ಮೊದಲ ಹಂತವಾಗಿ 4 ರಿಂದ 6 ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ. ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್ನಲ್ಲಿ ನವೀನ ಮಾದರಿಯ ತಂತ್ರಜ್ಞಾನ ಇರಲಿದೆ. ಕ್ರೂಸ್ ಕ್ಷಿಪಣಿ ಸಜ್ಜಿತವಾದ ರಫೇಲ್ ವಿಮಾನಗಳು ಜುಲೈ ಕೊನೆಯ ವಾರ ಭಾರತವನ್ನು ತಲುಪಲಿದೆ.
ಲಢಾಕ್ ಗಡಿಯಲ್ಲಿ ಚೀನಾದೊಂದಿಗೆ ನಡೆದ ಮುಖಾಮುಖಿಯ ಬಳಿಕ 2016 ರಲ್ಲಿ ಸಹಿ ಹಾಕಿದ್ದ ಒಪ್ಪಂದದಂತೆ 36 ಯುದ್ಧ ವಿಮಾನಗಳನ್ನು ಶೀಘ್ರವೇ ಹಸ್ತಾಂತರಿಸುವಂತೆ ಭಾರತ ಕೇಳಿಕೊಂಡಿತ್ತು. ಒಪ್ಪಂದದಂತೆ 36 ರಫೇಲ್ಗಳಿಗೆ 59 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು.
ಮೂಲಗಳ ಪ್ರಕಾರ, ಫ್ರಾನ್ಸ್ನಲ್ಲಿ ತರಬೇತಿ ಪಡೆದ ಭಾರತೀಯ ವಾಯುಸೇನೆಯ ಪೈಲಟ್ಗಳು ರಫೇಲ್ ವಿಮಾನಗಳನ್ನು ಜುಲೈ 27 ರಂದು ಭಾರತಕ್ಕೆ ತರಲಿದ್ದಾರೆ. ಹಾರಾಟದ ನಡುವೆ ಅಭುಧಾಬಿಯ ಅಲ್ ದಫ್ರ ವಾಯುನೆಲೆಯಲ್ಲಿ ತಂಗಿ ಇಂಧನ ತುಂಬಿಸಿ ಭಾರತದ ಅಂಬಾಲ ವಾಯುನೆಲೆಗಳಿಗೆ ವಿಮಾನಗಳು ತಲುಪಲಿವೆ.