Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕರೋನಾ ವೈರಸ್‌ಗೆ ಕಡಿವಾಣ ಹಾಕಲು 40000 ಜನರನ್ನು ಕ್ವಾರಂಟೈನ್‌ ಮಾಡಿದ ಪಂಜಾಬ್‌ ಸರ್ಕಾರ

ಕರೋನಾ ವೈರಸ್‌ಗೆ ಕಡಿವಾಣ ಹಾಕಲು 40000 ಜನರನ್ನು ಕ್ವಾರಂಟೈನ್‌ ಮಾಡಿದ ಪಂಜಾಬ್‌ ಸರ್ಕಾರ
ಕರೋನಾ ವೈರಸ್‌ಗೆ ಕಡಿವಾಣ ಹಾಕಲು 40000 ಜನರನ್ನು ಕ್ವಾರಂಟೈನ್‌ ಮಾಡಿದ ಪಂಜಾಬ್‌ ಸರ್ಕಾರ

March 28, 2020
Share on FacebookShare on Twitter

ಭಾರತದಲ್ಲಿ ಕರೋನಾದ ಅಟ್ಟಹಾಸ ಊಹೆಗೆ ನಿಲುಕದಂತೆ ಹರಡುತ್ತಿದೆ. ಇಲ್ಲೀವರೆಗೂ ಭಾರದಲ್ಲಿ 906 ಮಂದಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಅದರಲ್ಲೂ ದೇವರ ನಾಡು ಪ್ರಸಿದ್ಧಿ ಪಡೆದಿರುವ ಕೇರಳದಲ್ಲಿ ಬರೋಬ್ಬರಿ 176 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿ 162 ಕೇಸ್ ಹೊಂದಿರುವ ಮಹಾರಾಷ್ಟ್ರ, 64 ಕೇಸ್ ಹೊಂದಿರುವ ಕರ್ನಾಟಕ ಮೂರನೇ ಸ್ಥಾನ ಹೊಂದಿದೆ. 38 ಪ್ರಕರಣಗಳನ್ನು ಹೊಂದಿರುವ ಪಂಜಾಬ್ ಇದೀಗ 10ನೇ ಸ್ಥಾನದಲ್ಲಿದೆ. ಆದರೂ ಇಡೀ ಭಾರತದಲ್ಲಿ ಗಢಗಢನೆ ನಡುಗಲು ಶುರುವಾಗಿರುವುದು ಇದೇ ಪಂಜಾಬ್. ಇದಕ್ಕೆ ಕಾರಣ ಕರೋನ. ಅದಕ್ಕಿಂತಲೂ ಮುಖ್ಯವಾಗಿ ಓರ್ವ ವ್ಯಕ್ತಿ.

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

ಕೇರಳ ಸಿಎಂ ಪಿಣರಾಯಿ ವಿಜಯನ್ ಕರೋನಾ ನಮ್ಮ ಹಿಡಿತಕ್ಕೆ ಸಿಗದೆ ಅಟ್ಟಹಾಸ ಮೆರೆಯುತ್ತಿದೆ ಎನ್ನುವ ಮೂಲಕ ಸರ್ಕಾರ ನಿಯಂತ್ರಣ ಮಾಡುವುದು ಅಸಾಧ್ಯ ಎಂದಿದ್ದಾರೆ. ಪಂಜಾಬ್‌ನಲ್ಲಿ ಒಟ್ಟು 40 ಸಾವಿರ ಜನರನ್ನು ಬಂಧನ ಮಾಡಲಾಗಿದೆ. 20 ಹಳ್ಳಿಗಳ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಕೂಡ ಮನೆಯಿಂದ ಹೊರಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ 70 ವರ್ಷದ ವ್ಯಕ್ತಿಯೊಬ್ಬ ಕರೋನ ವೈರಸ್‌ನಿಂದ ಸಾವನ್ನಪ್ಪಿದ ಬಳಿಕ ಇಷ್ಟೆಲ್ಲಾ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಬೋಧಕನಾಗಿದ್ದ ಮೃತ ವ್ಯಕ್ತಿ ಇಟಲಿ ಮತ್ತು ಜರ್ಮನಿ ಪ್ರವಾಸದಿಂದ ಹಿಂದಿರುಗಿದ್ದ. ಆರೋಗ್ಯ ಅಧಿಕಾರಿಗಳು ಸ್ವಯಂ ಸಂಪರ್ಕ ತಡೆಗಾಗಿ ಹೋಂ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಿದ್ದರು. ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸಿದ್ದ ಆತ ಹೊರಗಡೆ ಸುತ್ತಾಡಿದ್ದ ಎನ್ನಲಾಗಿದೆ. ಇದೀಗ ಇಪ್ಪತ್ತು ಹಳ್ಳಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದೆ.

