• Home
  • About Us
  • ಕರ್ನಾಟಕ
Saturday, June 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ

by
January 9, 2020
in ಕರ್ನಾಟಕ
0
ಕೇಸರಿ vs ಕೆಂಪು: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಣೆ
Share on WhatsAppShare on FacebookShare on Telegram

ಕನ್ನಡ ಸಾರಸ್ವತ ಲೋಕದಲ್ಲಿ ಏನು ನಡೆಯ ಬಾರದಿತ್ತೋ ಅದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಇದೆ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೊಲೀಸ್ ಅನುಮತಿ ನಿರಾಕರಿಸಲಾಗಿದೆ. ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿದೆ. ಸಾಹಿತ್ಯ ಪ್ರೇಮಿಗಳು ಸ್ವಂತ ಹಣದಿಂದ ಸಮ್ಮೇಳನ ನಡೆಸಲು ಸಜ್ಜಾಗಿದ್ದಾರೆ… ಇದು 16ನೇ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಸುತ್ತ ಹಬ್ಬಿರುವ ವಿವಾದಗಳ ಸರಮಾಲೆ

ADVERTISEMENT

ಇಡೀ ವಿವಾದದ ಕೇಂದ್ರ ಬಿಂದುಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ ಟಿ ರವಿ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆಯ ಹೆಸರಿನಲ್ಲಿ ಈ ಮಲೆನಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋತಿಯಾಟ ಪ್ರಜ್ಞಾವಂತರ ಆತಂಕ್ಕೆ ಕಾರಣವಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ, ಸಚಿವರೊಬ್ಬರ ನಿರ್ದೇಶನದಂತೆ ನೆರವು ನಿರಾಕರಿಸಿ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ತನ್ನ ಸ್ವಾಯತ್ತತೆಯನ್ನು ಸರಕಾರದ ಪಾದಕ್ಕೆ ಅರ್ಪಿಸಿರುವುದು ಎಲ್ಲರ ಕಳವಳಕ್ಕೆ ಕಾರಣವಾಗಿರುವ ಸಂಗತಿ. ಇವೆಲ್ಲದರ ನಡುವೆ ಶೃಂಗೇರಿ ಪೊಲೀಸರು ಅಧಿಕಾರಸ್ಥರ ಮರ್ಜಿ ಹಿಡಿದಿದ್ದಾರೆ. ಸಮ್ಮೇಳನಕ್ಕೆ ಅನುಮತಿ ನಿರಾಕರಿಸಿದ್ದಾರೆ

ಈ ನಡುವೆ ಇದೇ ಮೊದಲ ಬಾರಿಗೆ, ಜನ ಸಾಮಾನ್ಯರಿಂದ ಹಣ ಸಂಗ್ರಹಿಸಿ, ಸಮ್ಮೇಳನ ನಡೆಸಲು ಜಿಲ್ಲಾ ಸಾಹಿತ್ಯ ಪರಿಷತ್ ಮುಂದಾಗಿರುವುದು ಒಂದು ದೊಡ್ಡ ಸುದ್ದಿ. ಜನ ಸಾಹಿತ್ಯ ಪರಿಷತ್‍ಗೆ ದೇಣಿಗೆ ನೀಡಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಟೊಂಕ ಕಟ್ಟಿರುವುದು ಧನಾತ್ಮಕ ಬೆಳವಣಿಗೆ.

ನಡೆದಿರುವುದಿಷ್ಟೇ: ಈ ಬಾರಿಯ (16ನೇ) ಜಿಲ್ಲಾ ಸಾಹಿತ್ಯ ಸಮ್ಮೇಳನ ಶೃಂಗೇರಿಯಲ್ಲಿ ನಡೆಯುತ್ತಿದೆ. ಜನವರಿ 10 ಹಾಗೂ 11ರಂದು ಈ ಸಮ್ಮೇಳನ ನಡೆಯುತ್ತಿದೆ. ಮಂಗನ ಬ್ಯಾಟೆ ಪುಸ್ತಕ ಖ್ಯಾತಿಯ ಕಲ್ಕುಳಿ ವಿಠಲ ಹೆಗ್ದೆಯವರನ್ನು ಸರ್ವಾನುಮತದಿಂದ ಈ ಸಮ್ಮಳೇನದ ಸರ್ವಾಧ್ಯಕ್ಷರನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಇದನ್ನು ಬಿಜೆಪಿ, ಹಾಗೂ ಕೆಲ ಹಿಂದೂ ಪರ ಸಂಘಟನೆಗಳು ವಿರೋಧಿಸಿವೆ. ಸಮ್ಮೇಳನದಿಂದ ದೂರ ಉಳಿಯುವುದಾಗಿ ಘೋಷಿಸಿವೆ. ಇಷ್ಟೆ ಆಗಿದ್ದರೆ ಸಮಸ್ಯೆಯಿರಲಿಲ್ಲ. ಏಕೆಂದರೆ ನಮ್ಮದು ಬಂಡಾಯದ ಪರಂಪರೆ. ಆದರೆ ಇದೀಗ ಕನ್ನಡ ಮತ್ತು ಸಂಸ್ಕøತಿ ಸಚಿವರು, ಈ ಸಮ್ಮೇಳನದ ವಿರುದ್ಧ ಹೂಂಕರಿಸಿರುವುದು, ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕೂಡಾ ಜಿಲ್ಲಾ ಸಾಹಿತ್ಯ ಪರಿಷತ್ ಬೆಂಬಲಕ್ಕೆ ನಿಲ್ಲದಿರುವುದು ನಿಜವಾದ ಸುದ್ದಿ.

ಕಲ್ಕುಳಿ ವಿಠಲ ಹೆಗ್ದೆ ನಕ್ಸಲ್ ಪರ. ಮಲೆನಾಡಿನಲ್ಲಿ ಬಡವರ, ದಲಿತರ ರಕ್ತದೋಕುಳಿಗೆ ಕಾರಣಕರ್ತರಾದವರು. 140ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಬರೆದವರನ್ನು ಕೂಡಾ ನಿರ್ಲಕ್ಷಿಸಿ, ಇವರನ್ನು ಆಯ್ಕೆ ಮಾಡಿರುವುದರ ಬಗ್ಗೆ ನಮ್ಮ ಆಕ್ಷೇಪಗಳಿವೆ ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಕನ್ನಡ ಹಾಗೂ ಸಂಸ್ಕøತಿ ಸಚಿವ ಸಿ ಟಿ ರವಿ ಹಾಗೂ ಅವರ ಬೆಂಬಲಿಗರ ನಿಲುವು. ಸಮ್ಮೇಳನದ ಸಂಘಟನೆಯಿಂದ ಬಿಜೆಪಿ ಹಾಗೂ ಬಲಪಂಥೀಯರು ದೂರ ಉಳಿದಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಮೂಲಕ ದೂರು ಸಲ್ಲಿಸಲಾಗಿದೆ.

ಹೆಗ್ದೆ, ಶೃಂಗೇರಿ ಸ್ವಾಮಿಗಳನ್ನು ಗೇಲಿ ಮಾಡಿ, ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ ಎಂಬ ಒಗ್ಗರಣೆ ಬೇರೆ. ಹೀಗೆ ಹೆಗ್ದೆ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನೇ ಕೈಗೊಂಡಿದ್ದಾರೆ ಈ ಸಿಟಿ ರವಿ ಬೆಂಬಲಿಗರು. ಸಾಹಿತ್ಯ ಸಮ್ಮೇಳನ ಮುಂದೂಡಿ ಎಂಬ ಆಗ್ರಹ ಸಚಿವ ಸಿ ಟಿ ರವಿ ಅವರದ್ದು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಂದೂರು ಹಾಗೂ ಇನ್ನಿತರರ ಪ್ರಕಾರ, ಹೆಗ್ದೆಯವರು ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಸಾಹಿತಿ- ಜನಪರ ಹೋರಾಟಗಾರ. ಯಾರು ಅದೆಷ್ಟೇ ವಿರೋಧಿಸಿದರೂ ಅವರೇ ಸಮ್ಮೇಳನದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಗುರುವಾರದಿಂದ ವಿವಾದ ಶಮನಕ್ಕೆ ಒತ್ತಾಯಿಸಿ ಕುಂದೂರು ಉಪವಾಸ ವೃತ ಕೈಗೊಳ್ಳಲಿದ್ದಾರೆ. “ಹೆಗ್ದೆಯವರ ಜನಪರ ಹೋರಾಟಕ್ಕೆ ನಕ್ಸಲ್ ಬಣ್ಣ ಹಚ್ಚುವುದು ತಪ್ಪು,” ಎಂದು ಖಚಿತವಾಗಿ ಹೇಳುತ್ತಾರೆ ಕುಂದೂರು.

ಈ ನಡುವೆ ಹೆಗ್ದೆಯವರು ತಮ್ಮ ಮೇಲಿನ ಆರೋಪಗಳನ್ನೆಲ್ಲಾ ನಿರಾಕರಿಸುತ್ತಾರೆ. “ಕನ್ನಡದ ಬಂಡಾಯ ಪರಂಪರೆಯನ್ನು ಅರಿಯದವರು, ಬಹುತ್ವದ ನೆಲೆಗಳನ್ನು ಗುರುತಿಸಲು ವಿಫಲರಾಗಿರುವವರು ನನ್ನನ್ನು ವಿರೋಧಿಸುತ್ತಿದ್ದಾರೆ,” ಎನ್ನುತ್ತಾರೆ ಹೆಗ್ದೆ.

ಸ್ಥಳೀಯ ಶಾಸಕ, ಕಾಂಗ್ರೆಸ್ ಮುಖಂಡ ಡಿ ಟಿ ರಾಜೇಗೌಡರು ಜಿಲ್ಲಾ ಸಾಹಿತ್ಯ ಪರಿಷತ್ ಪರ ನಿಂತಿದ್ದಾರೆ. ‘ಒಮ್ಮೆ ಆಯ್ಕೆ ಮಾಡಿದ ಬಳಿಕ ಅಧ್ಯಕ್ಷರ ಬದಲಾವಣೆ ಅವಮಾನಕರ. ಇದನ್ನು ನಾನು ಒಪ್ಪುವುದಿಲ್ಲ. ಸಮ್ಮೇಳನ ಯಶಸ್ವಿಯಾಗಿ ನಡೆಯಲಿದೆ,” ಎನ್ನುತ್ತಾರೆ ಅವರು.

ಈ ನಡುವೆ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಜಿಲ್ಲಾ ಸಮ್ಮೇಳನಕ್ಕೆ ಕೇಂದ್ರ ಸಮಿತಿಯಿಂದ ನೆರವು ನಿರಾಕರಿಸಿದ್ದಾರೆ. “ಸಚಿವ ರವಿ ಮನವಿ ಮೇರೆಗೆ ಈ ಬಾರಿ ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನಕ್ಕೆ ನೆರವು ನೀಡುತ್ತಿಲ್ಲ,” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್‍ನ ಸ್ವಾಯತ್ತತೆಯನ್ನು ಬಹಿರಂಗವಾಗಿಯೇ ಸಚಿವರೊಬ್ಬರಿಗೆ ಅಡವಿಟ್ಟಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಈ ಎಲ್ಲದರ ನಡುವಿನ ಆಶಾದಾಯಕ ಬೆಳವಣಿಗೆಯೆಂದರೆ, ಸ್ಥಳೀಯರು ಜಿಲ್ಲಾ ಸಾಹಿತ್ಯ ಪರಿಷತ್‍ಗೆ ದೊಡ್ಡ ಮಟ್ಟದಲ್ಲಿ ಸಮ್ಮೇಳನ ಆಯೋಜನೆಗೆ ಹಣಕಾಸು ನೆರವು ನೀಡಲು ಮುಂದಾಗುತ್ತಿರುವುದು. ಬಡವರು, ದಲಿತರು, ಹಿಂದುಳಿದ ವರ್ಗದವರು ಜತೆಗೆ ಮೇಲ್ವರ್ಗ….ಹೀಗೆ ಸಮಾಜದ ಎಲ್ಲಾ ವರ್ಗಗಳ ಜನತೆ ಸಾಹಿತ್ಯ ಪರಿಷತ್ ಜತೆ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಇದು ಕನ್ನಡ ಸಾಹಿತ್ಯ ಪರಿಷತ್‍ನ ಇತಿಹಾಸದಲ್ಲಿನ ಸುವರ್ಣ ಘಳಿಗೆ.

Tags: Akshara JathreBJP GovernmentCT RaviDalitsDistrict LevelKannada Sahitya ParishatKannada Sahitya SammelanaManu BaligarPoor Peopleಅಕ್ಷರ ಜಾತ್ರೆಕನ್ನಡ ಸಾಹಿತ್ಯ ಪರಿಷತ್ಜಿಲ್ಲಾ ಸಾಹಿತ್ಯ ಪರಿಷತ್ದಲಿತರುಬಡವರುಬಿಜೆಪಿ ಸರ್ಕಾರಮನು ಬಳಿಗಾರ್ಸಚಿವ ಸಿಟಿ ರವಿ
Previous Post

ಜೀವ ವೈವಿಧ್ಯತೆಗೆ ಮಾರಕವಾದ ಕೃತಕ ಅರಣ್ಯದ ಅಗತ್ಯವಿದೆಯೇ?

Next Post

ಬಿಜೆಪಿ ಸರ್ಕಾರ ಇದ್ದರೂ ಅಸ್ಸಾಂ ಭೇಟಿಗೆ ಮೋದಿ‌ ಬೆದರುತ್ತಿರುವುದೇಕೆ?

Related Posts

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
0

ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ, ಜಿಲ್ಲೆಯ 130 ಮನೆಗಳಿಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ತ್ವರಿತ ಪರಿಹಾರ...

Read moreDetails

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

June 13, 2025

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

June 13, 2025

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

June 13, 2025
Next Post
ಬಿಜೆಪಿ ಸರ್ಕಾರ ಇದ್ದರೂ ಅಸ್ಸಾಂ ಭೇಟಿಗೆ ಮೋದಿ‌ ಬೆದರುತ್ತಿರುವುದೇಕೆ?

ಬಿಜೆಪಿ ಸರ್ಕಾರ ಇದ್ದರೂ ಅಸ್ಸಾಂ ಭೇಟಿಗೆ ಮೋದಿ‌ ಬೆದರುತ್ತಿರುವುದೇಕೆ?

Please login to join discussion

Recent News

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ
Top Story

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

by ನಾ ದಿವಾಕರ
June 14, 2025
Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
Top Story

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

by ಪ್ರತಿಧ್ವನಿ
June 13, 2025
Top Story

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

by ಪ್ರತಿಧ್ವನಿ
June 13, 2025
Top Story

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

by ಪ್ರತಿಧ್ವನಿ
June 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ

June 14, 2025

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

June 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada