ಹಲವು ವರ್ಷಗಳ ಕಾಯುವಿಕೆಯ ಬಳಿಕ ಕಡೆಗೂ ರಫೇಲ್ ಯುದ್ಧ ವಿಮಾನ ಭಾರತದ ನೆಲವನ್ನು ಸ್ಪರ್ಶಿಸಿದೆ. 2007 ರಲ್ಲಿಯೇ ಯುಪಿಎ ಅಧಿಕಾರಾವಧಿಯಲ್ಲಿ ವಾಯುಸೇನೆಗಾಗಿ 126 ಹೊಸ ಯುಧ್ಧವಿಮಾನಗಳ ಖರೀದಿಗೆ ಅನುಮತಿ ನೀಡಿತ್ತು. ಬಳಿಕ ಬಿಡ್ಡಿಂಗ್, ಒಪ್ಪಂದ ಪ್ರಕ್ರಿಯೆಯಿಂದಾಗಿ ವಿಮಾನಗಳು ತಲುಪುವುದು ದೀರ್ಘಕಾಲ ಮುಂದುವರೆಯಿತು.
ರಪೇಲ್ ಯುದ್ಧ ವಿಮಾನಗಳ ಮೊದಲ ಬ್ಯಾಚ್ನಲ್ಲಿ ನಾಲ್ಕು ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲಾ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದೆ. ರಫೇಲ್ ಯುದ್ಧ ವಿಮಾನಗಳ ಆಗಮನವನ್ನು ಅಧಿಕೃತವಾಗಿ ಘೋಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ವಿಮಾನಗಳು ಅಂಬಾಲಾದಲ್ಲಿ ಸುರಕ್ಷಿತವಾಗಿ ಇಳಿದಿವೆ. ಭಾರತದಲ್ಲಿ ರಫೇಲ್ ಯುದ್ಧ ವಿಮಾನದ ಆಗಮನ ನಮ್ಮ ಮಿಲಿಟರಿ ಇತಿಹಾಸದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ” ಎಂದು ಹೇಳಿದ್ದಾರೆ.
ಅಲ್ಲದೆ, ರಫೇಲ್ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿರುವ ವೀಡಿಯೋ ದೃಶ್ಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
The Touchdown of Rafale at Ambala. pic.twitter.com/e3OFQa1bZY
— Rajnath Singh (@rajnathsingh) July 29, 2020






