ಭಾರತ ಸಂವಿಧಾನ ತಿರಸ್ಕರಿಸುವ ಮನುಸ್ಮೃತಿಯನ್ನು ಆರ್ಎಸ್ಎಸ್ ಶ್ಲಾಘಿಸುತ್ತದೆ ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮನುಸ್ಮೃತಿಯಲ್ಲಿ ಜನನ ಆಧಾರಿತವಾಗಿ ಸಾಮಾಜಿಕ / ಆರ್ಥಿಕ / ಲಿಂಗ ಅಸಮಾನತೆಗಳನನ್ನು ಪೋಷಿಸಲಾಗುತ್ತದೆ, ಈ ಮನುಸ್ಮೃತಿಯನ್ನು ಭಾರತ ಸಂವಿಧಾನ ತಿರಸ್ಕರಿಸಿದೆ, ಆದರೆ 1949 ರಲ್ಲಿ ಆರ್ಎಸ್ಎಸ್ ಮನುಸ್ಮೃತಿಯನ್ನು ಎತ್ತಿಹಿಡಿದಿದೆ. ಅಲ್ಲದೆ, 2020 ರಲ್ಲೂ, ರಾಮಮಂದಿರ ಪೂಜೆ ಸಂಧರ್ಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜಾತಿಶ್ರೇಣಿಯನ್ನು ಬಲಪಡಿಸುವ ಮನುಸ್ಮೃತಿಯನ್ನು ಉಲ್ಲೇಕಿಸಿದ್ದಾರೆ. ಭಾರತದ ಕಲ್ಪನೆಯನ್ನು ನಂಬುವ ನಾವು ʼಮನುಸ್ಮೃತಿʼ ಹಾಗೂ ಅದರ ಮುಖವಾಣಿಗಳನ್ನು ತಿರಸ್ಕರಿಸಬೇಕು ಎಂದು ಚೇತನ್ ಹೇಳಿದ್ದಾರೆ.