ಭಾರತೀಯ ಮೂಲದ ಮೊದಲ ನ್ಯೂಜಿಲ್ಯಾಂಡ್ ಸಚಿವೆಯಾಗಿ ಪ್ರಿಯಾಂಕ ರಾಧಾಕೃಷ್ಣನ್ ಸೋಮವಾರ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚುನಾವಣೆ ಗೆದ್ದು ಎರಡನೇ ಬಾರಿಗೆ ಸರ್ಕಾರ ರಚಿಸಿದ ಜೆಸಿಂಡಾ ಆಡರ್ನ್, ತನ್ನ ಮಂತ್ರಿ ಮಂಡಲಕ್ಕೆ ನೂತನ ಐವರು ಸಚಿವರನ್ನು ಪರಿಚಯಿಸಿದ್ದು, ಅವರಲ್ಲಿ ಪ್ರಿಯಾಂಕ ರಾಧಾಕೃಷ್ಣನ್ ಕೂಡಾ ಒಬ್ಬರು.
ಭಾರತದಲ್ಲಿ ಹುಟ್ಟಿ ಸಿಂಗಾಪುರದಲ್ಲಿ ವಿಧ್ಯಾಭ್ಯಾಸ ಪೂರೈಸಿರುವ ಪ್ರಿಯಾಂಕ, ಉನ್ನತ ವಿಧ್ಯಾಭ್ಯಾಸಕ್ಕಾಗಿ ನ್ಯೂಝಿಲಾಂಡ್ ಗೆ ತೆರಳಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೌಟುಂಬಿಕ ಹಿಂಸಾಚಾರದ ಸಂತ್ರಸ್ತೆ ಮಹಿಳೆಯರು ಮತ್ತು ಶೋಷಣೆಗೆ ಒಳಗಾದ ವಲಸೆ ಕಾರ್ಮಿಕರ ಪರ ದನಿಯೆತ್ತುತ್ತಾ ಬಂದಿರುವ ಪ್ರಿಯಾಂಕ ಅವರು ಸೆಪ್ಟೆಂಬರ್ 2017 ರಲ್ಲಿ ಲೇಬರ್ ಪಕ್ಷಕ್ಕೆ ಸೇರಿದ ಸಂಸತ್ ಸದಸ್ಯರಾಗಿ ಮೊದಲ ಬಾರಿ ಆಯ್ಕೆಯಾದರು. 2019 ರಲ್ಲಿ ಅವರನ್ನು ಜನಾಂಗೀಯ ಸಮುದಾಯಗಳ ಸಚಿವರ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಈ ಕ್ಷೇತ್ರದಲ್ಲಿ ಅವರ ಸೇವೆಯು ಅವರನ್ನು ಜನಾಂಗೀಯ ಸಮುದಾಯಗಳ ವಿವಿಧತೆ ಮತ್ತು ಒಳಗೊಳ್ಳುವಿಕೆ ಸಚಿವೆಯಾಗಿ ಆಯ್ಕೆ ಮಾಡಲು ಕಾರಣವಾಗಿದೆ.
ಇದರ ಜೊತೆಗೆ, ಅವರು ಸಮುದಾಯ ಮತ್ತು ಸ್ವಯಂಪ್ರೇರಿತ ವಲಯದ ಸಚಿವರಾಗಿದ್ದಾರೆ ಹಾಗೂ ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗದ ಸಹಾಯಕ ಸಚಿವರಾಗಿದ್ದಾರೆ.
ಪ್ರಿಯಾಂಕ ರಾಧಾಕೃಷ್ಣನ್ ಕಾರ್ಮಿಕ ಪರ, ಶೋಷಿತ ಪರ ಸೇವೆ ಸಲ್ಲಿಸುವುದಕ್ಕೆ ಅವರ ಹಿನ್ನೆಲೆಯೂ ಕಾರಣವಾಗಿದೆ. ಪ್ರಿಯಾಂಕ ಅವರ ಅಜ್ಜ ಒಂದು ಕಾಲದ ಕೇರಳ ಕಮ್ಯುನಿಸ್ಟ್ ಪಕ್ಷದ ನೇತಾರರಾಗಿದ್ದವರು. ಹಾಗಾಗಿ ಹೋರಾಟ ಹಾಗೂ ರಾಜಕೀಯದ ಹಿನ್ನೆಲೆ ಪ್ರಿಯಾಂಕರಿಗೆ ವಂಶೀಯವಾಗಿ ಬಂದಿವೆ.
ಕೇರಳದ ಎರ್ನಾಕುಲಂ ಜಿಲ್ಲೆಯ IIT ಯಲ್ಲಿ ವಿಧ್ಯಭ್ಯಾಸ ಮುಗಿಸಿ, ಬಳಿಕ ಸಿಂಗಾಪೂರ, ನ್ಯೂಜಿಲ್ಯಾಂಡ್ ಗೆ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ತೆರಳಿರುವ ಪ್ರಿಯಾಂಕ, ನ್ಯೂಝಿಲ್ಯಾಂಡಿನಲ್ಲೆ ತನ್ನ ಸಂಗಾತಿ ರಿಚರ್ಡ್ಸನ್ರೊಂದಿಗೆ ವಾಸವಾಗಿದ್ದಾರೆ.