದು ಇವರ ಮೇಲಿರುವ ಬಹುದೊಡ್ಡ ಆರೋಪ. ಚುನಾವಣಾ ಸಂದರ್ಭದಲ್ಲಿ ಟಿಕ್ ಟಾಕ್ ಮಾಧ್ಯಮವನ್ನು ಉಪಯೋಗಿಸಿ ರಾಜಕೀಯ ಪಕ್ಷಗಳು ಪ್ರಚಾರ ಮತ್ತು ಅಪಪ್ರಚಾರ ಮಾಡುತ್ತಿವೆ ಎಂಬ ಆರೋಪ ಕೂಡ ಕೇಳಿಬಂದಿದೆ. ಟಿಕ್ ಟಾಕ್ ಬೇರೆ ಜಾಲತಾಣಗಳ ವಿಡಿಯೋ ಮತ್ತು ಧ್ವನಿಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಇನ್ನೊಂದು ಆರೋಪ.

ಟಿಕ್ ಟಾಕ್ ಹುಚ್ಚು ಹಿಡಿದವರು ಸೆಲ್ಫಿ ಚಾಳಿಯಂತೆ ಇಲ್ಲೂ ಅನಾಹುತ ಮಾಡಿಕೊಳ್ಳುತ್ತಿರುವುದು ಆಗಾಗ ವರದಿ ಆಗುತ್ತಿದೆ. ಒಬ್ಬಾಕೆ ಗೃಹಿಣಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಟಿಕ್ ಟಾಕ್ ವಿಡಿಯೊ ಮಾಡಿದ್ದಳು. ಇತ್ತೀಚೆಗೆ ಬೆಂಗಳೂರು ಜಕ್ಕೂರು ಶ್ರೀರಾಮಪುರ ಬಳಿ ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಯುವಕರು ಸಾವನಪ್ಪಿದ್ದರು.

ಟಿಕ್ ಟಾಕ್ ಮತ್ತು ಇದೇ ರೀತಿಯ ಸೋಶಿಯಲ್ ಮಿಡಿಯಾಗಳನ್ನು ನಿಯಂತ್ರಿಸುವ ಯಾವ ಕಾನೂನೂ ಭಾರತ ದೇಶದಲ್ಲಿ ಇಲ್ಲ. ಮಾತ್ರವಲ್ಲದೆ, ನಮ್ಮ ದೇಶದ ಟೆಕ್ಕಿಗಳು ಇದುವರೆಗೆ ಸುರಕ್ಷತಾ ಕ್ರಮ ಒಳಗೊಂಡ ಇಂತಹದೊಂದು ಜನಪ್ರಿಯ ಅಪ್ಲೀಕೇಶನ್ ಸಿದ್ಧಪಡಿಸಲು ಇಲ್ಲ.

RS 500
RS 1500

SCAN HERE

don't miss it !

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ
ಕರ್ನಾಟಕ

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

by ಪ್ರತಿಧ್ವನಿ
July 3, 2022
ಪಠ್ಯ ಪರಿಷ್ಕರಣೆಯಲ್ಲಿ ಹಲವು ಮಾರ್ಪಾಡಿಗೆ ಸರ್ಕಾರ ನಿರ್ಧಾರ!
ಕರ್ನಾಟಕ

ಪಠ್ಯ ಪರಿಷ್ಕರಣೆಯಲ್ಲಿ ಹಲವು ಮಾರ್ಪಾಡಿಗೆ ಸರ್ಕಾರ ನಿರ್ಧಾರ!

by ಪ್ರತಿಧ್ವನಿ
June 27, 2022
ಆರ್‌ಜೆಡಿ ಸೇರಿದ ಓವೈಸಿ ಪಕ್ಷದ ನಾಲ್ವರು ಶಾಸಕರು
ದೇಶ

ಆರ್‌ಜೆಡಿ ಸೇರಿದ ಓವೈಸಿ ಪಕ್ಷದ ನಾಲ್ವರು ಶಾಸಕರು

by ಪ್ರತಿಧ್ವನಿ
June 29, 2022
ಭಾರತ ವಿರುದ್ಧದ ಏಕದಿನ, ಟಿ-20 ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ!
ಕ್ರೀಡೆ

ಭಾರತ ವಿರುದ್ಧದ ಏಕದಿನ, ಟಿ-20 ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ!

by ಪ್ರತಿಧ್ವನಿ
July 1, 2022
ಮಹಾರಾಷ್ಟ್ರ ರಾಜಕೀಯ : ಬಹುಮತ ಸಾಬೀತಿಗೆ ವೇದಿಕೆ ಸಜ್ಜು
ದೇಶ

ಮಹಾರಾಷ್ಟ್ರ ರಾಜಕೀಯ : ಬಹುಮತ ಸಾಬೀತಿಗೆ ವೇದಿಕೆ ಸಜ್ಜು

by ಪ್ರತಿಧ್ವನಿ
July 3, 2022
Next Post
ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ

ಅಂಧರಾಗಿಯೂ ಯಶಸ್ವಿ ಟೈಲರ್ ಆಗಿರುವ ರುದ್ರಾಚಾರಿ

ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

ಕರ್-ನಾಟಕ ಗೊಂದಲಕ್ಕೆ ಕಲಶ ಪ್ರಾಯವಾದ ಚುನಾವಣಾ ಆಯೋಗ

ದಸರಾ ಆನೆಗಳ ಕಣ್ಣೀರ ಕತೆ....

ದಸರಾ ಆನೆಗಳ ಕಣ್ಣೀರ ಕತೆ....

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist