ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ ಬಳಿಕ, ಸುಪ್ರಿಂ ಕೋರ್ಟ್ ಅವರಿಗೆ ಒಂದು ರೂಪಾಯಿ ದಂಡ ವಿಧಿಸಿದೆ.
ಸೋಮವಾರ ಬೆಳಿಗ್ಗೆ ಪ್ರಕರಣದ ಅಂತಿಮ ವಿಚಾರಣೆ ಆರಂಭವಾಗುತ್ತಿದ್ದಂತೇ, ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಪ್ರಶಾಂತ್ ಭೂಷಣ್ ಅವರು ಮತ್ತೆ ಈ ತರಹದ ತಪ್ಪುಗಳನ್ನು ಮಾಡದಂತೆ ಸಂದೇಶ ನೀಡಿ ಅವರನ್ನು ಕ್ಷಮಿಸಬೇಕು ಎಂದು ಹೇಳಿದ್ದರು.
Also Read: ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚಿಸಲು ಒಪ್ಪದ ವಕೀಲ ಪ್ರಶಾಂತ್ ಭೂಷಣ್
ವಿಚಾರಣೆಯ ನಂತರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಕೋರ್ಟ್, ಪ್ರಶಾಂತ್ ಭೂಷಣ್ ಅವರಿಗೆ ಒಂದು ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ, ಸೆಪ್ಟೆಂಬರ್ 15ರ ಒಳಗಾಗಿ ಒಂದು ರೂಪಾಯಿ ದಂಡ ಪಾವತಿಸದಿದ್ದಲ್ಲಿ, ಮೂರು ತಿಂಗಳ ಜೈಲು ವಾಸ ಹಾಗೂ ಮುಂದಿನ ಮೂರು ವರ್ಷಗಳಿಗೆ ವಕೀಲ ವೃತ್ತಿಯನ್ನು ಮುಂದುವರೆಸಲು ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
Also Read: ನ್ಯಾಯಾಂಗ ನಿಂದನೆ ಪ್ರಕರಣ; ಕ್ಷಮೆ ಕೇಳಲು ಪ್ರಶಾಂತ್ ಭೂಷಣ್ ಮತ್ತೆ ನಿರಾಕರಣೆ
ಪ್ರಶಾಂತ್ ಭೂಷಣ್ ಅವರು ಮಾಡಿರುವ ಎರಡು ಟ್ವೀಟ್ಗಳು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಕೋರ್ಟ್ ಅವರ ವಿರುದ್ದ ಸು-ಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆಯ ವೇಳೆಗೆ ತಮ್ಮ ತಪ್ಪಿಗೆ ಕ್ಷಮೆ ಕೇಳುವಂತೆ ಕೋರ್ಟ್ ಹೇಳಿತ್ತು. ಎರಡು ಬಾರಿ ಕ್ಷಮೆ ಕೇಳಲು ಕೋರ್ಟ್ ಅವಕಾಶ ನೀಡಿತಾದರೂ, ತಾನು ಕ್ಷಮೆ ಕೇಳುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಪಟ್ಟು ಹಿಡಿದಿದ್ದರು.
Also Read: ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ ತಪ್ಪಿತಸ್ಥ ಎಂದ ಸುಪ್ರೀಂಕೋರ್ಟ್
ಕಾನೂನು ವಿದ್ಯಾರ್ಥಿಗಳಿಂದ ಪತ್ರ:
ಸುಮಾರು 122 ಜನ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಿಜೆಐ ಎಸ್ ಎ ಬೋಬ್ಡೆ ಅವರಿಗೆ ಪತ್ರ ಬರೆದು, ಸುಪ್ರಿಂ ಕೋರ್ಟ್ನ ತೀರ್ಪನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದ್ದರು.
Also Read: ಪ್ರಶಾಂತ್ ಭೂಷಣ್ ವಿರುದ್ದ ಸುಪ್ರಿಂ ಕೋರ್ಟ್ ನಿರ್ಧಾರ ದುರದೃಷ್ಟಕರ: ಎಸ್ ಆರ್ ಹಿರೇಮಠ











