ಬಹುಭಾಷಾ ನಟಿ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಸಿ ಬಿಜೆಪಿಗೆ ಸೇರುವುದು ಖಚಿತವಾಗಿದೆ. ಈ ವಿಷಯವನ್ನು ಸ್ವತಃ ಖುಷ್ಬೂ ಟೈಮ್ಸ್ ಆಫ್ ಇಂಡಿಯಾಗೆ ಧೃಡಪಡಿಸಿದ್ದು ಬಿಜೆಪಿಗೆ ಸೇರುವುದು ಖಚಿತವೆಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಖುಷ್ಬೂ ಬಿಜೆಪಿಗೆ ಸೇರುವ ಸಾಧ್ಯತೆ ಇದೆ.
ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜಿನಾಮೆ ಸಲ್ಲಿಸಿರುವ ಖುಷ್ಬೂ, ರಾಜಿನಾಮೆ ಪತ್ರದಲ್ಲಿ ಸೋನಿಯಾಗಾಂಧಿಗೆ ದನ್ಯವಾದ ತಿಳಿಸಿದ್ದಾರೆ.
“ಒಂದು ಸುದೀರ್ಘ ಚಿಂತನೆಯ ಪ್ರಕ್ರಿಯೆಯ ನಂತರ, ಪಕ್ಷದೊಂದಿಗಿನ ನನ್ನ ಒಡನಾಟವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ” ಎಂದು ತಮ್ಮ ಪತ್ರದಲ್ಲಿ ತಿಳಿಸಿದ ಅವರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮೇ 2010 ರಲ್ಲಿ ಡಿಎಂಕೆಗೆ ಸೇರುವ ಮೂಲಕ ರಾಜಕೀಯ ಧುಮುಕಿದ ಖಷ್ಬೂ, ಎಂ ಕೆ ಸ್ಟಾಲಿನ್ ಜೊತೆಗಿನ ಭಿನ್ನಾಭಿಪ್ರಾಯದೊಂದಿಗೆ ಡಿಎಂಕೆ ಪಕ್ಷವನ್ನು ತೊರೆದಿದ್ದರು. ಸುಮಾರು ನಾಲ್ಕು ತಿಂಗಳು ರಾಜಕೀಯದಿಂದ ದೂರ ಉಳಿದುಕೊಂಡ ಖುಷ್ಬೂ ನವೆಂಬರ್ 26, 2014 ರಂದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದರು.
“ಇದು ನನ್ನ ಜೀವನದ ಅತ್ಯಂತ ಸಂತೋಷಕರ ಕ್ಷಣವಾಗಿದೆ, ನಾನು ಮನೆಯಲ್ಲಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಖುಷ್ಬು ಕಾಂಗ್ರೆಸ್ಗೆ ಸೇರಿದ ನಂತರ ಹೇಳಿದ್ದರು . ಅಲ್ಲದೆ “ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿರುವುದರಿಂದ ಇದಕ್ಕೆ ಸೇರಿರುವುದು ನನಗೆ ಹೆಮ್ಮೆ” ಎಂದು ಹೇಳಿಕೆ ನೀಡಿದ್ದರು.