ಕರೋನಾ ಸೋಂಕು ಭಾರತದಲ್ಲಿ ಹರಡಲು ಶುರುವಾದಂದಿನಿಂದ ಭಾರತದ ಬಹುತೇಕ ದೃಶ್ಯ, ಮುದ್ರಣಾ ಮಾಧ್ಯಮಗಳು ದೆಹಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡಲು ಬಂದಿದ್ದ ತಬ್ಲೀಗಿ ಜಮಾತಿಗರನ್ನು ಕರೋನಾ ಸೋಂಕು ಹರಡಲು ಬಂದವರಂತೆ ಬಿಂಬಿಸಿತ್ತು. ಮಾಧ್ಯಮಗಳು ಅವರ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಿದ್ದವು.
ಅಲ್ಲದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ತಬ್ಲೀಗಿ ಜಮಾತಿನ 29 ಕಾರ್ಯರ್ತರ ಮೇಲೆ ಪ್ರಕರಣ ದಾಕಲಿಸಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಬ್ಲೀಗಿಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸಿ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ತೀರ್ಪು ನೀಡುವ ಸಂಧರ್ಭದಲ್ಲಿ ಮಾಧ್ಯಮಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. “ ಮರ್ಕಝ್ ಕಾರ್ಯಕ್ರಮಕ್ಕೆ ಬಂದಿದ್ದೇ ತಬ್ಲೀಗ್ ಜಮಾತ್ ಕಾರ್ಯಕರ್ತರನ್ನು ಇಲ್ಲಿನ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವಿಕೃತವಾಗಿ ನಡೆಸಿಕೊಂಡಿವೆ. ಭಾರತದಲ್ಲಿ ಕರೋನಾ ಹರಡಲು ಇವರೇ ಕಾರಣ ಎಂಬಂತೆ ಮಾಧ್ಯಮಗಳು ವರದಿ ಮಾಡಿದೆ. ಧಾರ್ಮಿಕ ಚಟುವಟಿಕೆಯ ಕಾರ್ಯಕ್ರಮದ ವಿರುದ್ಧ ನಡೆದ ಅಪಪ್ರಚಾರ ಅನಗತ್ಯವಾಗಿತ್ತು ಎಂದು ತೀರ್ಪು ಹೊರಡಿಸಿರುವ ವಿಭಾಗೀಯ ಪೀಠ ಹೇಳಿದೆ.