ಮುಂಬರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು ಗೋಹತ್ಯೆ ಮತ್ತು ಮದುವೆಗಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸಲು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಇದನ್ನು ಲವ್ ಜಿಹಾದ್ ನಿಷೇಧ ಕಾನೂನು ಎಂದು ಕರೆಯಲಾಗಿದ್ದರೂ, ಮೂಲತಃ ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿ ಹಿಂದೂ ಮಹಿಳೆಯರ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಹಾಗೂ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುವ ಬಿಜೆಪಿಯ ಒಡೆದು ಆಳುವ ನೀತಿಯೆಂದು ವಿಷ್ಲೇಶಿಲಾಗುತ್ತಿದೆ. ಈ ಎರಡು ಕಾನೂನುಗಳ ಮೂಲಕ ಕರ್ನಾಟಕವನ್ನು ಹಿಂದುತ್ವ ಕಾರ್ಯಸೂಚಿಗೆ ತಳ್ಳುವಂತಿದೆ.
Also Read: ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯ ನಿರಾಕರಿಸುವ ಷಡ್ಯಂತ್ರ್ಯ -AILAJ
“ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವು ನಿಜವಾಗಲಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಧೆ ತಡೆಗಟ್ಟುವಿಕೆ ಮತ್ತು ದನಗಳ ಸಂರಕ್ಷಣೆ ಮಸೂದೆಯನ್ನು ಸಂಪುಟದಲ್ಲಿ ಅಂಗೀಕರಿಸುವ ಕುರಿತು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಡಿಸೆಂಬರ್ 7 ರಿಂದ ಪ್ರಾರಂಭವಾಗಲಿರುವ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುತ್ತದೆ ಎಂದು ಸಿಟಿ ರವಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2018 ರ ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು ಗೋಹತ್ಯೆ ನಿಷೇಧದ ಭರವಸೆ ನೀಡಿತ್ತು.
ಈಗ ಜಾರಿಯಲ್ಲಿರುವ ಕರ್ನಾಟಕ ಹಸು ವಧೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಪ್ರಕಾರ, 12 ವರ್ಷಕ್ಕಿಂತ ಮೇಲ್ಪಟ್ಟ ಎತ್ತುಗಳು, ಹೋರಿ ಮತ್ತು ಎಮ್ಮೆಗಳನ್ನು ಹಾಗೂ ಸಂತಾನೋತ್ಪತ್ತಿಗೆ ಅನರ್ಹವಾಗಿರುವ ಅಥವಾ ಹಾಲು ನೀಡದಿರುವ ಎಮ್ಮೆಗಳು ವಧಿಸಬಹುದು.
ಬಿಜೆಪಿ ಸರ್ಕಾರದ ಪ್ರಸ್ತಾವಿತ ಮಸೂದೆ ದನಗಳ ವಧೆ ಮತ್ತು ಗೋಮಾಂಸ ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಪ್ರಯತ್ನಿಸುತ್ತದೆ, ಹಾಗೂ ಉಲ್ಲಂಘನೆಗಳಿಗೆ ಶಿಕ್ಷೆಯನ್ನು ಸಹ ಸೂಚಿಸುತ್ತದೆ. ಈ ಹಿಂದೆ 2010 ರಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಈ ಮಸೂದೆಯನ್ನು ಮಂಡಿಸಿತ್ತು. ಬಳಿಕ ಸರ್ಕಾರ ಬದಲಾದ್ದರಿಂದ 2010 ರ ಮಸೂದೆ ಅಧ್ಯಕ್ಷೀಯ ಅನುಮೋದನೆ ಪಡೆಯಲು ವಿಫಲವಾಯಿತು. 2013 ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಸೂದೆಯನ್ನು ಹಿಂತೆಗೆದುಕೊಂಡಿತು ಮತ್ತು 1964 ರ ಕಾಯಿದೆಯನ್ನು ಉಳಿಸಿಕೊಂಡಿತ್ತು.
Also Read: ದೇಶವನ್ನು ವಿಭಜಿಸಲು ಲವ್ ಜಿಹಾದ್ ಪದವನ್ನು ಸೃಷ್ಟಿಸಲಾಗಿದೆ: ಗೆಹ್ಲೋಟ್
‘ಲವ್ ಜಿಹಾದ್’ ವಿರುದ್ಧ ಸರ್ಕಾರವು ಕಾನೂನು ರೂಪಿಸುತ್ತದೆ ಎಂದು ಸಿಟಿ ರವಿ ಮಾತ್ರವಲ್ಲದೆ ಕಂದಾಯ ಸಚಿವ ಆರ್ ಅಶೋಕ ಕೂಡಾ ಲವ್ ಜಿಹಾದ್ ವಿರುದ್ಧ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸಿಎಂ ಅವರೊಂದಿಗೆ ನಡೆಸಿದ ಚರ್ಚೆಯ ಸಮಯದಲ್ಲಿ, ಲವ್ ಜಿಹಾದ್ ಅನ್ನು ನಿಷೇಧಿಸಲು ಮತ್ತು ಅದರ ಹಿಂದೆ ಇರುವವರಿಗೆ ಶಿಕ್ಷೆ ವಿಧಿಸಲು ನಿರ್ಧರಿಸಲಾಯಿತು. ಕಾನೂನು ತರಲು ಸರ್ಕಾರ ನಿರ್ಧರಿಸಿದೆ ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುತ್ತದೆ” ಎಂದು ಆರ್ ಅಶೋಕ್ ಹೇಳಿದ್ದಾರೆ.
Also Read: ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ- ಸಿದ್ದರಾಮಯ್ಯ
ಮಹಿಳೆಯರ ಮತಾಂತರವು “ಭಾರತೀಯ ಸಂಸ್ಕೃತಿಗೆ ಹಾನಿಕಾರಕ” ಹಾಗಾಗಿ ಅದನ್ನು ನಿಲ್ಲಿಸಬೇಕಾಗಿದೆ ಎಂದು ಅಶೋಕ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೇ ಮಾತನ್ನ ಹೇಳಿದ್ದ ಯಡಿಯೂರಪ್ಪ, ವಿವಾಹದ ಹೆಸರಿನಲ್ಲಿ ಧಾರ್ಮಿಕ ಮತಾಂತರವನ್ನು ಕೊನೆಗೊಳಿಸುವುದಾಗಿ ಬಹಿರಂಗವಾಗಿ ಪ್ರತಿಜ್ಞೆ ಮಾಡಿದ್ದಾರೆ.
Also Read: ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