• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಾಲ್ಘರ್ ಗುಂಪು ಥಳಿತ: ಆರೋಪಿಗಳಲ್ಲಿ ಓರ್ವನಿಗೆ ಕೋವಿಡ್-19 ಪಾಸಿಟಿವ್

by
May 2, 2020
in ದೇಶ
0
ಪಾಲ್ಘರ್ ಗುಂಪು ಥಳಿತ: ಆರೋಪಿಗಳಲ್ಲಿ ಓರ್ವನಿಗೆ ಕೋವಿಡ್-19 ಪಾಸಿಟಿವ್
Share on WhatsAppShare on FacebookShare on Telegram

ಎಪ್ರಿಲ್‌ 16 ರಂದು ಪೋಲಿಸರ ಸಮ್ಮುಖದಲ್ಲೇ ನಡೆದ ಗುಂಪುಹಲ್ಲೆಯಲ್ಲಿ ಸಾಧುಗಳು ಹಾಗೂ ಕಾರ್‌ ಡ್ರೈವರ್‌ ಸೇರಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಬ್ಬರು ಪೋಲೀಸ್‌ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಿದ ಆರೋಪಿಗಳಲ್ಲಿ ಓರ್ವನಲ್ಲಿ ಕೋವಿಡ್-19‌ ಪಾಸಿಟಿವ್‌ ಪತ್ತೆಯಾಗಿದೆ.

ADVERTISEMENT

ಪಾಲ್ಘರ್‌ ಜಿಲ್ಲೆಯ ದಹನು ಪ್ರದೇಶದ ನಿವಾಸಿಯಾಗಿದ್ದ ಆರೋಪಿಯನ್ನು ಎಪ್ರಿಲ್‌ 17 ರಂದು ಕಾಸ ಪೋಲೀಸರು ಬಂಧಿಸಿದ್ದರು. ಆರೋಪಿಯನ್ನು ದಹನು ಕೋರ್ಟಿಗೆ ಹಾಜರುಪಡಿಸಿದಾಗ ಉಳಿದ 114 ಬಂಧಿತ ಆರೋಪಿಗಳೊಂದಿಗೆ ಮೇ 14ರವರೆಗೆ ಪೋಲಿಸ್‌ ರಿಮ್ಯಾಂಡಿಗೆ ಕೋರ್ಟ್‌ ನೀಡಿತ್ತು. ಇದರಂತೆ ಆರೋಪಿಯನ್ನು ಕೊಲೆ ಪ್ರಕರಣದ 20 ಮಂದಿ ಆರೋಪಿಗಳೊಂದಿಗೆ ವಾಡಾ ಪೋಲೀಸ್‌ ಸ್ಟೇಶನ್ನಿನ ಲಾಕಪ್‌ನಲ್ಲಿರಿಸಲಾಗಿತ್ತು. ಸಾಮಾಜಿಕ ಅಂತರವನ್ನು ಕಾಪಾಡಲು ಉಳಿದ ಆರೋಪಿಗಳನ್ನು ದಹನು, ಕಾಸ, ವಿಕ್ರಮಗಂಧ್‌, ತಲಸಾರಿ ಮೊದಲಾದ ವಿವಿಧ ಠಾಣೆಗಳಲ್ಲಿ ಇರಿಸಲಾಗಿತ್ತು .

ಶನಿವಾರದಂದು ಬಂದ ಫಲಿತಾಂಶದಲ್ಲಿ ಆರೋಪಿಗೆ ಕರೋನಾ ಇರುವುದಾಗಿ ಪತ್ತೆ ಹಚ್ಚಲಾಯಿತೆಂದು ಮೆಡಿಕಲ್‌ ಸುಪರಿಡೆಂಟ್‌ ಡಾ.ಗವಿತ್‌ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಆರೋಪಿಯ ಜೊತೆಗೆ ಲಾಕಪ್ಪಿನಲ್ಲಿದ್ದ 20 ಸಹಕೈದಿಗಳನ್ನೂ ಸೇರಿ ಅವರೊಡನೆ ಸಂಪರ್ಕಕ್ಕೆ ಬಂದ 23 ಪೋಲೀಸರನ್ನೂ ಕ್ವಾರಂಟೈನಲ್ಲಿಟ್ಟು ಪರೀಕ್ಷಿಸಲಾಗುವುದು ಎಂದು ಸಿವಿಲ್‌ ಸರ್ಜನ್‌ ಡಾ. ಕಾಂಚನ್‌ ವಾನೆರೆ ಹೇಳಿದ್ದಾರೆ.

ಎಪ್ರಿಲ್‌ 18 ರಂದು ಬಂಧಿಸಿದ ಎಲ್ಲಾ ಆರೋಪಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರಲ್ಲಿಯೂ ಕರೋನಾ ಪಾಸಿಟಿವ್‌ ಪತ್ತೆಯಾಗಿರಲಿಲ್ಲ, ಶುಕ್ರವಾರ ಎರಡನೇ ಬಾರಿ ಪರೀಕ್ಷಿಸಿದಾಗ 55 ವರ್ಷದ ಆರೋಪಿಯಲ್ಲಿ ಕರೋನಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆಯೆಂದು ಮೂಲಗಳು ತಿಳಿಸಿವೆ. ಪಾಲ್ಘರ್‌ ಜಿಲ್ಲೆಯಲ್ಲಿ ಇದುವರೆಗೂ 170 ಕರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು 59 ಮಂದಿ ಗುಣಮುಖರಾಗಿದ್ದಾರೆಂದು ವರದಿಗಳು ಹೇಳಿವೆ.

ಎಪ್ರಿಲ್‌ 16 ರಂದು ಮುಂಬೈಯಿಂದ ಸೂರತ್‌ಗೆ ಹೋಗುತ್ತಿದ್ದ ಎರಡು ಹಿಂದೂ ಸಾಧುಗಳನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಉದ್ರಿಕ್ತ ಗುಂಪು ಭೀಕರವಾಗಿ ಹಲ್ಲೆ ನಡೆಸಿತ್ತು. ಪೋಲೀಸರ ಸಮ್ಮುಖದಲ್ಲೇ ನಡೆದ ಈ ಹಲ್ಲೆಯಲ್ಲಿ ಕಾರ್‌ ಡ್ರೈವರ್‌ ಹಾಗೂ ಸಾಧುಗಳು ಸೇರಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಬ್ಬರು ಪೋಲೀಸ್‌ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು.

Tags: CoronaCovid 19palghar
Previous Post

ಗೌಡರನ್ನು ಸೋಲಿಸಿದ್ದ ಹೇಮಾವತಿ ತುಮಕೂರಿಗೆ ಹೇಗೆ ಹೊರಡುತ್ತಾಳೆ..!?

Next Post

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ರಾಜಿನಾಮೆ ಅಂಗೀಕಾರ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

ದಳಪತಿ ವಿಜಯ್ ರ‍್ಯಾಲಿಯಲ್ಲಿ ಮತ್ತೊಂದು ದುರಂತ: ಹೀಟ್‌ಸ್ಟ್ರೋಕ್‌ದಿಂದ ವ್ಯಕ್ತಿ ಸಾ**

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
Next Post
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ರಾಜಿನಾಮೆ ಅಂಗೀಕಾರ

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ರಾಜಿನಾಮೆ ಅಂಗೀಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada