Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಧಿಕಾರವಿಲ್ಲದಿದ್ದರೂ ಪೌರತ್ವ ಸಾಬೀತು ಪಡಿಸಲು ನೋಟಿಸ್‌ ನೀಡಿದ UIDAI 

ಅಧಿಕಾರವಿಲ್ಲದಿದ್ದರೂ ಪೌರತ್ವ ಸಾಬೀತು ಪಡಿಸಲು ನೋಟಿಸ್‌ ನೀಡಿದ UIDAI
ಅಧಿಕಾರವಿಲ್ಲದಿದ್ದರೂ ಪೌರತ್ವ ಸಾಬೀತು ಪಡಿಸಲು ನೋಟಿಸ್‌ ನೀಡಿದ UIDAI 

February 23, 2020
Share on FacebookShare on Twitter

ಭಾರತದ ವಿಶಿಷ್ಟ ಗುರುತು ಚೀಟಿ ನೀಡಿಕೆ ಪ್ರಾಧಿಕಾರ (UIDAI)ಯು ಹೈದರಾಬಾದ್‌ನ ಮೂವರಿಗೆ ತಮ್ಮ ಪೌರತ್ವವನ್ನು ಸಾಬೀತು ಪಡಿಸುವಂತೆ ನೋಟಿಸ್‌ ಜಾರಿ ಮಾಡಿದೆ. ಹೈದರಾಬಾದ್‌ನ ಮೂವರು ಮುಸ್ಲಿಂ ವ್ಯಕ್ತಿಗಳಿಗೆ ನೋಟಿಸ್‌ ನೀಡಿ ತಾವು ಮೋಸದಿಂದ ಆಧಾರ್‌ ಕಾರ್ಡ್‌ನ್ನು ಪಡೆದುಕೊಂಡಿದ್ದೀರ. ಆ ಕಾರಣಕ್ಕಾಗಿ ತಮ್ಮ ಪೌರತ್ವವನ್ನು ಸಾಬೀತು ಪಡಿಸಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಆ ಮೂವರು ವ್ಯಕ್ತಿಗಳನ್ನು ಸ್ಥಳಿಯ UIDAI ಕಚೇರಿಗೆ ಬರುವಂತೆ ಸಮನ್ಸ್‌ ಜಾರಿ ಮಾಡಿ, ಮೂವರು ಸುಳ್ಳು ಮಾಹಿತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಆಧಾರ್‌ ಕಾರ್ಡ್‌ನ್ನು ಪಡೆದುಕೊಂಡಿದ್ದೀರೆಂದು ದೂರು ದಾಖಲಾಗಿರುವುದರಿಂದ ಈ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ವಿಚಾರಣೆಗೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರುಪಡಿಸಬೇಕೆಂದು ಹೇಳಿದೆ. ಒಂದು ವೇಳೆ ಮೂಲ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅಥವಾ ಆಧಾರ್‌ ವಿಚಾರಣಾಧಿಕಾರಿಯೆದುರು ಹಾಜರಾಗದಿದ್ದಲ್ಲಿ ಅವರ ಆಧಾರ್‌ ಸಂಖ್ಯೆಗಳನ್ನು deactivate ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ, ಪೌರತ್ವವನ್ನು ಸಾಬೀತು ಪಡಿಸಲು ಯಾವ ದಾಖಲೆಗಳನ್ನು ನೀಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿಲ್ಲ.

ಮೊದಲಿಗೆ ಫ್ರಬ್ರುವರಿ 20ರಂದು ವಿಚಾರಣೆಗೆ ವಿಚಾರಣಾಧಿಕಾರಿ ಅಮಿತಾ ಬಿಂದ್ರೋ ಎದುರು ಹಾಜರಾಗಲು ತಿಳಿಸಿದ್ದು, ನಂತರ ದಾಖಲೆಗಳನ್ನು ಸಂಗ್ರಹಿಸಲು ಕಷ್ಟವಾಗಬಹುದೆಂಬ ಕಾರಣಕ್ಕೆ ವಿಚಾರಣೆಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ.

UIDAIಗೆ ಪೌರತ್ವವನ್ನು ಪ್ರಶ್ನಿಸುವ ಅಧಿಕಾರವಿದೆಯೇ?

2016ರ ಆಧಾರ್‌ ಕಾಯ್ದೆಯ ಪ್ರಕಾರ ಆಧಾರ್‌ ಕಾರ್ಡ್‌ ನೀಡಲು ಬೇಕಾಗಿರುವುದು ವಾಸ್ತವ್ಯ ಧೃಢೀಕರಣವೇ ಹೊರತು ಪೌರತ್ವವಲ್ಲ. ವಿದೇಶಿಗರನ್ನೂ ಸೇರಿಸಿ, ಭಾರತದಲ್ಲಿ ವಾಸವಿರುವ ಎಲ್ಲರೂ ಆಧಾರ್‌ ಕಾರ್ಡ್‌ ಪಡೆಯಲು ಅರ್ಹರು. ಆಧಾರ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಅವರು ಭಾರತದಲ್ಲಿ ವಾಸವಿರಬೇಕಾಗುತ್ತದೆ. ಈ ನಿಮಯಗಳು ಆಧಾರ್‌ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿವಾಗಿವೆ.

ಇನ್ನು ಒಂದು ವೇಳೆ ಯಾರಾದರೂ ಮೋಸದಿಂದ ಸುಳ್ಳು ಹೇಳಿ ಆಧಾರ್‌ ಕಾರ್ಡ್‌ನ್ನು ಪಡೆದುಕೊಂಡದ್ದು UIDAIಗೆ ತಿಳಿದು ಬಂದಲ್ಲಿ ಅಂಥಹವರ ಆಧಾರ್‌ ಸಂಖ್ಯೆಯನ್ನು ರದ್ದುಗೊಳಿಸಿ ವಾಸ್ತವ್ಯದ ಮೂಲ ದಾಖಲೆಗಳನ್ನು ಸಲ್ಲಿಸಲು ಹೇಳಬೇಕೇ ವಿನಃ, ಪೌರತ್ವದ ದಾಖಲೆಗಳನ್ನು ಕೇಳುವ ಹಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವಂತಹ UIDAI ನೋಟಿಸ್‌ ನೀಡಿರುವುದು UIDAIಯ ಗುಣಮಟ್ಟ ಉತ್ತಮ ಪಡಿಸುವ ಕಾರ್ಯ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೂ ಪೌರತ್ವವನ್ನು ಸಾಬೀತು ಪಡಿಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೇಪೆ ಹಚ್ಚುವ ಕಾರ್ಯ ಮಾಡಿದೆ. ಇನ್ನು ಆಧಾರ್‌ ಕಾರ್ಡ್‌ ಪೌರತ್ವವನ್ನು ಧೃಢೀಕರಿಸುವ ಆಧಾರವಲ್ಲ ಎಂದು UIDAI ಸ್ಪಷ್ಟಪಡಿಸಿದೆ.

ಆದರೂ, ಸಿಎಎ ಹಾಗೂ ಎನ್‌ಆರ್‌ಸಿಯ ವಿರುದ್ದ ದೇಶದಾದ್ಯಂತ ಕಾವೇರಿದ ಸಂದರ್ಭದಲ್ಲಿ UIDAI ನೀಡಿರುವ ನೋಟಿಸ್‌ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಅಧಿಕಾರದ ವ್ಯಾಪ್ತಿಗೆ ಬರದಿದ್ದರೂ, ಪೌರತ್ವವನ್ನು ಸಾಬೀತು ಪಡಿಸಲು ನೋಟಿಸ್‌ ನೀಡಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.

ಕೃಪೆ: ಸ್ಕ್ರಾಲ್‌.ಇನ್‌

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದವನಿಂದ ಪುತ್ರನ ಬರ್ಬರ ಹತ್ಯೆ
Top Story

ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದವನಿಂದ ಪುತ್ರನ ಬರ್ಬರ ಹತ್ಯೆ

by ಮಂಜುನಾಥ ಬಿ
March 28, 2023
“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ
ಸಿನಿಮಾ

“ಫುಲ್ ಮೀಲ್ಸ್” ಚಿತ್ರದ ಪೋಸ್ಟರ್ ಬಿಡುಗಡೆ

by ಪ್ರತಿಧ್ವನಿ
March 27, 2023
ಬಂಗಾರಪ್ಪ ಅವರ ಮಗನಾಗಿʼಬಗರ್ ಹುಕುಂʼ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕು..!
Top Story

ಬಂಗಾರಪ್ಪ ಅವರ ಮಗನಾಗಿʼಬಗರ್ ಹುಕುಂʼ ಸಾಗುವಳಿದಾರರ ಹಿತ ಕಾಯುವುದು ನನ್ನ ಹಕ್ಕು..!

by ಪ್ರತಿಧ್ವನಿ
March 27, 2023
ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನ ಲೋಕಾಯುಕ್ತ ಕಸ್ಟಡಿಗೆ
ಇದೀಗ

ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನ ಲೋಕಾಯುಕ್ತ ಕಸ್ಟಡಿಗೆ

by ಮಂಜುನಾಥ ಬಿ
March 28, 2023
ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!
Top Story

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

by ಪ್ರತಿಧ್ವನಿ
March 26, 2023
Next Post
ಸರ್ಕಾರ ಉಳಿಸುವ ಧಾವಂತದಲ್ಲಿ ನೆರೆ ಸಂತ್ರಸ್ತರನ್ನು ಮರೆತ ಸರ್ಕಾರ

ಸರ್ಕಾರ ಉಳಿಸುವ ಧಾವಂತದಲ್ಲಿ ನೆರೆ ಸಂತ್ರಸ್ತರನ್ನು ಮರೆತ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯೇ?

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯೇ?

ಏನಿಲ್ಲ

ಏನಿಲ್ಲ, ಮೋದಿ-ಟ್ರಂಪ್-ಅಂಬಾನಿ ನಡುವೆ ಏನೇನಿಲ್ಲ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist