ರಾಜ್ಯದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು. ಯಾಕೆಂದರೆ ಮೇ 28ರ ಹೆಲ್ತ್ ಬುಲೆಟಿನ್ನಲ್ಲಿ ಸರ್ಕಾರ ಈ ದಿನದಂದು ಪತ್ತೆಯಾದ ಸೋಂಕಿತರ ಸಂಖ್ಯೆ 115 ಮಾತ್ರ ಹೇಳಿದೆ. ಕಳೆದ ಎರಡು ಮೂರು ದಿನಗಳಿಂದ ಇದೇ ಆಸುಪಾಸಿನ ಅಂಕಿ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದು ಒಟ್ಟು ರಾಜ್ಯದಲ್ಲಿ 1,650 ಸಕ್ರೀಯ ಪ್ರಕರಣಗಳಿವೆ. ಸದ್ಯಕ್ಕೆ ಕರ್ನಾಟಕ ಕರೋನಾ ಸೋಂಕಿತರ ಒಟ್ಟು ಸಂಖ್ಯೆಯನ್ನು 2,533 ತಲುಪಿದೆ.
115ರ ಪೈಕಿ ಇಬ್ಬರು ವಿದೇಶಗಳಿಂದ ಬಂದವರಾಗಿದ್ದಾರೆ. ಇವರ ಹೊರತಾಗಿ 95 ಸೋಂಕಿತರು ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. 13 ಸೋಂಕಿತರನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಈ ಮಹಾಮಾರಿಗೆ ರಾಜ್ಯದಲ್ಲಿ ಒಟ್ಟು 47 ಸಾವು ಸಂಭವಿಸಿದೆ. ಇಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟಾರೆಯಾಗಿ 834 ಮಂದಿ ಚೇತರಿಸಿಕೊಂಡಿದ್ದಾರೆ.