ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ 42 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಆದರೂ, ಸರ್ಕಾರ ಕಾನೂನನ್ನು ಹಿಂಪಡೆಯಲು ಮುಂದಾಗುತ್ತಿಲ್ಲ. ಇಂದು ರಾಷ್ಟ್ರರಾಜಧಾನಿಯಲ್ಲಿ ರೈತರು ಟ್ಯಾಕ್ಟರ್ ಪೆರೇಡ್ ಮಾಡುತ್ತಿದ್ದು, ರೈತರ ಹೋರಾಟ ಮತ್ತು ಕರೋನಾ ಕಾರಣವನ್ನು ಮುಂದಿಟ್ಟುಕೊಂಡು ರೈತರ ಆರೋಗ್ಯದ ಕುರಿತು ಸುಪ್ರಿಂಕೋರ್ಟ್ ಸಾಲಿಸಿಟರ್ ಜನರಲ್ ಅಶೋಕ್ ಮೆಹ್ತಾಗೆ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯ ಮೂರ್ತಿ ಎಸ್. ಎ. ಬೋಬ್ಡೆ ಅವರು ರೈತರ ಹೋರಾಟ ಮತ್ತು ಕೃಷಿ ಕಾನೂನು ವಿಚಾರದ ಕುರಿತು ಏನಾಗುತ್ತಿದೆ ಎಂದು ಉತ್ತರಿಸಲೇಬೇಕೆಂದು ಹೇಳಿದ್ದಾರೆ. ಕೋವಿಡ್ -19 ಇರುವುದರಿಂದ ಸೋಂಕು ಹೆಚ್ಚು ಹರಡದಂತೆ ಯಾವೆಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಹಾಗು ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಮೆಹ್ತಾಗೆ ಕೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ದೇಶಕ್ಕೆ ಲಗ್ಗೆಯಿಟ್ಟ ವೇಳೆ ಅಂದರೆ ಮಾರ್ಚ್ 2020ರಲ್ಲಿ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ವೇಳೆ ದೇಶವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನಭಾಗವಹಿಸಿದ್ದರು. ದೊಡ್ಡಮಟ್ಟದಲ್ಲಿ ಜನ ಒಗ್ಗೂಡಿದ್ದರಿಂದ ಕರೋನಾ ಹರಡುವಿಕೆಯೂ ಹೆಚ್ಚಾಗಿತ್ತು. ದೆಹಲಿ ಸರ್ಕಾರ ಮತ್ತು ಪೊಲೀಸರನ್ನು ಪ್ರಶ್ನಿಸಿ ಸುಪ್ರೀಯಾ ಪಂಡಿತ್ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ಈಗ, ಮತ್ತೆ ತಬ್ಲಿಘೀ ಜಮಾತ್ ನಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗುವುದು ಬೇಡ ಎಂದು ಕೋರ್ಟ್ ಹೇಳಿದೆ. ಪ್ರತಿಭಟನಾ ನಿರತ ರೈತರು ಜನವರಿ 26 ರಂದು ಗಣರಾಜೋತ್ಸವ ದಿನಾಚರಣೆಯಂದು ಕೃಷಿ ಕಾನೂನು ವಿರೋಧಿಸಿ ರೈತರು ದೊಡ್ಡಮಟ್ಟದಲ್ಲಿ ಸಭೆ ನಡೆಸುವುದರಿಂದ ಮತ್ತೆ ಈ ಸಮಸ್ಯೆ ಎದುರಾಗ ಬಹುದು ಎಂದು ಸಾರ್ವಾಜನಿಕ ಆರೋಗ್ಯದ ಕಾಪಾಡುವ ದೃಷ್ಟಿಯಿಂದ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ.