Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೋವಿಡ್‌ ಭೀತಿ ಉಲ್ಪಣ ; ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಫೋರಮ್‌ ಒತ್ತಾಯ..

ಕೋವಿಡ್‌ ಭೀತಿ ಉಲ್ಪಣ ; ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಫೋರಮ್‌ ಒತ್ತಾಯ..
ಕೋವಿಡ್‌ ಭೀತಿ ಉಲ್ಪಣ ; ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಫೋರಮ್‌ ಒತ್ತಾಯ..

March 30, 2020
Share on FacebookShare on Twitter

ವಿಶ್ವಾದ್ಯಂತ ಕೋವಿಡ್‌-19 ಮಾರಕ ಸೋಂಕಿಗೆ 34 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದು ದೇಶದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಪ್ರಿಸನ್ಸ್‌ ಫೊರಮ್‌ ಅಫ್‌ ಕರ್ನಾಟಕ ಎಂಬ ಸ್ವಯಂ ಸೇವಾ ಸಂಸ್ಥೆಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಕ್ಕೂ ಸುದೀರ್ಘ ಪತ್ರವನ್ನು ಬರೆದಿದ್ದು ಜೈಲುಗಳ ಸ್ಥಿತಿ ಗತಿ ಸುಧಾರಣೆ ಮತ್ತು ಬಹು ಮುಖ್ಯವಾಗಿ ಕೈದಿಗಳ ಬಿಡುಗಡೆಗೆ ಆಗ್ರಹಿಸಿದೆ. ಈ ಪತ್ರದಲ್ಲಿ ತಿಳಿಸಿರುವಂತೆ ಫೋರಮ್‌ 2017 ರಲ್ಲಿ ಸ್ಥಾಪಿತವಾಗಿದ್ದು ಇದರಲ್ಲಿ ಸಮಾನ ಮನಸ್ಕ ವಕೀಲರು, ಪತ್ರಕರ್ತರು, ಪ್ರೊಫೆಸರ್‌ ಗಳು ಇದ್ದು ಕೈದಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ, ಹಕ್ಕುಗಳಿಗೆ ಹೋರಾಡುವ ಮತ್ತು ಜೈಲುಗಳ ಸ್ಥಿತಿ ಗತಿ ಸುಧಾರಣೆಗಾಗಿ ಹೋರಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ರಿಟ್‌ ಅರ್ಜಿ ಸಂಖ್ಯೆ 406 /2013 ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ಕೈದಿಗಳ ಸ್ಥಿತಿ ಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಸರ್ಕಾರಗಳು ಈ ದಿಸೆಯಲ್ಲಿ ಜೈಲುಗಳ ಸುಧಾರಣೆಗೆ ಮುಂದಾಗಬೇಕೆಂದು ಆದೇಶಿಸಿದೆ. ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೈಲುಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಕೈದಿಗಳ ಹಾಗೂ ಜೈಲು ಸಿಬ್ಬಂದಿಗಳ ಆರೋಗ್ಯ ರಕ್ಷಣೆ ತುರ್ತಾಗಿ ಆಗಬೇಕಿದೆ ಎಂದು ಫೋರಮ್‌ ಪತ್ರದಲ್ಲಿ ತಿಳಿಸಿದೆ.

ಈಗ ರಾಜ್ಯದಲ್ಲಿ ಒಟ್ಟು 105 ಜೈಲುಗಳಿದ್ದು ಇದರಲ್ಲಿ 9 ಕೇಂದ್ರ ಬಂದೀಖಾನೆಗಳು, 20 ಜಿಲ್ಲಾ ಮತ್ತು 30 ತಾಲ್ಲೂಕು ನ್ಯಾಯಾಲಯಗಳು ,ಒಂದು ತೆರೆದ ಜೈಲು , ಒಂದು ಮಹಿಳಾ ಜೈಲು ಹಾಗೂ ೪೪ ಸಬ್‌ ಜೈಲುಗಳಿವೆ. 2018 ರ ಜೂನ್‌ 18 ರಂದು ಕರ್ನಾಟಕ ಬಂದೀಖಾನೆ ಇಲಾಖೆಯ ಅಡಿಷನಲ್‌ ಡೈರೆಕ್ಟರ್‌ ಜನರಲ್‌ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ 14,206 ಕೈದಿಗಳಿದ್ದು ಒಟ್ಟು ಸಾಮರ್ಥ್ಯ 13,800 ಆಗಿದೆ ಎಂದು ತಿಳಿಸಿದ್ದಾರೆ.

ವಿಜಯಪುರ ಕೇಂದ್ರ ಬಂದೀಖಾನೆಯಲ್ಲಿ ಒಟ್ಟು 320 ಕೈದಿಗಳ ಸಾಮರ್ಥ್ಯ ಇದ್ದು 615 ಕೈದಿಗಳನ್ನು ಬಂಧಿಸಿಡಲಾಗಿದೆ. ಕೊಪ್ಪಳ ಬಂದೀಖಾನೆಯಲ್ಲಿ 110 ಕೈದಿಗಳನ್ನು ಇಡಬೇಕಾದ ಸ್ಥಳದಲ್ಲಿ ಒಟ್ಟು 220 ಕೈದಿಗಳನ್ನು ತುಂಬಿಸಲಾಗಿದೆ. ಹಾವೇರಿ ಜೈಲಿನಲ್ಲಿ 110 ಕೈದಿಗಳಿಗೆ ಅವಕಾಶ ಇದ್ದರೆ ಒಟ್ಟು 211 ಕೈದಿಗಳನ್ನು ಇಡಲಾಗಿದೆ, ಬೀದರ್‌ ಜಿಲ್ಲಾ ಕಾರಾಗೃಹದಲ್ಲೂ 120 ಕೈದಿಗಳಿರಬೇಕಾದ ಸ್ಥಳದಲ್ಲಿ 222 ಕೈದಿಗಳನ್ನು ತುಂಬಲಾಗಿದೆ.

ಸುಪ್ರೀಂ ಕೋರ್ಟ್ ರಿಟ್ ಅರ್ಜಿ ವಿಚಾರಣೆ ನಂತರ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಶೇಕಡಾ 150 ಕ್ಕಿಂತ ಅಧಿಕ ಕೈದಿಗಳನ್ನು ಇಟ್ಟಿರುವ ಜೈಲುಗಳಲ್ಲಿ ಕೈದಿಗಳ ಮಾನವ ಹಕ್ಕು ಉಲ್ಲಂಘನೆ ಅಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಎಲ್ಲ ರಾಜ್ಯಗಳ ಮುಖ್ಯ ನ್ಯಾಯ ಮೂರ್ತಿಗಳಿಗೂ ನಿರ್ದೇಶನ ನೀಡಿ ಹೆಚ್ಚಿನ ಕೈದಿಗಳನ್ನು ತುಂಬಿಸಿಡಲಾಗಿರುವ ಜೈಲುಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗದಂತೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ.

1973 ರ ಕ್ರಿಮಿನಲ್‌ ಪ್ರೋಸೀಜರ್‌ ಕೋಡ್‌ 436 ರ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷೆಗೊಳಗಾದ ಕೈದಿಯ ಸಂಪೂರ್ಣ ಶಿಕ್ಷೆಯನ್ನು ಮನ್ನ ಮಾಡಿ ಬಿಡುಗಡೆ ಮಾಡಬಹುದಾಗಿದೆ ಅಥವಾ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬಹುದಾಗಿದೆ. ಈ ರೀತಿ ಯಾವುದೇ ಕೈದಿಗೆ ಶಿಕ್ಷೆ ಕಡಿತಗೊಳಿಸಲು ಸಂಬಂಧಪಟ್ಟ ಜೈಲು ಅಧಿಕಾರಿಯ ಮೂಲಕ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನು ರಾಜ್ಯ ಸರ್ಕಾರವು ತನ್ನ ಅಭಿಪ್ರಾಯದೊಂದಿಗೆ ಸೂಕ್ತ ನ್ಯಾಯಾಲಯದ ಗಮನಕ್ಕೆ ತಂದು ಬಿಡುಗಡೆ ಕುರಿತು ಕ್ರಮವನ್ನು ಕೈಗೊಳ್ಳಬಹುದಾಗಿದೆ. ಒಂದು ವೇಳೆ ಬಿಡುಗಡೆಗೊಂಡ ಕೈದಿಯು ಬಿಡುಗಡೆಯ ಷರತ್ತುಗಳನ್ನು ಉಲ್ಲಂಘಿಸಿದರೆ ರಾಜ್ಯ ಸರ್ಕಾರವು ಯಾವುದೇ ವಾರಂಟ್‌ ಇಲ್ಲದೆ ಅಥವಾ ನೋಟೀಸ್‌ ನೀಡದೆ ಪುನಃ ಕೈದಿಯನ್ನು ಬಂಧಿಸಬಹುದಾಗಿದೆ. ಅಲ್ಲದೆ ಈ ಹಿಂದಿನ ಬಿಡುಗಡೆ ಅದೇಶವನ್ನು ರದ್ದು ಮಾಡಿ ಪುನಃ ಪೂರ್ಣಾವಧಿ ಜೈಲು ಶಿಕ್ಷೆ ನೀಡಬಹುದಾಗಿದೆ.

ಕೋವಿಡ್‌ 19 ಭೀತಿ ತೀವ್ರವಾಗಿರುವ ಈ ಹಿನ್ನೆಲೆಯಲ್ಲಿ ದಿನಾಂಕ 20-02-2020 ರಂದು ಸುಪ್ರೀಂ ಕೋರ್ಟ್ ಅಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಿ ಬಾಂಡ್‌ ಇಲ್ಲದೆಯೂ ಕೈದಿಗಳ ಬಿಡುಗಡೆ ಮಾಡುವ ಕುರಿತು ಕ್ರಮ ವಹಿಸುವಂತೆ ಕೋರಿದೆ. ಪಂಜಾಬ್‌ ರಾಜ್ಯ ಸರ್ಕಾರವು ಕೋವಿಡ್‌ ಹಿನ್ನೆಲೆಯಲ್ಲಿ ಮೂರು ಸಾವಿರ ಕೈದಿಗಳ ಬಿಡುಗಡೆಗೆ ಕ್ರಮವನ್ನು ಕೈಗೊಂಡಿದೆ. ದಿನಾಂಕ 21-03-2020 ರಂದು ಕೋಲ್ಕತಾ ಬಂದೀಖಾನೆಯಲ್ಲಿ ಕೈದಿಗಳ ಸಂದರ್ಶಕರಿಗೆ ನಿರ್ಬಂಧ ಹೇರಿದಾಗ ಕೈದಿಗಳು ಜೈಲು ಸಿಬ್ಬಂದಿ ಮೇಲೆಯೇ ದಾಳಿಗೆ ಮುಂದಾದದ್ದನ್ನೂ ಕೂಡ ಪತ್ರದಲ್ಲಿ ವಿವರಿಸಲಾಗಿದೆ. ವಿವಿಧ ದೇಶಗಳೂ ಕೂಡ ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈದಿಗಳ ಬಿಡುಗಡೆ ಮಾಡಲು ಮುಂದಾಗಿವೆ. ಇರಾನ್‌ ನಲ್ಲಿ ಈಗಾಗಲೇ ೭೦ ಸಾವಿರ ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೂ 54 ಸಾವಿರ ಕೈದಿಗಳನ್ನು ಗೃಹ ಬಂಧನದಲ್ಲಿರಿಸಲಾಗಿದೆ.

ಈ ಎಲ್ಲಾ ಅಂಶಗಳನ್ನೂ ಪತ್ರದಲ್ಲಿ ಉಲ್ಲೇಖಿಸಿರುವ ಫೋರಮ್‌ ಜೈಲುಗಳ ಸಿಬ್ಬಂದಿಗಳು ಮತ್ತು ಕೈದಿಗಳಿಗೆ ಮಾಸ್ಕ್‌ ಗಳು ಮತ್ತು ಸ್ಯಾನಿಟೈಸರ್‌ ಗಳನ್ನು ಸರಬರಾಜು ಮಾಡುವಂತೆ ಕೋರಿದೆ. ಜೈಲುಗಳಲ್ಲಿ ಕಡಿಮೆ ಅವಧಿಯ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು, ವೃದ್ದರನ್ನು , ಗರ್ಭಿಣಿ ಮಹಿಳೆಯರನ್ನು ,ಮಕ್ಕಳನ್ನೂ ಕೂಡಲೇ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದೆ. ಜೈಲಿನಲ್ಲಿರುವ ಕೈದಿಗಳಿಗೆ ಮನೆಗಳಿಗೆ ಉಚಿತ ವೀಡಿಯೋ ಕಾಲ್‌ ಸಂಪರ್ಕ ಕಲ್ಪಿಸಿ ಕೊಡುವಂತಯೂ ಆಗ್ರಹಿಸಿದೆ.

