ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಮಾಧ್ಯಮಗಳು ಚರ್ಚಿಸುವುದರಿಂದ ನ್ಯಾಯಾಧೀಶರ ಸ್ವತಂತ್ರ ಚಿಂತನೆ ಮೇಲೆ ಪ್ರಭಾವ ಬೀರುತ್ತದೆ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಹಾನಿ ಮಾಡುತ್ತದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ.
ನ್ಯಾಯಾಲಯದ ಮುಂದಿರುವ ಪ್ರಕರಣಗಳಲ್ಲಿ ನ್ಯಾಯಾಧೀಶರ ಹಾಗೂ ಸಾರ್ವಜನಿಕರ ಮೇಲೆ ಪ್ರಭಾವ ಬೀರುವುದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಬೇಕು, ಎಂದು ವೇಣುಗೋಪಾಲ್ ಅಭಿಪ್ರಾಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ಮಾಧ್ಯಮಗಳ ಸ್ಥಿತಿಯ ಕುರಿತಂತೆ ಕಠಿಣವಾಗಿ ಪ್ರತಿಕ್ರಿಯಿಸಿದ ವೇಣುಗೋಪಾಲ್ ಮಾಧ್ಯಮಗಳ ಪಾತ್ರವನ್ನು ಪರಿಶೀಲಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಮೇಲೆ ಮುಕ್ತವಾಗಿ ಚರ್ಚೆ ಮಾಡಿ ಪ್ರಭಾವ ಬೀರುತ್ತದೆ. ಇದು ನ್ಯಾಯಾಂಗ ನಿಂದನೆಗೆ ಸಮಾನಾದದ್ದು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
Also Read: ‘ಮೀಡಿಯಾ ಟ್ರಯಲ್’ ಹಿಂದಿರುವುದು ಕೇವಲ TRP ಹಪಾಹಪಿಯಲ್ಲ!
ಮಾಧ್ಯಮಗಳ ಈ ಪ್ರವೃತ್ತಿ ಬಹಳ ಅಪಾಯಕಾರಿಯಾಗಿ ಟ್ರೆಂಡ್ ಆಗುತ್ತಿದೆ ಎಂದು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠದ ಮುಂದೆ ವೇಣುಗೋಪಾಲ್ ತಮ್ಮ ವಾದ ಸಲ್ಲಿಸಿದ್ದಾರೆ.
“ನ್ಯಾಯಾಲಯವು ರಫೇಲ್ ಅನ್ನು ವಿಚಾರಣೆಗೆ ಒಳಪಡಿಸಿದಾಗ, ವಿಚಾರಣೆಯ ದಿನದ ಬೆಳಿಗ್ಗೆ ಕೆಲವು ದಾಖಲೆಗಳ ಸಾರಗಳನ್ನು ಹೊಂದಿರುವ ದೊಡ್ಡ ಲೇಖನಗಳು ಮತ್ತು ವ್ಯಾಖ್ಯಾನಗಳನ್ನು ಪ್ರಕಟಗೊಂಡಿತ್ತು” ಎಂದು ವೇಣುಗೋಪಾಲ್ ಹೇಳಿದ್ದಾರೆ.