Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ʼಕ್ವಾರೆಂಟೈನ್‌ʼಅನ್ನೋ ವಿಶಿಷ್ಟ ಕಲ್ಪನೆಯ ಮೂಲ ದೇಶವೇ ಪ್ರಾಚೀನ ಭಾರತ..!!

ʼಕ್ವಾರೆಂಟೈನ್‌ʼಅನ್ನೋ ವಿಶಿಷ್ಟ ಕಲ್ಪನೆಯ ಮೂಲ ದೇಶವೇ ಪ್ರಾಚೀನ ಭಾರತ..!!
ʼಕ್ವಾರೆಂಟೈನ್‌ʼಅನ್ನೋ ವಿಶಿಷ್ಟ ಕಲ್ಪನೆಯ ಮೂಲ ದೇಶವೇ ಪ್ರಾಚೀನ ಭಾರತ..!!

March 22, 2020
Share on FacebookShare on Twitter

ಜಗತ್ತಿನಾದ್ಯಂತ ಕೋವಿಡ್‌-19 ತೀವ್ರತೆ ಅತಿಯಾಗುತ್ತಿದ್ದಂತೆ ಕರೋನಾ ವೈರಸ್‌ ಶಬ್ದದಷ್ಟೇ ʼಕ್ವಾರೆಂಟೈನ್‌ ಸೆಂಟರ್‌ʼ (ದಿಗ್ಬಂಧನ ಕೇಂದ್ರ) ಹೆಸರು ಕೂಡಾ ಅಷ್ಟೇ ಭಯಾನಕವಾಗತೊಡಗಿದೆ. ಅದರಲ್ಲೂ ಮುಂದುವರೆಯುತ್ತಿರುವ ಭಾರತ ದೇಶದಲ್ಲಂತೂ ʼಕ್ವಾರೆಂಟೈನ್‌ ಸೆಂಟರ್‌ʼ ಅನ್ನೋದು ಬಹುದೊಡ್ಡ ಸವಾಲಾಗಿದೆ. ಕಾರಣ, ʼಕ್ವಾರಂಟೈನ್‌ ಸೆಂಟರ್‌ʼ ಗೆ ಬೇಕಾದ ಪೂರ್ವ ಸಿದ್ಧತೆಗಳು ಯಾವುದೂ ನಮ್ಮ ದೇಶದಲ್ಲಿಲ್ಲ. ಅಷ್ಟಕ್ಕೂ, ಈ ʼಕ್ವಾರಂಟೈನ್‌ ಸೆಂಟರ್‌ʼ ಅಥವಾ ಪ್ರತ್ಯೇಕಿಸುವಿಕೆಯ ಈ ಯೋಚನೆ ಇಂದು ನಿನ್ನೆಯದ್ದಲ್ಲ, ಬದಲಾಗಿ ಇದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಪ್ರಾಚೀನ ಕಾಲದಲ್ಲಿಯೇ ಈ ರೀತಿ ಪ್ರತ್ಯೇಕಿಸುವ ವಿಧಾನವಿತ್ತಾದರೂ ಇತ್ತೀಚಿನ ಶತಮಾನಗಳಲ್ಲಿ ಅದನ್ನು ʼಕ್ವಾರೆಂಟೈನ್‌ʼ ಅನ್ನೋ ಹೆಸರಿನಿಂದ ಕರೆಯಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

ʼಕ್ವಾರೆಂಟೈನ್‌ʼ ಎಂದರೆ 40 ದಿನ :

14 ನೇ ಶತಮಾನದಲ್ಲಿ ಜಗತ್ತು ಕಂಡುಕೇಳರಿಯದ ಮಹಾಮಾರಿ ಪ್ಲೇಗ್‌ ರೋಗಕ್ಕೆ ತುತ್ತಾಗಿತ್ತು. ಅದಾಗ ವೈದ್ಯಕೀಯ ಸೌಲಭ್ಯಗಳು, ಸಾರಿಗೆ ವ್ಯವಸ್ಥೆಗಳು ಅಷ್ಟಾಗಿ ಮುಂದುವರೆದಿರಲಿಲ್ಲ. ವ್ಯಾಪಾರ-ಸಂಚಾರವೇನಿದ್ದರೂ ಹಡಗುಗಳ ಮೂಲಕವೇ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಯುರೋಪ್‌ನಾದ್ಯಂತ ಹಬ್ಬಿದ್ದ ಪ್ಲೇಗ್‌ ರೋಗ ತಡಗಟ್ಟಲು ಇಟೆಲಿಯ ವೆನಿಸ್‌ ನಗರದಲ್ಲಿ ಮಾಡಲಾದ ಒಂದು ತಂತ್ರಗಾರಿಕೆಯೇ ಈ ʼಕ್ವಾರೆಂಟೈನ್‌ʼ. ಪ್ಲೇಗ್‌ ಬಾಧಿತ ಪ್ರದೇಶಗಳಿಂದ ವೆನಿಸ್‌ ಬಂದರಿಗೆ ಆಗಮಿಸಿದ್ದ ಹಡಗುಗಳನ್ನು ಬಂದರಿನಲ್ಲೇ ತಡೆಹಿಡಿಯಲಾಗಿತ್ತು. 40 ದಿನಗಳ ಕಾಲ ಅವರನ್ನು ಹಡಗಿನಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿತ್ತು. ಈ ನಲ್ವತ್ತು ದಿನಗಳ ಪ್ರತ್ಯೇಕ ಇರಿಸುವಿಕೆಗೆ ʼಕ್ವಾರೆಂಟೈನ್‌ʼ ಎಂದು ಹೆಸರಿಡಲಾಯಿತು. ಅಷ್ಟಕ್ಕೂ ಇಟೆಲಿ ಭಾಷೆಯಲ್ಲಿ ʼಕ್ವಾರೆಂಟಾ ಜಿಯೋನಿʼ ಅನ್ನೋ ಶಬ್ದವೇ ಕ್ವಾರೆಂಟೈನ್‌ ಎಂದು ಬದಲಾಯಿತು. ಕ್ವಾರೆಂಟೈನ್‌ ಅಂದ್ರೆ ೪೦ ದಿನಗಳು ಎಂದರ್ಥ. ಈ ರೀತಿ ೪೦ ದಿನಗಳ ಕಾಲ ಅವರನ್ನು ಪ್ರತ್ಯೇಕಿಸಿದ್ದರಿಂದ ಪ್ಲೇಗ್‌ ರೋಗ ತಡೆಗಟ್ಟೋದರಲ್ಲಿ ವೆನಿಸ್‌ ನಗರ ಯಶಸ್ಸನ್ನೂ ಕಂಡಿತ್ತು. ಪ್ಲೇಗ್‌ ಬಾಧಿತ ರೋಗಿ 37 ದಿನಗಳಲ್ಲಿ ಸಾಮಾನ್ಯವಾಗಿ ಸಾವನ್ನಪ್ಪುತ್ತಿದ್ದ ಅನ್ನೋ ಕಾರಣಕ್ಕಾಗಿ ಹಡಗು ಪ್ರಯಾಣಿಕರನ್ನು ಈ ರೀತಿ 40 ದಿನಗಳ ಕಾಲ ಪ್ರತ್ಯೇಕಿಸಲಾಗಿತ್ತು.

ʼಕ್ವಾರೆಂಟೈನ್‌ʼ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೇ ಅಮೆರಿಕಾ :

ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಎರಡು ಶತಮಾನಗಳ ಹಿಂದೆಯೇ ಗಂಭೀರವಾಗಿ ಚಿಂತನೆ ನಡೆಸಿತ್ತು. ಇತರೆ ಪ್ರದೇಶಗಳಿಂದ ದೇಶಕ್ಕೆ ಬರಬಹುದಾದ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ʼಕ್ವಾರೆಂಟೈನ್‌ʼ ಬಗ್ಗೆ ಅಮೆರಿಕಾ 1878 ರಲ್ಲಿ ಕ್ವಾರಂಟೈನ್‌ ಸಂಬಂಧಿತ ಶಾಸನವನ್ನು ಅಂಗೀಕರಿಸಿತ್ತು. ಆದರೆ ಅದಾಗಲೇ ಅಮೆರಿಕಾದ ಹಲವೆಡೆ ಪ್ಲೇಗ್‌ ನಂತಹ ಮಾರಕ ರೋಗ ತಡೆಗಟ್ಟುವ ದೃಷ್ಟಿಯಿಂದ ಸ್ಥಳೀಯ ಮಟ್ಟದಲ್ಲಿ ಇಂತಹ ಕ್ವಾರೆಂಟೈನ್‌ ಕ್ರಮವನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಆದರೆ ಯಾವಾಗ ಅದು ಶಾಸನ ರೂಪದಲ್ಲಿ ಅಂಗೀಕಾರವಾಯಿತೋ ಆನಂತರ ಅದಕ್ಕೆ ಹೆಚ್ಚಿನ ಬಲ ಬಂತು. ಪ್ರಮುಖವಾಗಿ ಆ ಸಂದರ್ಭ ಹಡಗುಗಳ ಮೇಲೆ ಹೆಚ್ಚಿನ ನಿಗಾವಿಟ್ಟು ಅವುಗಳನ್ನ ʼಕ್ವಾರೆಂಟೈನ್‌ʼ ಗೆ ಒಳಪಡಿಸಲಾಗುತ್ತಿತ್ತು.

ಆದರೆ 19 ನೇ ಶತಮಾನದಲ್ಲಿ ಮತ್ತೆ ಅಮೆರಿಕಾ ಮೇಲೆ ದಾಳಿ ನಡೆಸಿದ್ದ ಸಾಂಕ್ರಾಮಿಕ ಹಳದಿ ರೋಗ ಈ ಕ್ವಾರೆಂಟೈನ್‌ ಶಾಸನದ ಬಗ್ಗೆ ಮತ್ತೊಮ್ಮೆ ಮರು ವ್ಯಾಖ್ಯಾನಕ್ಕೆ ಪ್ರೇರೇಪಿಸಿತು. ಅಂತೆಯೇ 1892 ರಲ್ಲಿ ಮತ್ತೊಮ್ಮೆ ʼಕ್ವಾರೆಂಟೈನ್‌ʼ ಶಾಸನಕ್ಕೆ ತಿದ್ದುಪಡಿ ತಂದಿತ್ತು. ಪರಿಣಾಮ ಸ್ಥಳೀಯ ಹಾಗೂ ರಾಜ್ಯ ಮಟ್ಟದಲ್ಲಿದ್ದ ‌ʼಕ್ವಾರೆಂಟೈನ್ʼ ಅನ್ನೋ ಕಲ್ಪನೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಾಯಿತು.

1967 ರಲ್ಲಿ ಕ್ವಾರೆಂಟೈನ್‌ ಜವಾಬ್ದಾರಿಯನ್ನು ಅಮೆರಿಕಾ ʼಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್ ಆಂಡ್‌ ಪ್ರಿವೆನ್ಶನ್‌ʼ ಅನ್ನೋ ಏಜೆನ್ಸಿಯನ್ನು ಹುಟ್ಟುಹಾಕಿ ಅದಕ್ಕೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಟ್ಟಿತು. ಬಳಿಕ ನೂರಾರು ಕ್ವಾರೆಂಟೈನ್‌ ಕೇಂದ್ರಗಳು, ಏರ್‌ಪೋರ್ಟ್‌ , ಗಡಿ ಪ್ರದೇಶಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ಇರಿಸಿ ಭಯಾನಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಸಾಕಷ್ಟು ಯಶಸ್ಸು ಕಂಡಿತ್ತು. ಆ ನಂತರ ಪ್ರಪಂಚದ ಹಲವು ರಾಷ್ಟ್ರಗಳು ಈ ‘ಕ್ವಾರೆಂಟೈನ್‌’ ಅನ್ನೋ ಪ್ರತ್ಯೇಕವಾಸದ ಪರಿಕಲ್ಪನೆಯನ್ನು ಜಾರಿಗೆ ತಂದವು.

