Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ
ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

February 27, 2020
Share on FacebookShare on Twitter

ಕಳೆದ ಡಿಸೆಂಬರ್‌ ಅಂತ್ಯಕ್ಕೆ ಕೇಂದ್ರ ಅರಣ್ಯ ಇಲಾಖೆ ತನ್ನ ದ್ವೈವಾರ್ಷಿಕ ವರದಿ ಬಿಡುಗಡೆ ಮಾಡಿ, ದೇಶದಲ್ಲಿ ಅರಣ್ಯ ವಿಸ್ತಾರಗೊಳ್ಳುತ್ತಿದೆ ಎಂದು ವಿವರಿಸಿ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು. ವರದಿ ಬಂದ ಬೆನ್ನಲ್ಲೇ ಎಲ್ಲಾ ಪತ್ರಿಕೆಗಳು, ಡಿಜಿಟಲ್‌ ಮಾಧ್ಯಮಗಳು ಹೊಗಳಿದ್ದೇ ಹೊಗಳಿದ್ದು, ಆದರೆ ಪರಿಸರವಾದಿಗಳಿಗೆ ಮಾತ್ರ ಈ ಸುಳ್ಳನ್ನ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವರದಿ ವೈಜ್ಞಾನಿಕವಾಗಿಯೂ ಹಸಿ ಸುಳ್ಳು ಎಂಬುದು ವರದಿಯಿಂದಲೇ ಸಾಬೀತಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಕೇಂದ್ರ ಅರಣ್ಯ ಇಲಾಖೆಯ ವಿಸ್ತೃತ ವರದಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಚತ್ತೀಸ್‌ಗಢ, ಕೇರಳ, ಉತ್ತರ ಪ್ರದೇಶ, ಜಾರ್ಖಾಂಡ್‌ ರಾಜ್ಯಗಳಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿ ವಿಸ್ತಾರಗೊಂಡಿದೆ, ಅಂದರೆ ಕಾಡು ವೃದ್ಧಿಯಾಗಿದೆ. ಇದೇ ವರದಿಯ ಪ್ರಕಾರ ಈ ಎಲ್ಲಾ ರಾಜ್ಯಗಳಲ್ಲಿ ಇಂಗಾಲದ ದಾಸ್ತಾನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೀವರಾಶಿ ಸಮೃದ್ಧವಾಗಿರಲು ಇಂಗಾಲದ ಪ್ರಮಾಣ ಹೆಚ್ಚಿರಲೇ ಬೇಕು, ಇಂಗಾಲದ ಚಕ್ರ ಇಡೀ ಜಗತ್ತನ್ನ ಬಂಧದಲ್ಲಿಟ್ಟಿದೆ. ಇಂಗಾಲದ ಚಕ್ರದಲ್ಲಿ ಭೂಮಿಯ ಮೇಲಿನ ಅರಣ್ಯ ಹಾಗೂ ಸಸ್ಯವರ್ಗ, ಸಮುದ್ರದ ಮೇಲಿನ ತೇಲುವ ಸಸ್ಯವರ್ಗವೆಲ್ಲಾ ಸೇರಿಕೊಂಡಿದೆ. ದ್ಯುತಿ ಸಂಶ್ಲೇಷಣ ಕ್ರೀಯೆ ಮುಖಾಂತರ ಸಸ್ಯಗಳು ಅಹಾರ ತಯಾರಿಸುತ್ತವೆ. ಜೈವಿಕ ವಲಯದ ಪರಾವಲಂಬಿಗಳಲ್ಲಿ, ಕೊಳೆತ ಪದಾರ್ಥಗಳಲ್ಲಿಯೂ ಸಹ ಇಂಗಾಲದ ಪ್ರಮಾಣ ಇರುತ್ತದೆ, ಇಂತಹ ಅದ್ಭುತ ಬಂಧಕ್ಕೆ ಸಾಕಷ್ಟು ಹಾನಿಯಾಗಿದೆ. ಇಂಗಾಲದ ದಾಸ್ತಾನು ಗಣನೀಯವಾಗಿ ಕಡಿಮೆಯಾಗುತ್ತಿದೆ, ಇದರ ಅರ್ಥ ಕಾಡು ವಿಪರೀತ ನಾಶವಾಗಿರಲೇ ಬೇಕಲ್ಲ!

ಅರಣ್ಯ ಇಲಾಖೆ ನೀಡಿದ ಮಾಹಿತಿಯಲ್ಲಿ ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ ಎರಡು ವರ್ಷದಲ್ಲಿ 1,025 ಸ್ಕ್ವೇರ್‌ ಕಿಲೋಮೀಟರ್‌ ಅರಣ್ಯ ವೃದ್ಧಿಯಾಗಿದೆ, ಆದರೆ ಪ್ರತಿಶತ ಇಪ್ಪತ್ತರಷ್ಟು ಇಂಗಾಲದ ಪ್ರಮಾಣ ಕಡಿಮೆಯಾಗಿದೆ. ಅದೇ ಅರುಣಾಚಲಪ್ರದೇಶದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿದ್ದರೂ ಕೂಡ 276 ಸ್ಕ್ವೇರ್‌ ಕಿಲೋಮೀಟರ್‌ ಅರಣ್ಯ ನಾಶವಾಗಿದೆ. ಇಲಾಖೆ ನೀಡಿದ ವರದಿಯಲ್ಲೇ ಲೋಪವಿದ್ದರೂ ಉತ್ತರ ಸಿಕ್ಕಿಲ್ಲ. ಮುಂಬೈ ಮೂಲದ ಪರಿಸರ ಹೋರಾಟಗಾರರ ತಂಡ ವನಶಕ್ತಿ ಕೇಂದ್ರ ಸರ್ಕಾರದ ಅರಣ್ಯ ವೃದ್ಧಿ ವರದಿಯನ್ನ ಅವೈಜ್ಞಾನಿಕ ಎಂದು ಟೀಕಿಸಿದೆ. ಈ ವರದಿಯಲ್ಲೇ ಲೋಪವಿದೆ, ಉಪಗ್ರಹಗಳ ಮೂಲಕ ಅರಣ್ಯಗಳ ವಿಸ್ತಾರ ಅಳೆಯುತ್ತಾರೆ, ಕೆಲವೊಮ್ಮೆ ತೋಟಗಳೂ ಸಹ ಅರಣ್ಯ ಎಂದೇ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವನಶಕ್ತಿ ಸಂಘಟನೆಯ ಕಾರ್ಯಕರ್ತರು.

ಅರಣ್ಯ ಸಚಿವ ಪ್ರಕಾಶ್‌ ಜಾವ್ಡೇಕರ್‌ ನೀಡಿರುವ ವರದಿಯ ಏಳನೇ ಚಾಪ್ಟರ್‌ ಈ ಇಂಗಾಲದ ಮಹತ್ವ ಹಾಗೂ ಏರಿಳಿತಗಳ ಬಗ್ಗೆ ಬೆಳಕು ಚೆಲ್ಲುತ್ತೆ, ವೈಜ್ಞಾನಿಕವಾಗಿಯೇ ಈ ವರದಿ ಸುಳ್ಳು ಮಾಹಿತಿ ನೀಡುತ್ತಿರುವುದರ ಬಗ್ಗೆ ಪರಿಸರ ಪ್ರೇಮಿಗಳೂ ಗರಂ ಆಗಿದ್ದಾರೆ. ಶಿವಮೊಗ್ಗ ಮೂಲದ ಪರಿಸರವಾದಿ ಅಜಯ್‌ ಕುಮಾರ್‌ ಶರ್ಮಾ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅರಣ್ಯ ಹೆಚ್ಚಾಗಿದೆ ಎಂದಾದರೆ ಇಂಗಾಲದ ದಾಸ್ತಾನೂ ಹೆಚ್ಚಾಗಿರಬೇಕು. ಆದರೆ, ಇದು ವಿರುದ್ಧವಾಗಿ ದಾಖಲಾಗಿದೆ. ನಿಜವಾಗಿಯೂ ವರದಿ ನೀಡುವವರು ಮೂಲ ನಕ್ಷೆ ಹಿಡಿದುಕೊಂಡು ಓಡಾಡಬೇಕು. ಉದಾಹರಣೆ ಶಿವಮೊಗ್ಗದ ಶೆಟ್ಟಿಹಳ್ಳಿ, ನಗರಕ್ಕೆ ಹೊಂದಿಕೊಂಡಂತಿದೆ, ಕಳೆದ ದಶಕದಲ್ಲಿ ಸಾಕಷ್ಟು ಮರಗಳನ್ನ ಕಳೆದುಕೊಂಡಿದೆ, ಈ ತಂಡ ಗೂಗಲ್‌ ಮ್ಯಾಪ್‌, ಇಸ್ರೋದ ಭುವನ್‌ ಉಪಗ್ರಹ ಆಧಾರವಾಗಿಟ್ಟುಕೊಂಡೂ ಸಹ ಅಳೆಯುತ್ತಾರೆ. ಸಾಮಾನ್ಯವಾಗಿ ಕಾಡಿನ ಮಧ್ಯೆ ಯಾರೂ ಹೋಗಿ ಒತ್ತುವರಿ ಮಾಡಿ ಬರುವುದಿಲ್ಲ. ತೋಟದ ಪಕ್ಕದಲ್ಲಿರುವ ಮರವನ್ನೇ ಕಡಿದು ಉರುಳಿಸಿಕೊಂಡರೂ ಇವರ ಮಾಪನಗಳಲ್ಲಿ ದಾಖಲಾಗುವುದಿಲ್ಲ. ಉಪಗ್ರಹಗಳ ದತ್ತಾಂಶದಿಂದ ತಪ್ಪು ವರದಿಯೇ ಹೆಚ್ಚು, ಚಿಕ್ಕಮಗಳೂರಿನಲ್ಲಿರುವ ಕಾಫಿ ತೋಟಗಳು, ಶಿವಮೊಗ್ಗದ ಅಡಕೆ ತೋಟಗಳೂ ಸಹ ಕಾಡಿನಂತೆ ಕಂಡರೆ ಆಶ್ಚರ್ಯವೇನಿಲ್ಲ ಎನ್ನುತ್ತಾರೆ.

ಕಾರ್ಬನ್‌ ಸ್ಟಾಕ್‌ ಅಥವಾ ಇಂಗಾಲದ ದಾಸ್ತಾನು ವೈಜ್ಞಾನಿಕವಾಗಿಯೇ ದಾಖಲು ಮಾಡಿರುತ್ತಾರೆ, ಆದರೆ ವನವೃದ್ಧಿ ಹಾಗೂ ನಾಶವನ್ನ ನಕ್ಷೆ ಹಿಡಿದುಕೊಂಡು ಸ್ಥಳಕ್ಕೆ ಹೋಗಿ ದಾಖಲು ಮಾಡುವುದಿಲ್ಲ, ಎಲ್ಲೋ ಒತ್ತುವರಿ ತೆರವು ಮಾಡಿದಾಕ್ಷಣ ರಾತ್ರೋರಾತ್ರಿ ಕಾಡು ಬೆಳೆಯುವುದಿಲ್ಲ, ವರ್ಷದಿಂದ ವರ್ಷಕ್ಕೆ ಅರಣ್ಯ ಭೂಮಿ ನಾನಾ ಕಾರಣಗಳಿಂದ ನಾಶವಾಗುತ್ತಲೇ ಇದೆ, ಎರಡು ವರ್ಷದಲ್ಲಿ ಅರಣ್ಯ ಪ್ರದೇಶ ವಿಸ್ತಾರವಾಗಿದೆ ಎಂದು ವರದಿ ನೀಡುವ ಮೂಲಕ ಕೇಂದ್ರ ಸರ್ಕಾರ ಮಂಕುಬೂದಿ ಎರಚಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

KALBURGI | PART 12 | ಬಿಸಿಲು ನಾಡಿನಲ್ಲಿ ರಂಗೇರಿದ ಚುನಾವಣಾಕಣ..ಯಾರಾಗ್ತಾರೆ ಭೀಮಾ ತೀರದ ಬಲಿಷ್ಠನಾಯಕ..?
ಇದೀಗ

KALBURGI | PART 12 | ಬಿಸಿಲು ನಾಡಿನಲ್ಲಿ ರಂಗೇರಿದ ಚುನಾವಣಾಕಣ..ಯಾರಾಗ್ತಾರೆ ಭೀಮಾ ತೀರದ ಬಲಿಷ್ಠನಾಯಕ..?

by ಪ್ರತಿಧ್ವನಿ
March 31, 2023
ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!
Top Story

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

by ಪ್ರತಿಧ್ವನಿ
March 26, 2023
ಶ್ರೀಸಾಮಾನ್ಯನ ಸಮಸ್ಯೆಗಳೂ ಮಾರುಕಟ್ಟೆ ಆರ್ಥಿಕತೆಯೂ..ನಿತ್ಯ  ಬದುಕು ದುಸ್ತರವಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಏಕೆ ಮೌನ ಆವರಿಸಿದೆ ?
Top Story

ಶ್ರೀಸಾಮಾನ್ಯನ ಸಮಸ್ಯೆಗಳೂ ಮಾರುಕಟ್ಟೆ ಆರ್ಥಿಕತೆಯೂ..ನಿತ್ಯ  ಬದುಕು ದುಸ್ತರವಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಏಕೆ ಮೌನ ಆವರಿಸಿದೆ ?

by ನಾ ದಿವಾಕರ
April 1, 2023
ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ..!
Top Story

ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ..!

by ಪ್ರತಿಧ್ವನಿ
March 27, 2023
ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!
ಸಿನಿಮಾ

ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!

by ಪ್ರತಿಧ್ವನಿ
March 31, 2023
Next Post
ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

ವೋಟ್‌ ಹಾಕಲು ಕನ್ನಡಿಗರು.. ಜೈಕಾರಕ್ಕೆ ಮಹಾರಾಷ್ಟ್ರ.. ಇದು ರಾಜಕಾರಣಿಗಳ ಲೆಕ್ಕಾಚಾರ..!

ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರು ಮತ್ತು ಕೆಲವು ಪ್ರಕರಣಗಳು

ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರು ಮತ್ತು ಕೆಲವು ಪ್ರಕರಣಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist