ಕೊರೊನಾ ಸಂದರ್ಭದಲ್ಲಿ ಇಡೀ ವಿಶ್ವವೇ ತತ್ತಿರಿಸಿ ಹೋಗಿದ್ದಾಗ ಎಲ್ಲಾ ವಲಯಗಳ ಮೇಲೂ ಬಹಳ ದೊಡ್ಡ ಪರಿಣಾಮ ಬೀರಿತ್ತು ! ಹಾಗೆ ಐಟಿ ವಯಲ ಕೂಡ..ಆಫೀಸ್ ನಲ್ಲಿ ಕೆಲಸ ಮಾಡುವಂತಿಲ್ಲ, ಸಿಬ್ಬಂದಿ ಇರುವಂತಿಲ್ಲ, ಇದು ಕೋವಿಡ್ ಹರಡುವಿಕೆಗೆ ಕಾರಣವಾಗಬಹುದು ಎಂದು ಸರ್ಕಾರ ಆದೇಶ ಹೊರಡಿಸಿದ್ದಾಗ ಐಟಿ ವಲಯ ಕಂಡುಕೊಂಡಿದ್ದ ದಾರಿ ಈ work from home !

ಬಹುತೇಕ 3 ವರ್ಷದ ನಂತರ ಉದ್ಯೋಗಿಗಳನ್ನು ಈಗೀಗ ಆಫೀಸ್ ಗೆ ಬರುವಂತೆ ಕಂಪನಿಗಳು ತಾಕೀತು ಮಾಡುತ್ತಿರುವ ಸಮಯದಲ್ಲೇ ಐಟಿ ಉದ್ಯೋಗಿಗಳು ಮತ್ತೆ Work from home ಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಇದಕ್ಕೆ ಕಾರಣ ನೀರಿನ ಅಭಾವ !

ಈಗಾಗಲೇ ಬೇಸಿಗೆ ಆರಂಭವಾಗಿದ್ದು ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯ ನಡುವೆ ಈಗ ಬಂದಿರೋ ಬೇಸಿಗೆ ಜನರನ್ನ ಹೈರಾಣಾಗಿಸಿಬಿಟ್ಟಿದೆ. ಕುಡಿಯುವ ನೀರಿಗೂ ರಾಜ್ಯದಲ್ಲಿ ತತ್ವಾರ ಎದುರಾಗಿದೆ. ಇದು ಕೇವಲ ಕುಗ್ರಾಮಗಳಿಗೆ ಸೀಮಿತವಾಗಿಲ್ಲ. ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಎರಡು ತಿಂಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

ಒಂದು ಟ್ಯಾಂಕರ್ ನೀರಿಗೆ 5000/- ಕೊಡ್ತೀವಿ ಅಂದ್ರೂ ಜನರಿಗೆ ಕುಡಿಯುವ ನೀರು ಲಭ್ಯವಾಗ್ತಿಲ್ಲ. ಇದರಿಂದಾಗಿ ಬೆಂಗಳೂರಲ್ಲಿ ಬೇಸಿಗೆ ಕಳೆಯೋದು ಕಷ್ಟಕರವಾಗಿದ್ದು ನಮಗೆ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡಿ ಎಂದು ಉದ್ಯೋಗಿಗಳು ಡಿಮ್ಯಾಂಡ್ ಮಾಡಿದ್ದಾರೆ.

ಈ ಕಂಪನಿ ಕಚೇರಿಗಳಲ್ಲೂ ನೀರಿನ ಬವಣೆ ತಲೆದೋರಿದ್ದು , ಪರಿಸ್ಥಿತಿ ನಿಭಾಯಿಸೋದು ಕಷ್ಟಕರವಾಗಿದೆ. ಹೀಗಾಗಿ ಕಂಪನಿಗಳು ಕೂಡ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ನೀಡುವ ಆಲೋಚನೆಯಲ್ಲಿದೆ ಎಂದು ತಿಳಿದು ಬಂದಿದೆ.
ಒಟ್ನಲ್ಲಿ ಆಗ ಕೋವಿಡ್ ಕಾರಣಕ್ಕೆ ಆರಂಭಗೊಂಡ ಈ ವರ್ಕ್ ಫ್ರಮ್ ಹೋಂ ವ್ಯವಸ್ಥೆ ಈಗ ನೀರಿನ ಅಭಾವದ ಕಾರಣಕ್ಕೆ ಮತ್ತೆ ಮುನ್ನಲೆಗೆ ಬಂದಿದೆ.