ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ʼಪಿತೂರಿʼಯನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಲಿಬರ್ಹಾನ್ ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಲಿಬರ್ಹಾನ್ ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಘಪರಿವಾರಕ್ಕೆ ಸೇರಿದ 32 ಆರೋಪಿಗಳನ್ನೂ ಖುಲಾಸೆಗೊಳಿಸಲಾದ ಹಿನ್ನಲೆಯಲ್ಲಿ ಪ್ರಕರಣದ ವರದಿ ಸಲ್ಲಿಸಿದ್ದ ನ್ಯಾಯಮೂರ್ತಿ ಲಿಬರ್ಹಾನ್ ʼಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ʼಪಿತೂರಿʼಯನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆʼ ಎಂದು ದಿ ವೈರ್‌ಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನನಗೆ ಒಪ್ಪಿಗೆ ಎನಿಸುವಂತಹ ಪುರಾವೆಗಳನ್ನು ನಾನು ಸಲ್ಲಿಸಿದ್ದೆ. ಅವರಿಗೆ ಬೇಕಾದುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಲಿಬರ್ಹಾನ್ ಹೇಳಿದ್ದಾರೆ.
ಮಸೀದಿ ಉರುಳಿಸುವಿಕೆಯ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಲಕ್ನೋದಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ, ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತ ಕೃತ್ಯ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿತ್ತು. ಈ ಬಗ್ಗೆ ಕೇಳಿದಾಗ, ಲಿಬರ್ಹಾನ್, “ಬಾಬರಿ ಮಸೀದಿ ಉರುಳಿಸುವಿಕೆಯಲ್ಲಿ ಪಿತೂರಿ ಸ್ಥಾಪಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ನಾನು ನಂಬುವುದಿಲ್ಲ” ಎಂದು ಹೇಳಿದ್ದಾರೆ.
ತಾನು ಸಾಕ್ಷಿಯಾಗಿ ಸಲ್ಲಿಸಿರುವ ವಿಡಿಯೋ ಹಾಗೂ ಫೊಟೋಗಳು ಸಾಕ್ಷಿಯಾಗಿ ಸ್ವೀಕರಿಸಲು ತನಗೆ ಸಾಕಷ್ಟು ತೃಪ್ತಿಯಿದೆ ಎಂದು ಹೇಳಿರುವ ಲಿಬರ್ಹಾನ್, ಅವುಗಳು ಅವರಿಗೆ ಪುರಾವೆಯಾಗಿ ತೃಪ್ತಿಯಾಗದ್ದು ತನಗೆ ಆಶ್ಚರ್ಯವಾಗಿದೆ ಎಂದಿದ್ದಾರೆ.

ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವ ವಿಚಾರಣಾ ನ್ಯಾಯಾಲಯ ಮಸೀದಿ ಉರುಳಿಸುವಿಕೆಯನ್ನು ಪೂರ್ವ ಯೋಜಿತ ಕೃತ್ಯ ಎಂಬ ತೀರ್ಮಾನಕ್ಕೆ ಬರಲು ʼಒದಗಿಸಲಾದ ಸಾಕ್ಷ್ಯಗಳು ಅನಿರ್ದಿಷ್ಟವಾಗಿದೆʼ ಎಂದು ತಿಳಿಸಿತ್ತು.
Also Read: ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.
ಬಾಬ್ರಿ ಮಸೀದಿ ಉರುಳಿಸುವಿಕೆಯ 10 ದಿನಗಳ ನಂತರ, ಅಂದರೆ ಡಿಸೆಂಬರ್ 16 ರಂದು, ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಸರ್ಕಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶ ಎಂ.ಎಸ್. ಲಿಬರ್ಹಾನ್ ಅವರ ನೇತೃತ್ವದಲ್ಲಿ, ಮಸೀದಿ ಉರುಳಿಸಲು ಕಾರಣವಾದ ಘಟನೆಗಳ ಅನುಕ್ರಮದ ಬಗ್ಗೆ ವರದಿಯನ್ನು ಸಲ್ಲಿಸಲು ವರದಿ ತಯಾರಿಸಲು ರಚಿಸಿತ್ತು. ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ, ಆಯೋಗವು ತನ್ನ ವರದಿಯನ್ನು 3 ತಿಂಗಳೊಳಗೆ ಸಲ್ಲಿಸಲು ಸರ್ಕಾರ ಹೇಳಿತ್ತು. ಆದರೆ 48 ವಿಸ್ತರಣೆಗಳೊಂದಿಗೆ ಒಂದೂವರೆ ದಶಕದ ನಂತರ, ಅಂದರೆ 2009 ರಲ್ಲಿ ಸಮಗ್ರ ವರದಿ ಸಲ್ಲಿಸಲಾಯಿತು. ಆಯೋಗಕ್ಕಾಗಿ 8 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು.
2019 ರ ನವೆಂಬರಲ್ಲಿ ಭೂಮಿ ವ್ಯಾಜ್ಯವನ್ನು ಇತ್ಯರ್ಥಗೊಳಿಸಿದ್ದ ಸುಪ್ರೀಂ ಕೋರ್ಟ್ ವಿವಾದಿತ ಸ್ಥಳದಲ್ಲಿ ಶ್ರೀರಾಮಮಂದಿರ ನಿರ್ಮಿಸಲು ಅವಕಾಶ ಮಾಡಿಕೊಟ್ಟಿತ್ತು.
Also Read: ಬಾಬ್ರಿ ಮಸೀದಿ ತೀರ್ಪು ಪ್ರಕಟ: ಆರೋಪಿಗಳು ಖುಲಾಸೆ