ಅಂತರರಾಜ್ಯ ಪ್ರಯಾಣಿಕರಲ್ಲಿ 250 ಮಂದಿಯಲ್ಲಿ ಕರೋನಾ ಸೋಂಕು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ 267 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಇದುವರೆಗೂ ರಾಜ್ಯದಲ್ಲೊ 4063 ಕೋವಿಡ್-19 ಪ್ರಕರಣಗಳು ಧೃಡೀಕರಿಸಲಾಗಿದೆ. 1514 ಮಂದಿ ಕರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, 16 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 2494 ಸಕ್ರಿಯವಾಗಿರುವ ಕರೋನಾ ಪ್ರಕರಣಗಳಿದ್ದು, ಇದುವರೆಗೂ ಸೋಂಕಿನಿಂದ 53 ಮಂದಿ ಮರಣ ಹೊಂದಿದ್ದಾರೆ. ಕಲಬುರಗಿ ಒಂದರಲ್ಲೇ 500 ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಕ್ರಮವಾಗಿ ಉಡುಪಿ ಹಾಗೂ ಬೆಂಗಳೂರು ನಗರ ನಂತರದ ಸ್ಥಾನ ಪಡೆದುಕೊಂಡಿದೆ.
![](https://pratidhvani.in/wp-content/uploads/2021/02/karnataka-6.jpg)
ಭಾರತದಲ್ಲಿ ಕರೋನಾ ಸೋಂಕಿತರ ಅಂಕಿ 2 ಲಕ್ಷದ ಗಡಿ ದಾಟಿದ್ದು ಕಳೆದ 24 ಗಂಟೆಗಳಲ್ಲಿ 8,171 ಹೊಸ ಪ್ರಕರಣ ಪತ್ತೆಯಾಗುವದರೊಂದಿಗೆ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 2 ಲಕ್ಷದ 8 ಸಾವಿರಕ್ಕೆ ತಲುಪಿದೆ. ದೇಶದಲ್ಲಿ 1 ಲಕ್ಷದಷ್ಟು ಮಂದಿ ಕರೋನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 204 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು 5815 ಮಂದಿ ಕರೋನಾದಿಂದಾಗಿ ಅಸುನೀಗಿದ್ದಾರೆ.
![](https://pratidhvani.in/wp-content/uploads/2021/02/india_01-1.jpg)
![](https://pratidhvani.in/wp-content/uploads/2021/02/india_02-1.jpg)
![](https://pratidhvani.in/wp-content/uploads/2021/02/india_03-1.jpg)