ಬಲದೇವ್ ಸಿಂಗ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ಸಾಯುವ ಸ್ವಲ್ಪ ಸಮಯದ ಮೊದಲು ಹೋಲಾ ಮೊಹಲ್ಲಾ ಎಂಬ ಸಿಖ್ ಹಬ್ಬವನ್ನು ಆಚರಣೆಗಾಗಿ ಸಭೆಯೊಂದರಲ್ಲಿ ಭಾಗಿಯಾಗಿದ್ದನು. ಆ ಬಳಿಕ ಈ ಹಳ್ಳಿಗಳಲ್ಲಿ ಆರು ದಿನಗಳ ಕಾಲ ಸಿಖ್ಖರ ಉತ್ಸವ ನಡೆದಿದ್ದು, ಪ್ರತಿದಿನ ಸುಮಾರು 10,000 ಜನರನ್ನು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಬಲದೇವ್‌ ಸಿಂಗ್ ಕೂಡ ಈ ಉತ್ಸವದಲ್ಲಿ ಭಾಗಿಯಾಗಿದ್ದ. ಬಲದೇವ್ ಸಿಂಗ್ ಸಾವಿನ ಬಳಿಕ ಎಚ್ಚೆತ್ತುಕೊಂಡಿದ್ದು, ಬಲದೇವ್ ಸಿಂಗ್ ಸಾವಿನ ನಂತರ ಒಂದು ವಾರದ ಅಂತರದಲ್ಲಿ ಆತನ 19 ಮಂದಿ ಸಂಬಂಧಿಕರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದೆ.

ಇಲ್ಲಿಯವರೆಗೆ ಬಲದೇವ್ ಸಿಂಗ್ 550 ಜನರ ಜೊತೆಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಅವರನ್ನೂ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆ ಹಳ್ಳಿ ಜನರು ಸುತ್ತಾಡಿರುವ 15 ಹಳ್ಳಿಗಳನ್ನು ಗುರುತು ಮಾಡಿದ್ದಾರೆ. ಜೊತೆಗೆ ಪಕ್ಕದ ಜಿಲ್ಲೆಯ ಐದು ಗಡಿ ಗ್ರಾಮಗಳಿಗೂ ದಿಗ್ಬಂಧನ ವಿಧಿಸಲಾಗಿದೆ.

ಭಾರತದಲ್ಲಿ ಸಾಮೂಹಿಕ ಸಂಪರ್ಕ ತಡೆಗಾಗಿ ಲಾಕ್‌ಡೌನ್ ಮಾಡಲಾಗಿದೆ. ಪಂಜಾಬ್‌ನ ಈ ವ್ಯಕ್ತಿ ರಾಜಸ್ಥಾನದ ಜವಳಿ ನಗರ ಭಿಲ್ವಾರಾದಲ್ಲೂ ಸಾಕಷ್ಟು ಜನರಿಗೆ ಸೋಂಕು ಹರಡಿಸಿರುವ ಶಂಕೆಯಿದೆ. ಇದೀಗ ಪಂಜಾಬ್ ಸರ್ಕಾರ 40 ಸಾವಿರ ಜನರನ್ನು ಬಂಧನಕ್ಕೆ ಒಳಪಡಿಸಿದ್ದು, ಆ 40 ಸಾವಿರ ಜನರು ಎಲ್ಲೆಲ್ಲಿ ಸುತ್ತಾಡಿದ್ದಾರೋ ಎನ್ನುವ ಆತಂಕ ಮನೆ ಮಾಡಿದೆ. ಅಷ್ಟು ಮಾತ್ರವಲ್ಲದೆ ಕರೋನಾ ಸೋಂಕಿತರ ಪತ್ತೆಗಾಗಿ ಭಾರತದಲ್ಲಿ ಸಾಮೂಹಿಕ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ.

