ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ಥ ನಾರಾಯಣ ತನಗೆ ಕೋವಿಡ್ ಪಾಸಿಟಿವ್ ಇರುವುದಾಗಿ ಶನಿವಾರ ಧೃಡಪಡಿಸಿದ್ದಾರೆ. ಯಾವುದೇ ರೀತಿಯ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅಶ್ವಥ್ಥ ನಾರಾಯಣ, ʼವಿಧಾನಮಂಡಲದ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾನು ಈ ಶನಿವಾರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ.” ಎಂದಿದ್ದಾರೆ.
ಹಾಗೂ ಇತ್ತೀಚೆಗೆ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದ ಸಚಿವರ ಪಟ್ಟಿಯಲ್ಲಿ ಕರೋನಾ ವೈರಲ್ ಸೋಂಕು ಪಾಸಿಟಿವ್ ಬಂದುದರಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ಥ ನಾರಾಯಣ್ ಇತ್ತೀಚಿನವರು. ಈ ವಾರದ ಆರಂಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ ಅವರಿಗೆ COVID-19 ಪಾಸಿಟಿವ್ ಪತ್ತೆಯಾಗಿತ್ತು.
ಸಚಿವರಾದ ಬಿ ಶ್ರೀರಾಮುಲು, ಸಿ.ಟಿ.ರವಿ, ಬಿ.ಸಿ. ಪಾಟೀಲ್, ಆನಂದ್ ಸಿಂಗ್, ಬೈರತಿ ಬಸವರಾಜ್, ಪ್ರಭು ಚವಾಣ್, ಎ ಶಿವರಾಮ್ ಹೆಬ್ಬಾರ್, ಕೆ.ಎಸ್.ಈಶ್ವರಪ್ಪ, ಮತ್ತು ಶಶಿಕಲಾ ಮೊದಲಾದವರಿಗೆ ಕರೋನಾ ಸೋಂಕು ಕಂಡುಬಂದು ಚೇತರಿಸಿಕೊಂಡಿದ್ದರು.