1983ರ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ ಬರೋಬ್ಬರಿ 37 ವರ್ಷಗಳು ತುಂಬಿವೆ. ಆ ಸಂದರ್ಭದಲ್ಲಿ ಕ್ರಿಕೆಟ್ ಶಿಶು ಎಂದು ಕರೆಯಲ್ಪಡುತ್ತಿದ್ದ ಭಾರತೀಯ ಕ್ರಿಕೆಟ್ ತಂಡವು ಘಟಾನುಘಟಿಗಳನ್ನು ಮಣಿಸಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು.
ಆದರೆ, world cup 1983ಯ ಆ ನೆನಪುಗಳು ಇಂದಿಗೂ ಮಧುರ. ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಕ್ರಿಕೆಟ್ ಜಗತ್ತಿನಲ್ಲಿ ಇತಿಹಾಸ ನಿರ್ಮಿಸಿದ ಆ ದಿನದ ಸಮಗ್ರ ಮಾಹಿತಿ ಇಲ್ಲಿದೆ.