ಕೋವಿಡ್-19: ವಾರ್ಡುಗಳ ಆಧಾರದಲ್ಲಿ ಕಂಟೈನ್ಮೆಂಟ್ ವಲಯವನ್ನು ಗುರುತಿಸಲು ಕೇಂದ್ರಕ್ಕೆ ದೆಹಲಿಯ ಕೋರಿಕೆ

ಕೆಂಪು ವಲಯವೆಂದು ಘೋಷಿಸಿರುವ ದೆಹಲಿ ಸಂಪೂರ್ಣ ಕೆಂಪು ವಲಯದಲ್ಲಿಲ್ಲ, ಹಾಗಾಗಿ NCR ದೆಹಲಿಯ ಸ್ಥಳೀಯಾಡಳಿತ ಕೋವಿಡ್‌-19 ಪ್ರಕರಣಗಳನ್ನು ಜಿಲ್ಲಾವಾರು ವಿಂಗಡಿಸದೆ ವಾರ್ಡುಗಳ ಆಧಾರದಲ್ಲಿ ವಿಂಗಡಿಸುವ ಕುರಿತು ಯೋಚಿಸುತ್ತಿದೆಯೆಂದು ಮೂಲಗಳು ತಿಳಿಸಿವೆ. ಹಾಗಾದಲ್ಲಿ ಕಠಿಣ ಲಾಕ್‌ಡೌನ್‌ನಿಂದ ತತ್ತರಿಸುವ ಸ್ಥಳೀಯ ನಿವಾಸಿಗಳಿಗೆ ಕೆಲವು ಅನುಕೂಲವಾಗಲಿವೆ.

ಕರೋನಾ ಸೋಂಕು ಪೀಡಿತವಾಗಿರುವವರ ಸಂಖ್ಯೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಹೊಸ 223 ಪ್ರಕರಣಗಳು ದಾಖಲಾಗಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ 3,738 ತಲುಪಿದೆ. ಒಟ್ಟು ಅಸುನೀಗಿದವರ ಸಂಖ್ಯೆ 61ಕ್ಕೇರಿದೆ. ಒಟ್ಟು 11 ಜಿಲ್ಲೆಗಳಿರುವ ದೆಹಲಿಯಲ್ಲಿ 272 ವಾರ್ಡುಗಳಿವೆ. ವಲಯವಾರು ವಿಂಗಡಣೆಯಲ್ಲಿ ದೆಹಲಿಯ ಹನ್ನೊಂದು ಜಿಲ್ಲೆಗಳನ್ನೂ ಕೆಂಪು ವಲಯದ ಪಟ್ಟಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೇರಿಸಿದೆ.

ವಾರ್ಡುಗಳನ್ನು ಕೆಂಪು, ಕಿತ್ತಳೆ, ಹಸಿರು ವಲಯಗಳೆಂದು ವಿಂಗಡಿಸುವ ಸಂಪೂರ್ಣ ಯೋಜನೆಯನ್ನು ತಯಾರುಗೊಳಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ. ಮೂರಕ್ಕಿಂತ ಹೆಚ್ಚು ಕರೋನಾ ಪ್ರಕರಣಗಳಿರುವ ವಲಯವನ್ನು ಕೆಂಪು ವಲಯವೆಂದು, ಒಂದು ಅಥವಾ ಎರಡು ಪ್ರಕರಣಗಳು ದಾಖಲಾದ ವಾರ್ಡುಗಳನ್ನು ಕಿತ್ತಳೆ ವಲಯವೆಂದು ಗುರುತಿಸಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.

ಮೇ ನಾಲ್ಕರ ಬಳಿಕವೂ ಎರಡು ವಾರಗಳ ಕಾಲ ಅಂತರಾಜ್ಯ ಪ್ರಯಾಣ, ರೈಲು ಮತ್ತು ವಾಯು ಸಂಚಾರವನ್ನು ಈಗಿರುವಂತೆಯೇ ತಡೆ ಹಿಡಿಯಲಾಗುವುದು, ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಗುರುತಿಸಿದ ನಂತರ ಕೆಲವು ಚಟುವಟಿಕೆಗಳಿಗೆ ಈಗ ಇರುವ ಕೆಲವು ಕಠಿಣ ನಿರ್ಬಂಧಗಳನ್ನು ತೆಗೆಯಲಾಗುವುದೆಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿತ್ತು.

ಅನಿಲ್‌ ಬೈಜಾಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ಪದ್ಮಿನಿ ಸಿಂಘ್ಲಾ ಕೋವಿಡ್‌ 19 ಪ್ರಕರಣದ ಕಂಟೈನ್‌ಮೆಂಟ್ ವಲಯ ಸೇರಿ ಕೆಂಪು, ಕಿತ್ತಳೆ, ಹಸಿರು ವಲಯಗಳ ಪ್ರಾದೇಶಿಕ ವಿಂಗಡಣೆಯ ಕುರಿತು ವಿವರವಾದ ವಿಶ್ಲೇಷಣೆಯನ್ನು ಮಾಡಿದ್ದಾರೆ.

ʼಕೇಂದ್ರ ಆರೋಗ್ಯ ಸಚಿವಾಲಯ ಜಿಲ್ಲೆಯ ಆಧಾರದಲ್ಲಿ ಕೆಂಪು,ಕಿತ್ತಳೆ,ಹಸಿರು ವಲಯವೆಂದು ವಿಂಗಡಿಸುತ್ತದೆ. ದೆಹಲಿಯಲ್ಲಿ ಇರುವ ಎಲ್ಲಾ 11 ಜಿಲ್ಲೆಗಳೂ ಕೆಂಪುವಲಯದಲ್ಲಿ ಗುರುತಿಸಿಕೊಂಡಿದೆ, ವಾರ್ಡ್‌ ಆಧಾರದಲ್ಲಿ ವಿಂಗಡಿಸುವ ಯೋಜನೆ ತಯಾರಿಸಿ ಸಚಿವಾಲಯಕ್ಕೆ ಕಳುಹಿಸಲಾಗುವುದು, ಅಲ್ಲಿ ಅನುಮೋದನೆ ಸಿಕ್ಕರೆ ಬಳಿಕ ಸಂಪೂರ್ಣ ದೆಹಲಿ ಕೆಂಪು ವಲಯದಲ್ಲಿರುವುದಿಲ್ಲ, ಕಿತ್ತಳೆ ಮತ್ತು ಹಸಿರು ವಲಯಗಳೂ ದೆಹಲಿಯಲ್ಲಿ ಇರುತ್ತದೆ.ʼ ಎಂದು ಅವರು ಹೇಳಿದ್ದಾರೆ.

ಬೇರೆಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕಿಂತ ಭೌಗೋಳಿಕವಾಗಿ ಭಿನ್ನವಾಗಿರುವ ದೆಹಲಿಯಲ್ಲಿ ಸದ್ಯ 100 ಕಂಟೈನ್‌ಮೆಂಟ್ ವಲಯಗಳಿವೆ. ಕಂಟೈನ್‌ಮೆಂಟ್ ವಲಯಗಳನ್ನು ವಾರ್ಡುವಾರು ಗುರುತಿಸಿದರೆ 37 ಕಿತ್ತಳೆ ವಲಯವೆಂದು, 67 ಕೆಂಪು ವಲಯವೆಂದು ವಿಂಗಡಿಸಬಹುದೆಂದು ಮೂಲಗಳು ಹೇಳಿವೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...