ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಆಸ್ತಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಡಿಜಟಲೀಕರಣಗೊಳಿಸಲಾಗಿದೆ. ಬಿಬಿಎಂಪಿಯಿಂದ ನಿರ್ಮಿತವಾದ ಸಾಫ್ಟ್ವೇರ್ ಬಳಸಿ ದಾಖಲೆಗಳನ್ನು ಪಡೆಯಬಹುದು ಅಥವಾ ದಾಖಲೆಗಳನ್ನು ಸಲ್ಲಿಸುವಂತಹ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಮುಂದಿನ ಎರಡು ತಿಂಗಳ ಒಳಗಾಗಿ, ಬಿಬಿಎಂಪಿಯು ʼಎʼ ಮತ್ತು ʼಬಿʼ ಖಾತಾ ಪ್ರಮಾಣಪತ್ರಗಳನ್ನು ಈ ಸಾಫ್ಟ್ವೇರ್ ಬಳಸಿ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈಗಾಗಲೇನಗರದ ಮೂರು ವಾರ್ಡ್ಗಳಲ್ಲಿ ಹೊಸ ತಂತ್ರಾಂಶ ‘e-Aasthi’ಯನ್ನು ಪರೀಕ್ಷಿಸಲಾಗಿದ್ದು, ಉತ್ತಮ ಫಲಿತಾಂಶವನ್ನು ನೀಡಿದೆ. ಇದನ್ನು ‘Kaveri’ ತಂತ್ರಾಂಶದೊಂದಿಗೆ ಸೇರಿಸಿ 100 ವಾರ್ಡ್ಗಳಲ್ಲಿ ಜಾರಿಗೆ ತರಲಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನೂತನ ತಂತ್ರಾಂಶವನ್ನು ಬಿಡುಗಡೆ ಮಾಡಿ ಅದರ ಕುರಿತಾಗಿ ಮಾಹಿತಿ ನೀಡಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹಾಗೂ ನಿರ್ವಾಹಕರಾಗಿರುವ ಗೌರವ್ ಗುಪ್ತಾ ಅವರು, ಆಸ್ತಿ ನೋಂದಣಿಗೆ ಸಂಬಂಧಪಟ್ಟ ಮೋಸಗಳನ್ನು ನಿಯಂತ್ರಿಸಲು ಈ ಹೊಸ ತಂತ್ರಾಂಶ ಸಾಕಷ್ಟು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ನೋಂದಣಿ ಮಾಡಲು ಆಧಾರ್ ಸಂಖ್ಯೆಯ ಅಗತ್ಯವಿದ್ದು ಇದರಿಂದಾಗಿ ತಪ್ಪು ಮಾಹಿತಿಯನ್ನು ನೀಡಲು ಆಸ್ಪದವಿರುವುದಿಲ್ಲ ಎಂದು ಹೇಳಿದ್ದಾರೆ.
“ಈ ಯೋಜನೆಯನ್ನು ಮೊದಲು ಮೂರು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ನೀಲಸಂದ್ರ, ಶಾಂತಿನಗರ ಮತ್ತು ಶಾಂತಲನಗರ ವಾರ್ಡ್ಗಳಲ್ಲಿ ನೋಂದಣಿ ಅರ್ಜಿ ವಿತರಿಸುವುದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಬ್ಯಾಂಕ್, ಬೆಸ್ಕಾಂ ಮತ್ತು ಇತರ ಸಂಸ್ಥೆಗಳಲ್ಲಿಯೂ ಭೌತಿಕ ಅರ್ಜಿಯನ್ನು ಸ್ವೀಕರಿಸದಂತೆ ಮಾಹಿತಿಯನ್ನು ನೀಡಿದ್ದೆವು,” ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಆಸ್ತಿ ಪತ್ರಗಳನ್ನು ವಿತರಿಸುವಾಗ ಅದರಲ್ಲಿ ಮಾಲಕರ ಭಾವಚಿತ್ರವೂ ಇರುವುದರಿಂದ ಮೋಸ ಮಾಡಲು ಸಾಧ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ.