ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಮೂಲದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಪಾಕಿಸ್ತಾನನ ಸರ್ಕಾರ ಜಾಧವ್ ಅವರು ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದರು ಎಂದು ಹೇಳಿದೆ.
ಜೂನ್ 17ರಂದು ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಆಹ್ವಾನ ನೀಡಲಾಗಿತ್ತು. ಆದರೆ, ಅವರು ತಮ್ಮ ಕಾನೂನಾತ್ಮಕ ಹಕ್ಕಿನಿಂದ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದ್ದಾರೆ, ಎಂದು ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಹೇಳಿದ್ದಾರೆ. ಗಲ್ಲು ಶಿಕ್ಷೆಯನ್ನು ಮರುಪ್ರಶ್ನಿಸುವ ಬದಲಾಗಿ ಕ್ಷಮಾದಾನ ಅರ್ಜಿಯನ್ನು ಪರಿಗಣಿಸಲು ಇಚ್ಚಿಸಿದ್ದಾರೆಂದು ಅವರು ಹೇಳಿದ್ದಾರೆ.
2017ರ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಇದಾಗಿ ಕಲವೇ ವಾರಗಳ ನಂತರ ಭಾರತವು ಅಂತಾರಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭುಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆಯನ್ನು ಮರುಪ್ರಶ್ನಿಸಲು ಭಾರತೀಯ ಧೂತವಾಸವನ್ನು ಸಂಪರ್ಕಿಸಲು ಅನುಮತಿ ನೀಡಬೇಕೆಂದು ಕೇಳಿಕೊಂಡಿತ್ತು.
ಈ ಪ್ರಕರಣದ ತೀರ್ಪನ್ನಿತ್ತ ಅಂತರಾಷ್ಟ್ರೀಯ ನ್ಯಾಯಾಲಯವು ಜಾಧವ್ ಅವರಿಗೆ ಧೂತವಾಸವನ್ನು ಸಂಪರ್ಕಿಸಲು ಅನುಮತಿ ನೀಡಬೇಕೆಂದು ಹೇಳಿತ್ತು. ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನವು ಅಂತರಾಷ್ಟ್ರೀಯ ನ್ಯಾಯಾಲಯವು ನೀಡಿದ ತೀರ್ಪನ್ನು ಅಕ್ಷರಶಃ ಪಾಲಿಸಿದ್ದೇವೆ ಎಂದು ಹೇಳಿತ್ತು. ಆದರೆ, ಈಗ ಮತ್ತೆ ತನ್ನ ಕೊಳಕು ಬುದ್ದಿಯನ್ನು ತೋರಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.