ಈ ಮದ್ಯೆ ಮಹಾರಾಷ್ಟ್ರ ರಾಜ್ಯ ಸರ್ಕಾರವು 11 ಸಾವಿರ ಕೈದಿಗಳನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಅದೇಶಿಸಿದೆ. ಗೃಹ ಸಚಿವ ಅನಿಲ್‌ ದೇಶ ಮುಖ್‌ ಅವರು ಇದನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲೂ ಪ್ರಕಟಿಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda
Top Story

ಕಾಂಗ್ರೆಸ್​ ಸೇರಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಮುಳ್ಳಾಗುತ್ತಾ ಆಡಿಯೋ..!? : Araseikere MLA Shivlinge Gowda

by ಕೃಷ್ಣ ಮಣಿ
March 21, 2023
ʻವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5ರ ಮೊದಲ ಅತಿಥಿ ಯಾರ್‌ ಗೊತ್ತಾ..?
ಸಿನಿಮಾ

ʻವೀಕೆಂಡ್‌ ವಿತ್‌ ರಮೇಶ್‌ʼನಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್..!‌

by ಪ್ರತಿಧ್ವನಿ
March 25, 2023
ಕಿರುತೆರೆಯಲ್ಲಿ ಬರ್ತಿದೆ ʻವೀಕೆಂಡ್‌ ವಿತ್‌ ರಮೇಶ್‌ʼ… ಮೊದಲ ಸಾಧಕರು ಯಾರು..?
ಸಿನಿಮಾ

ʻವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5ರ ಮೊದಲ ಅತಿಥಿ ಯಾರ್‌ ಗೊತ್ತಾ..?

by ಪ್ರತಿಧ್ವನಿ
March 22, 2023
CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ
ಇದೀಗ

CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ

by ಪ್ರತಿಧ್ವನಿ
March 23, 2023
IRS OFFICER CONGRESS | ಐಆರ್ ಎಸ್ ಅಧಿಕಾರಿ ಸುಧಮ್ ದಾಸ್ ಕಾಂಗ್ರೆಸ್ ಗೆ ಸೇರ್ಪಡೆ..! #PRATIDHVANI
ಇದೀಗ

IRS OFFICER CONGRESS | ಐಆರ್ ಎಸ್ ಅಧಿಕಾರಿ ಸುಧಮ್ ದಾಸ್ ಕಾಂಗ್ರೆಸ್ ಗೆ ಸೇರ್ಪಡೆ..! #PRATIDHVANI

by ಪ್ರತಿಧ್ವನಿ
March 21, 2023
Next Post
ಕರೋನಾ ಕಾಲದಲ್ಲೂ ವರ್ಚಸ್ಸು ವೃದ್ಧಿಯ ಖಯಾಲಿಗೆ ‘ಪಿಎಂ ಕೇರ್ಸ್’?

ಕರೋನಾ ಕಾಲದಲ್ಲೂ ವರ್ಚಸ್ಸು ವೃದ್ಧಿಯ ಖಯಾಲಿಗೆ ‘ಪಿಎಂ ಕೇರ್ಸ್’?

ಕರೋನಾ ಸೋಂಕು; ಕೇಂದ್ರ ಆರೋಗ್ಯ ಮಂತ್ರಿ ಮೇಲೆ ಹರಿಹಾಯ್ದ ಜನತೆ

ಕರೋನಾ ಸೋಂಕು; ಕೇಂದ್ರ ಆರೋಗ್ಯ ಮಂತ್ರಿ ಮೇಲೆ ಹರಿಹಾಯ್ದ ಜನತೆ

ʼವರ್ಕ್‌ ಫ್ರಂ ಹೋಮ್‌ʼ - ʼವರ್ಕ್‌ ಫಾರ್‌ ಹೋಮ್‌ʼ ; ಉದ್ಯೋಗಸ್ಥ ಗೃಹಿಣಿಯರಿಗೆ ಕರೋನಾ ತಂದಿಟ್ಟ ಫಜೀತಿ..!

ʼವರ್ಕ್‌ ಫ್ರಂ ಹೋಮ್‌ʼ - ʼವರ್ಕ್‌ ಫಾರ್‌ ಹೋಮ್‌ʼ ; ಉದ್ಯೋಗಸ್ಥ ಗೃಹಿಣಿಯರಿಗೆ ಕರೋನಾ ತಂದಿಟ್ಟ ಫಜೀತಿ..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist