Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?
ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

February 6, 2020
Share on FacebookShare on Twitter

ಕರೋನಾವೈರಸ್‌ ಪೀಡೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾಗೆ ಎಷ್ಟು ಬೇಗ ಈ ಪಿಡುಗಿನಿಂದ ಮುಕ್ತವಾಗುತ್ತೇನೋ ಎಂಬ ಚಿಂತನೆ ಹೆಚ್ಚಾಗಿರುವ ನಡುವೆಯೇ, ಬೀಜಿಂಗ್‌ನ ದೊರೆಗಳಿಗೆ ಇರುಸು ಮುರುಸು ನೀಡಬಲ್ಲ ವಿಚಾರವೊಂದು ಹಾಗೇ ಸದ್ದು ಮಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ಚೀನಾದ ಅಧಿಕೃತ ಅಂಕಿಅಂಶಗಳು ತಿಳಿಸಿರುವಂತೆ 500 ಸಾವುಗಳ ಬದಲಾಗಿ 24,589 ಮಂದಿ ಮೃತಪಟ್ಟಿದ್ದಾರೆ ಎಂದು ಚೀನೀ ಬಹುರಾಷ್ಟ್ರೀಯ ಸಂಸ್ಥೆ ಟೆನ್ಸೆಂಟ್ ಇತ್ತೀಚೆಗೆ ಬಹಿರಂಗಪಡಿಸಿದೆ.

ತಾಯ್ವಾನ್‌ ನ್ಯೂಸ್‌ ಪ್ರಕಾರ, “ಟೆನ್ಸೆಂಟ್‌….. ವೈರಾಣು ಪೀಡಿತರು ಹಾಗೂ ಸಾವುಗಳ ಸಂಖ್ಯೆ ಎಷ್ಟೆಂಬ ಸಂಭವನೀಯ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಇವು ಅಧಿಕೃತ ಬಿಡುಗಡೆಗಿಂತ ಹಲವು ಪಟ್ಟು ಹೆಚ್ಚಿದೆ.”

ತನ್ನ ’Epidemic Situation Tracker,” ಹೆಸರಿನ ಜಾಲಪುಟದಲ್ಲಿ, ಚೀನಾದಲ್ಲಿ ನೋವೆಲ್ ಕರೋನಾ ವೈರಸ್‌ (2019-nCoV) ಪೀಡಿತರ ಸಂಖ್ಯೆಯು 154,023ರಲ್ಲಿ ಇದ್ದು – ಇದು ಫೆಬ್ರವರಿ 1ರಂದು ಚೀನಾ ನೀಡಿದ ಅಧಿಕೃತ ಅಂಕಿಗಳಿಗಿಂತ ಹತ್ತು ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಸಂಕಿನ ಶಂಕಿತರ ಸಂಖ್ಯೆಯು ಅಧಿಕೃತ ಸಂಖ್ಯೆಯ ನಾಲ್ಕು ಪಟ್ಟಿದೆ ಎಂದು ತಿಳಿದುಬಂದಿದೆ.

“ವಾಸಿಯಾದ ಪ್ರಕರಣಗಳು ಕೇವಲ 269ರಷ್ಟಿದ್ದು, ಅಧಿಕೃತ ಸಂಖ್ಯೆಯಾದ 300ಕ್ಕಿಂತ ಸಾಕಷ್ಟು ಕಡಿಮೆ ಇದೆ. ಇದಕ್ಕಿಂತ ದೊಡ್ಡದಾಗಿ, ಸಾವಿನ ಸಂಖ್ಯೆಯನ್ನು 24,589 ಎಂದು ಅಂದಾಜಿಸಲಾಗಿದೆ,” ಎನ್ನಲಾಗಿದೆ.

ನಿಜವಾದ ಅಂಕಿಅಂಶಗಳ ಕುರಿತಂತೆ ನೆಟ್ಟಿಗರಲ್ಲಿ ಸಾಕಷ್ಟು ಗೊಂದಲಗಳು ಮೂಡುತ್ತಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ ರೇಸ್‌ನಲ್ಲಿರುವ ಚೀನಾ ಇಂಥ ವಿಚಾರಗಳ ಕರಾಳ ಸತ್ಯಗಳನ್ನು ಹೊರಹಾಕದೇ ಇರುವ ಸಾಧ್ಯತೆಗಳೂ ಇರಲಿವೆ. “ವುಹಾನ್‌ನಲ್ಲಿರುವ ಬಹಳಷ್ಟು ಮೂಲಗಳು ತಿಳಿಸುವಂತೆ, ಸಾಕಷ್ಟು ಮಂದಿ ಕರೋನಾವೈರಸ್ ಪೀಡಿತರಿಗೆ ಇನ್ನೂ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದು, ಆಸ್ಪತ್ರೆಗಳ ಹೊರಗೆ ಸಾಯುತ್ತಿದ್ದಾರೆ,” ಎಂದು ಟೆನ್ಸೆಂಟ್ ತಿಳಿಸಿದೆ.

ಟೆನ್ಸೆಂಟ್ ವರದಿಯೇ ಸತ್ಯವಾಗಿದ್ದಲ್ಲಿ, ಕರೋನಾವೈರಸ್‌ ಪೀಡಿತರ ಪೈಕಿ ಮೃತಪಟ್ಟವರ ಸಂಖ್ಯೆಯು 16%ನಷ್ಟು ಇರಲಿದೆ. ಈ ಹಿಂದೆ ಬಾಧಿಸಿದ್ದ ಸಾರ್ಸ್ ವೈರಾಣುಗಳಿಗೆ ತುತ್ತಾಗಿದ್ದವರ ಪೈಕಿ 9.6% ನಷ್ಟು ಜನರು ಮೃತಪಟ್ಟಿದ್ದರು.

ಇದೇ ಮಾತನ್ನು ಪುನರುಚ್ಛರಿಸಿರುವ ’ವಾಲ್‌ ಸ್ಟ್ರೀಟ್ ಜರ್ನಲ್‌’ ಚೀನಾದಿಂದ ಹೊರಬರುತ್ತಿರುವ ಕರೋನಾವೈರಸ್ ಅಂಕಿಅಂಶಗಳು ಅನುಮಾನಾಸ್ಪದವಾಗಿವೆ ಎಂದಿದೆ.

ಬೀಜಿಂಗ್‌ನಲ್ಲಿರುವ ಕಾಯ್ಜಿಂಗ್‌ ಎಂಬ ಸ್ವತಂತ್ರ ಮ್ಯಾಗಝಿನ್‌ ಒಂದು ಈ ಕುರಿತು ಅಂಕಣ ಹೊರತಂದಿದ್ದು, ಚೀನಾದ ಕಮ್ಯೂನಿಸ್ಟ್‌ ಪಾರ್ಟಿ ಕರೋನಾವೈರಸ್‌ ಬಗ್ಗೆ ಉದ್ದೇಶಪೂರಿತವಾಗಿ ಅಂಡರ್‌ರಿಪೋರ್ಟಿಂಗ್‌ ಮಾಡುತ್ತಿದೆ ಎಂದು ಆಪಾದನೆ ಮಾಡಿದೆ ಚೀನಾದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ವರದಿಗಳು ಹಾಗೂ ಕಾಮೆಂಟರಿಗಳನ್ನು ಬರೆಯುವ ಕಾಯ್ಜಿಂಗ್, ನಿಜವಾದ ಅಂಕಿಅಂಶಗಳನ್ನು ವುಹಾನ್‌ನಲ್ಲಿರುವ ಅಧಿಕಾರಿಗಳು ಹೇಗೆ ಮುಚ್ಚಿಡಲು ಯತ್ನಿಸಿದ್ದಾರೆ ಎಂದು ವರದಿ ಮಾಡಿದೆ.

ಗುರುವಾರದ ವೇಳೆಗೆ, ಚೀನಾದಲ್ಲಿ ಕರೋನಾವೈರಸ್‌ಗೆ ಬಲಿಯಾದವರ ಅಧಿಕೃತ ಸಂಖ್ಯೆ 563 ಆಗಿದ್ದು, 28,018 ಖಾತರಿಯಾದ ಪ್ರಕರಣಗಳು ’ವರದಿಯಾಗಿವೆ’.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಕಾಂಗ್ರೆಸ್ ಗ್ಯಾರಂಟಿ ನಂಬರ್ 4 : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ..! : Congress guarantee number 4
Top Story

ಕಾಂಗ್ರೆಸ್ ಗ್ಯಾರಂಟಿ ನಂಬರ್ 4 : ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ..! : Congress guarantee number 4

by ಪ್ರತಿಧ್ವನಿ
March 20, 2023
ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ
Top Story

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

by ಪ್ರತಿಧ್ವನಿ
March 23, 2023
ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು
ಕರ್ನಾಟಕ

ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು

by ಮಂಜುನಾಥ ಬಿ
March 21, 2023
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಮುಸ್ಲಿಂ ಯುವಕ : Shimoga District Collector’s Office
Top Story

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಮುಸ್ಲಿಂ ಯುವಕ : Shimoga District Collector’s Office

by ಪ್ರತಿಧ್ವನಿ
March 19, 2023
ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway
Top Story

ಮಳೆ ನೀರಲ್ಲಿ ಮತ್ತೆ ಮುಳುಗಿದ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ..! : Mysore Bangalore Express Highway

by ಪ್ರತಿಧ್ವನಿ
March 18, 2023
Next Post
ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್

ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್, ವಿರೋಧಿಸಿ ವಿಜಯ್‌ಗೆ ಸಂಕಷ್ಟ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist