ಭಾರತದ ಸಂವಿಧಾನ ದಿನದದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಪ್ರಗತಿಪರ ಸಂವಿಧಾನವು ಭಾರತದ ಏಕತೆ ಮತ್ತು ಅಭಿವೃದ್ಧಿಯ ದೊಡ್ಡ ಶಕ್ತಿ ಎಂದಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ಆರೋಪಗಳ ನಡುವೆ, ಅಮಿತ್ ಶಾ ಅವರ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ ಸಂವಿಧಾನವನ್ನು ಬದಲಾಯಿಸಲೆಂದೆ ನಾವು ಅಧಿಕಾರಕ್ಕೆ ಬಂದಿರುವುದೆಂದು ಬಿಜೆಪಿ ನಾಯಕರ ಬಹಿರಂಗ ಹೇಳಿಕೆಗೆ ವ್ಯತಿರಿಕ್ತವಾಗಿ ಈ ಟ್ವೀಟ್ ಬಂದಿದೆ.
भारत की एकता और विकासशीलता की सबसे बड़ी शक्ति हमारा प्रगतिशील संविधान है। आज संविधान दिवस पर भारतीय संविधान के शिल्पी बाबासाहेब जी को नमन करता हूँ।
मोदी सरकार देश के महापुरुषों के स्वप्न और संविधान के अनुरूप देश के हर वर्ग को सामाजिक और आर्थिक न्याय दिलाने के प्रति संकल्पित है। pic.twitter.com/UKgZkTJ0F4
— Amit Shah (@AmitShah) November 26, 2020
ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಅಂಬೇಡ್ಕರ್ ಅವರನ್ನು ಸ್ಮರಿಸಿದ ಅಮಿತ್ ಶಾ, “ನಮ್ಮ ಪ್ರಗತಿಪರ ಸಂವಿಧಾನವು ಭಾರತದ ಏಕತೆ ಮತ್ತು ಅಭಿವೃದ್ಧಿಯ ದೊಡ್ಡ ಶಕ್ತಿ. ಇಂದು, ಸಂವಿಧಾನ ದಿನದಂದು, ನಾನು ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ ಬಾಬಾಸಾಹೇಬನಿಗೆ ನಮಸ್ಕರಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ಮಹಾನ್ ವ್ಯಕ್ತಿಗಳ ಕನಸಿನಂತೆ ಹಾಗೂ ಸಂವಿಧಾನಕ್ಕೆ ಅನುಗುಣವಾಗಿ ದೇಶದ ಪ್ರತಿಯೊಂದು ವರ್ಗಗಳಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
Also Read: ಅಂಬೇಡ್ಕರ್‌ರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕಿಂತ ಹೆಮ್ಮೆಯ ಕೆಲಸವನ್ನು ನಾವು ಮಾಡಿಲ್ಲ