ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು ಶೇ.10 ರಷ್ಟು ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎದುರಾಗಬಹುದಾದ ತೊಂದರೆಗಳನ್ನು ಪರಿಗಣಿಸಿ ಚುನಾವಣಾ ಆಯೋಗ ಖರ್ಚಿನ ಮಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಬಿಹಾರ ವಿಧಾನಸಭೆ, ಲೋಕಸಭೆಯ ಚುನಾವಣೆ, ಉಪಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.


ಅಧಿಸೂಚನೆಯ ಪ್ರಕಾರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು 70 ಲಕ್ಷ ರೂಪಾಯಿಗಳಿಂದ 77 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದರೆ, ಸಣ್ಣ ರಾಜ್ಯಗಳಲ್ಲಿ ಈ ಮೊತ್ತವನ್ನು 54 ಲಕ್ಷ ರೂಪಾಯಿಗಳಿಂದ 59 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ವಿಧಾನಸಭಾಚುನಾವಣೆಗೆಸ್ಪರ್ಧಿಸುವಅಭ್ಯರ್ಥಿಗಳಖರ್ಚಿನಮಿತಿಯನ್ನು 28 ಲಕ್ಷಗಳಿಂದ 30.8 ಲಕ್ಷಗಳಿಗೆಏರಿಕೆಮಾಡಲಾಗಿದೆ. ಸಣ್ಣ ರಾಜ್ಯಗಳಲ್ಲಿಈಹಿಂದೆ 20 ಲಕ್ಷಮಿತಿಇದ್ದಮಿತಿಯನ್ನು 22 ಲಕ್ಷಗಳಿಗೆಏರಿಕೆಮಾಡಲಾಗಿದೆ.