Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಪರ-ವಿರೋಧದ ವಿವಾದ

ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಪರ-ವಿರೋಧದ ವಿವಾದ
ಕೊಡವರಿಗೆ ಬುಡಕಟ್ಟು ಸ್ಥಾನಮಾನ: ಪರ-ವಿರೋಧದ ವಿವಾದ

December 31, 2019
Share on FacebookShare on Twitter

ಕೊಡಗು ಜಿಲ್ಲೆಯ ಮೂಲನಿವಾಸಿಗಳಾದ ಕೊಡವ ಜನಾಂಗ ತನ್ನ ವಿಶಿಷ್ಟ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿಂದ ಹೆಸರುವಾಸಿ ಆಗಿದೆ. ಕೊಡವ ಜನಾಂಗ ಭಾಷಾವಾರು ಅಲ್ಪ ಸಂಖ್ಯಾತರಾಗಿದ್ದು ಇಂದು ಜಗತ್ತಿನಲ್ಲಿರುವ ಎಲ್ಲ ಕೊಡವರ ಸಂಖ್ಯೆ ಎರಡು ಲಕ್ಷವನ್ನೂ ದಾಟುವುದಿಲ್ಲ. ಒಂದು ಕಾಲದಲ್ಲಿ ಕೊಡಗಿನಲ್ಲಿ ಬಹುಸಂಖ್ಯಾತರೇ ಅಗಿದ್ದ ಕೊಡವರು ಕಾಲ ಕಳೆದಂತೆ ಕೇರಳ, ತಮಿಳುನಾಡು , ದಕ್ಷಿಣ ಕನ್ನಡ ಜಿಲ್ಲೆಯ ಜನರ ವಲಸೆಯಿಂದಾಗಿ ಅಲ್ಪ ಸಂಖ್ಯಾತರೇ ಆಗಿದ್ದಾರೆ. ಇಂದು ಕೊಡಗಿನ ಜನಸಂಖ್ಯೆ ಸುಮಾರು 5.5 ಲಕ್ಷ ಆಗಿದ್ದು ಕೊಡವರ ಸಂಖ್ಯೆ ಒಂದು ಲಕ್ಷವನ್ನೂ ದಾಟುವುದಿಲ್ಲ . ಅಂಕಿ -ಅಂಶಗಳ ಪ್ರಕಾರ ಕೊಡಗು ಹೊರತುಪಡಿಸಿ ದೇಶದ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕೊಡವರ ಒಟ್ಟು ಸಂಖ್ಯೆ ಸುಮಾರು 1.6 ಲಕ್ಷ ಆಗಿದೆ.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಕೊಡವ ಜನಾಂಗದೊಳಗೆ ಕೊಡವ ಬ್ರಾಹ್ಮಣರು , ಪೆಗ್ಗಡೆ , ಅಮ್ಮ ಕೊಡವ , ಕೆಂಬಟ್ಟಿ , ಐರಿ ,ಇತ್ಯಾದಿ 18 ಉಪ ಜಾತಿಗಳೂ ಇವೆ. ಇಂದು ಕೊಡವರು ಆರ್ಥಿಕವಾಗಿ , ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ಹಿಂದುಳಿದಿರುವವರ ಸಂಖ್ಯೆಯೂ ಸಾವಿರಗಟ್ಟಲೆ ಇದ್ದೆ ಇದೆ. ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನ ಮಾನ ನೀಡಬೇಕೆಂಬ ಒತ್ತಾಯ ಜನಾಂಗದ ಮುಖಂಡರದ್ದಾಗಿದೆ. ಈ ಬೇಡಿಕೆಯನ್ನು ಮೊದಲು ಹುಟ್ಟು ಹಾಕಿದ್ದೇ ಕೊಡವ ಸಂಘಟನೆಯಾದ ಕೊಡವ ನ್ಯಾಷನಲ್‌ ಕೌನ್ಸಿಲ್‌ .

ಸಿಎನ್‌ಸಿ ಸಂಘಟನೆಯು ದೆಹಲಿಯಲ್ಲಿ ಒತ್ತಡ ಹಾಕಿದ ಪರಿಣಾಮವಾಗಿಯೇ ಹಿಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬುಡಕಟ್ಟು (ಎಸ್‌ ಟಿ) ಸ್ಥಾನ ಮಾನ ನೀಡುವ ಕುರಿತು ಕುಲ ಶಾಸ್ತ್ರ ಅಧ್ಯಯನಕ್ಕೆ ಮುಂದಾಗಿದ್ದು ಇದೀಗ ಅಧ್ಯಯನ ನಡೆಯುತ್ತಿದೆ. ಈ ನಡುವೆ ಕೊಡಗಿನಲ್ಲಿ ಈ ಅಧ್ಯಯನದ ಕುರಿತು ಭಿನ್ನಾಭಿಪ್ರಾಯಗಳೂ ಕೇಳಿ ಬಂದಿವೆ. ಮೊದಲಿಗೆ ಕುಲ ಶಾಸ್ತ್ರ ಅಧ್ಯಯನ ನಡೆಸಲು ಅಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2016 ರ ನವೆಂಬರ್‌ ನಲ್ಲಿ 11 ಲಕ್ಷ ರೂಪಾಯಿಗಳನ್ನೂ ಬಿಡುಗಡೆ ಮಾಡಿದವು. ಆದರೆ ಅಧ್ಯಯನ ಆರಂಬಗೊಂಡ ಒಂದೇ ತಿಂಗಳಿನಲ್ಲಿ ಡಿಸೆಂಬರ್‌ 18 ಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬುದ್ದಿ ಜೀವಿಗಳ ಒತ್ತಡಕ್ಕೆ ಮಣಿದು ಅಧ್ಯಯನವನ್ನು ನಿಲ್ಲಿಸಿತು.

ನಂತರ ಕುಮಾರ ಸ್ವಾಮಿ ನೇತೃತ್ವದ ಸರ್ಕಾರ 2018 ರ ಜನವರಿಯಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಪುನಃ ಚಾಲನೆ ನೀಡಿದ್ದು ಇದೀಗ ಅಧ್ಯಯನ ಮುಂದುವರೆದಿದೆ. ಇದೀಗ ಈ ಅಧ್ಯಯನದ ವಿರುದ್ದ ಕೊಡಗಿನ ಆದಿವಾಸಿ ಸಂಘ ದನಿಯೆತ್ತಿದೆ. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ, ಇದರಿಂದ ಕೊಡಗಿನಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಆದಿವಾಸಿ ಜನಾಂಗಗಳ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಕುರಿತು ಮಾತನಾಡಿದ ಆದಿವಾಸಿ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಗಣೇಶ್ ಅವರು, ಕೊಡವರ ಮೂಲದ ಬಗ್ಗೆ ಅಧ್ಯಯನ ಮಾಡಿರುವ ಕೊಡವ ತಜ್ಞರೇ ಕೊಡವರು ಕೊಡಗಿನ ಮೂಲ ನಿವಾಸಿಗಳಲ್ಲ. ಅವರು ಕೊಡಗಿನ ಭೂ ಪ್ರದೇಶದಿಂದ ಹೊರಗಿನಿಂದ ಬಂದವರು ಮತ್ತು ಇಲ್ಲಿನ ದಟ್ಟವಾದ ಕಾಡು ಪ್ರದೇಶದಲ್ಲಿ ಮೊದಲೇ ನೆಲೆಸಿದ್ದ ಮೂಲನಿವಾಸಿಗಳೊಂದಿಗೆ ಬೆರೆತು ಜೀವಿಸಲಾರಂಭಿಸಿದ ನಂತರ ಇಲ್ಲಿನ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ ಮೂಲನಿವಾಸಿಗಳೊಂದಿಗೆ ಬೆರೆತು ಅವರ ಜೀವನ ಕ್ರಮವನ್ನು ರೂಢಿಸಿಕೊಂಡವರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿಸಬೇಕೆನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕೊಡವ ಭಾಷೆಯನ್ನಾಡುವ 18 ಜನಾಂಗಗಳಿದ್ದು ಅವರಲ್ಲಿ ಒಂದು ವಿಭಾಗದವರಾದ ಕೊಡವರು ಇತರ ಕೊಡವ ಭಾಷಿಗರಿಗಿಂತ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಶ್ರೀಮಂತರಾಗಿದ್ದಾರೆ. ಉಳಿದ ಜನಾಂಗದವರು ಅತ್ಯಂತ ದುರ್ಬಲರಾಗಿದ್ದು, ಬಹುತೇಕ ಮಂದಿ ಕೊಡವರ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೊಡಗಿನಲ್ಲಿ ಕೆಂಬಟ್ಟಿ ಜನಾಂಗದವರು ಆರ್ಥಿಕವಾಗಿ ದುರ್ಬಲರಾಗಿದ್ದು, ತಮ್ಮನ್ನು ಬುಡಕಟ್ಟ ವಿಭಾಗಕ್ಕೆ ಸೇರಿಸಬೇಕೆಂದು ಬಹುಕಾಲದಿಂದ ಬೇಡಿಕೆ ಇಟ್ಟಿದ್ದರೂ ಅವರ ಬೇಡಿಕೆ ಈಡೇರಿಲ್ಲ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನರೆಂದು ಪರಿಗಣಿಸುವುದಾದರೆ, ಉಳಿದ ಕೊಡವ ಭಾಷಿಗರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ ಅವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವುದರಿಂದ ಈಗಾಗಲೇ ಜಿಲ್ಲೆಯಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಗಣೇಶ್ ಆತಂಕ ವ್ಯಕ್ತಪಡಿಸಿದರು.

ಈ ಬೇಡಿಕೆ ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಆದಿವಾಸಿ ಸಂಘಟನೆಗಳ ಸಭೆ ಕರೆದು ಚರ್ಚಿಸುವುದರೊಂದಿಗೆ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಘೋಷಿಸಿದರು.

ಆದರೆ ಇದಕ್ಕೆ ಕೊಡವ ಮಕ್ಕಳ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ತೀವ್ರ ವಿರೋಧ ವ್ಯಕ್ತಪಡಿಸಿದ್ದು ಭಾರತೀಯ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕನ್ನು ಮಂಡಿಸುವ ಅವಕಾಶವನ್ನು ನೀಡಿದೆ. ಈ ಕಾರ್ಯವನ್ನು ಕೊಡವರ ಪ್ರತಿನಿಧಿಯಾಗಿ ನಂದಿನೆರವಂಡ ನಾಚಪ್ಪ ಮಾಡುತ್ತಿದ್ದಾರೆ. ಕೊಡವರು ಹಲವು ವರ್ಷಗಳಿಂದ ಕೊಡವ ಬುಡಕಟ್ಟು ಕುಲಕ್ಕೆ ತಮ್ಮನ್ನು ಸೇರಿಸಬೇಕೆಂದು ಪ್ರತಿಪಾಧಿಸುತ್ತಿದ್ದಾರೆ. ಆದರೆ ಇದೀಗ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕೊಡವರಿಗೆ ಬುಡಕಟ್ಟು ಸ್ಥಾನ ನೀಡಬಾರದು ಎಂದು ಒತ್ತಾಯಿಸಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

ಕೊಡವರು ಬುಡಕಟು ಜನಾಂಗ ಎಂಬುದನ್ನು ಸಾಬೀತು ಮಾಡುವವರು ಮಾನವಶಾಸ್ತ್ರಜ್ಞರು. ಅದಕ್ಕಾಗಿಯೇ ಕುಲಶಾಸ್ತ್ರ ಅಧ್ಯಯನವಾಗುತ್ತಿರುವುದು. ಕೊಡವರು ಕೂಡ ಈ ದೇಶದ ಸಂವಿಧಾನದಡಿಯಲ್ಲಿ ಬರುವ ಪ್ರಜೆಗಳಾಗಿದ್ದು, ನಮಗೆ ಬೇಕಾದ ಸವಲತ್ತು ಕೇಳುವ ಹಕ್ಕು ನಮಗಿದೆ. ಕೊಡವರು ಕೊಡಗಿನ ಒಂದು ಸೀಮಿತವ್ಯಾಪ್ತಿಯಲ್ಲಿ ಮಾತ್ರ ವಾಸವಾಗಿದ್ದಾರೆ. ಹಾಗೇ ನೋಡುದಾದರೆ ಕುರುಬರು ಹೆಚ್‍ಡಿ ಕೋಟೆಯಲ್ಲಿ, ಮೈಸೂರುವಿನಲ್ಲಿದ್ದಾರೆ. ಯರವರು ವೈನಾಡಿನಲ್ಲಿದ್ದಾರೆ. ಹಾಗಾದರೇ ಇವರನ್ನು ಮಾತ್ರ ಕೊಡಗಿನ ಮೂಲ ನಿವಾಸಿಗಳು ಎಂದು ಕರೆಯುವುದು ಹೇಗೆ ಎಂದು ಕೂಟ ಅಸಮಾಧಾನ ವ್ಯಕ್ತಪಡಿಸಿದರು..

ಕೊಡವರಿಗೆ ಕೊಡಗಲ್ಲದೇ ಬೇರೆಲ್ಲೂ ತಾಯಿ ಬೇರಿಲ್ಲ. ಅಲ್ಲದೇ ಕೊಡವರು ಒಂದು ಲಕ್ಷದಷ್ಟು ಮಾತ್ರ ಜನಸಂಖ್ಯೆ ಹೊಂದಿರುವವರು. ಲಕ್ಷಾಂತರ ಜನಸಂಖ್ಯೆ ಹೊಂದಿರುವ, ಆರ್ಥಿಕವಾಗಿ ಬಲಾಢ್ಯರಾದ ನಾಯರ್ ಸಮುದಾಯ ಹಾಗೂ ಬೇಡ ವಾಲ್ಮೀಕಿ ಜನಾಂಗದವರನ್ನು ಈಗಾಗಲೇ ಬುಡಕಟ್ಟು ಪಟ್ಟಿಗೆ ಸೇರಿಸಲಾಗಿದೆ. ಆಗ ಆದಿವಾಸಿ ಸಮುದಾಯದವರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಕೊಡವರಿಗೆ ಮಾತ್ರ ಸ್ಥಾನ ಮಾನ ನೀಡುವುದು ಸರಿಯಲ್ಲ ಎಂಬುದು ಕೊಡವರ ವಿರುದ್ಧ ಇವರು ಮಾಡುತ್ತಿರುವ ಪಿತ್ತೂರಿಯಾಗಿದೆ. ಸರಕಾರ ಯಾವುದಾದರೂ ಸಮುದಾಯವನ್ನು ಬುಡಕಟ್ಟಿಗೆ ಸೇರಿಸಿದರೆ ಅದಕ್ಕೆ ನೀಡುವ ಸವಲತ್ತು, ಅನುದಾನವನ್ನು ಹೆಚ್ಚಿಸುತ್ತದೆ. ಹಲವು ದಾಖಲೆಗಳಲ್ಲಿ ಕೊಡವರು ಬುಡಕಟ್ಟು ಜನಾಂಗದವರು ಎಂದು ಉಲ್ಲೇಖಿಸಿಲಾಗಿದೆ. ಆದರಿಂದ ಇವರು ಕೊಡವರ ಮೂಲವನ್ನು ಪ್ರಶ್ನಿಸುವುದು ಸಮಂಜಸವಲ್ಲ ಎಂದಿದ್ದಾರೆ.

ಕೊಡವ ಆಚಾರ ವಿಚಾರ, ಉಡುಗೆ ತೊಡುಗೆ, ಆಹಾರ, ಸಾವು ಪದ್ಧತಿ ಎಲ್ಲವೂ ಬುಡಕಟ್ಟು ಜನಾಂಗಕ್ಕೆ ಸಂಬಂಧಪಟ್ಟವೇ ಆಗಿದೆ.

ಬುಡಕಟ್ಟು ಕುಲವನ್ನು ಗುರುತಿಸುವುದು ಜನಾಂಗದ ಆರ್ಥಿಕ ಸ್ಥಾನಮಾನದಿಂದಲ್ಲ. ಕುಲಶಾಸ್ತ್ರ ಅಧ್ಯಯನದಿಂದ ಮಾತ್ರ. ಅವರ ಆರಾಧನಾ ಪದ್ಧತಿ, ಹಬ್ಬ ಹರಿದಿನ, ಭಾಷೆ, ಹುಟ್ಟು ಸಾವು, ಜೀವನ ವಿಧಾನವನ್ನು ಪರಿಗಣಿಸಲಾಗುತ್ತದೆ. ಸಮಿತಿ 18 ಮೂಲನಿವಾಸಿಗಳಿಗೂ ಸ್ಥಾನಮಾನ ನೀಡಲಿ ಎಂದು ಒತ್ತಾಯಿಸಿರುವುದು ನಮಗೆ ಬೇಕಿಲ್ಲ. ದೇಶದಲ್ಲಿ ಸಾವಿರಾರು ಸಮುದಾಯಗಳಿದೆ. ಕೊಡಗಿನಲ್ಲಿ ಎಷ್ಟೇ ಜನಾಂಗವಿರಲಿ. ಆದರೆ ನಮಗೆ ಬೇಕಿರುವುದು ನಮ್ಮ ಹಕ್ಕು ಅದನ್ನು ಮಾತ್ರ ಪ್ರತಿಪಾಧಿಸುವುದು ನಮ್ಮ ಬೇಡಿಕೆ. ಸಂವಿಧಾನದಲ್ಲಿಯೇ ನಮ್ಮ ಬೇಡಿಕೆ ಈಡೇರಿಕೆಗೆ ಹೋರಾಡುವ ಹಕ್ಕು ನಮಗಿದೆ. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಕುರಿತು ಸಿ ಎನ್‌ ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅವರನ್ನು ಮಾತಾಡಿಸಿದಾಗ ಕೊಡವ ಸ್ಥಳೀಯ ಬುಡಕಟ್ಟು ಜನಾಂಗದವರು ನಮ್ಮ ಸಂವಿಧಾನದ 340 ಮತ್ತು 342 ನೇ ವಿಧಿ ಅನ್ವಯ ವೇಳಾ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಾಂವಿಧಾನಿಕ ರಕ್ಷಣೆಗಾಗಿ ಪ್ರತಿಪಾದಿಸುತ್ತಿದ್ದಾರೆ.ಇದು ಸಾಂವಿಧಾನಿಕ ಕಾರಣ ಮತ್ತು ಸಾಂವಿಧಾನಿಕ ಬಾಧ್ಯತೆ ಮತ್ತು ಅಂತರ್ಗತ ಜನನ ಹಕ್ಕು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಕೊಡವ ಬುಡಕಟ್ಟಿನ ಮೂಲಭೂತ ಹಕ್ಕುಗಳು. ಈಗ ಇತರ ಅನೇಕ ಜನಾಂಗಗಳಿಗೂ ಬುಡಕಟ್ಟು ಸ್ಥಾನಮಾನ ನೀಡಲಾಗಿದ್ದು ನಾವು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಈಗ ಕೊಡವ ಕುಲ ಶಾಸ್ತ್ರ ಅಧ್ಯಯನ ನಡೆಯುತಿದ್ದು ಇದರ ವರದಿಯ ಆಧಾರದಲ್ಲಿ ಮುಂದಿನ ತೀರ್ಮಾನ ಆಗಲಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ʼಶುದ್ಧ ಹೃದಯದ ವ್ಯಕ್ತಿ’ ರಾಹುಲ್‌ ಗಾಂಧಿ ವಿರುದ್ಧ ಕಾಂಗ್ರೆಸ್‌ನಲ್ಲೇ ಷಡ್ಯಂತ್ರ : ಕರ್ನಾಟಕದ ಬಿಜೆಪಿ ಸಂಸದ ಗಂಭೀರ ಆರೋಪ
Top Story

ʼಶುದ್ಧ ಹೃದಯದ ವ್ಯಕ್ತಿ’ ರಾಹುಲ್‌ ಗಾಂಧಿ ವಿರುದ್ಧ ಕಾಂಗ್ರೆಸ್‌ನಲ್ಲೇ ಷಡ್ಯಂತ್ರ : ಕರ್ನಾಟಕದ ಬಿಜೆಪಿ ಸಂಸದ ಗಂಭೀರ ಆರೋಪ

by ಪ್ರತಿಧ್ವನಿ
March 31, 2023
ಇಸ್ರೇಲಿನಲ್ಲಿ ಭುಗಿಲೆದ್ದ ಹಿಂಸಾಚಾರ:‌ ತಲೆ ಮರೆಸಿದ ಪ್ರಧಾನಮಂತ್ರಿ
Top Story

ಇಸ್ರೇಲಿನಲ್ಲಿ ಭುಗಿಲೆದ್ದ ಹಿಂಸಾಚಾರ:‌ ತಲೆ ಮರೆಸಿದ ಪ್ರಧಾನಮಂತ್ರಿ

by ಪ್ರತಿಧ್ವನಿ
March 28, 2023
ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ; ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು : ಸಿದ್ದರಾಮಯ್ಯ
Top Story

ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ; ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು : ಸಿದ್ದರಾಮಯ್ಯ

by ಪ್ರತಿಧ್ವನಿ
March 26, 2023
SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |
ಇದೀಗ

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |

by ಪ್ರತಿಧ್ವನಿ
March 29, 2023
“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ
ಸಿನಿಮಾ

“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ

by ಪ್ರತಿಧ್ವನಿ
March 27, 2023
Next Post
ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!

ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!

ಮಂತ್ರಿಗಳಾಗದ ನಿರಾಶೆಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿರುವ ನೂತನ ಶಾಸಕರು

ಮಂತ್ರಿಗಳಾಗದ ನಿರಾಶೆಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿರುವ ನೂತನ ಶಾಸಕರು

‘ಇಂದಿನ ಮಕ್ಕಳಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿದೆ’

‘ಇಂದಿನ ಮಕ್ಕಳಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿದೆ’

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist