• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದ ಮೌನಿ ಸೆಲೆಬ್ರಿಟಿಗಳ ಕಾಲೆಳೆದ ಸ್ವರಾ ಭಾಸ್ಕರ್

by
June 6, 2020
in ದೇಶ
0
ಭಾರತದ ಮೌನಿ ಸೆಲೆಬ್ರಿಟಿಗಳ ಕಾಲೆಳೆದ ಸ್ವರಾ ಭಾಸ್ಕರ್
Share on WhatsAppShare on FacebookShare on Telegram

ರಾಜಕೀಯ ಸಮಸ್ಯೆಗಳಿಗೆ ಭಾರತದ ಮುಖ್ಯವಾಹಿನಿಯ ಬಹುತೇಕ ಸೆಲೆಬ್ರಿಟಿಗಳು ಹೆಚ್ಚಾಗಿ ತಲೆ ಹಾಕುವುದಿಲ್ಲ. ಅದರಲ್ಲೂ ಮೋದಿ ವಿರುದ್ಧ ಮಾತಾಡಲು ಘಟಾನುಘಟಿ ಸೆಲೆಬ್ರಟಿಗಳೇ ಹಿಂದೇಟು ಹಾಕುತ್ತಾರೆ. ಅನುಪಮ್‌ ಖೇರ್‌ , ಪರೇಶ್‌ ರಾವಲ್‌ ಮುಂತಾದ ಹಿರಿಯ ನಟರು ಮೋದಿ ಪರವಾಗಿ ಮಾತನಾಡಲು ತೋರಿಸುವ ಧೈರ್ಯ ಮೋದಿಯನ್ನು ಟೀಕೆ ಮಾಡಲು ಯಾವ ಹಿರಿಯ ನಟರೂ ತೋರಿಸುತ್ತಿಲ್ಲ. ಅಷ್ಟರ ಮಟ್ಟಿಗೆ ಸರ್ಕಾರವನ್ನು ಭಯಪಡುತ್ತಿದ್ದಾರೆ.

ಮೋದಿ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತುವುದರಲ್ಲಿ ಬಾಲಿವುಡ್‌ನ ಕಿರಿಯ ನಟ-ನಟಿಯರ ಹೆಚ್ಚಿನವರು. ಅನುರಾಗ್‌ ಕಶ್ಯಪ್‌, ಸಿದ್ದಾರ್ಥ್‌, ಸ್ವರಾ ಭಾಸ್ಕರ್‌, ತಾಪ್ಸಿ ಪನ್ನು ಮುಂತಾದ ಯುವ ಪ್ರತಿಭಾವಂತರು ಮೋದಿ ಸರ್ಕಾರದ ಕೆಲವೊಂದು ನೀತಿಗಳನ್ನು ಟೀಕಿಸಿದ ಉದಾಹರಣೆಗಳಿವೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ದೆಹಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ರಾತ್ರೋ ರಾತ್ರಿ ಹಲ್ಲೆ ನಡೆಸಿರುವುದನ್ನು ಹಲವು ನಟರು ಖಂಡಿಸಿದ್ದರು.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾದ ದೀಪಿಕಾ

ಆದರೂ ನೇರವಾಗಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಬಳಿ ತೆರಳಿ ನೈತಿಕ ಸ್ಥೈರ್ಯ ತುಂಬಿದ್ದ ದೀಪಿಕಾ ಪಡುಕೋಣೆಯವರನ್ನು ಸಾಮಾಜಿಕ ಜಾಲತಾಣದಲ್ಲಿ ಮೋದಿ ಭಕ್ತರು ಅವ್ಯಾಚ್ಯವಾಗಿ ನಿಂದಿಸಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಮೋದಿ ದೀಪ ಬೆಳಗಿಸಲು ಕರೆ ನೀಡಿದಾಗ ಪಡುಕೋಣೆ ದಂಪತಿ ಮೋದಿ ಕರೆಗೆ ಬೆಂಬಲಿಸಿ ದೀಪ ಬೆಳಗಿಸಿ ಫೋಟೋ ಹಾಕಿದ್ದರು.

ಪ್ರಧಾನಿ ನೀಡಿದ ಕರೆಗೆ ಬೆಂಬಲಿಸಿ ದೀಪ ಬೆಳಗಿಸಿದ ದೀಪಿಕಾ ದಂಪತಿ

ಸಿಎಎ-ಎನ್‌ಆರ್‌ಸಿ ಕಾಯ್ದೆ ವಿರುದ್ಧ ಮೊದಲಿನಿಂದಲೂ ಬಲವಾಗಿ ಧ್ವನಿಯೇರಿಸುತ್ತಾ ಬಂದಿರುವ ಬಾಲಿವುಡ್‌ ಮಂದಿಯಲ್ಲಿ ಯುವ ನಟಿ ಸ್ವರಾ ಭಾಸ್ಕರ್‌ ಒಬ್ಬರು. ಅಮೇರಿಕಾದಲ್ಲಿ ಜನಾಂಗೀಯ ಹತ್ಯೆ ನಡೆದ ಬೆನ್ನಿಗೆ ಬುಗಿಲೆದ್ದ ಬೃಹತ್‌ ಪ್ರತಿಭಟನೆಯಂತೆ ದೆಹಲಿಯ ಜನರೂ ರಸ್ತೆಗಿಳಿಯಬೇಕೆಂದು ಸ್ವರಾ ಭಾಸ್ಕರ್‌ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದರು.

ಇದು ಮೋದಿ ಅಭಿಮಾನಿಗಳಿಗೆ ಸ್ವರಾ ಭಾಸ್ಕರ್‌ ಅವರನ್ನು ನಿಂದಿಸಲು ಮುಖ್ಯ ವಿಷಯವಾಗಿಬಿಟ್ಟಿತು. ಸಾಮಾಜಿಕ ಜಾಲತಾಣದಲ್ಲಿ ಸ್ವರಾ ವಿರುದ್ಧ ಹಲವು ಅಪಮಾನಕಾರಿ ಟ್ರಾಲ್‌ಗಳು ಹರಿದಾಡುತ್ತಿವೆ. ಜೊತೆಗೆ ಸ್ವರಾರನ್ನು ಬಂಧಿಸಬೇಕೆಂದು ಕ್ಯಾಂಪೈನ್‌ ಶುರು ಮಾಡಿದ್ದಾರೆ.

ಸ್ವರಾ ಭಾಸ್ಕರ್

ಸದ್ಯ ಟ್ರೆಂಡಿಂಗ್‌ಲ್ಲಿರುವ #ArrestSwaraBhaskar ನ ಸ್ಕ್ರೀನ್ ಶಾಟ್‌ ಹಾಕಿರುವ ಸ್ವರಾ ಭಾಸ್ಕರ್ “ಈ ಕಾರಣಕ್ಕೆ ಭಾರತದ ಹೆಚ್ಚಿನ ಸೆಲೆಬ್ರಿಟಿಗಳು ಮೌನವಹಿಸುತ್ತಾರೆ. ಕೇವಲ ಗರ್ಭಿಣಿ ಆನೆ ಸತ್ತ ಕುರಿತು ಮಾತನಾಡುತ್ತಾರೆ” ಎಂದು ಟಾಂಗ್‌ ಕೊಟ್ಟಿದ್ದಾರೆ. ಜೊತೆಗೆ ಸಿಎಎ ವಿರೋಧಿ ಹೋರಾಟದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಗರ್ಭಿಣಿ ಸಫೂರಾ ಹೆಸರು ಉಲ್ಲೇಖಿಸಿದ್ದಾರೆ.

And that my friends.. is why most celebrities in India only raise their voices for elephants! #safoorazargar #ArrestSwaraBhaskar #bizarrebuttrue pic.twitter.com/Nn3k3x8Nlv

— Swara Bhasker (@ReallySwara) June 6, 2020

ADVERTISEMENT
Tags: ಸಫೂರಾ ಝರ್ಗಾರ್ಸಿಎಎ - ಎನ್‌ಆರ್‌ಸಿಸ್ವರಾ ಭಾಸ್ಕರ್‌
Previous Post

ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಅವಿರೋಧ ಆಯ್ಕೆ?

Next Post

ಹದಿಹರೆಯದ ಬಾಲಕ ಪ್ರಧಾನ ಮಂತ್ರಿಯನ್ನ ಪತ್ರ ಬರೆದು ಪ್ರಶ್ನಿಸಿದ್ದು ತಪ್ಪೇ!?

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
Next Post
ಹದಿಹರೆಯದ ಬಾಲಕ ಪ್ರಧಾನ ಮಂತ್ರಿಯನ್ನ ಪತ್ರ ಬರೆದು ಪ್ರಶ್ನಿಸಿದ್ದು ತಪ್ಪೇ!?

ಹದಿಹರೆಯದ ಬಾಲಕ ಪ್ರಧಾನ ಮಂತ್ರಿಯನ್ನ ಪತ್ರ ಬರೆದು ಪ್ರಶ್ನಿಸಿದ್ದು ತಪ್ಪೇ!?

Please login to join discussion

Recent News

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!