ಒಂದು ವೇಳೆ ಸಾಮೂಹಿಕ ಪರೀಕ್ಷೆ ನಡೆದಾಗ ಸೋಂಕಿತರ ಪ್ರಮಾಣ ಹೆಚ್ಚುವ ಆತಂಕವೂ ಇದೆ. ಇಡೀ ವಿಶ್ವದಲ್ಲೇ ಹೆಚ್ಚು ಜನಸಾಂದ್ರತೆ ಹೊಂದಿರುವ ಭಾರತದಲ್ಲಿ ಸಾವಿನ ಸುರಿಮಳೆ ಆಗುವ ಸಾಧ್ಯತೆ ಇದೆ ಎನ್ನುತ್ತಿದೆ ವೈದ್ಯಲೋಕ. ಒಟ್ಟಾರೆ, ಕರೋನಾ ಬಗ್ಗೆ ಇನ್ನೂ ಕೂಡ ಗಂಭೀರವಾಗಿ ಪರಿಗಣಿಸದ ಜನರು ಇಂದಿನಿಂದಾದರೂ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ಸಾಮೂಹಿಕ ಸೋಂಕು ಹರಡುವುದು ಧೃಢವಾಗಿದ್ದು, ಮೂರನೇ ಹಂತದಲ್ಲಿ ಇದ್ದೇವಾ? ಇಲ್ಲ ನಾಲ್ಕನೇ ಹಂತದ ಕಡೆಗೆ ಹೊರಟಿದ್ದೀವಾ ಅನ್ನೋದನ್ನು ಸರ್ಕಾರವೇ ಹೇಳಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು
ಅಂಕಣ

“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

by ನಾ ದಿವಾಕರ
September 23, 2023
ಮುಸ್ಲಿಂ ಸಮುದಾಯ ಮತ ಕೊಡಲಿಲ್ಲ ಎಂದು ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಲಿ: ಜಮೀರ್ ಅಹಮದ್ ಖಾನ್   
Top Story

ಮುಸ್ಲಿಂ ಸಮುದಾಯ ಮತ ಕೊಡಲಿಲ್ಲ ಎಂದು ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಲಿ: ಜಮೀರ್ ಅಹಮದ್ ಖಾನ್   

by ಪ್ರತಿಧ್ವನಿ
September 24, 2023
ಕೋವಿಡ್‌-19; 16,047 ಸೋಂಕು ಪತ್ತೆ, 54 ಸಾವು!
Top Story

ಕೇರಳದಲ್ಲಿ ಆತಂಕ ಸೃಷ್ಟಿಸಿದ ನಿಫಾ ವೈರಸ್​.. ಸದ್ಯದ ಪರಿಸ್ಥಿತಿ ಹೇಗಿದೆ ಗೊತ್ತಾ..?

by ಕೃಷ್ಣ ಮಣಿ
September 21, 2023
ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು
ಅಂಕಣ

ಜಟಿಲ ಸಿಕ್ಕುಗಳ ನಡುವೆ ರಂಗಭೂಮಿಯ ಆದ್ಯತೆಗಳು

by ನಾ ದಿವಾಕರ
September 25, 2023
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡ್ತಿಲ್ಲ.. ರಾಜ್ಯ ಸರ್ಕಾರ ಏನ್ಮಾಡ್ಬೇಕು..?
Top Story

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡ್ತಿಲ್ಲ.. ರಾಜ್ಯ ಸರ್ಕಾರ ಏನ್ಮಾಡ್ಬೇಕು..?

by ಪ್ರತಿಧ್ವನಿ
September 22, 2023
Next Post
ಕರೋನಾ ವೈರಸ್‌: ಮನೆಯೇ ಇಲ್ಲದ 17.7 ಲಕ್ಷ ಭಾರತೀಯರ ಗತಿಯೇನು?

ಕರೋನಾ ವೈರಸ್‌: ಮನೆಯೇ ಇಲ್ಲದ 17.7 ಲಕ್ಷ ಭಾರತೀಯರ ಗತಿಯೇನು?

ದೊಡ್ಡವರ ʼದೊಡ್ಡತನʼ; ಇದು ಕರೋನಾ ಮುಕ್ತ ಭಾರತಕ್ಕೆ ಉದ್ಯಮಿಗಳ ಔದಾರ್ಯ..

ದೊಡ್ಡವರ ʼದೊಡ್ಡತನʼ; ಇದು ಕರೋನಾ ಮುಕ್ತ ಭಾರತಕ್ಕೆ ಉದ್ಯಮಿಗಳ ಔದಾರ್ಯ..

‘ಕೋವಿಡ್-19’ ಮತ್ತು ನೈತಿಕತೆ ಮರೆತ ಬಿಜೆಪಿಯ ‘ಅಧಿಕಾರ ರಾಜಕಾರಣ’ದ ಅಪಾಯಗಳು!

‘ಕೋವಿಡ್-19’ ಮತ್ತು ನೈತಿಕತೆ ಮರೆತ ಬಿಜೆಪಿಯ ‘ಅಧಿಕಾರ ರಾಜಕಾರಣ’ದ ಅಪಾಯಗಳು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist