ದೆಹಲಿ ಗಲಭೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ರಾಜಕಾರಣಿಗಳಿಂದ ಹಿಡಿದು ವಕೀಲರು ಮತ್ತು ಕಾರ್ಯಕರ್ತರವರೆಗೆ ವಿವಿಧ ಪ್ರಮುಖ ವ್ಯಕ್ತಿಗಳ ಹೆಸರುಗಳು ಬಂದಿವೆ. ಇದರಲ್ಲಿ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರ ಹೆಸರು ಸೇರಿದೆ.
Also Read: ಅರವಿಂದ ಕೇಜ್ರಿವಾಲ್ ಮತ್ತು ದೆಹಲಿ ಗಲಭೆ
ಮಾಜಿ ಕಾಂಗ್ರೆಸ್ ಕೌನ್ಸಿಲರ್ ಇಶ್ರತ್ ಜಹಾನ್ ಮತ್ತು ಇನ್ನೋರ್ವ ಆರೋಪಿ ಖಾಲಿದ್ ಸೈಫಿ ಅವರ ಬಹಿರಂಗ ಹೇಳಿಕೆಯಲ್ಲಿ ಪ್ರಶಾಂತ್ ಹಾಗೂ ಸಲ್ಮಾನ್ ಖುರ್ಷಿದ್ ಹೆಸರುಗಳು ಬಂದಿವೆ. ಇಂತಹ ಹೇಳಿಕೆಗಳನ್ನು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ವಕೀಲ ಪ್ರಶಾಂತ್ ಭೂಷಣ್, ಕಾರ್ಯಕರ್ತ ಹರ್ಷ್ ಮಾಂದರ್ ಮತ್ತು ಹೋರಾಟಗಾರ ಹಾಗೂ ರಾಜಕಾರಣಿಯಾಗಿರುವ ಯೋಗೇಂದ್ರ ಯಾದವ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಇಶ್ರತ್ ಜಹಾನ್ ತಮ್ಮ ಬಹಿರಂಗ ಹೇಳಿಕೆಯಲ್ಲಿ ನ
Also Read: ದೆಹಲಿ ಗಲಭೆ ಪ್ರಕರಣ; ಚಾರ್ಜ್ ಶೀಟ್ ನಲ್ಲಿ ʼಪೊಲೀಸ್ʼ ಬುದ್ಧಿ ತೋರಿದ ದೆಹಲಿ ತನಿಖಾ ತಂಡ
ಖಾಲಿದ್ ಸೈಫಿ ಮತ್ತು ಇತರ ಸಾಕ್ಷಿಗಳೂ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ಯುಎಪಿಎ, ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಬೃಹತ್ ಆರೋಪ ಹೊರಿಸಿದ್ದರು. ಚಾರ್ಜ್ಶೀಟ್ನ ಪ್ರತಿಯನ್ನು ಸೋಮವಾರ ಆರೋಪಿಗಳ ವಕೀಲರಿಗೆ ಕಳುಹಿಸಲಾಗಿದೆ.
Also Read: ದೆಹಲಿ ಗಲಭೆ: ಸತ್ಯಶೋಧನಾ ವರದಿಯಲ್ಲಿನ ಸುಳ್ಳುಗಳ ಸರಮಾಲೆ| ಭಾಗ – 1
ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿರುವಂತೆ, ಈಶಾನ್ಯ ದೆಹಲಿಯಲ್ಲಿ ಪೌರತ್ವ ಕಾನೂನು ಬೆಂಬಲಿಗರು ಕೂಡಾ ʼಕಾನೂನು ಪರವಾಗಿʼ ಸಮಾವೇಶ ನಡೆಸಿದ ಬಳಿಕ ಗಲಭೆ ಬುಗಿಲೆದ್ದಿತು. ಗಲಭೆಯಲ್ಲಿ 53 ಜನರು ಮೃತಪಟ್ಟರೆ ಮತ್ತು ಸುಮಾರು 200 ಕ್ಕೂ ಹೆಚ್ಚು ಜನರು ಗಾಯಗೊಂಡರು.
Also Read: ದೆಹಲಿ ಗಲಭೆ: ʼಸತ್ಯʼಶೋಧನಾ ವರದಿಯಲ್ಲಿ ಬುಡಮೇಲಾದ ಘಟನಾವಳಿಗಳ ವಿಶ್ಲೇಷಣೆ | ಭಾಗ-2
ತಾಹಿರ್ ಹುಸೇನ್, ಸಫೂರಾ ಜರ್ಗರ್, ಗುಲ್ಫಿಶಾ ಖತೂನ್, ದೇವಂಗನಾ ಕಲಿತಾ, ಶಫಾ-ಉರ್-ರೆಹಮಾನ್, ಆಸಿಫ್ ಇಕ್ಬಾಲ್ ತನ್ಹಾ, ನತಾಶಾ ನರ್ವಾಲ್, ಅಬ್ದುಲ್ ಖಾಲಿದ್ ಸೈಫಿ, ಇಶ್ರತ್ ಜಹಾನ್, ಮೀರನ್ ಹೈದರ್, ಶಾದಾಬ್ ಅಹಮದ್, ತಲೀಮ್ ಸಲ್ಮದ್ ಅಹ್ಮದ್ ಖಾನ್ ಮತ್ತು ಅಥರ್ ಖಾನ್ ಹೆಸರುಗಳನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ತಾಹೀರ್ ಹುಸೇನ್ ಅವರನ್ನು ಚಾರ್ಜ್ಶೀಟ್ನಲ್ಲಿ ಮುಖ್ಯ ಆರೋಪಿ ಎಂದು ಹೆಸರಿಸಲಾಗಿದೆ. ಚಾರ್ಜ್ಶೀಟ್ನಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೊಹಮ್ಮದ್ ಪರ್ವೇಜ್ ಅಹ್ಮದ್, ಮೊಹಮ್ಮದ್ ಇಲಿಯಾಸ್, ಡ್ಯಾನಿಶ್ ಮತ್ತು ಫೈಜಲ್ ಖಾನ್ ಹೆಸರಿಲ್ಲ.ಅವರ ಹೆಸರುಗಳನ್ನು ಪೂರಕ ಚಾರ್ಜ್ಶೀಟ್ನಲ್ಲಿ ಸೇರಿಸಲಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Also Read: ದೆಹಲಿ ಗಲಭೆ ತನಿಖೆ: ಪೊಲೀಸರ ವಿರುದ್ಧ ವ್ಯಾಪಕ ಟೀಕೆ, ಫೇಸ್ಬುಕ್ಗೆ ಛೀಮಾರಿ!








