‘ನಾನು ಕುರುಬರ ನಾಯಕ ಅಲ್ಲ. ಹಿಂದುತ್ವದ ಪ್ರತಿಪಾದಕ. ಹಿಂದುತ್ವದ ಬಗ್ಗೆ ಯಾರೇ ಮಾತನಾಡಿದರು ಸಹಿಸುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕುರುಬರ ನಾಯಕ, ಅಹಿಂದ ನಾಯಕ ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಅವರ ಹಿಂದೆ ಇಂದು ಯಾರೂ ಇಲ್ಲ. ಕುರುಬರು, ಹಿಂದುಳಿದವರು ಅವರ ಹಿಂದೆ ಇದ್ದಿದ್ದರೆ ಅವರ ಪಕ್ಷ ಏಕೆ ಸೋಲು ಕಂಡಿತು. ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕುರುಬರ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ ಎನ್ನುವ ಅವರ ಹೇಳಿಕೆ ಮೂರ್ಖತನದ್ದು. ಕಾಂಗ್ರೆಸ್‌ನಲ್ಲಿ ಇರಲು ಅವರು ಅಯೋಗ್ಯರು ಎಂದು ಹೇಳಿದ ಈಶ್ವರಪ್ಪ, ವಯಸ್ಸಾದ ದನಗಳನ್ನು ಬಿಜೆಪಿ ಮುಖಂಡರ ಮನೆ ಬಳಿ ಬಿಡಬೇಕೆ ಎನ್ನುವ ಸಿದ್ದರಾಮಯ್ಯ ಪ್ರಶ್ನೆಗೆ ಅರ್ಥವಿಲ್ಲ ಎಂದು ಹೇಳಿದ್ದಾರೆ. ವಯಸ್ಸಾದ ಅವರ ತಾಯಿಯನ್ನೂ ಹೀಗೆ ಮಾಡುವರೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿಧ್ವನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಾನು ಕುರುಬರಿಗೆ ಮಾತ್ರ ಸೀಮಿತವಾದ ನಾಯಕನಲ್ಲ, ಹಿಂದುಳಿದ, ತುಳಿತಕ್ಕೊಳಗಾದ ಎಲ್ಲಾ ಸಮುದಾಯಗಳ ಪರ ದನಿಯೆತ್ತುವವನು ಎಂದು ಹೇಳಿದ್ದರು.
ಕುರುಬರನ್ನು ಎಸ್ಟಿ ಮೀಸಲಾತಿಗೆ ಈಶ್ವರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಆರ್‌ಎಸ್‌ಎಸ್ ಪ್ರೇರಿತ ಹೋರಾಟ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.