ಇತ್ತೀಚೆಗೆ ಚೀನಾದ ವುಹಾನ್‌ ನಿಂದ ಆರಂಭವಾದ ಕರೋನಾ ವೈರಸ್‌ ದಾಳಿಯಿಂದಾಗಿ ನೂರಾರು ರಾಷ್ಟ್ರಗಳು ಮತ್ತೆ ಅದೇ ʼಕ್ವಾರೆಂಟೈನ್‌ʼ ಅನ್ನು ಅಪ್ಪಿಕೊಂಡಿದ್ದಾವೆ. ಆದರೆ ಕೋವಿಡ್-‌19 ನಲ್ಲಿ ಮೊದಲನೆಯದಾಗಿ ರೋಗ ಲಕ್ಷಣ ಕಂಡು ಬಂದವನನ್ನು ಹದಿನಾಲ್ಕು ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಇರಿಸಲಾಗುತ್ತದೆ. ಆ ಸಂದರ್ಭದಲ್ಲಿ ಮನೆಯವರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆ ತಿಳಿಸಿಕೊಡುತ್ತದೆ. ಕರೋನಾ ವೈರಸ್‌ ಸೋಂಕು ಬಾಧಿಸಿರುವ ಲಕ್ಷಣ ಕಾಣದಿದ್ದರೆ, ಆತ/ಆಕೆಯ ಮೇಲೆ ಕರೋನಾ ದಾಳಿ ನಡೆಸಿರುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗುತ್ತದೆ. ಅಲ್ಲದೇ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸುವ ತನಕ ಕ್ವಾರಂಟೈನ್‌ ಮುಂದುವರೆಸಲಾಗುತ್ತದೆ.

ಚೀನಾದ ಒಂದು ಅಧ್ಯಯನ ಪ್ರಕಾರ ಕರೋನಾ ವೈರಸ್‌ ಬಾಧಿತ ವ್ಯಕ್ತಿಯಲ್ಲಿ 14 ರಿಂದ 24 ದಿನಗಳಲ್ಲಿಯೂ ವೈರಸ್‌ ಸೋಂಕು ಕಾಣಿಸಿಕೊಳ್ಳುವ ಲಕ್ಷಣವಿದೆ. ಹೀಗೆ ೧೪ ದಿನ ಪ್ರತ್ಯೇಕ ವಾಸದಲ್ಲಿರಬೇಕಾದರೆ ಕರೋನಾ ದೃಢಪಟ್ಟರೆ ಅಂತಹ ವ್ಯಕ್ತಿಯನ್ನು ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ಗೆ ಶಿಫ್ಟ್‌ ಮಾಡಿ ಮತ್ತೆ 14 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಈ ರೀತಿ ಆಸ್ಪತ್ರೆ ದಾಖಲಾದವರಲ್ಲಿ ಹಲವು ಮಂದಿ ಗುಣಮುಖರಾಗಿರುವ ವರದಿಗಳೂ ತಿಳಿದು ಬರುತ್ತಿರುವುದು ಸಮಾಧಾನಕರ ಸಂಗತಿ. ಆದರೆ ಈ ರೀತಿ ಗುಣಮುಖರಾಗಿ ಬಂದವರೂ ಸಾರ್ವಜನಿಕರ ಜೊತೆ ಬೆರೆಯದೇ ಪ್ರತ್ಯೇಕವಾಸವನ್ನು ಮತ್ತೆ ಎರಡು ವಾರಗಳ ಕಾಲ ನಡೆಸಬೇಕಾಗುತ್ತದೆ. ಈ ಮೂಲಕ ʼಕ್ವಾರೆಂಟೈನ್‌ʼ ಅನ್ನೋ ಪರಿಕಲ್ಪನೆ ಭೀಕರ ಸಾಂಕ್ರಾಮಿಕ ರೋಗದಿಂದ ಹಲವು ಪ್ರಾಣಗಳನ್ನು ಉಳಿಸಬಹುದು.

ಪ್ರಾಚೀನ ಕಾಲದಲ್ಲಿಯೇ ಇತ್ತು ʼಕ್ವಾರೆಂಟೈನ್‌ʼ ಕಲ್ಪನೆ..

ʼಕ್ವಾರೆಂಟೈನ್‌ʼ ಅನ್ನೋ ಕಲ್ಪನೆ ಇಟೆಲಿಯಿಂದ ಆರಂಭವಾಯಿತು ಅನ್ನೋದಕ್ಕೆ ಸಾಧ್ಯವಿಲ್ಲ. ಅದಕ್ಕೂ ಮೊದಲೇ ಅಂದರೆ ಕ್ರಿಸ್ತ ಪೂರ್ವದಲ್ಲಿಯೇ ಇಂತಹದ್ದೊಂದು ಕಲ್ಪನೆ ಭಾರತ ದೇಶದಲ್ಲಿತ್ತು ಅನ್ನೋದನ್ನು ಭೋದಾಯನ ಮತ್ತು ಗೌತಮ ಸೂತ್ರಗಳು ತಿಳಿಸಿಕೊಡುತ್ತವೆ. ಕ್ರಿಸ್ತ ಪೂರ್ವ 8 ನೇ ಶತಮಾನದಲ್ಲಿ ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆ ಈ ದೇಶದಲ್ಲಿತ್ತು. ಜನಿಸಿದ ನವಜಾತ ಶಿಶು ಹಾಗೂ ತಾಯಿಯನ್ನು ಹತ್ತು ರಾತ್ರಿಗಳ ಕಾಲ ಪ್ರತ್ಯೇಕಿಸುವ ಸಂಪ್ರದಾಯವಿತ್ತು. ಅಲ್ಲದೇ ವ್ಯಕ್ತಿಯೋರ್ವ ಸತ್ತಾಗ ಆತನ ಕುಟುಂಬವನ್ನು ಮತ್ತು ರಕ್ತ ಸಂಬಂಧಿಗಳನ್ನು ಹತ್ತು ದಿನಗಳ ಕಾಲ ಪ್ರತ್ಯೇಕಿಸಿಡುತ್ತಿದ್ದರು. ಇದು ಸಾಂಕ್ರಾಮಿಕ ರೋಗಗಳಿದ್ದಲ್ಲಿ ಅದನ್ನು ತಡಗಟ್ಟುವ ನಿಟ್ಟಿನಲ್ಲಿ ಆ ಕಾಲದ ನಾಗರಿಕತೆಯಲ್ಲಿದ್ದ ಪರಿಕಲ್ಪನೆ ಎನ್ನಲಾಗಿದೆ. ಈ ಶಿಷ್ಟಾಚಾರವನ್ನು ಈಗಲೂ ಆಚರಿಸುವಂತಹ ಕುಟಂಬಗಳು ದೇಶದಲ್ಲಿವೆ ಅನ್ನೋದನ್ನು ಅಧ್ಯಯನ ವರದಿಗಳು ತಿಳಿಸುತ್ತವೆ. ಆದರೆ ಅದ್ಯಾವುದೂ ಬಲವಂತದ ಪ್ರತ್ಯೇಕಿಸುವಿಕೆ ಆಗಿರಲಿಲ್ಲ, ಬದಲಾಗಿ ಸ್ವಯಂ ಪ್ರೇರಿತವಾಗಿ ವ್ಯಕ್ತಿಯೊಬ್ಬ ಮಾಡಿಕೊಳ್ಳುತ್ತಿದ್ದ ನಿರ್ಬಂಧವಾಗಿತ್ತು.

ಇನ್ನು ಕ್ರಿಸ್ತನ ಕಾಲಾನಂತರ ಯುರೋಪ್‌ ಭಾಗದಲ್ಲೂ ಇಂತಹ ಪರಿಕಲ್ಪನೆ ಇತ್ತು ಅನ್ನೋದನ್ನು ʼಬುಕ್ಸ್‌ ಆಫ್‌ ಲೆವಿಟಿಕಸ್‌ʼ ನಲ್ಲಿ ಉಲ್ಲೇಖಿಸಲಾಗಿದೆ. ಆ ಕಾಲದಲ್ಲಿ ಕ್ರೈಸ್ತ ಧರ್ಮದ ಧರ್ಮಗುರುಗಳೇ ರೋಗಪೀಡಿತ ವ್ಯಕ್ತಿಯನ್ನು ಪರೀಕ್ಷಿಸಿ ಪ್ರತ್ಯೇಕಿಸುವ ಸೂಚನೆ ನೀಡುತ್ತಿದ್ದರು. ಮತ್ತು ಪ್ರತ್ಯೇಕವಾಸ ದಿಂದ ಬಿಡುಗಡೆಗೊಳಿಸುವ ಬಗ್ಗೆಯೂ ಅವರೇ ಸೂಚಿಸುತ್ತಿದ್ದರು. ಈ ಮೂಲಕ ಸಾಂಕ್ರಾಮಿಕ ರೋಗದಿಂದ ಸಾಮೂಹಿಕ ಸಾವು-ನೋವುಗಳನ್ನು ತಡೆಗಟ್ಟುತ್ತಿದ್ದರು.

ಇನ್ನು ಇಸ್ಲಾಂ ಧರ್ಮದ ಚರಿತ್ರೆಯ ಪುಟಗಳಲ್ಲೂ ʼಕ್ವಾರೆಂಟೈನ್‌ʼ ಗೆ ಬೇಕಾಗಿ ಪ್ರವಾದಿ ಮುಹಮ್ಮದ್‌ ರವರೇ ಕರೆ ನೀಡಿದ್ದು ಪ್ರಸ್ತುತತೆ ಎನಿಸಿಕೊಳ್ಳುತ್ತದೆ. ಕ್ರಿಸ್ತಶಕ 570 ರಲ್ಲಿ ಪ್ರವಾದಿ ಮುಹಮ್ಮದ್‌ ಅವರು ತಮ್ಮ ಅನುಯಾಯಿಗಳಿಗೆ ಪ್ಲೇಗ್‌ ಬಾಧಿತ ಪ್ರದೇಶದಿಂದ ದೂರವಿರುವಂತೆ ತಿಳಿಸಿದ್ದರು. ಅಲ್ಲದೇ ನಿಮ್ಮಲ್ಲಿ ಪ್ಲೇಗ್‌ ರೋಗದ ಲಕ್ಷಣಗಳಿದ್ದರೆ ನೀವು ಇತರೆಡೆ ಹೋಗದಿರಿ ಅಂತಾ ಸ್ವಯಂ ʼಕ್ವಾರೆಂಟೈನ್‌ʼ ಸ್ಫೂರ್ತಿ ತುಂಬಿದ್ದರು. ಅಲ್ಲದೇ ಆ ನಂತರ ಕ್ರಿಸ್ತಶಕ 706 ರಿಂದ 707 ರ ನಡುವೆ ಆರನೇ ಉಮಾಯದ್‌ ಖಲೀಫ ಬಿನ್‌ ವಾಲಿದ್‌ ಡಮಾಸ್ಕಸ್‌ನಲ್ಲಿ ಆಸ್ಪತ್ರೆ ನಿರ್ಮಿಸಿ ಕುಷ್ಠರೋಗಿಗಳನ್ನು ಪ್ರತ್ಯೇಕವಾಗಿ ಇರಿಸಿದ್ದ. ಅಲ್ಲದೇ 1431 ರ ಹೊತ್ತಿಗೆ ಒಟ್ಟೋಮನ್ನರು ಕುಷ್ಠರೋಗಿಗಳಿಗಾಗಿಯೇ ವಿಶೇಷ ಆಸ್ಪತ್ರೆಯನ್ನೂ ತೆರೆದಿದ್ದರು.

ಈ ರೀತಿ ʼಪ್ರತ್ಯೇಕವಾಸʼ ದ ಮೂಲಕ ಸಾಂಕ್ರಾಮಿಕ ರೋಗದಿಂದ ಆಗಬಹುದಾದ ಭಾರೀ ಅನಾಹುತ ತಡೆಗಟ್ಟಬಹುದು ಅನ್ನೋದನ್ನು ಚರಿತ್ರೆ ಪುಟಗಳು ತಿಳಿಸಿಕೊಡುತ್ತವೆ. ಸದ್ಯ ಕರೋನಾ ವೈರಸ್‌ ವಿರುದ್ಧವೂ ಇಂತಹದ್ದೇ ಒಂದು ಹೋರಾಟ ದೇಶದಲ್ಲಿ ಚಾಲ್ತಿಯಲ್ಲಿದೆ. ರೋಗ ಲಕ್ಷಣಗಳು ಕಂಡು ಬಂದವರು ʼಕ್ವಾರೆಂಟೈನ್‌ʼ ಮೊರೆ ಹೋಗುತ್ತಿದ್ದಾರೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಕರೋನಾ ವೈರಸ್‌ ನಿಂದ ಮುಕ್ತಿ ಪಡೆಯಲು ʼಕ್ವಾರೆಂಟೈನ್‌ʼ (ಪ್ರತ್ಯೇಕ ವಾಸ) ಏಕೈಕ ಮಾರ್ಗವಾಗಿದೆ. ಆದ್ದರಿಂದ ಈ ʼಕ್ವಾರೆಂಟೈನ್‌ʼ ಕಲ್ಪನೆಯನ್ನು ಭಯಾನಕ, ಅತಿ ಘೋರ ಶಿಕ್ಷೆ ಎಂದು ಭಾವಿಸದೇ ರೋಗ ಲಕ್ಷಣ ಕಂಡುಬಂದವರು ತಕ್ಷಣ ಸ್ವಯಂ ಪ್ರೇರಿತವಾಗಿ ʼಪ್ರತ್ಯೇಕವಾಸʼ ಅನುಭವಿಸುವ ಮೂಲಕ ಕೋವಿಡ್-‌೧೯ ವಿರುದ್ಧದ ಯುದ್ಧ ಗೆಲ್ಲಬೇಕಾದ ಅನಿವಾರ್ಯತೆ ಇದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code
ಕರ್ನಾಟಕ

ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code

by ನಾ ದಿವಾಕರ
March 18, 2023
SIddaramaiah : ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆದು ; ರಾಜ್ಯದ ಜನರ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು : ಸಿದ್ದರಾಮಯ್ಯ :
Top Story

SIddaramaiah : ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆದು ; ರಾಜ್ಯದ ಜನರ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು : ಸಿದ್ದರಾಮಯ್ಯ :

by ಪ್ರತಿಧ್ವನಿ
March 20, 2023
ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!
Top Story

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

by ಪ್ರತಿಧ್ವನಿ
March 24, 2023
K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ಇದೀಗ

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ

by ಪ್ರತಿಧ್ವನಿ
March 23, 2023
HD KUMARASWAMY | ಸಿದ್ದರಾಮಯ್ಯ ಅವರ ಶಕ್ತಿ ಕುಂದಿದೆ ಎಂಬುದಕ್ಕೆ ಅವರು ಕ್ಷೇತ್ರ ಹುಟುಕಾಟವೆ ಸಾಕ್ಷಿ..!
ಇದೀಗ

HD KUMARASWAMY | ಸಿದ್ದರಾಮಯ್ಯ ಅವರ ಶಕ್ತಿ ಕುಂದಿದೆ ಎಂಬುದಕ್ಕೆ ಅವರು ಕ್ಷೇತ್ರ ಹುಟುಕಾಟವೆ ಸಾಕ್ಷಿ..!

by ಪ್ರತಿಧ್ವನಿ
March 18, 2023
Next Post
ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?

ಕೈಚಪ್ಪಾಳೆ ಏನೋ ಸರಿ… ಆದರೆ ಆರೋಗ್ಯ ವಲಯ ಎಷ್ಟು ಸಜ್ಜಾಗಿದೆ?

ಭಾರತದಲ್ಲಿ ಹೋಂ ಕ್ವಾರಂಟೈನ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ಭಾರತದಲ್ಲಿ ಹೋಂ ಕ್ವಾರಂಟೈನ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?

ನಿರ್ಭಯಾ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಮುಚ್ಚಿಟ್ಟ ಸತ್ಯವೇನು..?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist